ಮೋದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ನಾಗರಿಕರ ಪತ್ರ

ನವದೆಹಲಿ :ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿಯ ‘ಸ್ಟಾರ್’ ಪ್ರಚಾರಕರೂ ಆಗಿರುವ ಸ್ವತಃ ಪ್ರಧಾನ ಮಂತ್ರಿಗಳು ಏಪ್ರಿಲ್ 22 ರಂದು ರಾಜಸ್ಥಾನದ ಬನ್ಸ್ವಾರಾದಲ್ಲಿ ತಮ್ಮ ಚುನಾವಣಾ ಸಭೆಯೊಂದರಲ್ಲಿ ಕೇವಲ ‘ಕೋಮು ಭಾವನೆಗಳಿಗೆ ಮೊರೆಯಿಡುವ ‘ ಉದ್ದೇಶದಿಂದ ಮಾತ್ರವಲ್ಲದೆ ಮುಸ್ಲಿಮರ ವಿರುದ್ಧ ಹಿಂದೂಗಳಲ್ಲಿ ದ್ವೇಷವನ್ನು ಪ್ರಚೋದಿಸುವ ಮತ್ತು ಉಲ್ಬಣಗೊಳಿಸುವ ಉದ್ದೇಶದಿಂದ ಭಾಷಣ ಮಾಡುವ ಮೂಲಕ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಪ್ರಜಾಪ್ರತಿನಿಧಿ ಕಾಯ್ದೆ , 1951 ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ.  ಆದ್ದರಿಂದ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಇದಕ್ಕೆ ಅವರಿಗೆ ಛೀಮಾರಿ ಹಾಕಬೇಕು ಮತ್ತು ಇಂತಹ ಸಂದರ್ಭಗಳಲ್ಲಿ ಈ ಹಿಂದೆ ಮಾಡಿರುವಂತೆ ಅವರ ಪ್ರಚಾರದ ಮೇಲೆ ನಿಷೇಧ ಹಾಕಬೇಕು ಎಂದು ಹಲವಾರು ಕೇಂದ್ರೀಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರಿಗೆ ನಾಗರಿಕರು ಪತ್ರ ಬರೆದು ಆಗ್ರಹಿಸಿದ್ದಾರೆ. ಮೋದಿ

ಇದು ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕರಾದ ನರೇಂದ್ರ ಮೋದಿಯವರು ಮಾಡುತ್ತಿರುವ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯ ಇತ್ತೀಚಿನ ನಿದರ್ಶನವಾಗಿದೆ.“ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವೆ, ಧಾರ್ಮಿಕ ಅಥವಾ ಭಾಷಿಕ ನಡುವೆ ಅಸ್ತಿತ್ವದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸಬಹುದಾದ ಅಥವಾ ಪರಸ್ಪರ ದ್ವೇಷವನ್ನು ಉಂಟುಮಾಡುವ ಅಥವಾ ಉದ್ವಿಗ್ನತೆಯನ್ನು ಉಂಟುಮಾಡುವ ಯಾವುದೇ ಚಟುವಟಿಕೆಯಲ್ಲಿ ಸೇರಿಸಬಾರದು”  ಎಂದು ಚುನಾವಣಾ ನೀತಿ ಸಂಹಿತೆ ಸ್ಪಷ್ಟವಾಗಿ ಹೇಳಿದೆ.

