ಸಂಪತ್ತಿನ “ಮರು ಹಂಚಿಕೆ”- ಮೋದಿ ರಾಜ್ಯಭಾರದಲ್ಲಿ

ವೇದರಾಜ ಎನ್‌ ಕೆ
ಸಂಪತ್ತಿನ ಮರು ಹಂಚಿಕೆ ಒಂದು ಮಹಾಪರಾಧವೋ ಎಂಬಂತೆ ಪ್ರಧಾನಿಗಳು ಮಾತಾಡುತ್ತಿದ್ದಾರೆ. ಆದರೆ ಕಳೆದ ಒಂದು ದಶಕದಲ್ಲಿ ಅವರ ರಾಜ್ಯಭಾರದಲ್ಲಿ ಇದೇ ನಡೆದಿರುವುದು ಎಂಬುದನ್ನುಅಂಕಿ-ಅಂಶಗಳು ಸಾರುತ್ತಿವೆ – ಆದರೆ ಎಂದಿನ ಅರ್ಥದಲ್ಲಿ ಅಲ್ಲ, ಬಡ ಮತ್ತು ಮಧ್ಯಮ ವರ್ಗಗಳಿಂದ ಶ್ರೀಮಂತರಿಗೆ ಎಂಬರ್ಥದಲ್ಲಿ. ಸಂಪತ್ತಿನ

ಈಗ ಜನ ಜನಿತವಾಗಿರುವಂತೆ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರದಲ್ಲಿ ಡಬಲ್‍ ಧಮಾಕಾ ಸೃಷ್ಟಿಸುತ್ತಿದ್ದಾರೆ. ಒಂದು, ತಮ್ಮ ಪಕ್ಷದ ಪ್ರಣಾಳಿಕೆಯ ಬದಲು ಕಾಂಗ್ರೆಸಿನ ಪ್ರಣಾಳಿಕೆಯ ಬಗ್ಗೆಯೇ ಮಾತಾಡುತ್ತಿದ್ದಾರೆ. ಎರಡು, ಕಾಂಗ್ರೆಸ್‍ ಪ್ರಣಾಳಿಕೆಯಲ್ಲಿಯೇ ಇಲ್ಲದ ವಿಷಯಗಳ ಬಗ್ಗೆ, ಸತ್ಯದ ತಲೆಗೆ ಹೊಡೆಯುವಂತಹ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಎಲ್ಲೆಡೆಯಿಂದಲೂ ಟೀಕೆ ಎದುರಿಸುತ್ತಿದ್ದಾರೆ. ಕಾಂಗ್ರೆಸ್‍ ನ ಪ್ರಣಾಳಿಕೆಯಲ್ಲಿ ಸಂಪತ್ತಿನ ಮರುಹಂಚಿಕೆಯ ಪ್ರಸ್ತಾಪವೇ ಇಲ್ಲದಿದ್ದರೂ ಅದು ‘ಸಂಪತ್ತಿನ ಮರುಹಂಚಿಕೆಗೆ ಮುಂದಾಗಿದೆ ಎಂದು ಅದು ಮಹಾಪರಾಧವೋ ಎಂಬಂತೆ ಮಾತಾಡುತ್ತಿದ್ದಾರೆ. ನಿಜ, ಅದಕ್ಕಾಗಿ ಅದಕ್ಕೆ ತಮ್ಮ ನೆಚ್ಚಿನ ಕೋಮುವಾದಿ ಬಣ್ಣ ಬಳಿಯುತ್ತಿದ್ದಾರೆ–  ‘ಮಂಗಲಸೂತ್ರಕ್ಕೂ, ಕೊನೆಗೆ ರೈತರ ಎಮ್ಮೆಗಳಿಗೂ, ಒಟ್ಟಿನಲ್ಲಿ ಜನಸಾಮಾನ್ಯರ ಭಾವನೆಗಳಿಗೆ ಕೈಹಾಕಿದ್ದಾರೆ ಎಂಬ ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ದ್ಷೇಷ ಭಾಷಣ : ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕ್ರಿಕೆಟ್‌ ಟೀಮ್‌ನಲ್ಲಿ ಮುಸ್ಲಿಂರೇ ಇರುತ್ತಾರೆ ಎಂದು ವಿಷ ಕಾರಿದ ಮೋದಿ

