ಒಂದು ಅನೈತಿಕ ಯುದ್ಧ, ತೈಲ-ಡಾಲರ್ ಕೊಂಡಿ ಮತ್ತು ವಿಶ್ವ ಅರ್ಥವ್ಯವಸ್ಥೆ

ಪ್ರೊ.ಪ್ರಭಾತ್ ಪಟ್ನಾಯಕ್

ಅಮೆರಿಕ ಸಂಯುಕ್ತ ಸಂಸ್ಥಾನ  ದಶಕಗಳಿಂದಲೂ ಅನುಭವಿಸುತ್ತಿರುವ ತನ್ನ ಪಾವತಿ ಶೇಷದ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಡಾಲರ್‌ಗಳನ್ನು ಮುದ್ರಿಸುತ್ತ ಬಂದಿದ್ದು, ಅದರಿಂದಾಗಿ ಜಗತ್ತು ಪ್ರಸ್ತುತದಲ್ಲಿ ಡಾಲರ್‌ಗಳಿಂದ ತುಂಬಿ ತುಳುಕಿ ಹೋಗಿದೆ. ವ್ಯವಸ್ಥೆಯ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ತೈಲ-ಡಾಲರ್ ಸಂಬಂಧವು ಹಿಂದೆಂದಿಗಿಂತಲೂ ಇಂದು ಹೆಚ್ಚು ನಿರ್ಣಾಯಕವಾಗಿದೆ. ಸಾಮ್ರಾಜ್ಯಶಾಹಿಯು ತೈಲ ಉತ್ಪಾದಿಸುವ ದೇಶಗಳ ಮೇಲೆ ರಾಜಕೀಯ ನಿಯಂತ್ರಣವನ್ನು ಚಲಾಯಿಸುವ ಮೂಲಕ ಈ ಕೊಂಡಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಬಹುತೇಕ ಗಲ್ಫ್ ದೇಶಗಳ ಮೇಲೆ ಅಂತಹ ಒಂದು ನಿಯಂತ್ರಣವನ್ನು ಅಮೆರಿಕ ಹೊಂದಿದೆ. ಇರಾನ್ ಮತ್ತು ವೆನೆಜುವೆಲಾವನ್ನು ತನ್ನ ವ್ಯಾಪ್ತಿಯೊಳಗೆ ತರುವ ಮೂಲಕ ಈ ನಿಯಂತ್ರಣವನ್ನು ಇನ್ನಷ್ಟು ಸಮಗ್ರಗೊಳಿಸುವುದು ಅಮೆರಿಕದ ಅಜೆಂಡಾ. ಅದು ವೆನೆಜುವೆಲಾದಲ್ಲಿ ಯಶಸ್ವಿಯಾಗಿದೆ ಎಂದು ತೋರುತ್ತದೆ. ಆದರೆ ಇರಾನ್‌ಗೆ ಸಂಬಂಧಿಸಿದಂತೆ ಅದರ ಲೆಕ್ಕಾಚಾರ ತಲೆಕೆಳಗಾಗಿದೆ. ಅದರಿಂದಾಗಿ ಏರುತ್ತಿರುವ ತೈಲ ಬೆಲೆಗಳು ಡಾಲರ್‌ನ ಸ್ಥಿರತೆಗೆ ಬೆದರಿಕೆಯನ್ನುಂಟುಮಾಡುತ್ತಿವೆ. ಯುದ್ಧ

– ಅನು: ಕೆ ಎಂ. ನಾಗರಾಜ್

ಅಮೆರಿಕ-ಇಸ್ರೇಲಿ ಬಾಂಬ್ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದ ನಂತರ ಉಂಟಾಗಿರುವ ತೈಲ ಸರಬರಾಜಿನ ಅಡಚಣೆಯು ವಿಶ್ವ ಅರ್ಥವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಡಾಲರ್ ಕರೆನ್ಸಿಯಲ್ಲಿ ನಮೂದಿತವಾಗಿರುವ ತೈಲ ಬೆಲೆಗಳು ಗಗನಕ್ಕೇರಿವೆ ಮತ್ತು ಅದರ ಜತೆಯಲ್ಲಿ ಸೇರಿಕೊಂಡಿರುವ ಏಷ್ಯಾದ ಕರೆನ್ಸಿಗಳ ಮೌಲ್ಯ-ಇಳಿಕೆಯು (ಡಾಲರ್ ಎದುರಿಗೆ), ಮೆಟ್ರೋಪಾಲಿಟನ್(ಮುಂದುವರೆದ) ಬಂಡವಾಳಶಾಹಿ ಕೇಂದ್ರಗಳಿಗೆ ಹೋಲಿಸಿದರೆ, ಪರಿಧಿಯ ದೇಶಗಳಲ್ಲಿ ಇನ್ನೂ ಹೆಚ್ಚಿನ ಹಣದುಬ್ಬರಕ್ಕೆ ಕಾರಣವಾಗಿದೆ. ಯುದ್ಧ

