ಪತಿಯ ಸಾವಿನ ಸುದ್ದಿ ಕೇಳಿ ಪತ್ನಿ ಹೃದಯಾಘಾತದಿಂದ ಸಾವು: ಸಾವುನಲ್ಲೂ ಒಂದಾದ ದಂಪತಿಗಳು

ದಾವಣಗೆರೆ: ಪತಿಯ ಸಾವಿನ ಸುದ್ದಿ ಕೇಳಿ ಪತ್ನಿ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇವರ ಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಸ್ತೂರಿ ರಂಗಪ್ಪ (65) ಜಯಮ್ಮ (61) ಮೃತ ದುರ್ದೈವಿಗಳು. ಸುದೀರ್ಘ ಕಾಲ ದಾಂಪತ್ಯ ಜೀವನ ನಡೆಸಿದ ದಂಪತಿ ಜೊತೆಯಲ್ಲೇ ಜೀವನ ಪಯಣ ಮುಗಿಸಿದ್ದಾರೆ. ವೃದ್ಧ ದಂಪತಿ ಸಾವಲ್ಲೂ ಒಂದಾಗಿದ್ದಾರೆ.

ಇದನ್ನೂ ಓದಿ : ಕೇರಳ | ರಸ್ತೆ ಬದಿಯ ಟೆಂಟ್‌ಗೆ ನುಗ್ಗಿದ ಟ್ರಕ್‌: ಐದು ಮಂದಿ ಸಾವು, ಹಲವರಿಗೆ ಗಾಯ

ನಿನ್ನ ಕಸ್ತೂರಿ ರಂಗಪ್ಪ ಪಡಿತರ ಅಕ್ಕಿ ತರಲು ಹೋಗಿದ್ದರು. ಈ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನ ಚನ್ನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಅವರು ಮೃತಪಟ್ಟಿದ್ದಾರೆ.

ಕಸ್ತೂರಿ ರಂಗಪ್ಪ ಅವರ ಸಾವಿನ ಸುದ್ದಿಯನ್ನ ಪತ್ನಿ ಜಯಮ್ಮಗೆ ಕರೆ ಮಾಡಿ ತಿಳಿಸಿದ್ದಾರೆ. ಪತಿಯ ಸಾವಿನ ಸುದ್ದಿ ಫೋನ್ ನಲ್ಲಿ ತಿಳಿಯುತ್ತಿದ್ದಂತೆ ಜಯಮ್ಮ ಕೂಡ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಾವಿನಲ್ಲೂ ಈ ವೃದ್ಧ ದಂಪತಿಗಳು ಒಂದಾದರು. ಇಬ್ಬರನ್ನೂ ದೇವರಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ.

ಇದನ್ನೂ ನೋಡಿ : ಅನ್ನದಲ್ಲಿ ಹುಳು, ಕೊಳೆತ ತರಕಾರಿ ಇದನ್ನೆ ತಿನ್ರಿ ಅಂತಾರೆ ವಾರ್ಡ್‌ನ – ವಿದ್ಯಾರ್ಥಿಗಳ ಪ್ರತಿಭಟನೆJanashakthi Media

Donate Janashakthi Media

Leave a Reply

Your email address will not be published. Required fields are marked *