ಆನ್‌ಲೈನ್ ಹಣ ವರ್ಗಾವಣೆ – ಸ್ವೀಕರಣೆಗೆ ತ್ವರಿತ ಮಾರ್ಗ ಒದಗಿಸಿದ ಯುಪಿಐ

ವದೆಹಲಿ: ಭಾರತೀಯರಿಗೆ ಆನ್‌ಲೈನ್ ಹಣ ವರ್ಗಾವಣೆ ಮತ್ತು ಸ್ವೀಕರಿಸಲು ತ್ವರಿತ ಮಾರ್ಗವನ್ನು ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಒದಗಿಸಿದೆ. ಇದೀಗ, ಇದು ಇನ್ನಷ್ಟು ವೇಗವಾಗಲಿದೆ. ಜೂನ್‌ 16 ಸೋಮವಾರದಿಂದ UPI ವಹಿವಾಟುಗಳು ಹೆಚ್ಚು ತ್ವರಿತವಾಗಿ ಪ್ರಕ್ರಿಯೆಗೊಳ್ಳಲಿದ್ದು, ಜುಲೈ 2025ರ ನಂತರ ಹಲವಾರು ಪ್ರಮುಖ ಬದಲಾವಣೆಗಳನ್ನು ಯೋಜಿಸಿದೆ. ಹಣ

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಏಪ್ರಿಲ್ 26, 2025ರಂದು ಜಾರಿಗೊಳಿಸಿದ ಸುತ್ತೋಲೆಯ ಪ್ರಕಾರ, UPI ಸೇವೆಗಳ ಪ್ರತಿಕ್ರಿಯೆ ಸಮಯವನ್ನು ಕಡಿಮೆಗೊಳಿಸಿ, ಬಳಕೆದಾರರ ಅನುಭವವನ್ನು ಸುಧಾರಿಸುವ ಗುರಿಯಿದೆ.

ಈ ಸುಧಾರಣೆಗಳು ಬ್ಯಾಂಕುಗಳು, ಬಳಕೆದಾರರು ಮತ್ತು ಫೋನ್‌ಪೇ, ಗೂಗಲ್ ಪೇ, ಪೇಟಿಎಂನಂತಹ ಜನಪ್ರಿಯ ಪಾವತಿ ಆಯಪ್‌ಗಳಿಗೆ ಲಾಭದಾಯಕವಾಗಲಿವೆ.

ಇದನ್ನೂ ಓದಿ: ಜವಾಹರ ನವೋದಯ ವಿದ್ಯಾಲಯ: 2026-27ನೇ ಸಾಲಿನ 6ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ತಗ್ಗಲಿದೆ UPI ಪ್ರತಿಕ್ರಿಯೆ ಸಮಯ:

* NPCI, UPI ವಹಿವಾಟುಗಳ ವೇಗವನ್ನು ಸುಧಾರಿಸಲು ಕಾರ್ಯನಿರ್ವಹಿಸುತ್ತಿದೆ. ಹಣ ವರ್ಗಾವಣೆ, ವಹಿವಾಟು ಸ್ಥಿತಿ ಪರಿಶೀಲನೆ, ಮತ್ತು ವಿಫಲ ವಹಿವಾಟು ಮರಳಿಕೆಗಳಂತಹ ಕಾರ್ಯಗಳು ಈಗಿನ 30 ಸೆಕೆಂಡುಗಳ ಬದಲಿಗೆ 10-15 ಸೆಕೆಂಡುಗಳಲ್ಲಿ ಪೂರ್ಣಗೊಳ್ಳಲಿವೆ.

* UPI ವಿಳಾಸಗಳ (ಮೊಬೈಲ್ ಸಂಖ್ಯೆ ಅಥವಾ UPI ID) ಪರಿಶೀಲಿಸಲು ಈಗಿನ 15 ಸೆಕೆಂಡುಗಳಿಂದ ಕಡಿಮೆಯಾಗಿ 10 ಸೆಕೆಂಡುಗಳು ಬೇಕಾಗುತ್ತದೆ.

