ಭಾರತ ರಷ್ಯಾ ವ್ಯಾಪಾರ – ಅಮೇರಿಕದ ಗೋಸುಂಬೆತನ

ಭಾರತ ರಷ್ಯಾದೊಡನೆ ದೊಡ್ಡ ವ್ಯಾಪಾರ ಸಂಬಂಧ ಹೊಂದಿದ್ದು ತೈಲ ಮತ್ತು ಶಸ್ತ್ರಾಸ್ತ್ರಗಳ ಅಪಾರ ಪ್ರಮಾಣದ ಆಮದು ಮಾಡಿಕೊಳ್ಳುತ್ತಿದೆ ಎಂದು ಭಾರತವನ್ನು ಟೀಕಿಸಿರುವ ಅಮೇರಿಕ ಭಾರತದ ಮೇಲೆ ಶೇ 25 ರ ಸುಂಕ ಹೇರಿದೆ. ಎರಡೇ ದಿನಗಳಲ್ಲಿ ಮತ್ತೆ ಶೇ 25 ರ ಹೆಚ್ಚಿನ ಸುಂಕವನ್ನು ಟ್ರಂಪ್ ನ ಅಮೇರಿಕ ಹೇರಿದೆ. ರಷ್ಯದೊಂದಿಗಿನ ಭಾರತದ ವ್ಯಾಪಾರ ಸಂಬಂಧ ನಿಜವಾದರೂ ಅಮೇರಿಕದ ಈ ಸುಂಕ ಹೇರಿಕೆಯ ಕಾರ್ಯ ತರ್ಕಹೀನವಾದದ್ದು. ಯಾಕೆಂದರೆ, ಭಾರತ ರಷ್ಯದಿಂದ ಆಮದು ಮಾಡಿಕೊಂಡಂತೆ ಯುರೋಪಿನ ದೇಶಗಳೂ ಸಹ ಆಮದು ಮಾಡಿಕೊಂಡಿವೆ. ರಷ್ಯಾದ ಉಕ್ರೇನ್ ಯುದ್ದದ ಪ್ರಸ್ತಾಪ ಮಾಡಿರುವ ಟ್ರಂಪ್ ಅಲ್ಲಿನ ಸಾವುಗಳ ಜವಾಬ್ದಾರಿಯಲ್ಲಿ ಭಾರತ ಪಾಲು ಹೊಂದಿದೆ ಎಂದಿದ್ದಾರೆ. ಈ ಮಾತುಗಳು  ತಾರ್ಕಿಕವಾಗಿ ಸರಿಯಲ್ಲ ಎಂಬುದನ್ನು ಮನಗಾಣಬೇಕಾಗಿದೆ.
– ಜಿ.ಎಸ್.ಮಣಿ

(ಆಧಾರ: ದಿ ಹಿಂದೂ ಪತ್ರಿಕೆಯ ದಿನಾಂಕ 12 ಆಗಸ್ಟ್ 2025 ರ ಸಂಚಿಕೆಯಲ್ಲಿ ಪ್ರಕಟವಾದ ಡಾಟಾ ಪಾಯಿಂಟ್ ಲೇಖನ)

ಭಾರತ ಮತ್ತು ಚೀನಾ ರಷ್ಯದಿಂದ ತೈಲ ಆಮದು ಮಾಡಿಕೊಂಡಿರುವುದು ನಿಜ. ಆದರೆ ಭಾರತದ ತೈಲ ಆಮದಿಗಿಂತ ಯುರೋಪಿನ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಂಡಿವೆ. ಭಾರತ ರಷ್ಯದಿಂದ ತೈಲ ಆಮದನ್ನು ಇತ್ತೀಚೆಗೆ ಹೆಚ್ಚು ಮಾಡುತ್ತಿರುವುದೂ ನಿಜವಾದರೂ ಯುರೋಪಿನ ಹಲವು ದೇಶಗಳು ಅದರಲ್ಲೂ ಮುಖ್ಯವಾಗಿ ನೆದರ್ಲ್ಯಾಂಡ್ಸ್ ದೇಶ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿದೆ. ಇಷ್ಟೇ ಅಲ್ಲ. ಸ್ವತಃ ಅಮೇರಿಕ ರಷ್ಯದಿಂದ ಹಲವು ಸರಕುಗಳನ್ನು, ರಸಗೊಬ್ಬರ ಸೇರಿ, ರಷ್ಯದಿಂದ ಆಮದು ಮಾಡಿಕೊಳ್ಳುತ್ತಿದೆ. ಪರೋಕ್ಷವಾಗಿ ಆಮದು ಮಾಡಿಕೊಳ್ಳುವ ದೇಶಗಳನ್ನು ಬಿಟ್ಟು ನೇರವಾಗಿ ತೈಲ ಆಮದು ಮಾಡಿಕೊಳ್ಳುವ ದೇಶವನ್ನು ಟೀಕಿಸುವುದು ಮತ್ತು ಆ ಕಾರಣಕ್ಕಾಗಿ ಹೆಚ್ಚಿನ ಸುಂಕ ವಿಧಿಸುವುದು ಅತಾರ್ಕಿಕವಾದದ್ದು.