ಈ ಹಣದುಬ್ಬರವು ಜನರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ಕಡಿತಗೊಳಿಸುವುದರಿಂದ, ವಿಶ್ವ ಅರ್ಥವ್ಯವಸ್ಥೆಯು ಒಂದು ಆರ್ಥಿಕ ಹಿಂಜರಿತದ ಬೆದರಿಕೆಯನ್ನು ಎದುರಿಸುತ್ತಿದೆ ಮತ್ತು ಪರಿಧಿಯ ದೇಶಗಳಲ್ಲಿ ಈ ಆರ್ಥಿಕ ಹಿಂಜರಿತವು ಇನ್ನೂ ಹೆಚ್ಚು ತೀವ್ರವಾಗುವ ಸಾಧ್ಯತೆಯಿದೆ. ಮತ್ತು, ತೈಲವು ಲಭ್ಯವಿಲ್ಲದ ಕಾರಣದಿಂದಾಗಿ ಉಂಟಾಗುವ ರಸಗೊಬ್ಬರಗಳ ಕೊರತೆಯು ಆಹಾರ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು ಅದು ವಿಶೇಷವಾಗಿ ಜಾಗತಿಕ ದಕ್ಷಿಣದ ದುಡಿಯುವ ಜನರ ಸಂಕಷ್ಟಗಳನ್ನು ತೀವ್ರಗೊಳಿಸುತ್ತದೆ.

ಇದನ್ನೂ ಓದಿ: ಲಕ್ನೋ ಅಗ್ನಿ ದುರಂತ: 280ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮ, 1000ಕ್ಕೂ ಹೆಚ್ಚು ಜನ ನಿರಾಶ್ರಿತ

ಈ ಬಿಕ್ಕಟ್ಟಿನ ಅಂತ್ಯವೇ ಕಾಣುತ್ತಿಲ್ಲ; ಏಕೆಂದರೆ ಯುಎಸ್ ಮತ್ತು ಇಸ್ರೇಲ್ ಎಂಬ ಎರಡು “ಪುಂಡ ಪ್ರಭುತ್ವಗಳು” ಒಂದು ಸ್ವತಂತ್ರ ಮತ್ತು ಸಾರ್ವಭೌಮ ದೇಶದ ವಿರುದ್ಧ ಕೊನೆಗಾಣದ ಒಂದು ಸಂಪೂರ್ಣ ಕಾನೂನುಬಾಹಿರ ಮತ್ತು ಅನೈತಿಕ ಯುದ್ಧವನ್ನು ಹೂಡಿವೆ. ಯುದ್ಧ

ವಿಶ್ವ ಅರ್ಥವ್ಯವಸ್ಥೆಯಲ್ಲಿ ತೈಲವು ಹೊಂದಿರುವ ಭಾಗವು ಅಲ್ಪವಾದರೂ, ತೈಲ ಬೆಲೆಗಳ ಏರಿಕೆಯು ವಿಶ್ವ ಅರ್ಥವ್ಯವಸ್ಥೆಗೆ ಈ ಮಟ್ಟದ ಒಂದು ಬೃಹತ್ ಅಡಚಣೆಯನ್ನು ಉಂಟುಮಾಡುತ್ತದೆ ಎಂಬುದು ಒಂದು ವಿರೋಧಾಭಾಸವಾಗಿ ತೋರಬಹುದು: ವಿಶ್ವದ ಕಚ್ಚಾ ತೈಲ ಉತ್ಪಾದನೆಯ ಒಟ್ಟು ಮೌಲ್ಯವು ಅದೆಷ್ಟು ಅಲ್ಪವೆಂದರೆ ಅದು ವಿಶ್ವ ಜಿಡಿಪಿಯ ಶೇ. 3ಕ್ಕಿಂತಲೂ ಕಡಿಮೆಯಿದೆ (2023ರಲ್ಲಿ ಶೇ. 2.3ರಷ್ಟಿತ್ತು). ಇತರ ಕಚ್ಚಾ ವಸ್ತುಗಳಿಗೆ ಹೋಲಿಸಿದರೆ ತೈಲವೇ ಹೆಚ್ಚು ಮುಖ್ಯವಾದ ವಸ್ತುವಾಗಿದೆ. ವಿಶ್ವ ಜಿಡಿಪಿಯಲ್ಲಿ ಪ್ರತಿಯೊಂದು ಇತರ ಕಚ್ಚಾ ವಸ್ತುಗಳ ಮೌಲ್ಯವು ಇನ್ನೂ ಅಲ್ಪವೇ. ವಿಶ್ವ ಉತ್ಪಾದನೆಯಲ್ಲಿ ಕಚ್ಚಾ ವಸ್ತುಗಳು ತುಲನಾತ್ಮಕವಾಗಿ ಹೊಂದಿರುವ ಈ ಸಣ್ಣ ಪಾಲು, ಕಚ್ಚಾ ವಸ್ತುಗಳ ಮೇಲಿನ ನಿಯಂತ್ರಣವನ್ನು ಸಾಮ್ರಾಜ್ಯಶಾಹಿಯ ಕುರಿತ ವಿವರಣೆಯ ಕೇಂದ್ರದಲ್ಲಿರಿಸುವ ಮಾರ್ಕ್ಸ್‌ ವಾದೀ ಸಿದ್ಧಾಂತಗಳು ಪ್ರಸುತವೇ ಎಂದು ಅನೇಕ ಬರಹಗಾರರು ಪ್ರಶ್ನಿಸುವಂತೆ ಮಾಡಿದೆ. ಯುದ್ಧ

