ಲಂಡನ್: ಲೇಬರ್ ಸಂಸತ್ ಸದಸ್ಯರು ಮತ್ತು ನಾಯಕರಾಗಿದ್ದ ಜೆರೆಮಿ ಕಾರ್‌ಬಿನ್ ಮತ್ತು ಝಾರಾ ಸುಲ್ತಾನಾ ಅವರು, ಯು.ಕೆ ಯಲ್ಲಿ ಒಂದು ಹೊಸ ಎಡಪಂಥೀಯ ಪಕ್ಷವನ್ನು ಕಟ್ಟುವ ತಮ್ಮ ಉದ್ದೇಶವನ್ನು ಪುನಃ ದೃಢಪಡಿಸಿದ್ದಾರೆ. ಈ ಇಬ್ಬರು, ಜುಲೈ 24 ರಂದು ಜಂಟಿ ಪ್ರಕಟಣೆ ನೀಡಿದ್ದು, ಸುಲ್ತಾನಾ ಲೇಬರ್ ಪಕ್ಷ ತೊರೆದ ನಂತರ ಮೂರು ವಾರಗಳ ಗಂಭೀರ ಚರ್ಚೆಗಳ ಬಳಿಕ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಹೇಳಿದ್ದರು. ಯು.ಕೆ
ಅವರು “ಇದು ನಿಮಗೆ ಸೇರಿದ ಹೊಸ ರೀತಿಯ ರಾಜಕೀಯ ಪಕ್ಷವಾಗಿರುತ್ತದೆ” ಎಂಬ ಆಶಯವನ್ನೂ, “ಪಕ್ಷದ ದಿಕ್ಕು, ನಾಯಕತ್ವದ ಮಾದರಿ, ಮತ್ತು ಸಮಾಜವನ್ನು ರೂಪಾಂತರಗೊಳಿಸಲು ಅಗತ್ಯವಿರುವ ನೀತಿಗಳನ್ನು ಸದಸ್ಯರು ನಿರ್ಧರಿಸುವ ಸ್ಥಾಪನೆಯ ಸಮ್ಮೇಳನ” ನಿರ್ಧರಿಸುತ್ತದೆಯೆಂದೂ ತಿಳಿಸಿದ್ದಾರೆ. ಈ ಸ್ಥಾಪನಾ ಪ್ರಕ್ರಿಯೆಯು ಹೊಸ ಪಕ್ಷದ ಹೆಸರನ್ನೂ ನಿರ್ಧರಿಸುತ್ತದೆ. ಈ ಪ್ರಕ್ರಿಯೆ, ಕಾರ್‌ಬಿನ್ ಮತ್ತು ಸುಲ್ತಾನಾ ಇಬ್ಬರೂ ಸದಸ್ಯರಾಗಿರುವ ಸ್ವತಂತ್ರ ಸಂಸತ್ ಸದಸ್ಯರ ಕೂಟದ ರಚಿಸುವ ಕಾರ್ಯಪಡೆ ಮೂಲಕ ನಡೆಯಲಿದೆ ಎಂದೂ ಅವರು ತಿಳಿಸಿದ್ದಾರೆ.
ಇತ್ತೀಚಿನ ಒಂದು ಸಮೀಕ್ಷೆ, ಲೇಬರ್ ಪಕ್ಷದೊಂದಿಗೆ ಸಮಾನ ಮಟ್ಟದಲ್ಲಿಈ ಹೊಸ ಪಕ್ಷ 15% ಮತಬೆಂಬವನ್ನುಈಗಾಗಲೇ ಹೊಂದಿದೆ ಎಂಬುದನ್ನು ತೋರಿಸಿದೆ. ಈ ಪಕ್ಷವು ತನ್ನದೇ ಆದ ನಾಯಕತ್ವ ಹೋರಾಟದಲ್ಲಿರುವ ಗ್ರೀನ್ ಪಕ್ಷದ ಜೊತೆಗೆ ಕೈಜೋಡಿಸಿದರೆ, ಲೇಬರ್ ಪಕ್ಷಕ್ಕಿಂತ ಮುಖ್ಯವಾದ ಎಡಪಂಥೀಯ ಚುನಾವಣಾ ಸಾಧನವಾಗಿ ಮಾರ್ಪಡಬಹುದು.
ಈ ಹೊಸ ಪಕ್ಷದ ಉದಯದ ಸುದ್ದಿಯೇ ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ ಅವರ ರಾಜಕೀಯ ತಂತ್ರವನ್ನು ಬುಡಮೇಲು ಮಾಡಹತ್ತಿದೆ. ಇದುವರೆಗಿನ ರಾಜಕೀಯ ಖಾಲಿತನವನ್ನು ಈ ಹೊಸ ಪಕ್ಷದ ಅಭಿಯಾನ ತುಂಬಲು ಮುಂದಾಗಿದೆ.
