ಬೆಂಗಳೂರು: ನಗರದಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಪ್ರಮುಖ ಐದು ಮೇಲ್ಸೇತುವೆ ಮತ್ತು ಎಲಿವೇಟೆಡ್ ಕಾರಿಡಾರ್ಗಳಲ್ಲಿ ಕೆಲವು ವರ್ಗದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ. ಹೊಸ ನಿಯಮಗಳು ಸೆಪ್ಟೆಂಬರ್ 4ರಿಂದ ಹಂತ ಹಂತವಾಗಿ ಜಾರಿಗೆ ಬರಲಿವೆ.
ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್ನಲ್ಲಿ ಸೆಪ್ಟೆಂಬರ್ 11ರಿಂದ ದ್ವಿಚಕ್ರ ವಾಹನಗಳು, ಪ್ರಯಾಣಿಕ ಆಟೊಗಳು ಹಾಗೂ ಮೂರು ಚಕ್ರದ ಸರಕು ಆಟೊಗಳ ಸಂಚಾರವನ್ನು ದಿನದ 24 ಗಂಟೆಯೂ ನಿರ್ಬಂಧಿಸಲಾಗುತ್ತದೆ. ಭಾರಿ, ಮಧ್ಯಮ ಹಾಗೂ ಲಘು ಸರಕು ವಾಹನಗಳಿಗೂ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ನಿರ್ಬಂಧ ಇರಲಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್ನಲ್ಲಿ, ಸಂಜೀವನಗರ ಕ್ರಾಸ್ನಿಂದ ವಿದ್ಯಾಶಿಲ್ಪ ಜಂಕ್ಷನ್ವರೆಗೆ ದ್ವಿಚಕ್ರ ವಾಹನ ಮತ್ತು ಪ್ರಯಾಣಿಕ ಆಟೊಗಳ ಸಂಚಾರಕ್ಕೆ ಸೆಪ್ಟೆಂಬರ್ 4ರಿಂದ ದಿನದ 24 ಗಂಟೆಯೂ ಅವಕಾಶ ಇರುವುದಿಲ್ಲ. ಎಲ್ಲ ವರ್ಗದ ಸರಕು ವಾಹನಗಳಿಗೆ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ನಿರ್ಬಂಧ ಹೇರಲಾಗಿದೆ. ಬೆಂಗಳೂರಿನ
ಇದನ್ನೂ ಓದಿ :ಧಾರವಾಡ : ಪ್ರಕಾಶ್ ರಾಜ್ ಕಾರ್ಯಕ್ರಮಕ್ಕೆ ಅಡ್ಡಿ; ಮುತ್ತಿಗೆಗೆ ಯತ್ನಿಸಿದ ಯುವಕರು ಪೊಲೀಸ್ ವಶಕ್ಕೆ ಬೆಂಗಳೂರಿನ
ಪೀಣ್ಯ ಎಲಿವೇಟೆಡ್ ಕಾರಿಡಾರ್ನಲ್ಲಿ ಪ್ರಯಾಣಿಕ ಆಟೊಗಳು ಹಾಗೂ ಮೂರು ಚಕ್ರದ ಸರಕು ಆಟೊಗಳಿಗೆ ದಿನದ 24 ಗಂಟೆಯೂ ನಿರ್ಬಂಧವಿರಲಿದೆ. ಭಾರಿ ಮತ್ತು ಮಧ್ಯಮ ಸರಕು ವಾಹನಗಳ ಸಂಚಾರವನ್ನು ಬೆಳಿಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ನಿರ್ಬಂಧಿಸಲಾಗುತ್ತದೆ.
ಮೈಸೂರು ರಸ್ತೆಯ ಬಿಜಿಎಸ್ ಮೇಲ್ಸೇತುವೆಯಲ್ಲಿ ಭಾರಿ ಸರಕು ವಾಹನಗಳಿಗೆ ದಿನವಿಡೀ ನಿರ್ಬಂಧ ಇರಲಿದ್ದು, ಇತರೆ ಸರಕು ವಾಹನಗಳಿಗೂ ಪೀಕ್ ಅವಧಿಯಲ್ಲಿ ನಿರ್ಬಂಧ ವಿಧಿಸಲಾಗುತ್ತದೆ. ಸಿಲ್ಕ್ ಬೋರ್ಡ್–ರಾಗಿಗುಡ್ಡ ನಡುವಿನ ಡಬಲ್ ಡೆಕ್ಕರ್ ಮೇಲ್ಸೇತುವೆಯಲ್ಲಿ ಭಾರಿ ಸರಕು ವಾಹನಗಳ ಸಂಚಾರಕ್ಕೆ 24 ಗಂಟೆಯೂ ನಿರ್ಬಂಧ ಇರಲಿದೆ. ಬೆಂಗಳೂರಿನ
ಸಂಚಾರ ಪೊಲೀಸರ ಪ್ರಕಾರ, ಮೇಲ್ಸೇತುವೆಗಳಲ್ಲಿ ನಿಧಾನಗತಿಯ ಸರಕು ವಾಹನಗಳು ಮತ್ತು ಆಟೊಗಳಿಂದ ಉಂಟಾಗುವ ಸಂಚಾರ ಸಮಸ್ಯೆ, ವಾಹನಗಳು ಕೆಟ್ಟು ನಿಲ್ಲುವುದು, ಅಪಘಾತಗಳು ಹಾಗೂ ವಿಶೇಷವಾಗಿ ದ್ವಿಚಕ್ರ ವಾಹನಗಳಿಗೆ ಸಂಭವಿಸುತ್ತಿರುವ ಗಂಭೀರ ಅಪಘಾತಗಳನ್ನು ಪರಿಶೀಲಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೇಲ್ಸೇತುವೆಗಳ ವಿನ್ಯಾಸ, ಅಗಲ, ಪ್ರವೇಶ–ನಿರ್ಗಮನ ಸ್ಥಳಗಳಲ್ಲಿನ ದಟ್ಟಣೆ ಹಾಗೂ ತುರ್ತು ಪರಿಸ್ಥಿತಿಯ ನಿರ್ವಹಣೆಯನ್ನೂ ಪರಿಗಣಿಸಲಾಗಿದೆ.
ಈ ನಿರ್ಬಂಧಗಳು ಪ್ರಾಯೋಗಿಕ ಆಧಾರದ ಮೇಲೆ ಜಾರಿಯಾಗಲಿದ್ದು, ಅದರ ಪರಿಣಾಮವನ್ನು ಸಂಚಾರ ಪೊಲೀಸರು ಪರಿಶೀಲಿಸಿದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದ್ದಾರೆ. ಬೆಂಗಳೂರಿನ
ಇದನ್ನೂ ನೋಡಿ : ಪಾರ್ಕಿಂಗ್ ಪಾಲಿಸಿ: ಸಮಸ್ಯೆಗೆ ಪರಿಹಾರವೇ, ಸರ್ಕಾರಕ್ಕೆ ಆದಾಯವೇ? ಬೆಂಗಳೂರಿನ ಪಾರ್ಕಿಂಗ್ ಕಥೆ ಏನು? | ಬೆಂಗಳೂರಿನ