ಕಚ್ಚಾ ವಸ್ತುಗಳ ವಿನಿಮಯ ಮೌಲ್ಯ ಮತ್ತು ಬಳಕೆ-ಮೌಲ್ಯ

ಈ ಟೀಕಾಕಾರರಿಗೆ ಹ್ಯಾರಿ ಮ್ಯಾಗ್ಡಾಫ್ ತಮ್ಮ The Age of Imperialism ಕೃತಿಯ ಮೂಲಕ ನೀಡಿದ ಉತ್ತರವೆಂದರೆ, ಜಿಡಿಪಿಗೆ ಹೋಲಿಸಿದರೆ ಕಚ್ಚಾ ವಸ್ತುಗಳ ಮೌಲ್ಯವು ಎಷ್ಟೇ ಸಣ್ಣದಿರಲಿ, ಅವುಗಳಿಲ್ಲದೆ ಯಾವ ಉತ್ಪಾದನೆಯೂ ಸಾಧ್ಯವಿಲ್ಲ ಎಂಬುದು ಮತ್ತು ಉತ್ಪಾದನೆಗೆ ಸಂಬಂಧಿಸಿದ ಯಾವುದೇ ರೀತಿಯ ತೃತೀಯ ಹಂತದ ಚಟುವಟಿಕೆಗಳೂ ಸಹ ಕಚ್ಚಾ ವಸ್ತುಗಳಿಲ್ಲದೆ ನಡೆಯುವುದು ಸಾಧ್ಯವಿಲ್ಲ ಎಂಬುದು. ಆದ್ದರಿಂದ ವಿಶ್ವ ಜಿಡಿಪಿಯಲ್ಲಿ ಅವುಗಳ ಪಾಲು ಸಣ್ಣದಿರುವುದರಿಂದ ವಿಶ್ವ ಅರ್ಥವ್ಯವಸ್ಥೆಗೆ ಅವುಗಳ ನಿರ್ಣಾಯಕತೆಯು ಕೊಂಚವೂ ಕಡಿಮೆಯಾಗುವುದಿಲ್ಲ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಅಂತಿಮ ಸರಕುಗಳಿಗೆ ಹೋಲಿಸಿದರೆ ಕಚ್ಚಾ ವಸ್ತುಗಳ ವಿನಿಮಯ-ಮೌಲ್ಯವು ತೀರಾ ಕೆಳಕ್ಕೆ ತಳ್ಳಲ್ಪಟ್ಟಿದ್ದರೂ (ಸ್ವತಃ ಇದು ಸಾಮ್ರಾಜ್ಯಶಾಹಿಯ ವಿದ್ಯಮಾನವನ್ನು ಪ್ರತಿಬಿಂಬಿಸುತ್ತದೆ), ಕಚ್ಚಾ ವಸ್ತುಗಳ ಬಳಕೆ-ಮೌಲ್ಯವು ಎಲ್ಲಕ್ಕಿಂತಲೂ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಯುದ್ಧ

ಈ ತಿಳುವಳಿಕೆಯನ್ನು ಪ್ರಸ್ತುತ ಬೆಳವಣಿಗೆಗಳು ದೃಢೀಕರಿಸುತ್ತವೆ. ವಿಶ್ವದ ತೈಲ ಉತ್ಪಾದನೆಯ ಸರಿ ಸುಮಾರು ಶೇ. 20 ರಷ್ಟು ಮಾತ್ರ (ಇದರಲ್ಲಿ ಕಚ್ಚಾ ತೈಲ ಮಾತ್ರವಲ್ಲದೆ ತೈಲದ ಇತರ ಉತ್ಪನ್ನಗಳೂ ಸೇರಿವೆ), ಅಂದರೆ, ಒಂದು ಸ್ಥೂಲ ಅಂದಾಜಿನ ಪ್ರಕಾರ, ವಿಶ್ವ ಜಿಡಿಪಿಯ ಸುಮಾರು ಶೇ. 0.6 ರಷ್ಟು ಮಾತ್ರ ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ವಿಶ್ವ ಜಿಡಿಪಿಯ ಶೇ. 0.6 ರಷ್ಟು ಸಾಗಣೆಯ ಅಡಚಣೆಯು ವಿಶ್ವ ಅರ್ಥವ್ಯವಸ್ಥೆಯಲ್ಲಿ ಅಂತಹ ಒಂದು ಬೃಹತ್ ಬಿಕ್ಕಟ್ಟನ್ನು ಉಂಟುಮಾಡಬಹುದು ಎಂಬ ಅಂಶವು ವಿಶ್ವ ಅರ್ಥವ್ಯವಸ್ಥೆಯಲ್ಲಿ ತೈಲವು ನಿರಂತರವಾಗಿ ವಹಿಸುತ್ತಿರುವ ನಿರ್ಣಾಯಕ ಪಾತ್ರದ ಬಗ್ಗೆ ಒತ್ತಿಹೇಳುತ್ತದೆ.