ಕಾರ್ಬಿನ್-ಸುಲ್ತಾನಾ ಘೋಷಣೆಯಲ್ಲಿ ಹೀಗೆ ಹೇಳಿದ್ದಾರೆ:
“ಜಗತ್ತಿನ ಹದಿನಾರನೆಯ ಶ್ರೀಮಂತ ದೇಶದಲ್ಲಿ 45 ಲಕ್ಷ ಮಕ್ಕಳಿಗೆ ದಾರಿದ್ರ್ಯವಿದೆ ಅಂದರೆ ಈ ವ್ಯವಸ್ಥೆ ಕುಸಿದಿದೆಯೆಂದರ್ಥ. ಈ ಬೆಲೆಗಳು ಏರುತ್ತಿರುವಾಗಲೇ ಬೃಹತ್ ಕಾರ್ಪೊರೆಟ್ ಗಳು ಅಪಾರ ಹಣ ಮಾಡುತ್ತಿವೆಯೆಂದರೆ, ಇದು ಅವರ ಅನುಕೂಲಕ್ಕೆ ಮಾಡಿವ ವ್ಯವಸ್ಥೆಯೆಂದರ್ಥ”
“ಸರ್ಕಾರ ಬಡವರಿಗೆ ಹಣ ಇಲ್ಲವೆಂದು ಹೇಳುವ ಸರಕಾರ, ಯುದ್ಧಕ್ಕೆ ಬಿಲಿಯಾಂತರ ಪೌಂಡುಗಳನ್ನು ಕೊಡಮಾಡುತ್ತದೆಯೆಂದರೆ, ಇದು ಅವರ ಅನುಕೂಲಕ್ಕೆ ಮಾಡಿವ ವ್ಯವಸ್ಥೆಯೆಂದರ್ಥ. ನಾವು ಈ ಅನ್ಯಾಯಗಳನ್ನು ಒಪ್ಪಿಕೊಳ್ಳಲಾರೆವು ಮತ್ತು ನೀವು ಕೂಡ ಒಪ್ಪಿಕೊಳ್ಳಬಾರದು.”
ಇದಲ್ಲದೆ:
“ನಮ್ಮ ಸಮಾಜದ ಬಿಕ್ಕಟ್ಟುಗಳನ್ನು ನಿವಾರಿಸೋದು ಬಹುಮಟ್ಟದ ಸಂಪತ್ತು ಮತ್ತು ಅಧಿಕಾರದ ಪುನರ್ ಹಂಚಿಕೆಯ ಮೂಲಕ ಮಾತ್ರ ಸಾಧ್ಯ. ಅಂದರೆ ಸಮಾಜದ ಅತ್ಯಂತ ಶ್ರೀಮಂತರಿಗೆ ತೆರಿಗೆ ವಿಧಿಸುವುದು.” ಯು.ಕೆ
ಇದನ್ನೂ ಓದಿ : ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ಮತ್ತು ಆರ್ಥಿಕ ದಿಗ್ಬಂಧನ ಹೇರಲು 12 ದೇಶಗಳ ನಿರ್ಧಾರ ಯು.ಕೆ
“ಅಂದರೆ NHS (ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ) ಖಾಸಗೀಕರಣದಿಂದ ಮುಕ್ತವಾಗಿರಬೇಕು, ಮತ್ತು ಇಂಧನ, ನೀರು, ರೈಲು, ಅಂಚೆ ಸೇವೆಗಳನ್ನು ಸಾರ್ವಜನಿಕ ಮಾಲೀಕತ್ವಕ್ಕೆ ತರಬೇಕು” ಎಂದೂ, “ಪ್ರಚಂಡ ಸರ್ಕಾರಿ ಗೃಹ ನಿರ್ಮಾಣ ಯೋಜನೆಗೆ ಹೂಡಿಕೆ ಮಾಡಬೇಕು” ಎಂದೂ, ಇದು ಕಾರ್ಬಿನ್ ಅವರ ಲೇಬರ್ ನಾಯಕರಾಗಿದ್ದ ಕಾಲದ ಜನಪ್ರಿಯ ನೀತಿಗಳನ್ನು ಸ್ಮರಿಸುತ್ತದೆ.
