ಬೆಂಗಳೂರು: ಧಾರವಾಡದಲ್ಲಿ ನಿರ್ಮಾಣ ಯಂತ್ರೋಪಕರಣಗಳ ವಿನ್ಯಾಸ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲಿದೆ’ ಜಪಾನಿನ ಹಿಟಾಚಿ ಕನ್‌ಸ್ಟ್ರಕ್ಷನ್ ಮಷಿನರಿ ಕಂಪನಿಯು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : “ಜನಾಂಗದ್ವೇಷಿ ಇಸ್ರೇಲಿ ಹಣಕಾಸು ಸಚಿವರಿಗೆ ಭಾರತ ಸರಕಾರದ ಆತಿಥ್ಯ”-ಸಿಪಿಐ(ಎಂ) ಖಂಡನೆ
ಬಂಡವಾಳ ಆಕರ್ಷಣೆಗಾಗಿ ಜಪಾನ್ ಪ್ರವಾಸದಲ್ಲಿರುವ ಅವರು ಹಿಟಾಚಿ ಕಂಪನಿಯ ಪ್ರತಿನಿಧಿಗಳ ಭೇಟಿಯ ನಂತರ ಹೊರಡಿಸಿದ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ‘ಧಾರವಾಡದಲ್ಲಿ ಈ ಕೇಂದ್ರವು 2027ರ ವೇಳೆಗೆ ಕಾರ್ಯಾರಂಭ ಮಾಡಲಿದೆ. ಜಾಗತಿಕ ಮಾರುಕಟ್ಟೆಗಾಗಿ ತಯಾರಿಸಲಾಗುವ ಯಂತ್ರೋಪಕರಣಗಳ ವಿನ್ಯಾಸ ಮತ್ತು ಅಭಿವೃದ್ಧಿ ಈ ಘಟಕದಲ್ಲಿ ನಡೆಯಲಿದೆ. 200 ಎಂಜಿನಿಯರ್‌ಗಳಿಗೆ ಉದ್ಯೋಗಾವಕಾಶ ದೊರೆಯಲಿದೆ’ ಎಂದು ತಿಳಿಸಿದ್ದಾರೆ. ಬೆಂಗಳೂರು
‘ವಾಹನಗಳ ಏರ್‌ಬ್ಯಾಗ್‌ನ ಬಿಡಿಭಾಗಗಳ ತಯಾರಿಕಾ ಕಂಪನಿ ಅಸಾಹಿ ಕಸೆಯಿ ಅಡ್ವಾನ್ಸ್ಡ್ ಬೆಂಗಳೂರಿನಲ್ಲಿ ಬಿಡಿಭಾಗಗಳ ತಯಾರಿಕಾ ಘಟಕ ಸ್ಥಾಪಿಸುವುದಾಗಿ ಹೇಳಿದೆ. ಈ ಹೂಡಿಕೆ ನಿರ್ಧಾರವು ರಾಜ್ಯದಲ್ಲಿ ವಾಹನ ತಯಾರಿಕಾ ವಲಯ ವಿಸ್ತರಣೆಯಾಗುತ್ತಿರುವುದಕ್ಕೆ ಪೂರಕವಾಗಿದೆ’ ಎಂದಿದ್ದಾರೆ.
ಸಚಿವರು ಜಪಾನ್ ಭೇಟಿಯ ಎರಡನೇ ದಿನ ರೆನೆಸಾನ್ ಎಲೆಕ್ಟ್ರಾನಿಕ್ಸ್, ಯಮಾಹಾ ರೋಬೊಟಿಕ್ಸ್‌ನ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿದ್ದಾರೆ.
ಇದನ್ನೂ ನೋಡಿ : ಗೌರಿ ನೆನಪು : ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ – ಡಾ. ಎಂ.ಎಸ್. ಆಶಾದೇವಿ – Janashakthi Media