ವಿಶ್ವದ ಕಚ್ಚಾ ತೈಲ ಉತ್ಪಾದನೆಯ ಒಟ್ಟು ಮೌಲ್ಯವು  ವಿಶ್ವ ಜಿಡಿಪಿಯ ಶೇ. 3ಕ್ಕಿಂತಲೂ ಕಡಿಮೆ. ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲದ ಪ್ರಮಾಣ ವಿಶ್ವ ಜಿಡಿಪಿಯ 0.6 ಶೇ. ಮಾತ್ರ. ಇದರ ಸಾಗಣೆಯ ಅಡಚಣೆಯು ವಿಶ್ವ ಅರ್ಥವ್ಯವಸ್ಥೆಯಲ್ಲಿ ಒಂದು ಬೃಹತ್ ಬಿಕ್ಕಟ್ಟನ್ನು ಉಂಟುಮಾಡಬಹುದು ಎಂಬ ಅಂಶವು ವಿಶ್ವ ಅರ್ಥವ್ಯವಸ್ಥೆಯಲ್ಲಿ ತೈಲವು ನಿರಂತರವಾಗಿ ವಹಿಸುತ್ತಿರುವ ನಿರ್ಣಾಯಕ ಪಾತ್ರದ ಬಗ್ಗೆ ಒತ್ತಿಹೇಳುತ್ತದೆ. ಯುದ್ಧ

ತೈಲದಂಥಹ ಒಂದು ವಿಶ್ವ ವ್ಯಾಪೀ ಮಧ್ಯವರ್ತಿ ವಸ್ತುವು ಬೇರೆ ಯಾವುದೂ ಇಲ್ಲದಿರುವುದರಿಂದ ತೈಲದ ಈ ನಿರ್ಣಾಯಕ ಪಾತ್ರ ಉದ್ಭವಿಸುತ್ತದೆ. ಈ ವಿಶ್ವವ್ಯಾಪೀ ಮಧ್ಯವರ್ತಿ ಸ್ವರೂಪದಿಂದಾಗಿ, ವಿಶ್ವದ ಒಟ್ಟು ಜಿಡಿಪಿಯಲ್ಲಿ ಕಚ್ಚಾ ತೈಲವು ಹೊಂದಿರುವ ಮೌಲ್ಯದ ಈ ಅತಿ ಸಣ್ಣ ಪ್ರಮಾಣವೇ ಅದರ ಛಿದ್ರಕಾರಿ ಪಾತ್ರವನ್ನು ಹೆಚ್ಚಿಸಬಹುದಾದ ಅಂಶವಾಗಿ ಮಾಡಿ, ಅದರ ಹಣದುಬ್ಬರಕಾರೀ ಪರಿಣಾಮ ಇನ್ನೂ ಹೆಚ್ಚು ಎದ್ದು ಕಾಣುವಂತೆ ಮಾಡುತ್ತದೆ ಎಂಬುದು ಒಂದು ವಿರೋಧಾಭಾಸವಾಗಿ ತೋರುತ್ತದೆ. ತೈಲವು ವಿಶ್ವ ಜಿಡಿಪಿಯ ಶೇ. 3ಕ್ಕಿಂತಲೂ ಕಡಿಮೆ ಇರುವಾಗ, ಅದು ಅಂತಿಮ ಉತ್ಪನ್ನಗಳ ರೂಪದಲ್ಲಿ ಕಾಣಿಸಿಕೊಳ್ಳುವ ಮೊದಲು ಅದು ಹಾದುಹೋಗಬೇಕಾದ “ಪದರಗಳ” ಸಂಖ್ಯೆಯು ದೊಡ್ಡದಿರುತ್ತದೆ ಎಂಬ ಅಂಶವು ಈ ವಿರೋಧಾಭಾಸದ ಒಂದು ಕಾರಣವಾಗಿರಬಹುದು.

ವಿಶ್ವ ಜಿಡಿಪಿಯಲ್ಲಿ ತೈಲದ ಪಾಲು ಒಂದು ವೇಳೆ ಶೇ. 30 ರಷ್ಟಿದ್ದರೆ, ಅದರ ಅರ್ಥ ವಿಶ್ವ ಜಿಡಿಪಿಯು ಗಣನೀಯ ಪ್ರಮಾಣದ ತೈಲ ಸಂಸ್ಕರಣೆಯನ್ನು ಒಳಗೊಂಡಿತ್ತು ಎಂದಾಗಬಹುದು. ಅಂದರೆ, ತೈಲವು ವಿಶ್ವ ಜಿಡಿಪಿಯ ಶೇ. 3ಕ್ಕಿಂತಲೂ ಕಡಿಮೆ ಇರುವ ಪರಿಸ್ಥಿತಿಗೆ ಹೋಲಿಸಿದರೆ, ಅಂತಿಮ ಖರೀದಿದಾರರಿಗೆ ತಲುಪುವ ಮೊದಲು ತೈಲವು ಹಾದುಹೋಗುವ “ಪದರಗಳ” ಸಂಖ್ಯೆ ಕಡಿಮೆ ಇರುತ್ತದೆ ಎಂಬುದು ಇದರ ಅರ್ಥ. ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಪ್ರತಿ “ಪದರ”ದಲ್ಲಿಯೂ ಇಂತಿಷ್ಟು ಶೇಕಡಾ ಅಂಶವು ಅದರ ಬೆಲೆಯೊಂದಿಗೆ ಸೇರ್ಪಡೆಯಾಗುವುದರಿಂದ, ಈ “ಪದರಗಳ” ಸಂಖ್ಯೆ ಹೆಚ್ಚಿದಷ್ಟೂ ತೈಲದ ಆರಂಭಿಕ ಬೆಲೆಯ ಮೇಲೆ ತೆರೆ-ತೆರೆಯಾಗಿ ಬೀಳುವ ಏರಿಕೆಯ (cascade) ಪರಿಣಾಮ ಹೆಚ್ಚುತ್ತಾ ಹೋಗುತ್ತದೆ ಮತ್ತು ಅದರಿಂದಾಗಿ ಅಂತಿಮ ಬೆಲೆಗಳ ಮಟ್ಟದಲ್ಲಿ ಹೆಚ್ಚಳ ಇನ್ನೂ ಹೆಚ್ಚಾಗುತ್ತದೆ.