“ಮತಗಳನ್ನು ಪಡೆಯಲು ಜಾತಿ ಅಥವಾ ಕೋಮು ಭಾವನೆಗಳಿಗೆ ಯಾವುದೇ ಮನವಿ ಮಾಡಬಾರದು. ಮಸೀದಿಗಳು, ಚರ್ಚ್‌ಗಳು, ದೇವಾಲಯಗಳು ಅಥವಾ ಇತರ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕಾಗಿ ವೇದಿಕೆಯಾಗಿ ಬಳಸಬಾರದು” ಎಂದೂ ಈ ನೀತಿಸಂಹಿತೆ ವಿಧಿಸುತ್ತದೆ. ಇದಲ್ಲದೆ, ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 123 (3) ರ ಪ್ರಕಾರ: “ಅಭ್ಯರ್ಥಿ ಅಥವಾ ಅಭ್ಯರ್ಥಿಯ ಒಪ್ಪಿಗೆಯೊಂದಿಗೆ ಯಾವುದೇ ವ್ಯಕ್ತಿಗೆ  ಅವರ ಧರ್ಮ, ಜನಾಂಗದ, ಜಾತಿ ಸಮುದಾಯ ಅಥವ ಭಾಷೆಯ  ಆಧಾರದ ಮೇಲೆ ಮತ ಚಲಾಯಿಸಲು ಅಥವಮತ ಚಲಾಯಿಸುಉದನ್ನು ತಡೆಯವ ಮನವಿ ಗಳು, ಒಂದು  ಭ್ರಷ್ಟ ಚುನಾವಣಾ ನಡವಳಿಕೆಯಾಗಿದೆ. ಸೆಕ್ಷನ್ 123(3A) ಚುನಾವಣೆಯ ಸಮಯದಲ್ಲಿ ಈ ಆಧಾರದ ಮೇಲೆ ನಾಗರಿಕರಲ್ಲಿ ಶತ್ರುತ್ವ ಅಥವಾ ದ್ವೇಷದ ಭಾವನೆಗಳನ್ನು ಉತ್ತೇಜಿಸುವ ಒಬ್ಬ  ಅಭ್ಯರ್ಥಿಯ ಯಾವುದೇ ಪ್ರಯತ್ನವನ್ನು ಖಂಡಿಸುತ್ತದೆ. ಭ್ರಷ್ಟ ಚುನಾವಣಾ ನಡವಳಿಕೆಯ ತಪ್ಪಿತಸ್ಥರೆಂದು ಕಂಡುಬಂದ ಯಾರಾದರೂ ಗರಿಷ್ಠ ಆರು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಡಿಬಾರ್ ಮಾಡಬಹುದು”  ಎಂದು ಹೇಳುತ್ತದೆ.

ಶ್ರೀ ನರೇಂದ್ರ ಮೋದಿ ಅವರು 2024 ರ ಏಪ್ರಿಲ್ 22 ರಂದು ರಾಜಸ್ಥಾನದ ಬನ್ಸ್ವಾರಾದಲ್ಲಿ ತಮ್ಮ ಚುನಾವಣಾ ಸಭೆಯೊಂದರಲ್ಲಿ ಮಾಧ್ಯಮ ವೇದಿಕೆಗಳು ವರದಿ ಮಾಡಿದಂತೆ ಅವರು ತಮ್ಮ ಭಾಷಣದಲ್ಲಿ ಬಳಸಿದ ಪದಗಳನ್ನು ಈ ಪತ್ರ ಚುನಾವಣಾ ಆಯೋಗದ ಗಮನಕ್ಕೆ ತಂದಿದೆ.

“ಪೆಹಲೇ ಜಬ್ ಉಂಕಿ ಸರ್ಕಾರ್ ಥಿ, ಉನ್ಹೋನೇ ಕಹಾ ಥಾ ಕಿ ದೇಶ್ ಕಿ ಸಂಪತ್ತಿ ಪರ ಪೆಹಲಾ ಅಧಿಕಾರ್ ಮುಸಲ್ಮಾನೋಂ ಕಾ ಹೈ. ಇಸ್ಕಾ ಮತ್ಲಾಬ್, ಯೇ ಸಂಪತ್ತಿ ಇಕಟ್ಟೀ  ಕರ್ಕೇ ಕಿಸ್ಕೋ ಬಾಂಟೇಂಗೇ? ಜಿನ್‍ಕೇ ಜ್ಯಾದಾ ಬಚ್ಚೇ ಹೈಂ, ಉನ್ಕೋ  ಬಾಂಟೇಂಗೆ, ಹುಸ್ಪೈಕಿಯಾತ್ ಘುಸ್‍ಪೈಂಟಿಯೋಂ ಕೊ ಬಾಂಟೇಂಗೆ. ಕ್ಯಾ ಆಪಕೀ ಮೆಹನತ್‍ ಕೀ ಕಮಾಯೀ ಕಾ ಪೈಸಾ ಘುಸ್‍ಪೈಂಟಿಯೋಂ  ಕೋ ದಿಯಾ ಜಾಯೇಗಾ? ಆಪ್‍ ಕೋ ಮಂಜೂರ್ ಹೈ ಯೆ?