ಇದನ್ನೂ ಓದಿ: ಒಳಮೀಸಲಾತಿ ತಕ್ಷಣವೇ ಜಾರಿ ಮಾಡಿ ಮುಖ್ಯಮಂತ್ರಿಗೆ ದೇವನೂರು ಮಹದೇವ ಬಹಿರಂಗ ಪತ್ರ

ಉಕ್ರೇನ್ ಯುದ್ದದ ಸಾವುಗಳಿಗೆ ಇದನ್ನು ತಳಕು ಹಾಕಿ ಟೀಕಿಸುವುದು ಇನ್ನೊಂದು ರೀತಿಯ ಗೋಸುಂಬೆತನ. ಯಾಕೆಂದರೆ, ಅಮೇರಿಕ ಗಾಜಾದ ಮೇಲೆ ಯುದ್ದ ಮಾಡುತ್ತಾ ನರಮೇಧ ನಡೆಸುತ್ತಿರುವ ಇಸ್ರೇಲ್ ಗೆ ಅಪಾರ ಪ್ರಮಾಣದ ನೆರವು ನೀಡುತ್ತಿದೆ. ಹೀಗೆ ಮಾಡುವ ಅಮೆರಿಕಾಕ್ಕೆ ಭಾರತವನ್ನು ಟೀಕಿಸುವ ನೈತಿಕತೆ ಎಲ್ಲಿಯದು?

ಭಾರತ ಕಳೆದ ಹಲವು ದಶಕಗಳಿಂದ ರಷ್ಯಾ ಜೊತೆಗೆ ವ್ಯಾಪಾರ ಸಂಬಂಧ ಬೆಳೆಸಿಕೊಂಡು ಬಂದಿದೆ. ಉಕ್ರೇನ್ ಯುದ್ಧ ಪ್ರಾರಂಭವಾದ ಮೇಲೆ ತೈಲ ಆಮದು ಮಾಡಿಕೊಳ್ಳುತ್ತಿರುವುದೂ ನಿಜ. ಅಮೇರಿಕ ಜಿ 7 ದೇಶಗಳು ಮತ್ತು ನ್ಯಾಟೊ ದೇಶಗಳು ರಷ್ಯಾದ ತೈಲ ಆಮದಿನ ಮೇಲೆ ಬೆಲೆ ಮಿತಿ ಹೇರಿ ರಷ್ಯಾದ ಆದಾಯ ಹಿಂಡುವ ಕ್ರಮಗಳನ್ನು ಕೈಗೊಂಡ ಮೇಲೆ ಭಾರತ ರಷ್ಯದಿಂದ ಕಡಿತ ಮಾಡಿದ ಬೆಲೆಯಲ್ಲಿ ತೈಲ ಆಮದು ಮಾಡಿಕೊಳ್ಳುವುದು ಸಾಧ್ಯವಾಯಿತು.

ಭಾರತ ರಷ್ಯಾ ವ್ಯಾಪಾರ - ಅಮೇರಿಕದ ಗೋಸುಂಬೆತನ

ಚಾರ್ಟ್ 1 ಭಾರತದ ಒಟ್ಟು ತೈಲ ಆಮದಿನಲ್ಲಿ ರಶ್ಯಾದಿಂದ ಆಮದಿನ ಪಾಲು

ಉಕ್ರೇನ್ ಯುದ್ಧ ಪ್ರಾರಂಭವಾದ ನಂತರದ ಅವಧಿಯಲ್ಲಿ ರಷ್ಯದಿಂದ ನಮ್ಮ ತೈಲ ಆಮದು (2022ರಲ್ಲಿ ಶೇ 13.1 ಇದ್ದಿದ್ದು 2024ರಲ್ಲಿ ಶೇ.35.3 ಗೇ ಏರಿ 2025ರಲ್ಲಿ ಶೇ.31.5ಕ್ಕೆ ಇಳಿಕೆಯಾಗಿದೆ.  ವಿದೇಶ ವ್ಯವಹಾರಗಳ ಮಂತ್ರಾಲಯ ಹೇಳುವುದು, ನಮ್ಮ ತೈಲ ಖರೀದಿ ಜಾಗತಿಕ ಮಾರುಕಟ್ಟೆ ಬೆಲೆಗಳು ಮತ್ತು ರಾಷ್ಟ್ರೀಯ ಇಂಧನ ಭದ್ರತೆ ಕಾಪಾಡಿಕೊಳ್ಳುವ  ಉದ್ದೇಶಕ್ಕೆ ಅನುಗುಣವಾಗಿರುತ್ತದೆ. ಜಾಗತಿಕವಾಗಿ ಇಂಧನ ಸಮತೋಲನವಿರಲಿ ಎಂಬ ಕಾರಣಕ್ಕೆ ಅಮೇರಿಕ ಇದನ್ನು ಕ್ರಿಯಾತ್ಮಕವಾಗಿ ಪ್ರೋತ್ಸಾಹಿಸಿತ್ತು ಎಂಬುದನ್ನು.