ಆದರೆ ಇದೇವ್ಯಕ್ತಿತನ್ನ ಒಂದು ದಶಕದ ಆಳ್ವಿಕೆಯಲ್ಲಿ ಮಾಡಿರುವುದು ಇದನ್ನೇ ಆದರೆ ತಿರುಗುಮುರುಗಾಗಿ, ಅದಕ್ಕೆ ಸಂಚಕಾರ ಬರಬಹುದು ಎಂಬ ಭಯದಿಂದಲೇ ಹಿಂದೆಂದೂ ದೇಶ ಅತ್ಯುಚ್ಚ ಚುನಾಯಿತ ಸ್ಥಾನದಲ್ಲಿದ್ದವರು ಮಾಡದ ಕೃತ್ಯಕ್ಕೆಇ ಳಿದಿದ್ದಾರೆಯೇ? ಕಾಂಗ್ರೆಸ್‍ ಹಿಂದೂ ಹೆಂಗಸರ ಮಂಗಳಸೂತ್ರ, ಒಬಿಸಿಗಳ ಮೀಸಲಾತಿಗೆ ,ಕೊನೆಗೆ ಎಮ್ಮೆ ಮುಂತಾದವುಗಳನ್ನು ಕಸಿದು ಕೊಂಡು ತನ್ನ ಮತ ಬ್ಯಾಂಕಿಗೆ ಹಾಕಲಿದೆ ಎಂದು ಪ್ರಧಾನ ಮಂತ್ರಿಗಳು ಜನಸಾಮಾನ್ಯರನ್ನು ಹೆದರಿಸುತ್ತಿರುವಾಗಲೇ,  ಅವರ ಸರಕಾರದ ಹಣಕಾಸು ಇಲಾಖೆ ಪ್ರಕಟಿಸಿರುವ ಮಾಹಿತಿಗಳನ್ನು ವಿಶ್ಲೇಷಿಸಿದರೆ ಈ ಸಂದೇಹ ಗಟ್ಟಿಯಾಗದಿರದು. ಸಂಪತ್ತಿನ

ತಮ್ಮಆಳ್ವಿಕೆಯಲ್ಲಿ ತೆರಿಗೆ ಸಂಗ್ರಹ ಅಭೂತಪೂರ್ವಮಟ್ಟಕ್ಕೆ ಏರಿದೆ ಎಂದು ಬಿಂಬಿಸಲು ಸರಕಾರ ಈ ಮಾಹಿತಿಗಳನ್ನು ಪ್ರಕಟಿಸಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಈ ಏರಿಕೆ ಮುಖ್ಯವಾಗಿ ವೈಯಕ್ತಿಕತೆರಿಗೆಗಳ ಸಂಗ್ರಹ ಕಾರ್ಪೊರೇಟ್‍ ತೆರಿಗೆಗಳಿಗಿಂತ ದುಪ್ಪಟ್ಟುದರದಲ್ಲಿ ಏರಿದ್ದರಿಂದ ಬಂದಿದೆ ಎಂಬುದು ಈ ಅಂಕಿ-ಆಂಶಗಳನ್ನು ವಿಶ್ಲೇಷಿಸಿದಾಗ ಕಂಡುಬರುತ್ತದೆ. (ದಿಹಿಂದೂ, ಎಪ್ರಿಲ್‍ 30ರ ‘ಡಾಟಾಪಾಯಿಂಟ್‍’ ನೋಡಿ).

ಅಲ್ಲಿಕೊಟ್ಟಿರುವ ಈ ತಖ್ತೆಗಳನ್ನುನೋಡಿ:

ತಖ್ತೆ 1

 ಕಾರ್ಪೊರೇಟ್‍ ತೆರಿಗೆಯ ಪಾಲು

ವೈಯಕ್ತಿಕ ಆದಾಯ ತೆರಿಗೆಯ ಪಾಲು

 

ಈ ತಖ್ತೆಕಳೆದ 24 ವರ್ಷಗಳಲ್ಲಿ ಸರಕಾರದ ಆದಾಯದಲ್ಲಿ ಕಾರ್ಪೊರೇಟ್‍ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆಯ ಪಾಲನ್ನು ತೋರಿಸುತ್ತದೆ.  ಕಾರ್ಪೊರೇಟ್‍ ತೆರಿಗೆಗಳಪಾಲು 2011-12ರ ವರೆಗೆ ಏರುತ್ತಾ ಹೋಗಿದ್ದು, ಅಲ್ಲಿಂದ ಇಳಿ ಮುಖಗೊಳ್ಳಲಾರಂಭಿಸಿದೆ,

ಆದರೆ ವೈಯಕ್ತಿಕ ಆದಾಯ ತೆರಿಗೆಯ ಪಾಲು ಏರುತ್ತಲೇ ಬಂದಿದೆ.

