ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದ ತೀರ್ಮಾನದಂತೆ ದೇಶದಾದ್ಯಂತ ಇರುವ ರಾಜಭವನಗಳ ಹೆಸರನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡಲಾಗಿದ್ದು, ಇದೀಗ ರಾಜ್ಯದ ರಾಜಭವನವನ್ನು ಕೂಡಾ ‘ಲೋಕಭವನ’ಎಂದು ಮರು ನಾಮಕರಣಗೊಳಿಸಲಾಗಿದೆ.
ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಬುಧವಾರ ಪತ್ರ ಬರೆದಿರುವ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್, ‘ಹೆಸರು ಬದಲಾವಣೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಅನುಮೋದನೆ ನೀಡಿದ್ದು, ತಕ್ಷಣದಿಂದ ಜಾರಿಗೆ ಬರಲಿದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದಿನಗೂಲಿ ನೌಕರರ: ಖಾಯಂ ಮಾಡಿ ನ್ಯಾಯಸಮ್ಮತ ವೇತನ :ನಿಗದಿಗಾಗಿ ಕೆನರಾ ಬ್ಯಾಂಕ್ ನೌಕರರ ಧರಣಿ
‘ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲ ಇಲಾಖೆಗಳು, ಸರ್ಕಾರಿ ಆದೇಶಗಳು, ಅಧಿಕೃತ ಪತ್ರ ವ್ಯವಹಾರಗಳು, ವೆಬ್‌ಸೈಟ್‌ಗಳು ಹಾಗೂ ಫಲಕಗಳಲ್ಲಿ ‘ರಾಜಭವನ ಕರ್ನಾಟಕ’ ಬದಲು ‘ಲೋಕಭವನ ಕರ್ನಾಟಕ’ ಎಂದು ಬಳಸಬೇಕು’ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ನೋಡಿ: ಬಾಕಿ ವೇತನಕ್ಕಾಗಿ ಬೀಡಿ ನೌಕರರ ಪ್ರತಿಭಟನೆ Janashakthi Media