ನಿರ್ಬಂಧದ ಸಮಯದಲ್ಲಿ ನಮ್ಮ ಆಮದಿನ ಹೆಚ್ಚಳ ರಷ್ಯಾದ ಆದಾಯ ಹೆಚ್ಚಿಸಿತ್ತು ಎಂಬುದು ನಿಜವೇ ಆದರೂ, ಚೀನಾ ಮತ್ತು ಯುರೋಪಿನ ದೇಶಗಳು ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲದ ಆಮದು ಹೆಚ್ಚಿಸಿದ್ದವು ಎಂಬುದು ಸಹ ವಾಸ್ತವ.

ಭಾರತ ರಷ್ಯಾ ವ್ಯಾಪಾರ - ಅಮೇರಿಕದ ಗೋಸುಂಬೆತನ

ಚಾರ್ಟ್ 2 ರಶ್ಯಾದಿಂದ ಚೀನಾ, ಯುರೋಕೂಟ ಮತ್ತು ಭಾರತಗಳ ಇಂಧನ ಆಮದಿನ ಮೌಲ್ಯ

2022-25 ರ ಅವಧಿಯಲ್ಲಿ ರಶ್ಯಾದಿಂದ (ಅದರ ಜತೆ ಪರೋಕ್ಷ ಯುದ್ಧದಲ್ಲಿ ತೊಡಗಿರುವ) ಯುರೋಪಿನ ದೇಶಗಳ ತೈಲ ಮತ್ತು ಅನಿಲಗಳ ಆಮದು 2,1 ಲಕ್ಷ ಯುರೋ ಗಳಷ್ಟಿದ್ದು, ಅದು ಭಾರತದ ಆಮದಿಗಿಂತ (1,30 ಲಕ್ಷ ಯುರೋ) ಶೇ.60ರಷ್ಟು ಹೆಚ್ಚಿತ್ತು.  ಚಾರ್ಟ್ 2 ಈ ಆಮದಿನ ಅಂಕಿಗಳನ್ನು ತೋರಿಸುತ್ತದೆ. ಚೀನಾದ ಆಮದು ತೈಲ ಮತ್ತು ಅನಿಲ (2.27 ಲಕ್ಷ ಯುರೋ) ಶೇ.77 ಎಷ್ಟು ಹೆಚ್ಚಿದೆ. ಆಮದು ಚೀನಾ, ಯುರೋಪಿನ ದೇಶಗಳು ಅನುಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿ ಈ ಚಾರ್ಟಿನಲ್ಲಿ ಕಾಣಿಸಿಕೊಳ್ಳುತ್ತವೆ. ಭಾರತ ಮೂರನೇ ಸ್ಥಾನದಲ್ಲಿದೆ. ಭಾರತಕ್ಕೆ ಮಾತ್ರ ಈ ತಾರತಮ್ಯ ಧೋರಣೆ.?!

ವಿದೇಶ ವ್ಯವಹಾರಗಳ ಮಂತ್ರಾಲಯ ಆಗಸ್ಟ್ 4 ರಂದು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅಮೇರಿಕ ಮತ್ತು ಯುರೋಪಿನ ದೇಶಗಳು ರಸಗೊಬ್ಬರ ಮತ್ತು ಇತರ ಹಲವು ಸರಕುಗಳನ್ನು ರಷ್ಯದಿಂದ ಆಮದು ಮಾಡಿಕೊಂಡಿರುವುದನ್ನು ಉಲ್ಲೇಖಿಸಿ ಅಮೆರಿಕದ ದ್ವಿಮುಖ ನೀತಿಯನ್ನು ಬಯಲಿಗೆಳೆದಿದೆ. ಟ್ರಂಪ್ ಮಹಾಶಯ ಈ ವಿಷಯದಲ್ಲಿ ತನಗೇನೂ ಗೊತ್ತಿಲ್ಲವೆಂದು ಮಾತು ಹಾರಿಸಿದ್ದಾನೆ!