2014-15 ರ ವೇಳೆಗೆ ,ಅಂದರೆ ‘ಅಚ್ಛೇದಿನ್‍’ಗಳ ಆರಂಭದ ವೇಳೆಗೆ, ವೈಯಕ್ತಿಕ ತೆರಿಗೆ ಆದಾಯ ತೆರಿಗೆಯ ಪಾಲು ಸುಮಾರು 20% ಇದ್ದದ್ದು, 2023-24 ಫೆಬ್ರುವರಿವೇಳೆಗೆ 28% ಕ್ಕೆಏರಿದರೆ,  ಕಾರ್ಪೊರೇಟ್‍ ತೆರಿಗೆಗಳ ಪಾಲು ಸುಮಾರು 32%ದಿಂದ 26%ಕ್ಕೆ ಇಳಿದಿದೆ, ವೈಯಕ್ತಿಕ ಆದಾಯ ತೆರಿಗೆಗಳ ಪಾಲಿಗಿಂತಲೂ ಕಡಿಮೆ! 2019ರಲ್ಲಿ  ‘ಅಮೃತಕಾಲ’ದ ಸರಕಾರ ಕಾರ್ಪೊರೇಟ್‍ಗಳಿಗೆ ತೆರಿಗೆದರಗಳಲ್ಲಿ ಭಾರೀ ಕಡಿತದ ‘ಕೊಡುಗೆ’ಯನ್ನು ನೀಡಿತು ಎಂಬುದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು.

ತಖ್ತೆ 2

– ಪರೋಕ್ಷ ತೆರಿಗೆ

– ಪ್ರತ್ಯಕ್ಷ ತೆರಿಗೆ

ತಖ್ತೆ 2ರಲ್ಲಿ  ಸರಕಾರದ ಆದಾಯದಲ್ಲಿ ನೇರ ತೆರಿಗೆಗಳು ಮತ್ತು ಪರೋಕ್ಷ ತೆರಿಗೆಗಳ ಪಾಲುಗಳ ನಡುವಿನ ಅಂತರ 2014-25 ರ ನಂತರ ತೀವ್ರವಾಗಿ ಏರುತ್ತಿರುವದನ್ನು ಕಾಣಬಹುದು. ಅಲ್ಲದೆ 1980-81ರಿಂದ ಇಳಿಯುತ್ತ ಬಂದಿದ್ದ ಪರೋಕ್ಷ ತೆರಿಗೆಗಳ ಪಾಲು 2010-11ರಿಂದ ಏರುತ್ತ ಬಂದಿರುವುದನ್ನು, ಮತ್ತು ಏರುತ್ತ ಬಂದಿದ್ದ ನೇರತೆರಿಗೆಗಳ ಪಾಲು ಇಳಿಯುತ್ತ ಬಂದಿರುವುದನ್ನು ಕೂಡ ಕಾಣಬಹುದು. 2014-15ರಲ್ಲಿ 40% ದಷ್ಟಿದ್ದ ನೇರ ಪೆರಿಗೆಗಳ ಪಾಲು21-22ರಲ್ಲಿ 34.2%ಕ್ಕೆ ಇಳಿದರೆ, ಸುಮಾರು 60%ದಷ್ಟಿದ್ದ ಪರೋಕ್ಷ ತೆರಿಗೆಗಳ ಪಾಲು 65.8%ಕ್ಕೆ ಏರಿದೆ.

ನೇರತೆರಿಗೆಗಳೆಂದರೆ ವೈಯಕ್ತಿಕ ಮತ್ತು ಕಾರ್ಪೊರೇಟ್‍ಗಳ ಆದಾಯಗಳ ಮೇಲೆ ವಿಧಿಸುವ ತೆರಿಗೆ ಮತ್ತು ಪರೋಕ್ಷ ತೆರಿಗೆಯೆಂದರೆ ಎಲ್ಲರೂ ಬಳಸುವ ಸರಕುಗಳ ಮೇಲೆ ಕೇಂದ್ರ ಸರಕಾರದ ಅಬಕಾರಿ ತೆರಿಗೆಗಳು ಮತ್ತು ಈಗ ಜಿಎಸ್‍ಟಿ.