(ಹಿಂದೆ, ಅವರು (ಕಾಂಗ್ರೆಸ್) ಅಧಿಕಾರದಲ್ಲಿದ್ದಾಗ, ಅವರು ಮುಸ್ಲಿಮರಿಗೆ ರಾಷ್ಟ್ರದ ಸಂಪತ್ತಿನ ಮೊದಲ ಹಕ್ಕು ಇದೆ ಎಂದು ಹೇಳಿದ್ದರು. ಇದರ ಅರ್ಥ ಅವರು  ಈ ಸಂಪತ್ತನ್ನು ಹೆಚ್ಚು ಮಕ್ಕಳಿರುವವರಿಗೆ, ನುಸುಳುಕೋರರಿಗೆ ಹಂಚುತ್ತಾರೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನುಸುಳುಕೋರರಿಗೆ ನೀಡಬೇಕೇ? ಇದನ್ನು ನೀವು ಒಪ್ಪುತ್ತೀರಾ?)

ಮೋದಿಯವರು ಸುಳ್ಳನ್ನು ಆಶ್ರಯಿಸುತ್ತಿದ್ದಾರೆ, ನಿಜ, ಇದನ್ನು ಮಾದರಿ ಸಂಹಿತೆಯ ಉಲ್ಲಂಘನೆ ಎಂದು ಉಲ್ಲೇಖಿಸಲಾಗಿಲ್ಲ. ಡಾ. ಮನಮೋಹನ್ ಸಿಂಗ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರವು 2006 ರಲ್ಲಿ ಸ್ಪಷ್ಟವಾಗಿ ಹೇಳಿರುವ ಮಾತುಗಳು ಹೀಗಿವೆ:

“… ನಮ್ಮ ಸಾಮೂಹಿಕ ಆದ್ಯತೆಗಳು ಸ್ಪಷ್ಟವಾಗಿವೆ: ಕೃಷಿ, ನೀರಾವರಿ ಮತ್ತು ಜಲಸಂಪನ್ಮೂಲ, ಆರೋಗ್ಯ, ಶಿಕ್ಷಣ, ಗ್ರಾಮೀಣ ಮೂಲಸೌಕರ್ಯದಲ್ಲಿ ನಿರ್ಣಾಯಕ ಹೂಡಿಕೆ, ಮತ್ತು ಸಾಮಾನ್ಯ ಮೂಲಸೌಕರ್ಯಗಳ ಅಗತ್ಯ ಸಾರ್ವಜನಿಕ ಹೂಡಿಕೆ ಅಗತ್ಯಗಳು, ಜೊತೆಗೆ  ಪರಿಶಿಷ್ಟ ಜಾತಿ/ ಬುಡಕಟ್ಟುಗಳು, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು , ಮಹಿಳೆಯರು ಮತ್ತು ಮಕ್ಕಳ ಉನ್ನತಿಗಾಗಿ ಕಾರ್ಯಕ್ರಮಗಳು. ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳ ಘಟಕ ಯೋಜನೆಗಳನ್ನು ಪುನಶ್ಚೇತನಗೊಳಿಸಬೇಕು, ಅಲ್ಪಸಂಖ್ಯಾತರು , ವಿಶೇಷವಾಗಿ ಮುಸ್ಲಿಂಅಲ್ಪಸಂಖ್ಯಾತರು ಅಭಿವೃದ್ಧಿಯ ಫಲವನ್ನು ಸಮತ್ವದಿಂದ ಹಂಚಿಕೊಳ್ಳಲು ನಾವು ನವೀನ ಯೋಜನೆಗಳನ್ನು ರೂಪಿಸಬೇಕಾಗಿದೆ. ಸಂಪನ್ಮೂಲಗಳ ಮೇಲೆ ಮೊದಲ ದಾವೆ ಹೊಂದಿರಬೇಕಾಗುತ್ತದೆ. ಕೇಂದ್ರಕ್ಕೆ ಇತರ ಹಲವು ಹೊಣೆಗಾರಿಕೆಗಳಿವೆ, ಆ ಬೇಡಿಕೆಗಳನ್ನು ಒಟ್ಟಾರೆ ಸಂಪನ್ಮೂಲ ಲಭ್ಯತೆಯೊಳಗೆ ಅಳವಡಿಸಬೇಕಾಗುತ್ತದೆ.”

