ಕಲಘಟಗಿ |ಕಲಘಟಗಿಯಲ್ಲಿ ಅಕ್ಕ ಕೆಫೆ ಉದ್ಘಾಟಿಸಿದ ಸಚಿವ ಸಂತೋಷ್ ಲಾಡ್

ಕಲಘಟಗಿ: ಕಾರ್ಮಿಕ ಸಚಿವ ಸಂತೋಷ್ ಲಾಡ್  ಪಟ್ಟಣದ ತಾಲ್ಲೂಕು ಪಂಚಾಯಿತಿಯ ಮಳಿಗೆಯಲ್ಲಿ ಆರಂಭವಾದ ಅಕ್ಕ ಕೆಫೆ ಉಪಾಹಾರ ಗೃಹವನ್ನು ಮಂಗಳವಾರ ಉದ್ಘಾಟಿಸಿದರು. ಕಲಘಟಗಿ

ಇದನ್ನೂ ಓದಿ : ಮರಕುಂಬಿ ಪ್ರಕರಣಕ್ಕೆ 1 ವರ್ಷ |ದಲಿತರು ಭಾಗವಹಿಸುತ್ತಾರೆ ಎಂದು ಜಾತ್ರೆಗಳನ್ನೇ ನಿಲ್ಲಿಸಿದರು….

ನಂತರ ಮಾತನಾಡಿ,  ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಹಿಳೆಯರು ಸಾವಲಂಬಿ ಬದುಕು ಕಟ್ಟಿಕೊಳ್ಳಲು ಅಕ್ಕ ಕೆಫೆಗಳನ್ನು ಆರಂಭಿಸಲಾಗಿದೆ ಎಂದರು.

ಅಕ್ಕ ಕೆಫೆ ಮಹಿಳೆಯರಿಂದಲೇ ನಡೆಯುತ್ತದೆ. ಇಲ್ಲಿ ಶುಚಿ, ರುಚಿಯಾದ ಆಹಾರ ಸಿಗುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಅಂಗನವಾಡಿ ಕೇಂದ್ರಗಳಿಗೆ ಟಿ.ವಿ ವಿತರಣೆ:  ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಟಿ.ವಿ ಹಾಗೂ ಮಕ್ಕಳ ಆಟಿಗೆ ಸಾಮಗ್ರಿಗಳ ಕಿಟ್ ಅನ್ನು ಸಚಿವರು ವಿತರಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಆರ್ ಪಾಟೀಲ, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ತಾ.ಪಂ ಇಒ ಪರಶುರಾಮ ಸಾವಂತ, ತಹಶೀಲ್ದಾರ್‌ ಬಸವರಾಜ ಹೊಂಕಣದವರ ಇದ್ದರು.

ಇದನ್ನೂ ನೋಡಿ : ನಿರಂಜನರ ಸಾಹಿತ್ಯದಲ್ಲಿ ನಿಜವಾದ ಜನಪರತೆ ಇದೆ – ರಂಗನಾಥ ಕಂಟನಕುಂಟೆ Janashakthi Media

Donate Janashakthi Media

Leave a Reply

Your email address will not be published. Required fields are marked *