ಹಣದ ಮೌಲ್ಯ ಮತ್ತು ಚಿನ್ನ

ಅಂದರೆ, ಕಚ್ಚಾ ತೈಲದ ಬೆಲೆಯಲ್ಲಿ ಶೇ. 10ರಷ್ಟು ಹೆಚ್ಚಳವಾದರೂ ಈ ಕಚ್ಚಾ ತೈಲವು ಕಡಿಮೆ “ಪದರಗಳ” ಮೂಲಕ ಹಾದುಹೋದಾಗ,ಅಂತಿಮ ಸರಕುಗಳ ಬೆಲೆಗಳಲ್ಲಿ, ಹೆಚ್ಚು ಸಂಖ್ಯೆಯ “ಪದರ”ಗಳ ಮೂಲಕ ಹಾದು ಹೋಗುವಾಗ ಇರುವುದಕ್ಕಿಂತ ಕಡಿಮೆ ಏರಿಕೆಯನ್ನು ಮಾಡಬಹುದು. ಏಕೆಂದರೆ, ಪ್ರತಿಯೊಂದು ಪದರದಲ್ಲೂ ಮೂಲ ಬೆಲೆಗೆ ಒಂದಿಷ್ಟನ್ನು ಸೇರಿಸಲಾಗುತ್ತದೆ. ಆದ್ದರಿಂದ, ಅನಿವಾರ್ಯವಾಗಿ ಬಳಕೆ ಮಾಡಲಾಗುವ ಯಾವುದೇ ಸಾರ್ವತ್ರಿಕ ಮಧ್ಯವರ್ತಿಯ ಪಾಲು ಒಟ್ಟು ಜಿಡಿಪಿಯಲ್ಲಿ ಕಡಿಮೆ ಇದ್ದಷ್ಟೂ, ಅದು ಹಾದುಹೋಗುವ “ಪದರಗಳ” ಸಂಖ್ಯೆ ದೊಡ್ಡದಿರುತ್ತದೆ ಮತ್ತು ಅದರಿಂದ ಸಂಭವನೀಯ ಹಣದುಬ್ಬರದ ಆರಂಭಿಕ ಏರಿಕೆಯ ಪರಿಣಾಮವೂ ಹೆಚ್ಚೇ ಇರುತ್ತದೆ. ಯುದ್ಧ

ಒಂದು ಆಧುನಿಕ ಅರ್ಥವ್ಯವಸ್ಥೆಯಲ್ಲಿ ತೈಲ ಬೆಲೆ ಏರಿಕೆಯ ಪರಿಣಾಮವು ಆ ತೈಲವು ಅಂತಿಮ ಖರೀದಿದಾರನ ಬಳಿಗೆ ಬರುವ ಮೊದಲು ಅದು ಹಾದುಹೋಗುವ “ಪದರಗಳು” ಹೆಚ್ಚಿದಂತೆ, ಅದರ ಬೆಲೆಯನ್ನು ಪ್ರಧಾನ ಕರೆನ್ಸಿಯಲ್ಲೇ ಇಟ್ಟುಕೊಳ್ಳುವುದು ಬಂಡವಾಳಶಾಹಿ ಹಣಕಾಸು ವ್ಯವಸ್ಥೆಯ ಸ್ಥಿರತೆಗೂ ಅಷ್ಟೇ ಮುಖ್ಯವಾಗುತ್ತದೆ. ಹಣವು ಸಂಪತ್ತನ್ನು ಹಿಡಿದಿಟ್ಟುಕೊಳ್ಳುವ ಒಂದು ರೂಪವಾಗಿರುವುದರಿಂದ, ಸರಕುಗಳ ವಿಷಯದಲ್ಲೂ ಸಹ ಹಣದ ಮೌಲ್ಯವು ಸ್ಥಿರವಾಗಿರಬೇಕು ಎಂಬ ನಿರೀಕ್ಷೆಯೂ ಮುಖ್ಯವಾಗುತ್ತದೆ. ಇದುವೇ ಈ ವರೆಗೂ ಹಣದ ಮೌಲ್ಯವು ಚಿನ್ನದೊಂದಿಗೆ ಹೊಂದಿದ್ದ ಸಂಬಂಧದ ಕಾರಣವಾಗಿತ್ತು: ಚಿನ್ನದ ಬೆಲೆಗಳು ಸಾಮಾನ್ಯವಾಗಿ ಸರಕುಗಳ ಬೆಲೆಗಳೊಂದಿಗೆ ಜತೆಜತೆಯಾಗಿ ಸಾಗುವುದರಿಂದ, ಕರೆನ್ಸಿಯ ಮೌಲ್ಯವು ಚಿನ್ನದ ಪರಿಭಾಷೆಯಲ್ಲಿ ಸ್ಥಿರತೆಯನ್ನು ಹೊಂದಿರುವುದು ಸಾಮಾನ್ಯವಾಗಿ ಸರಕುಗಳ ರೂಪದಲ್ಲಿ ಅದರ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಸಾಧನವಾಗುತ್ತದೆ. ಯುದ್ಧ

