ಬೆಂಗಳೂರು: ಕತ್ತರಘಟ ದಲಿತನ ಕೊಲೆ, ಕನಕಪುರ ಬನವಾಸಿ ಮತ್ತು ತುಮಕೂರು ಕವಣಗಾಲ ದೇವಸ್ಥಾನ ಪ್ರವೇಶ ನಿರಾಕರಣೆ ಹಾಗೂ ರಾಮನಗರ ಭದ್ರಪುರ ಯುವತಿ ಕೊಲೆ ರಾಜ್ಯದಲ್ಲಿ ದಲಿತರಲ್ಲಿ ಆತಂಕ ಹುಟ್ಟಿಸಿದೆ ಎಂದು ದಲಿತ ಹಕ್ಕುಗಳ ಸಮಿತಿ ತಿಳಿಸಿದೆ. ಮೇಲೆ
ಈ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿ ಎನ್. ರಾಜಣ್ಣ ಜಂಟಿ ಹೇಳಿಕೆ ನೀಡಿದ್ದೂ, ದಲಿತರ ಕೊಲೆ-ಸಾಮಾಜಿಕ ಬಹಿಷ್ಕಾರ, ದೌರ್ಜನ್ಯ, ದೇವಾಲಯ ಪ್ರವೇಶ ನಿರಾಕರಣೆ ತಡೆಯಲಾಗದ ಕಾಂಗ್ರೆಸ್ ಸರ್ಕಾರ, ಪೊಲೀಸ್ ವೈಫಲ್ಯವನ್ನು ಪ್ರತಿಬಿಂಬಿಸುತ್ತಿದ್ದೆ. ಕಾಂಗ್ರೇಸ್ ಸರ್ಕಾರ ದಲಿತರ ಆಶ್ರಯದಾತ ಎಂಬುದು ಅತಿ ಸುಳ್ಳು ಎಂದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.ಮೇಲೆ
ರಾಜ್ಯ ಪೊಲೀಸ್ ಇಲಾಖೆ ದೌರ್ಜನ್ಯವನ್ನು ವಿರೋಧಿಸಿ ನಡೆಯುವ ಪ್ರತಿಭಟನೆಗಳಿಗೆ ಅವಕಾಶ ನೀಡದೆ ಪ್ರಜಾಪ್ರಭುತ್ವ ಹಕ್ಕುಗಳನ್ನು ದಮನ ಮಾಡುವ ಆದೇಶಗಳನ್ನು ಜಾರಿಗೆ ತಂದಿದೆ ಎಂದರು.
ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಮಾಧ್ಯಮಿಕ ಶಿಕ್ಷಣ ಮಂಡಳಿಯಿಂದ ಹೊಸ ಮಾರ್ಗಸೂಚಿ
ಕಳೆದ ಒಂದು ತಿಂಗಳಲ್ಲಿ ನಿರಂತರವಾಗಿ ದಲಿತರ ಕೊಲೆ, ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆ ಆಚರಣೆ, ಜಾತಿ ತಾರತಮ್ಯ ಕೌಂಟರ್ ಕೇಸ್ ಪ್ರಕರಣಗಳು ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು 33 ಪೊಲೀಸ್ ಠಾಣೆಗಳನ್ನು ತೆರೆದು ರಕ್ಷಣೆ ನೀಡುತ್ತೇವೆಂದು ನೀಡಿದ ಹೇಳಿಕೆ ಪತ್ರಿಕೆಯಲ್ಲೆ ಉಳಿದಿದೆ ಎಂದು ಆರೋಪಿಸಿದ್ದಾರೆ.
ಕೆ.ಆರ್.ಪೇಟೆ ಕತ್ತರ ಘಟದಲ್ಲಿ ಜಮೀನು ವಿಷಯದಲ್ಲಿ ಜಯಕುಮಾರ್ ಎಂಬ ದಲಿತ ಯುವಕನ ಕೊಲೆಯಾಗಿದೆ. ಕೊಲೆ ಮಾಡಿದ ಆರೋಪಿ ಸಮಾಜಘಾತುಕ ರೌಡಿ ಶೀಟರ್ ಅನಿಲ್ ಕುಮಾರ್ ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಬಂಧಿಸಿಲ್ಲ. ಇದು ಕೊಲೆ ಎಂದು ಜಯಕುಮಾರ ಪತ್ನಿ ದೂರು ನೀಡಿದ್ದರು ಪೊಲೀಸರು ಆತ್ಮಹತ್ಯೆ ಎಂದು ಕೇಸು ದಾಖಲಿಸಿಕೊಂಡಿರುವುದು ಖಂಡನೀಯ.
ಇದೇ ರೀತಿ ಕನಕಪುರ ಬನವಾಸಿಯಲ್ಲಿ ದಲಿತರು ದೇವಸ್ಥಾನ ಪ್ರವೇಶ ಮಾಡುವುದನ್ನು ಮೇಲ್ಜಾತಿ ಜನರು ತಡೆದು ಸಾಮಾಜಿಕ ಬಹಿಷ್ಕಾರ, ಹೋಟೆಲ್, ಅಂಗಡಿಗಳಿಗೆ ನಿರ್ಬಂಧ ವಿಧಿಸಿ ದೌರ್ಜನ್ಯ ಎಸಗಿದ್ದಾರೆ. ತುಮಕೂರು ಜಿಲ್ಲೆಯ ಕವಣದಲ ಗ್ರಾಮದಲ್ಲಿ ದಲಿತರನ್ನು ದೇವಸ್ಥಾನ ಪ್ರವೇಶ ತಡೆದು ದೌರ್ಜನ್ಯ ನಡೆಸಲಾಗಿದೆ. ಬಾರಿ ತಡವಾಗಿ ಪೊಲೀಸರು ಈIಖ ಹಾಕಿದ್ದರು. ಯಾರನ್ನೂ ಬಂಧಿಸಿ ದೌರ್ಜನ್ಯ ತಡೆ ಕಾನೂನಿನ ಅನ್ವಯ ಬಂಧಿಸಿಲ್ಲ.
ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ಭದ್ರಪುರದಲ್ಲಿ ಅನುಮಾನಾಸ್ಪದವಾಗಿ ಬಾಲಕಿಯ ಕೊಲೆ ಮಾಡಿ ರೈಲ್ವೆ ಹಳಿ ಪಕ್ಕದಲ್ಲಿ ಬಿಸಡಲಾಗಿದೆ. ಇದನ್ನು ಪ್ರಶ್ನಿಸಿದ ಸಂಘಟನೆಯ ಮುಖಂಡರ ಮೇಲೆ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಹಾಗಾಗಿ ಇದೇ 29 ರಂದು ರಾಜ್ಯವ್ಯಾಪಿ ಪ್ರತಿಬಟನೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ: ಆರೋಗ್ಯ ಹಕ್ಕು – ಸರಣಿ ಕಾರ್ಯಕ್ರಮ| ಅಲ್ಮಾ-ಅಟಾ ಘೋಷಣೆ ಏನು? ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲವರ್ಧನೆ ಸಂಚಿಕೆ 03