ನೇರತೆರಿಗೆಗಳನ್ನು ಹೆಚ್ಚಿನ ಆದಾಯದವರು ಹೆಚ್ಚಿನದರ /ಪ್ರಮಾಣದಲ್ಲಿ ತೆರುತ್ತಾರೆ. ಇದು ಸುಮಾರು 6% ದಷ್ಟು ಇಳಿದಿದೆ, ಆದರೆ   ಪರೋಕ್ಷ ತೆರಿಗೆಗಳ ದರ/ಪ್ರಮಾಣ ಸೂಪರ್‍ ಶ್ರೀಮಂತನಿಗಾಗಲೀ ಕಡುಬಡವನಿಗಾಗಲೀ ಒಂದೇ. ಇದುಸುಮಾರು 6%ದಷ್ಟು ಏರಿದೆ.

ಅಂದರೆ ಜನಸಾಮಾನ್ಯರಿಂದ ಹೆಚ್ಚಿನ ತೆರಿಗೆಗಳ ಮೂಲಕ ಕಿತ್ತುಕೊಂಡು ಅದನ್ನು ಕಾರ್ಪೊರೇಟ್ ತೆರಿಗೆಗಳಲ್ಲಿ ರಿಯಾಯ್ತಿ/ ವಿನಾಯ್ತಿಗಳ ರೂಪದಲ್ಲಿ ಶ್ರೀಮಂತರಿಗೆ ಹಂಚಲಾಗಿದೆ. ಇದಲ್ಲದೆ,  ಕಾರ್ಪೊರೇಟ್‍ಗಳ ಬ್ಯಾಂಕ್‍ ಸುಸ್ತಿ ಸಾಲಗಳ ರೈಟ್‍-ಆಫ್ಮತ್ತು ದೇಶದ ಸೊತ್ತುಗಳಾದ ಸಾರ್ವಜನಿಕ ವಲಯದ ಘಟಕಗಳ ಹಾಗೂ ನೈಸರ್ಗಿಕ ಸಂಪತ್ತುಗಳ ಖಾಸಗೀಕರಣವೂ ಶ್ರೀಮಂತರ ಸಂಪತ್ತನ್ನು ಹೆಚ್ಚಿಸುವ ಪ್ರಕ್ರಿಯೆ ಕಳೆದ 10 ವರ್ಷಗಳಲ್ಲಿ ಹೆಚ್ಚು ವೇಗದಿಂದ ನಡೆದಿದೆ.

ಜತೆಗೆ, ಈ ಕೆಳಗಿನತಖ್ತೆಯನ್ನೂನೋಡಿ:

 ಆದಾಯ          ಆದಾಯ ತೆರಿಗೆ        ಒಟ್ಟು ಆದಾಯ 

ಲಕ್ಷ ರೂ.      ರಿಟರ್ನ್‍ ಗಳಲ್ಲಿ ಪಾಲು    ತೆರಿಗೆಯಲ್ಲಿ  ಪಾಲು

ವೈಯಕ್ತಿಕ ಆದಾಯ  10ಲಕ್ಷರೂ. ಗಿಂತ ಕಡಿಮೆ ಇರುವವರ ಪ್ರಮಾಣ 85% ದಷ್ಟು, ಆದರೆ ಇವರಿಂದ ವಸೂಲಿ ಮಾಡಿದ ತೆರಿಗೆಯ ಪಾಲು ಸುಮಾರು 38% 50 ಲಕ್ಷ ರೂ.ಗಿಂತ ಹೆಚ್ಚು ಆದಾಯ ವಿರುವವರ ಪ್ರಮಾಣ ಕೇವಲ 0.8%, ಆದರೆ ಇವರು ತೆರರ ಬೇಕಾಗಿ ಬಂದಿರುವ ತೆರಿಗೆಯ ಪಾಲು 42.3%.

(ತಖ್ತೆಗಳು-ಕೃಪೆ:ರಚಿತಾರಬ್ಬೊನಿ, ದಿಹಿಂದು,ಡಾಟಾಪಾಯಿಂಟ್, ಎಪ್ರಿಲ್‍ 30)

ಇದನ್ನೂ ನೋಡಿ: ಕರ್ನಾಟಕ | 28 ಲೋಕಸಭಾ ಕ್ಷೇತ್ರಗಳ ಚುನಾವಣೆ ಮುಕ್ತಾಯ – ಲೆಕ್ಕಾಚಾರದ ಆಟ ಆರಂಭ

Donate Janashakthi Media

Leave a Reply

Your email address will not be published. Required fields are marked *