ಯಾವುದೇ ಕರೆನ್ಸಿಯೂ ಇಂದು ಚಿನ್ನದ ಬೆಂಬಲವನ್ನು ಹೊಂದಿಲ್ಲ. ಜಗತ್ತಿನಲ್ಲಿ ಒಂದು ಮೀಸಲು ಕರೆನ್ಸಿಯಾಗಿ ಅತಿ ಹೆಚ್ಚು ಬಳಕೆಯಲ್ಲಿರುವ ಡಾಲರ್ ಸಹ ಚಿನ್ನದ ಬೆಂಬಲ ಹೊಂದಿಲ್ಲ. ಈ ಅಂಶವು, ಎಲ್ಲ ಕರೆನ್ಸಿಗಳಿಗೂ ಅವು ಸರಕುಗಳೊಂದಿಗೆ ಹೊಂದಿರುವ ಎಲ್ಲ ಸಂಬಂಧವನ್ನೂ ಕೈಬಿಡಲಾಗಿದೆ ಎಂಬುದು ಮಾತ್ರವಲ್ಲದೆ, ಅಂತಹ ಸಂಬಂಧಗಳೇ ಅನಗತ್ಯವೆಂದು ಅನೇಕ ವೀಕ್ಷಕರು ನಂಬುವಂತೆ ಮಾಡಿದೆ. ಆದರೆ, ಈ ಅಭಿಪ್ರಾಯವು ತಪ್ಪಾಗಿದೆ.

“ತೈಲ-ಡಾಲರ್ ಮಾನದಂಡ”

ವಿಶ್ವದ ಅತ್ಯಂತ ಸರ್ವಸಾಮಾನ್ಯ ಮೀಸಲು ಕರೆನ್ಸಿ ಎನಿಸಿದ ಡಾಲರನ್ನು, ಅತ್ಯಂತ ನಿರ್ಣಾಯಕ ಸರಕು ಎನಿಸಿದ ತೈಲದೊಂದಿಗೆ, ಸ್ಪಷ್ಟವಾಗಿ ಅಲ್ಲದಿದ್ದರೂ, ಸೂಚ್ಯವಾಗಿ, ತಳುಕು ಹಾಕಲಾಗಿದೆ. ತೈಲದ ಡಾಲರ್ ಬೆಲೆಯನ್ನು ಒಂದು ನಿರ್ದಿಷ್ಟ ಮಟ್ಟದಲ್ಲಿ ನಿಗದಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂಬುದು ಇದರ ಅರ್ಥವಲ್ಲ. ಆದರೆ ಪ್ರಸ್ತುತ ಡಾಲರ್ ಕರೆನ್ಸಿಯ ಬೆಲೆಯಲ್ಲಿನ ಯಾವುದೇ ಏರಿಕೆಯು ದೀರ್ಘಕಾಲದವರೆಗೆ ಏರುತ್ತಲೇ ಇರುತ್ತದೆ ಎಂಬ ನಿರೀಕ್ಷೆಗಳಿಗೆ ಕಾರಣವಾಗದಂತೆ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಮೀಸಲು ಕರೆನ್ಸಿಯಾಗಿ ಡಾಲರ್‌ನ ಸ್ಥಿರತೆಯು, ಬೇರೆ ಯಾವುದೇ ಕರೆನ್ಸಿಯು ಅದರ ಸ್ಥಾನವನ್ನು ಪಡೆಯುವಷ್ಟು ಶಕ್ತಿಶಾಲಿಯಾಗಿಲ್ಲ ಎಂಬುದನ್ನು ಅವಲಂಬಿಸಿದೆ ಮಾತ್ರವಲ್ಲ, ಸರಕುಗಳ ಬೆಲೆಗಳು, ವಿಶೇಷವಾಗಿ ಅತ್ಯಂತ ಪ್ರಮುಖ ಸಾರ್ವತ್ರಿಕ ಮಧ್ಯವರ್ತಿಯಾದ ತೈಲದ ಬೆಲೆ, ಡಾಲರ್ ಕರೆನ್ಸಿಯಲ್ಲಿ ಶಾಶ್ವತವಾಗಿ ಏರಲಿಕ್ಕಿಲ್ಲ ಅಥವಾ ಏರುತ್ತಲೇ ಇರಲಿಕ್ಕಿಲ್ಲ ಎಂಬ ನಿರೀಕ್ಷೆಯನ್ನೂ ಅವಲಂಬಿಸಿದೆ. ಚಿನ್ನದ ಮಾನದಂಡವನ್ನು ಇಂದು ನಾವು ಹೊಂದಿಲ್ಲದೇ ಇರಬಹುದು, ಆದರೆ “ತೈಲ-ಡಾಲರ್ ಮಾನದಂಡ” ಎಂದು ಹೇಳಬಹುದಾದ್ದನ್ನು ನಾವು ಹೊಂದಿದ್ದೇವೆ.

