ಸಿಪಿಐ ವಿರುದ್ಧ ಸಿಡಿದ ಸಿಜೆಪಿ ನಾಯಕ: ‘ನನ್ನ ಮನೆಗೆ ಯಾರು ಬರಬೇಕು ಎಂದು ನೀವು ಹೇಳಲ್ಲ!’

ಛತ್ರಪತಿ ಸಂಭಾಜಿನಗರ: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಚಾಲಕ ಅಭಿಜೀತ್ ದೀಪ್ಕೆ ಅವರು ತಮ್ಮ ನಿವಾಸದ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (PSI) ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜನರನ್ನು ಭೇಟಿಯಾಗುವುದನ್ನು ತಡೆಯುತ್ತಿರುವ ಆರೋಪದ ಮೇಲೆ ಆ ಅಧಿಕಾರಿಯನ್ನು ಅಲ್ಲಿಂದ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ನಾಯಕ

ಮಧ್ಯ ಮಹಾರಾಷ್ಟ್ರದ ವಾಲುಜ್ MIDC ಪ್ರದೇಶದಲ್ಲಿರುವ ತಮ್ಮ ನಿವಾಸಕ್ಕೆ ಬಂದವರೊಂದಿಗೆ “ಅಸಭ್ಯವಾಗಿ ವರ್ತಿಸುತ್ತಿದ್ದಾರೆ” ಎಂದು ಆರೋಪಿಸಿದ ದೀಪ್ಕೆ, ಮನೆಗೆ ಪ್ರವೇಶಿಸುವವರನ್ನು ನಿಯಂತ್ರಿಸಲು ಮತ್ತು ಮೇಲ್ವಿಚಾರಣೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ನಾಯಕ

ಭದ್ರತಾ ಬೆದರಿಕೆಗಳ ಹಿನ್ನೆಲೆ ಹಾಗೂ ತಮ್ಮ ಮನೆಯಲ್ಲಿ ಸೇರುವ ಜನಸಂದಣಿಯನ್ನು ನಿಯಂತ್ರಿಸಲು ದೀಪ್ಕೆ ಅವರಿಗೆ ಭದ್ರತೆ ಒದಗಿಸಲಾಗಿತ್ತು. ಇದೇ ವೇಳೆ, ಸಾಮಾನ್ಯ ಉಡುಪಿನಲ್ಲಿ ಸುತ್ತಾಡುತ್ತಿದ್ದ ರಾಜ್ಯ CID ಸಿಬ್ಬಂದಿ ತಮ್ಮ ಮನೆ ಸುತ್ತಮುತ್ತ ಸಂಚರಿಸಿ, ‘Hit Spray’ ಎಂಬ ಸಾಮಾಜಿಕ ಜಾಲತಾಣ ಗುಂಪಿನಲ್ಲಿ ವರದಿಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ನಾಯಕ

ಇದನ್ನೂ ಓದಿ: ವಿಜಯನಗರ ಫುಡ್ ಸ್ಟ್ರೀಟ್‌ನಲ್ಲಿ ಅತಿಕ್ರಮಣ ತೆರವು: 35 ಅಂಗಡಿಗಳ ಮೇಲೆ ಕ್ರಮ

ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಎರಡು ವಿಡಿಯೋಗಳಲ್ಲಿ, ದೀಪ್ಕೆ ಅವರು ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ದೂರವಾಣಿ ಮೂಲಕ ಹಾಗೂ ತಮ್ಮ ನಿವಾಸದಲ್ಲಿದ್ದ PSI ಜೊತೆ ಮಾತನಾಡುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ. ನಾಯಕ

ಆ ಸಂಭಾಷಣೆಯಲ್ಲಿ ದೀಪ್ಕೆ ಅವರು PSI ಅವರನ್ನು ತರಾಟೆಗೆ ತೆಗೆದುಕೊಳ್ಳುವುದರ ಜೊತೆಗೆ, ತಮ್ಮ ಮನೆ ಭದ್ರತಾ ಸಿಬ್ಬಂದಿಯಿಂದ ಅವರನ್ನು ತೆರವುಗೊಳಿಸುವಂತೆ ಆಗ್ರಹಿಸುತ್ತಿರುವುದು ಕೇಳಿಬರುತ್ತದೆ.

“ನಾನು ಜನರನ್ನು ಒಳಗೆ ಕರೆದುಕೊಂಡು ಬರುತ್ತಿದ್ದಾಗ ಅವರನ್ನು ಒಳಗೆ ಬಿಡುವುದರಲ್ಲಿ ಸಮಸ್ಯೆ ಏನು? ನೀವು ಯಾಕೆ ದೆಹಲಿ ಪೊಲೀಸರಂತೆ ವರ್ತಿಸುತ್ತೀರಿ? ಇಷ್ಟು ದಿನ ಯಾವುದೇ ಸಮಸ್ಯೆಯೇ ಆಗಿಲ್ಲ. ನಿಮ್ಮನ್ನು ನಾನು ಮೊದಲ ಬಾರಿಗೆ ನೋಡುತ್ತಿದ್ದೇನೆ. ನಾನು ಯಾರನ್ನು ಭೇಟಿ ಮಾಡಬೇಕು, ಯಾರನ್ನು ಮಾಡಬಾರದು ಎಂದು ನೀವು ಹೇಳಲು ಆಗುವುದಿಲ್ಲ,” ಎಂದು ದೀಪ್ಕೆ PSIಗೆ ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.