ಈ ಘೋಷಣೆಯಲ್ಲಿ” ಸರ್ಕಾರ ಮಾನವತೆಗೆ ವಿರುದ್ಧವಾದ ಅಪರಾಧಗಳಲ್ಲಿ ಭಾಗಿಯಾಗಿರುವುದನ್ನೂ” ಖಂಡಿಸುತ್ತದೆ. “ಇದೇ ಸಮಯದಲ್ಲಿ ಜನಸಂಹಾರದ ವಿರುದ್ಧ ಪ್ರತಿಭಟಿಸಲು ಹಕ್ಕನ್ನು ನಾವು ರಕ್ಷಿಸಬೇಕು.” ಎನ್ನುತ್ತದೆ.
“ಆದ್ದರಿಂದ ನಾವು ಇಸ್ರೇಲ್‌ಗೆ ಎಲ್ಲ ಆಯುಧ ಮಾರಾಟ ನಿಲ್ಲಿಸಲು ಮತ್ತು ಶಾಂತಿಯ ಏಕೈಕ ದಾರಿಯಾದ ಸ್ವತಂತ್ರ ಪ್ಯಾಲೆಸ್ತೈನ್ ಸ್ಥಾಪನೆಗಾಗಿ ಆಗ್ರಹಿಸುತ್ತೇವೆ.”
“ಸಮಾಜದ ಸಮಸ್ಯೆಗಳಿಗಾಗಿ ವಲಸಿಗರನ್ನು ಅಥವಾ ವಲಸಿಗರನ್ನು ಆರೋಪಿಸುವವರು ನಿಮ್ಮನ್ನು ಭ್ರಷ್ಟಮಾರ್ಗಕ್ಕೆ ಒಯ್ಯುತ್ತಿದ್ದಾರೆ. ವಾಸ್ತವದಲ್ಲಿ ಇದು ಬೃಹತ್ ಸಂಸ್ಥೆಗಳು ಮತ್ತು ಅತಿಸಿರಿವಂತರನ್ನು ರಕ್ಷಿಸುವ ಆರ್ಥಿಕ ವ್ಯವಸ್ಥೆಯ ಫಲಿತಾಂಶ.”
“ಸಂಪತ್ತನ್ನು ಸೃಷ್ಟಿಸುವವರು ಸಾಮಾನ್ಯ ಜನರು—ಹಾಗೆಯೇ ಅದನ್ನು ಮತ್ತೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಶಕ್ತಿಯೂ ಅವರಲ್ಲಿದೆ.”
“ಇದು ನಿಮ್ಮ ಸಮುದಾಯಗಳಲ್ಲಿ, ಕಾರ್ಮಿಕ ಯೂನಿಯನುಗಳು ಮತ್ತು ಸಾಮಾಜಿಕ ಚಳವಳಿಗಳಲ್ಲಿ ನೆಲೆಯಿರುವ, ಹೊಸ ರೀತಿಯ ರಾಜಕೀಯ ಪಕ್ಷವಾಗಿರಲಿದೆ. ಇದು ಎಲ್ಲಾ ಪ್ರದೇಶಗಳಲ್ಲಿ ಶಕ್ತಿಯನ್ನು ನಿರ್ಮಿಸಲಿದೆ. ಇದು ನಿಮ್ಮದು.”
ಇನ್ನೂ ಕಾರ್ಬಿನ್ ಪಕ್ಷದ ನಾಯಕರಾಗಿಲಿದ್ದಾರೆ ಎಂಬುದು ಖಚಿತವಾಗಿಲ್ಲ, ಆದರೆ ಸಮೀಕ್ಷೆಗಳು ಅವರು ಪ್ರಧಾನ ಮಂತ್ರಿಗಿಂತ ಹೆಚ್ಚು ಜನಪ್ರಿಯರಾಗಿದ್ದಾರೆ ಎನ್ನುತ್ತದೆ. ಸ್ಟಾರ್ಮರ್ ಅವರ ಜನಪ್ರಿಯತೆ ಎಲ್ಲ ವಯೋಮಾನದ ಜನರ ನಡುವೆ ಕಡಿಮೆಯಾಗಿದ್ದು, ಯುವಜನರಲ್ಲಿ -30 ಅಂಕಕ್ಕೆ ಇಳಿದಿದೆ. ಯು.ಕೆ
ಕಾರ್ಬಿನ್ ಹೊಸ ಪಕ್ಷದ ಕುರಿತು ಹೀಗೆ ಹೇಳಿದರು:
“ಲೇಬರ್ ಪಕ್ಷ ಅತಿಯಾಗಿ ಕೇಂದ್ರೀಕೃತ ಪಕ್ಷವಾಗಿದೆ, ಅಲ್ಲಿ ಅತಿಯಾದ ನಿಯಂತ್ರಣವಿದೆ. ಆದರೆ ಇದು ಸಮುದಾಯದ ನಾಯಕತ್ವದಲ್ಲಿ ಬೆಳೆಯುವ ಪಕ್ಷವಾಗಿರಲಿದೆ—ಇದು ಭಿನ್ನವಾಗಿರುತ್ತದೆ, ಮತ್ತು ಇದು ಖುಷಿಕರವಾಗಿರುತ್ತದೆ.”