ಡಾಲರನ್ನು, ಅತ್ಯಂತ ನಿರ್ಣಾಯಕ ಸರಕು ಎನಿಸಿದ ತೈಲದೊಂದಿಗೆ, ಸ್ಪಷ್ಟವಾಗಿ ಅಲ್ಲದಿದ್ದರೂ, ಸೂಚ್ಯವಾಗಿ, ತಳುಕು ಹಾಕಲಾಗಿದೆ.ಚಿನ್ನದ ಮಾನದಂಡವನ್ನು ಇಂದು ನಾವು ಹೊಂದಿಲ್ಲದೇ ಇರಬಹುದು, ಆದರೆ “ತೈಲ-ಡಾಲರ್ ಮಾನದಂಡ” ಎಂದು ಹೇಳಬಹುದಾದ್ದನ್ನು ನಾವು ಹೊಂದಿದ್ದೇವೆ. ವ್ಯವಸ್ಥೆಯ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ತೈಲ-ಡಾಲರ್ ಸಂಬಂಧವು ಹಿಂದೆಂದಿಗಿಂತಲೂ ಇಂದು ಹೆಚ್ಚು ನಿರ್ಣಾಯಕವಾಗಿದೆ. ಮತ್ತು, ಸಾಮ್ರಾಜ್ಯಶಾಹಿಯು ತೈಲ ಉತ್ಪಾದಿಸುವ ದೇಶಗಳ ಮೇಲೆ ರಾಜಕೀಯ ನಿಯಂತ್ರಣವನ್ನು ಚಲಾಯಿಸುವ ಮೂಲಕ ಇದನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ.

ವ್ಯವಸ್ಥೆಯ ಆರ್ಥಿಕ ಸ್ಥಿರತೆಗೆ ಅಗತ್ಯವಾದ ಅಂತಹ ಒಂದು ಮಾನದಂಡವನ್ನು ಅನುಸರಿಸಲು, ಸಾಧ್ಯವಾಗುವಷ್ಟು ಮಟ್ಟಿಗೆ, ತೈಲ ಬೆಲೆಗಳಲ್ಲಿ ಸ್ಥಿರತೆಯ ಅಗತ್ಯವಿರುತ್ತದೆ (ತೈಲ ಬೆಲೆಗಳ ಶಾಶ್ವತ ಏರಿಕೆ ಅಥವಾ ಏರುತ್ತಿರುವ ತೈಲ ಬೆಲೆಗಳ ಯಾವುದೇ ನಿರೀಕ್ಷೆಗಳ ಪ್ರಶ್ನೆಯೇ ಇರದಂತೆ). ಅಂತಹ ಒಂದು ಮಾನದಂಡವನ್ನು ಇಂದು ಅನುಸರಿಸುವ ಅಗತ್ಯವು ಮತ್ತೊಂದು ಕಾರಣಕ್ಕಾಗಿ ನಿರ್ದಿಷ್ಟವಾದ ಒಂದು ತುರ್ತನ್ನು ಪಡೆದುಕೊಂಡಿದೆ.

ಅನೇಕ ದಶಕಗಳಿಂದಲೂ ಅನುಭವಿಸುತ್ತಿರುವ ತನ್ನ ಪಾವತಿ ಶೇಷದ (ಕೊರತೆ) ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಅಮೆರಿಕವು ಡಾಲರ್‌ಗಳನ್ನು ಮುದ್ರಿಸುವ ಮೂಲಕ ಹಣಕಾಸು ಒದಗಿಸಿಕೊಳ್ಳುತ್ತಿದೆ ಮತ್ತು ಅದರಿಂದಾಗಿ ಜಗತ್ತು ಪ್ರಸ್ತುತದಲ್ಲಿ ಡಾಲರ್‌ಗಳಿಂದ ತುಂಬಿ ತುಳುಕಿ ಹೋಗಿದೆ. ವ್ಯವಸ್ಥೆಯ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ತೈಲ-ಡಾಲರ್ ಸಂಬಂಧವು ಹಿಂದೆಂದಿಗಿಂತಲೂ ಇಂದು ಹೆಚ್ಚು ನಿರ್ಣಾಯಕವಾಗಿದೆ. ಮತ್ತು, ಸಾಮ್ರಾಜ್ಯಶಾಹಿಯು ತೈಲ ಉತ್ಪಾದಿಸುವ ದೇಶಗಳ ಮೇಲೆ ರಾಜಕೀಯ ನಿಯಂತ್ರಣವನ್ನು ಚಲಾಯಿಸುವ ಮೂಲಕ ಈ ಸಂಪರ್ಕವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ.