ಆಗಸ್ಟ್ 1, 2025ರಿಂದ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಎಲ್ಲ ಬ್ಯಾಂಕ್‌ಗಳು ಮತ್ತು ಪಾವತಿ ಆಯಪ್‌ಗಳಿಗೆ ಹೊಸ ಆಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್ (API) ಬಳಕೆ ನಿಯಮಗಳನ್ನು ಜಾರಿಗೊಳಿಸಲಿದೆ. ಈ ಬದಲಾವಣೆಗಳು ವ್ಯವಸ್ಥೆಯನ್ನು ಸುರಕ್ಷಿತವಾಗಿ ಮತ್ತು ಸಮರ್ಥವಾಗಿಸುವ ಗುರಿಯನ್ನು ಹೊಂದಿದ್ದರೂ, ಬಳಕೆದಾರರಿಗೆ ಕೆಲವು ನಿರ್ಬಂಧಗಳು ಎದುರಾಗಬಹುದು.

ಪ್ರಮುಖ ಬದಲಾವಣೆಗಳು:

* ಬ್ಯಾಲೆನ್ಸ್ ಚೆಕ್‌ಗೆ ಮಿತಿ: ಬಳಕೆದಾರರು ತಮ್ಮ ಖಾತೆಯ ಬ್ಯಾಲೆನ್ಸ್‌ನ್ನು ಪ್ರತಿ ಯುಪಿಐ ಆಯಪ್‌ನಲ್ಲಿ ದಿನಕ್ಕೆ 50 ಬಾರಿ ಮಾತ್ರ ಪರಿಶೀಲಿಸಬಹುದು. ಎರಡು ಆಯಪ್‌ಗಳನ್ನು ಬಳಸಿದರೆ, ಪ್ರತಿಯೊಂದರಲ್ಲೂ 50 ಬಾರಿ ಚೆಕ್ ಮಾಡಬಹುದು.

* ವಹಿವಾಟು ಸ್ಥಿತಿ ಪರಿಶೀಲನೆ: ಪಾವತಿ ಸೇವಾ ಪೂರೈಕೆದಾರರು (PSPs) ವಹಿವಾಟು ಯಶಸ್ವಿಯಾಯಿತೇ ಎಂದು ಪರಿಶೀಲಿಸಲು API ಬಳಸುವಾಗ, ನಿರ್ದಿಷ್ಟ ಸಮಯ ವಿಳಂಬದ ನಂತರ ಮಾತ್ರ ಚೆಕ್ ಮಾಡಬೇಕು ಎಂದು ಹೊಸ ಮಾರ್ಗಸೂಚಿಗಳು ತಿಳಿಸಿವೆ.

* ಖಾತೆ ಪಟ್ಟಿ ಪ್ರವೇಶದ ಮಿತಿ: ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಗೆ ಸಂಯೋಜಿತವಾಗಿರುವ ಬ್ಯಾಂಕ್ ಖಾತೆಗಳ ಪಟ್ಟಿಯನ್ನು ದಿನಕ್ಕೆ 25 ಬಾರಿ ಮಾತ್ರ ಪರಿಶೀಲಿಸಬಹುದು. ಇದಕ್ಕೆ ಬಳಕೆದಾರರು ತಮ್ಮ ಬ್ಯಾಂಕ್ ಆಯ್ಕೆ ಮಾಡಿ ಒಪ್ಪಿಗೆ ನೀಡಬೇಕು.

ಇದನ್ನೂ ನೋಡಿ: ವಚನಾನುಭವ 29| ಜೀವನದಲ್ಲಿ ಸಜ್ಜನವೇ ಮಜ್ಜನ Janashakthi Media

Donate Janashakthi Media

Leave a Reply

Your email address will not be published. Required fields are marked *