ಈ ಘೋಷಣೆಯ ನಂತರ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಜನರು ಸೇರ್ಪಡೆಗೊಂಡಿದ್ದು, ಇದು ದೇಶದ ಅತಿದೊಡ್ಡ ಪಕ್ಷವಾಗುವ ಸಾಧ್ಯತೆ ಇದೆ. ಲೇಬರ್ ಪಕ್ಷದ ಸದಸ್ಯತ್ವ 3.09 ಲಕ್ಷ, ಟೋರಿ ಪಕ್ಷದ ಸದಸ್ಯತ್ವ 1.23 ಲಕ್ಷವಿದ್ದು, ಯು.ಕೆ ರಿಫಾರ್ಮ್ (ನವ-ಫ್ಯಾಸಿಸ್ಟ್ ಪಕ್ಷ) 2.27 ಲಕ್ಷ ಸದಸ್ಯರನ್ನು ಹೊಂದಿವೆಯೆಂದು ಇಲ್ಲಿ ಗಮನಿಸಬಹುದು. ಇದರ 6 ಎಂಪಿಗಳು ಈಗಾಗಲೇ ಫಾರೇಜ್ ನೇತೃತ್ವದ ಗುಂಪಿಗಿಂತ ಹೆಚ್ಚು ಸಂಸದೀಯ ಶಕ್ತಿಯನ್ನೂ ಹೊಂದಿವೆ.
ಪಕ್ಷದ ಮೊದಲ ಸಮ್ಮೇಳನವು ಶೀಘ್ರದಲ್ಲಿ ನಡೆಯಲಿದೆ ಎಂಬ ನಂಬಿಕೆ ಇದೆ. ಇದೊಂದು ದೇಶದಾದ್ಯಂತದ ಎಡಪಂಥೀಯ ಮತ್ತು ಸ್ವತಂತ್ರ ಚುನಾವಣೆ ಚಟುವಟಿಕೆಗಳ ಕ್ಕೂಟವಾಗಿರಬಹುದೇ, ಅಥವಾ ಖಚಿತ ಸಂರಚನೆಯಿರುವ ಸುವ್ಯವಸ್ಥಿತ ಸಂಸ್ಥೆ
ಯಾಗಿರಬಹುದೇ ಎಂಬದು ಇನ್ನೂ ನಿರ್ಧಾರವಾಗಿಲ್ಲ. ಯಾವ ರೂಪವನ್ನೇ ತಾಳಲಿ, ಇದು ಚುನಾವಣಾ ಆಯೋಗದಲ್ಲಿ ಪಕ್ಷವಾಗಿ ನೋಂದಾಯಿಸಲಾಗುವುದು.
ಈಗಿರುವ ಪ್ರಮುಖ ಪಕ್ಷಗಳು ಕಳೆಗುಂದಿದ್ದು, ಅವುಗಳಿಂದ ಜನತೆ ನಿರಾಶರಾಗಿದ್ದು, ಸಕಾರಾತ್ಮಕ ಹೊಸ ಕಾರ್ಯಕ್ರಮವಿರುವ ಹೊಸ ಎಡ ಪಕ್ಷವು ಜನಪರ ರಾಜಕೀಯಕ್ಕೆ ಹೊಸ ಜೀವ ತುಂಬಬಹುದು. ಟ್ರೇಡ್ ಯೂನಿಯನುಗಳು, ಸಾಮಾಜಿಕ ಸಂಘಟನೆಗಳು/ಚಳುವಳಿಗಳು ಈ ಹೊಸ ಪಕ್ಷದ ಜತೆಗೆ ಕೈಗೂಡಿಸುವುದು ಅದರ ಸಫಲತೆಗೆ ಅಷ್ಟೇ ಮುಖ್ಯವಾದ ಸಂಗತಿಯಾಗಿದೆ.
ಇದನ್ನೂ ನೋಡಿ : ಧರ್ಮಸ್ಥಳ ಕೊಲೆ ಪ್ರಕರಣ : ಅಧಿಕಾರ ದರ್ಪ, ಹಣದ ಅಹಂಕಾರ ಕೊನೆಯಾಗಲಿ Janashakthi Media ಯು.ಕೆ