“ನೀವು ದಯವಿಟ್ಟು ಹೊರಗೆ ಹೋಗಿ, ನನಗೆ ನೀವು ನನ್ನ ಮನೆಯಲ್ಲಿ ಬೇಕಿಲ್ಲ,” ಎಂದು 30 ವರ್ಷದ ಈ ಕಾರ್ಯಕರ್ತ PSIಗೆ ಹೇಳಿದ್ದಾರೆ. ಆ ಅಧಿಕಾರಿಯನ್ನು ಅವರು ಸುರೇಶ್ ಎಂದು ಗುರುತಿಸಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ, ದೀಪ್ಕೆ ಅವರು ಹಿರಿಯ ಪೊಲೀಸ್ ಅಧಿಕಾರಿಗೆ ಕರೆ ಮಾಡಿ PSI ವಿರುದ್ಧ ದೂರು ನೀಡುತ್ತಿರುವುದು ಕಾಣುತ್ತದೆ.

“ಸುರೇಶ್ ಎಂಬ PSI ಇಲ್ಲಿ ಬಂದಿದ್ದಾರೆ. ಅವರು ನನ್ನನ್ನು ಭೇಟಿಯಾಗಲು ಬಂದ ಜನರೊಂದಿಗೆ ತುಂಬಾ ಕೆಟ್ಟ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಜನರನ್ನು ಹೊರಗೆ ಹೋಗಿ ಎಂದು ಹೇಳುತ್ತಿದ್ದಾರೆ. ಇದು ಉದ್ದೇಶಪೂರ್ವಕವಾಗಿದೆಯೇ? ನನಗೆ ಅವರು ಬೇಡ, ಅವರನ್ನು ಇಲ್ಲಿಂದ ತೆರವುಗೊಳಿಸಿ,” ಎಂದು ಅವರು ದೂರವಾಣಿಯಲ್ಲಿ ತಿಳಿಸಿದ್ದಾರೆ.

ಅದೇ ಕರೆ ವೇಳೆ, ತಮ್ಮ ನಿವಾಸದ ಸುತ್ತ CID ಸಿಬ್ಬಂದಿ ಸಂಚರಿಸುತ್ತಿರುವ ಬಗ್ಗೆ ಕೂಡ ಅವರು ಆರೋಪ ಮಾಡಿದ್ದಾರೆ.

“ಒಬ್ಬ ವರದಿಗಾರ ನನಗೆ CID ಸಿಬ್ಬಂದಿ ಮನೆ ಸುತ್ತಮುತ್ತ ಇದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರು ಅವರನ್ನು ತೆರವುಗೊಳಿಸಲು ಯತ್ನಿಸಿದಾಗ, ಅವರು CID ಸಿಬ್ಬಂದಿ ಎಂದು ತಿಳಿಸಿದರು. ಆ ವರದಿಗಾರರು ಅವರೊಬ್ಬರ ಫೋನ್‌ನಲ್ಲಿ ‘Hit Spray’ ಎಂಬ ವಾಟ್ಸಾಪ್ ಗುಂಪು ತೆರೆದಿರುವುದನ್ನು ಗಮನಿಸಿದ್ದಾರೆ. ಅವರು ಇಲ್ಲಿ ನೀವು ವರದಿಗಳನ್ನು ಕಳುಹಿಸುತ್ತಿದ್ದಾರೆ ಎಂದು ವರದಿಗಾರರು ನನಗೆ ತಿಳಿಸಿದ್ದಾರೆ,” ಎಂದು ದೀಪ್ಕೆ ಆರೋಪಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಹಲವು ಬಾರಿ ಸಂಪರ್ಕಿಸಿದರೂ, ವಾಲುಜ್ MIDC ಪ್ರದೇಶದ ವ್ಯಾಪ್ತಿಗೆ ಬರುವ ಉಪ ಪೊಲೀಸ್ ಆಯುಕ್ತ ಪಂಕಜ್ ಅತುಲ್ಕರ್ ಪ್ರತಿಕ್ರಿಯೆ ನೀಡಲು ಲಭ್ಯರಾಗಿಲ್ಲ.

ಇದನ್ನೂ ನೋಡಿ: ಜಂತರ್ ಮಂತರ್ ಪೋಲೀಸ್ ಅತಿರೇಕ-ಕಾನೂನು ಪಾಲನೆ- ಉಲ್ಲಂಘನೆ!!!! Janashakthi Media

Donate Janashakthi Media

Leave a Reply

Your email address will not be published. Required fields are marked *