ತಮಿಳುನಾಡು: ಅಂತರ್ಜಾತಿ ವಿವಾಹವಾಗಲು ಕುಟುಂಬಗಳಿಂದ ವಿರೋಧ ಅನುಭವಿಸುತ್ತಿರುವ ಜೋಡಿಗಳಿಗೆ ರಾಜ್ಯಾದ್ಯಂತ ಸಿಪಿಐಎಂ ಕಛೇರಿಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಸಿಪಿಐಎಂ ತಮಿಳುನಾಡು ರಾಜ್ಯ ಕಾರ್ಯದರ್ಶಿ ಶಣ್ಮುಗಮ್ ತಿಳಿಸಿದ್ದಾರೆ.
“ನಾವು ತಿರುನಲ್ವೇಲಿಯಲ್ಲಿರುವ ನಮ್ಮ ಕಚೇರಿಯಲ್ಲಿ ಅಂತರ್ಜಾತಿ ಮದುವೆ ಮಾಡಿದ್ದೇವೆ, ಆ ಸಂದರ್ಭದಲ್ಲಿ ವಧುವಿನ ಸಂಬಂಧಿಕರು ಕಚೇರಿಯನ್ನು ಧ್ವಂಸ ಮಾಡಿದರು. ಆದರೆ ನಾವು ಅಂತರ್ಜಾತಿ ವಿವಾಹಗಳನ್ನು ಬೆಂಬಲಿಸುತ್ತಲೇ ಇದ್ದೇವೆ. ಎಲ್ಲಾ ಸಮುದಾಯಗಳಲ್ಲಿ ಪ್ರಗತಿಪರ ಶಕ್ತಿಗಳು ಅಸ್ತಿತ್ವದಲ್ಲಿವೆ ಮತ್ತು ನಾವು ಅವುಗಳನ್ನು ಗುರುತಿಸಿ ಸಂಘಟಿಸಬೇಕು. ಆಗ ಮಾತ್ರ ನಾವು ಜಾತಿವಾದಿ ಪ್ರಶ್ನೆಗಳ ವಿರುದ್ಧ ಸಂಯುಕ್ತ ವೇದಿಕೆಯನ್ನು ರಚಿಸಬಹುದು” ಎಂದು ಅವರು ಚೆನ್ನೈನಲ್ಲಿ ನಡೆದ ಜಾತಿ ಹತ್ಯೆಗಳ ವಿರುದ್ಧದ ಸಭೆಯಲ್ಲಿ ಹೇಳಿದರು.
ಇದನ್ನೂ ಓದಿ: ಬೆಂಗಳೂರು |ವಿಧಾನ ಪರಿಷತ್ ಗೆ ರಮೇಶ್ ಬಾಬು ಸೇರಿದಂತೆ ನಾಲ್ವರನ್ನು ನಾಮ ನಿರ್ದೇಶನ ವರದಿ
ಸಿಪಿಐಎಂ ಶಾಸಕಾಂಗ ಪಕ್ಷದ ಮಾಜಿ ನಾಯಕ ಎ. ಸೌಂದರರಾಜನ್ ಅವರು 2015 ರಲ್ಲಿ ವಿಧಾನಸಭೆಯಲ್ಲಿ ಜಾತಿ ಹತ್ಯೆಗಳನ್ನು ನಿಭಾಯಿಸಲು ವಿಶೇಷ ಕಾನೂನು ಕೋರಿ ಮಸೂದೆಯನ್ನು ಮಂಡಿಸಿದರೂ, ಅದು ಸೋಲನುಭವಿಸಿತು ಎಂದು ಕಾಮ್ರೇಡ್ ಷಣ್ಮುಗಂ ಹೇಳಿದರು. “ಮಧ್ಯಂತರ ಸಮುದಾಯಗಳು ಮತ್ತು ಪರಿಶಿಷ್ಟ ಜಾತಿಗಳ ನಡುವೆ ತಪ್ಪು ತಿಳುವಳಿಕೆ ಇದ್ದು, ಇದು ಹೆಚ್ಚಾಗಿ ಯುವ ದಂಪತಿಗಳ ಹತ್ಯೆಗೆ ಕಾರಣವಾಗಿದೆ. ಜಾತಿ ಹೆಮ್ಮೆಯ ಹೆಸರಿನಲ್ಲಿ ನಡೆಯುವ ಮರ್ಯಾದಾ ಹತ್ಯೆಗಳನ್ನು ತಡೆಯಲು ಕಾನೂನನ್ನು ಜಾರಿಗೆ ತರಬೇಕು” ಎಂದು ಅವರು ಹೇಳಿದರು.
ಸಿಪಿಐ ರಾಜ್ಯ ಕಾರ್ಯದರ್ಶಿ ಆರ್. ಮುತ್ತರಸನ್ ಮತ್ತು ವಿಸಿಕೆ ನಾಯಕ ತೋಲ್ ತಿರುಮಾವಲವನ್ ಅವರೊಂದಿಗೆ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಿ ಅಂತಹ ಕಾನೂನನ್ನು ಜಾರಿಗೆ ತರುವಂತೆ ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದರು. “ನಾವು ಮುಖ್ಯಮಂತ್ರಿಗೆ 30 ನಿಮಿಷಗಳ ಕಾಲ ಪರಿಸ್ಥಿತಿಯನ್ನು ವಿವರಿಸಿದ್ದೇವೆ ಮತ್ತು ಅವರು ನಮ್ಮ ಬೇಡಿಕೆಯ ಪರವಾಗಿದ್ದಾರೆಂದು ಭಾವಿಸಿದ್ದೇವೆ. ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಅವರು ಕಾನೂನನ್ನು ತರಬೇಕು.”
ತಿರುನಲ್ವೇಲಿ ಜಿಲ್ಲೆಯೊಂದರಲ್ಲೇ ಒಂದು ವರ್ಷದಲ್ಲಿ ಇಂತಹ 240 ಕೊಲೆಗಳು ನಡೆದಿವೆ ಎಂದು ಷಣ್ಮುಗಂ ಹೇಳಿಕೊಂಡಿದ್ದು, ಪರಿಸ್ಥಿತಿ “ಸಂಪೂರ್ಣವಾಗಿ ನಿಯಂತ್ರಣ ತಪ್ಪಿದೆ” ಎಂದು ಕರೆದಿದ್ದಾರೆ. “ಈಗ, ಕಾನೂನಿಗೆ ಸಾರ್ವಜನಿಕ ಬೆಂಬಲ ಹೆಚ್ಚುತ್ತಿದೆ ಮತ್ತು ಸರ್ಕಾರ ಈ ಅವಕಾಶವನ್ನು ಬಳಸಿಕೊಳ್ಳಬೇಕು” ಎಂದು ಅವರು ಹೇಳಿದರು.
ಇದನ್ನೂ ನೋಡಿ: ಸಮುದಾಯ 50| ನಾಟಕೋತ್ಸವ | ಸದ್ಭಾವನಾ ಗೀತೆ – ಜನಾರ್ಧನ್ (ಜನ್ನಿ) ಮತ್ತು ತಂಡದವರಿಂದJanashakthi Media