ಟ್ರಂಪ್ ಮಾಡಿದ ಇನ್ನೊಂದು ಆರೋಪ ಭಾರತ ರಷ್ಯದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತಿದೆ ಎಂಬುದು. ಚಾರ್ಟ್ 3 ನೋಡಿ. ಟ್ರಂಪ್ ನ ಮಾತು ನಿಜವಾದರೂ, ರಷ್ಯದಿಂದ ಭಾರತದ ಶಸ್ತ್ರಾಸ್ತ್ರ ಆಮದು ಇತ್ತೀಚೆಗೆ ಕಡಿಮೆ ಆಗುತ್ತಿದೆ ಮತ್ತು ಯುರೋಪಿನ ಫ್ರಾನ್ಸ್ ಇತ್ಯಾದಿ ದೇಶಗಳಿಂದ ಹೆಚ್ಚಾಗುತ್ತಿದೆ.

*(ಆಧಾರ: ದಿ ಹಿಂದೂ ಪತ್ರಿಕೆಯ ದಿನಾಂಕ 12 ಆಗಸ್ಟ್ 2025 ರ ಸಂಚಿಕೆಯಲ್ಲಿ ಪ್ರಕಟವಾದ ಡಾಟಾ ಪಾಯಿಂಟ್ ಲೇಖನ)

ಭಾರತ ರಷ್ಯಾ ವ್ಯಾಪಾರ - ಅಮೇರಿಕದ ಗೋಸುಂಬೆತನ

ಚಾರ್ಟ್ 3 ವಿವಿಧ ದೇಶಗಳಿಂದ 2022ರಿಂದ ಭಾರತದ ಶಸ್ತ್ರಾಸ್ತ್ರ ಆಮದಿನ ಪ್ರಮಾಣ

ಟ್ರಂಪ್ ನ ಇನ್ನೊಂದು ಆಪಾದನೆ ರಷ್ಯಾದ ಯುದ್ದ ಯಂತ್ರಗಳು ಉಕ್ರೇನಿಯನ್ನರನ್ನು ಹೇಗೆ ಕಗ್ಗೊಲೆ ಮಾಡುತ್ತಿದೆ ಎಂಬುದನ್ನೂ ನೋಡದೆ ಭಾರತ ವ್ಯವಹಾರ ಮಾಡುತ್ತಿದೆ ಎಂಬುದು. ಈ ಮಾತುಗಳನ್ನು ಆಡುವ ಟ್ರಂಪ್ ನ ಅಮೆರಿಕದ ಮಾನವೀಯತೆ ಎಂತಹದ್ದು ಎಂಬುದು ಚಾರ್ಟ್ 4 ಅನ್ನು ನೋಡಿದರೆ ಗೊತ್ತಾಗುತ್ತದೆ. ಪ್ಯಾಲೆಸ್ತಿನಿಯನ್ನರ ನರಮೇಧದಲ್ಲಿ ತೊಡಗಿರುವ ಇಸ್ರೇಲ್ ಗೆ 1949 ರಿಂದ ಶೇ 80 ಕ್ಕಿಂತ ಹೆಚ್ಚು ಯುದ್ಧ ಸಾಮಗ್ರಿ ಪೂರೈಸುತ್ತಿರುವುದು ಅಮೇರಿಕ. ಇತ್ತೀಚಿನ ಅಂದರೆ 2022 ರಿಂದ, ಈ ಪೂರೈಕೆ ಶೇ 100 ಕ್ಕೆ ಏರಿದೆ!! ಹಾಗಾದರೆ ಇದೇ ತರ್ಕ ಬಳಸಿ ಯು.ಎಸ್ ಗಾಜಾದಲ್ಲಿ ನಡೆಯುತ್ತಿರುವ ನರಮೇಧದ ಅಪರಾಧಿ ಎಂದು ಟ್ರಂಪ್ ಒಪ್ಪುತ್ತಾರಾ??

ಚಾರ್ಟ್ 4 ವಿವಿಧ ದೇಶಗಳಿಂದ 1949ರಿಂದ ಇಸ್ರೇಲಿನ ಶಸ್ತ್ರಾಸ್ತ್ರ ಆಮದಿನ ಪ್ರಮಾಣ

ಭಾರತ ರಷ್ಯಾ ವ್ಯಾಪಾರ - ಅಮೇರಿಕದ ಗೋಸುಂಬೆತನ

ಇದನ್ನೂ ನೋಡಿ: ಫ್ಯಾಸಿಸಂ ವಿರುದ್ಧ ವಿಜಯದ 80ನೇ ವಾರ್ಷಿಕೋತ್ಸವ | ಜನತಾ ಪ್ರತಿರೋಧ ಗೆರಿಲ್ಲಾ ಸೈನ್ಯಗಳ ಪಾತ್ರ – ಭಾಗ 3

 

Donate Janashakthi Media

Leave a Reply

Your email address will not be published. Required fields are marked *