ಬೆಂಗಳೂರು | ಬೆಂಗಳೂರು ನಗರ ವಿವಿಯಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅವ್ಯವಹಾರ : ಆರೋಪ

ಬೆಂಗಳೂರು : ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಅವ್ಯವಹಾರ  ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲದಲ್ಲಿ ಆರೋಪ ಕೇಳಿಬಂದಿದೆ. ಅಲ್ಲದೆ, ಅಕ್ರಮವಾಗಿ ನೇಮಕವಾಗಿರುವ ಅಭ್ಯರ್ಥಿಗಳನ್ನು ತಕ್ಷಣವೇ ವಜಾ ಮಾಡಬೇಕು. ಹಾಗೆಯೇ ಮರುಸಂದರ್ಶನಕ್ಕೆ ಆದೇಶ ಮಾಡಬೇಕು ಎಂದು ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.  ಬೆಂಗಳೂರು

ಇದನ್ನೂ ಓದಿ  : ಉಪನ್ಯಾಸಕರ ನೇಮಕಾತಿ ವಿಳಂಬ: ಉನ್ನತ ಶಿಕ್ಷಣ ಇಲಾಖೆಯಿಂದ ಪದವಿ ವೇಳಾಪಟ್ಟಿ ಪರಿಷ್ಕರಣೆ

ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಲು ಜು.5ರಂದು ಅರ್ಜಿ ಆಹ್ವಾನಿಸಲಾಗಿತ್ತು. ಅಂತೆಯೇ ಸೆ.16ರಂದು ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಈ ಸಂಬಂಧ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ವಿವಿಯ ಕುಲಪತಿ, ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಹಾಗೂ ರಾಜ್ಯಪಾಲರಿಗೆ ದೂರನ್ನು ನೀಡಿದ್ದು. ತುಮಕೂರು ವಿವಿಯ ಪ್ರೊ.ಸಿಬಂತಿ ಪದ್ಮನಾಭ ಹಾಗೂ ಬೆಂಗಳೂರು ವಿವಿಯ ವಿದ್ಯುನ್ಮಾನ ಮಾಧ್ಯಮದ ಪ್ರಾಧ್ಯಾಪಕಿ ಡಾ.ವಾಹಿನಿ ಅರವಿಂದ್ ಸಂದರ್ಶಕರಾಗಿ ಆಗಮಿಸಿದ್ದರು. ಈ ಪ್ರಕ್ರಿಯೆಯಲ್ಲಿ ಪಿಎಚ್‌ಡಿ ಮುಗಿಸದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬೆಂಗಳೂರು

ಇದನ್ನೂ ನೋಡಿ : ಗಾಂಧೀಜಿಯವರ ಐದು ಮುಖ್ಯ ಚಿಂತನೆಗಳು ಮುಂದೆ ಆರೆಸ್ಸೆಸ್ ಸಿದ್ಧಾಂತದ ಬೆಳವಣಿಗೆಗೆ ಪೂರಕವಾಗಿದ್ದವೇ? Janashakthi Media

Donate Janashakthi Media

Leave a Reply

Your email address will not be published. Required fields are marked *