ಇದರಲ್ಲಿ ಎಲ್ಲಿಯೂ ರಾಷ್ಟ್ರದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಪಕ್ಷವು ದೇಶದ ಸಂಪತ್ತನ್ನು ಮುಸ್ಲಿಮರಿಗೆ ನೀಡಲಿದೆ ಎಂಬ ಭಯವನ್ನು ಹಿಂದುಗಳಲ್ಲಿ ಹುಟ್ಟಿಸುವ ಸ್ಪಷ್ಟ ಉದ್ದೇಶದಿಂದ ಮೋದಿಯವರು ಹೇಳಿಕೆಯನ್ನು ವಿಕೃತಗೊಳಿಸಿ ಸುಳ್ಳು ಹರಡಿದ್ದಾರೆ ಎಂದು ಈ ಪತ್ರ ನೆನಪಿಸಿದೆ.

ಇಲ್ಲಿ ಮೋದಿಯವರು ಮುಸ್ಲಿಮರನ್ನು ಹೆಚ್ಚು ಮಕ್ಕಳನ್ನು ಉತ್ಪಾದಿಸುವವರು ಮತ್ತು ನುಸುಳುಕೋರರು ಎಂದು ಒಂದು ಸಮುದಾಯವನ್ನು  ಸಮೀಕರಿಸಿದ್ದಾರೆ ಎಂದೂ ಈ ಪತ್ರ ಚುನಾವಣಾ ಆಯೋಗದ ಗಮನಕ್ಕೆ ತಂದಿದೆ.

ಇದನ್ನು ಓದಿ : ಕರ್ನಾಟಕದ ರೈತರಿಗೆ ಒಂದು ವಾರದೊಳಗೆ ಬರ ಪರಿಹಾರ ಬಿಡುಗಡೆಗೆ ನಿರ್ಧಾರಕ್ಕೆ ಒಪ್ಪಿದ ಕೇಂದ್ರ ಸರ್ಕಾರ :ಸಚಿವರ ಅಭಿಪ್ರಾಯಗಳು?

ಅಲ್ಲದೆ ಈ ಸುಳ್ಳನ್ನು ಪುನರಾವರ್ತಿಸಿದ್ದಾರೆ:

“ಯೇ ಕಾಂಗ್ರೆಸ್ ಕಾ ಮ್ಯಾನಿಫೆಸ್ಟೋ ಕೆಹ್ ರಹಾ ಹೈ, ಕಿ ವೋ ಮಾತಾವೋಂ  ಔರ್ ಬೆಹೆನೋ ಕೆ ಸೋನೆ ಕಾ ಹಿಸಾಬ್ ಕರೇಂಗೆ, ಉಸ್ಕಿ ಜಾಂಚ್ ಕರೆಂಗೆ, ಜಾನ್‍ಕಾರೀ ಲೇಂಗೆ ಔರ್ ಫಿರ್ ವೋ ಸಂಪತ್ತಿ ಕೋ ಬಾಂಟ್‍ ದೇಂಗೆ. ಔರ್ ಉಂಕೋ ಬಾಂಟೇಂಗೆ, ಜಿಂಕೋ ಮನಮೋಹನ್ ಸಿಂಗ್ಜೀಕಾ ಸರಕಾರ್ ನೇ ಕಹಾಥಾ ಸಂಪತ್ತೀಕಾ ಪಹಲಾಅಧಿಕಾರ್ ಮುಸಲ್ಮಾನೋಂಕಾ ಹೈ . ಭಾಯಿಯೋಂ ಔರ್ ಬೆಹ್ನೋ, ಯೇ ಅರ್ಬನ್ ನಕ್ಸಲ್ ಕಿ ಸೋಚ್, ಮೇರಿ ಮಾತಾಂವೋ, ಬೆಹ್ನೋ, ಆಪ್ಕಾ ಮಂಗಲ್ ಸೂತ್ರ ಭಿ ಬಚ್ನೆ ನಹೀ ದೇಂಗೆ

(ಕಾಂಗ್ರೆಸ್ ಪ್ರಣಾಳಿಕೆ ಹೇಳುತ್ತದೆ, ಅವರು  ತಾಯಂದಿರು ಮತ್ತು ಸೋದರಿಯರ ಬಳಿ ಇರುವ ಚಿನ್ನದ  ಸಂಪತ್ತನ್ನು ಲೆಕ್ಕ ಹಾಕುತ್ತಾರೆ , ತನಿಖ ೆಮಾಡುತ್ತಾರೆ ಮತ್ತು ಆ ಸಂಪತ್ತನ್ನು ಹಂಚುತ್ತಾರೆ. ಮನಮೋಹನ್ ಸಿಂಗ್ ಸರ್ಕಾರ ಸಂಪತ್ತಿನ ಮೊದಲ ಹಕ್ಕಿದೆ ಎಂದು ಹೇಳಿರುವ ಮುಸಲ್ಮಾನರಿಗೆ ಹಂಚುತ್ತಾರೆ. ಈ ಅರ್ಬನ್ ನಕ್ಸಲ್ ಚಿಂತನೆಯು ನನ್ನ ತಾಯಿ ಮತ್ತು ಸಹೋದರಿಯರ ಮಂಗಳ ಸೂತ್ರಗಳನ್ನು ಸಹ ಬಿಡುವುದಿಲ್ಲ.)