ಬಹುತೇಕ ಗಲ್ಫ್ ದೇಶಗಳ ಮೇಲೆ ಅಂತಹ ಒಂದು ನಿಯಂತ್ರಣವನ್ನು ಅಮೆರಿಕ ಹೊಂದಿದೆ. ಇರಾನ್ ಮತ್ತು ವೆನೆಜುವೆಲಾವನ್ನು ತನ್ನ ವ್ಯಾಪ್ತಿಯೊಳಗೆ ತರುವ ಮೂಲಕ ಈ ನಿಯಂತ್ರಣವನ್ನು ಇನ್ನಷ್ಟು ಸಮಗ್ರಗೊಳಿಸುವುದು ಅಮೆರಿಕದ ಕಾರ್ಯಸೂಚಿಯಾಗಿದೆ. ಈ ಕಾರ್ಯವು ವೆನೆಜುವೆಲಾದಲ್ಲಿ ಯಶಸ್ವಿಯಾಗಿದೆ ಎಂದು ತೋರುತ್ತದೆ. ಒಂದು “ಆಳ್ವಿಕೆ ಬದಲಾವಣೆ”ಯ ಮೂಲಕ ಇರಾನನ್ನು ತನ್ನ ನಿಯಂತ್ರಣಕ್ಕೆ ತರಬಹುದು ಎಂಬ ಪರಮ ವಿಶ್ವಾಸವನ್ನು ಅದು ಹೊಂದಿತ್ತು. ಅಯತೊಲ್ಲಾ ಅಲಿ ಖಮೇನಿಯ್ ಮತ್ತು ಇರಾನಿನ ಇತರ ಉನ್ನತ ನಾಯಕರ ಹತ್ಯೆಯನ್ನು ಇಸ್ರೇಲ್ ಮೂಲಕ ರೂಪಿಸಿದ ನಂತರ, ಇರಾನ್‌ನ ತೈಲ ಸಂಪನ್ಮೂಲಗಳ ಮೇಲೆ ನಿಯಂತ್ರಣವನ್ನು ನೀಡುವ ರೀತಿಯ ಒಂದು “ಆಳ್ವಿಕೆ ಬದಲಾವಣೆ”ಯಾಗುತ್ತದೆ ಮತ್ತು ಆನಂತರ ವಿಶ್ವದ ತೈಲ ಸಂಪನ್ಮೂಲಗಳ ಮೇಲೆ ಇನ್ನೂ ಹೆಚ್ಚಿನ ನಿಯಂತ್ರಣವನ್ನು ಹೊಂದಬಹುದು ಎಂಬುದು ಅದರ ನಿರೀಕ್ಷೆಯಾಗಿತ್ತು. ಆದರೆ, ಡಾಲರ್‌ನ ಸ್ಥಾನಮಾನವನ್ನು ಬಲಪಡಿಸುವ ಸಲುವಾಗಿ ವಿಶ್ವದ ತೈಲ ಸಂಪನ್ಮೂಲಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಪಡೆಯಲು ಅದು ಮಾಡಿದ ಪ್ರಯತ್ನಗಳೇ ವಾಸ್ತವವಾಗಿ ಆ ಸ್ಥಾನದ ದುರ್ಗತಿಗೆ ಕಾರಣವಾದವು ಎಂಬುದು ಒಂದು ವಿಪರ್ಯಾಸವೇ ಸರಿ.

ಇರಾನ್‌ಗೆ ಸಂಬಂಧಿಸಿದಂತೆ ಅಮೆರಿಕವು ಒಂದು ಗಂಭೀರ ತಪ್ಪು ಲೆಕ್ಕಾಚಾರ ಮಾಡಿದೆ. ಅದರಿಂದಾಗಿ ಏರುತ್ತಿರುವ ತೈಲ ಬೆಲೆಗಳು ಡಾಲರ್‌ನ ಸ್ಥಿರತೆಗೆ ಬೆದರಿಕೆಯನ್ನುಂಟುಮಾಡುತ್ತಿವೆ, ವಿಶ್ವ ಅರ್ಥವ್ಯವಸ್ಥೆಗೆ ಬೆದರಿಕೆಯನ್ನುಂಟುಮಾಡುತ್ತಿವೆ ಮತ್ತು ವಿಶ್ವದ ಜನತೆಯನ್ನು ಒಂದು ತೀವ್ರ ಸಂಕಷ್ಟದಲ್ಲಿ ಸಿಲುಕಿಸಲಿವೆ. ವ್ಯವಸ್ಥೆಯ ವಿರುದ್ಧ ಜನರ ಕೋಪವು ವ್ಯವಸ್ಥೆಯ ವಿರುದ್ಧವೇ ತಿರುಗಿ ಬೀಳುವುದನ್ನು ಪರಿಗಣಿಸುವ ಹಂತವನ್ನು ತಲುಪಬಹುದು.

ಇದನ್ನೂ ನೋಡಿ: ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ | ಡಾ ಸಿದ್ದಲಿಗಯ್ಯ | ಪಿಚ್ಚಳ್ಳಿ ಶ್ರೀನಿವಾಸ Janashakthi Media

Donate Janashakthi Media

Leave a Reply

Your email address will not be published. Required fields are marked *