ಇಲ್ಲಿಯೂ ಮೋದಿಯವರು ಸುಳ್ಳಿನ ಮೊರೆ ಹೋಗುತ್ತಿದ್ದಾರೆ.ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲಿಯೂ ಹಿಂದೂ ಮಹಿಳೆಯರ ಒಡೆತನದಲ್ಲಿರುವ  ಚಿನ್ನದ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ಮುಸ್ಲಿಮರಲ್ಲಿ ಹಂಚುವುದಾಗಿ ಹೇಳಿಲ್ಲ ಎಂಬ ಸಂಗತಿಯತ್ತವೂ ಈ ಪತ್ರ ಗಮನ ಸೆಳೆದಿದೆ.

ಶ್ರೀ ನರೇಂದ್ರ ಮೋದಿಯವರ ಈ ಭಾಷಣ ವೈರಲ್ ಆಗಿದೆ ಮತ್ತು ದೇಶದ ಎಲ್ಲಾ ಭಾಗಗಳನ್ನು ತಲುಪಿದೆ. ಜನರ, ಹಿಂದೂಗಳ ಮತ್ತು ಮುಸ್ಲಿಮರ ಮನಸ್ಸಿನ ಮೇಲೆ ಈ ಭಾಷಣದ ಪ್ರಭಾವವನ್ನು ಯಾರಾದರೂ ಊಹಿಸಬಹುದು.

“ಶ್ರೀ ನರೇಂದ್ರ ಮೋದಿಯವರ ಈ ಇತ್ತೀಚಿನ ಭಾಷಣದ ಉದ್ದೇಶ, ಹಿಂದುಗಳು ಮತ್ತು ಮುಸ್ಲಿಮರ ನಡುವೆ ಉದ್ವೇಗವನ್ನು ಮತ್ತು ಶತ್ರುತ್ವವನ್ನು ಸೃಷ್ಟಿಸುವುದು ಮತ್ತು ಹಿಂದೂಗಳು ಮುಸ್ಲಿಮರನ್ನು ನುಸುಳುಕೋರರು ಮತ್ತು ತಮ್ಮ ಶತ್ರುಗಳು ಎಂದು ಪ್ರಚೋದಿಸುವುದು. ಇದು ಮಾದರಿ ನೀತಿ ಸಂಹಿತೆಯ ಒಂದು ಸ್ಪಷ್ಟ ಉಲ್ಲಂಘನೆಯಾಗಿದೆ”ಎಂದಿರುವ ಈ ಪತ್ರ ಅವರ ಈ ಭಾಷಣ ಭಾರತದ ಸಾಮಾಜಿಕ ಹಂದರವನ್ನು ಚಿಂದಿ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ , ಇದಕ್ಕೆ ಛೀಮಾರಿ ಹಾಕಬೇಕು ಮತ್ತು ಇಂತಹ ಸಂದರ್ಭಗಳಲ್ಲಿ ಈ ಹಿಂದೆ ಮಾಡಿರುವಂತೆ ಅವರ ಪ್ರಚಾರದ ಮೇಲೆ ನಿಷೇಧ ಹಾಕಬೇಕು ಎಂದು ಚುನಾವಣಾ ಆಯೋಗವನ್ನು ಕೋರಿದೆ.

ಇದನ್ನು ನೋಡಿ : ಬಿಜೆಪಿ ಮತ್ತು ಮಿತ್ರಪಕ್ಷಗಳಿಗಿಲ್ಲ ಕಾರ್ಮಿಕರ ಮತ – ಕಾರ್ಮಿಕ ನಾಯಕರ ಅಭಿಮತ Janashakthi Media

Donate Janashakthi Media

Leave a Reply

Your email address will not be published. Required fields are marked *