- ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆಗಿಳಿದ ನೂರಾರು ವಕೀಲರು
- ವಕೀಲರಿಗೆ ಭದ್ರತೆ, ಕಾನೂನು ರಕ್ಷಣೆ ಒದಗಿಸಬೇಕು ಎಂದು ಪಟ್ಟು
- ವಕೀಲರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ
ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ವಕೀಲರೊಬ್ಬರ ಕೊಲೆ ಹಾಗೂ ಅವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ಬೆಂಗಳೂರು ವಕೀಲರ ಸಂಘದ ಸದಸ್ಯರು(ಎಎಬಿ) ಇಂದು (ನ.3) ಪ್ರತಿಭಟನೆ ನಡೆಸಿದರು. ವಕೀಲರಿಗೆ ಭದ್ರತೆ, ಕಾನೂನು ರಕ್ಷಣೆ ಒದಗಿಸಬೇಕು ಎಂದು ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ವಕೀಲರ
ಮಂಗಳವಾರ ಕೋರ್ಟ್ ಕಲಾಪನ್ನು ಬಹಿಷ್ಕರಿಸಿದ ವಕೀಲರು ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್, ಮೇಯೋ ಹಾಲ್ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ವಕೀಲರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ವಕೀಲರ ಸಂಘದ ಬೇಡಿಕೆ ಏನು?
`ಪೊಲೀಸ್ ಠಾಣೆಗಳು ಸಿವಿಲ್ ವ್ಯಾಜ್ಯಗಳನ್ನು ಬಗೆಹರಿಸುವುದರಲ್ಲಿ ತೊಡಗಿಸಿಕೊಂಡಿದೆ. ಹೀಗಾಗಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಸಂವಿಧಾನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾದ ವಕೀಲರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಕರ್ನಾಟಕ ಕೂಡಲೇ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು, ವಕೀಲರಿಗೆ ನ್ಯಾಯ ಒದಗಿಸಬೇಕು ಎಂದು ‘ಬೆಂಗಳೂರು ವಕೀಲರ ಸಂಘ ಬೇಡಿಕೆ ಮುಂದಿಟ್ಟಿತು. ಕೊನೆಗೆ ಹೈಕೋರ್ಟ್‌ನ ಗೋಲ್ಡನ್ ಗೇಟ್ ಮುಂಭಾಗ ಜಮಾಯಿಸಿದ ವಕೀಲರು, ವೃತ್ತಿನಿರತ ವಕೀಲರಿಗೆ ಸೂಕ್ತ ಭದ್ರತೆ ಮತ್ತು ಪರಿಣಾಮಕಾರಿ ಕಾನೂನು ರಕ್ಷಣೆ ಒದಗಿಸಬೇಕು’ ಒತ್ತಾಯಿಸಿದರು. ವಕೀಲರ
ಇದನ್ನೂ ಓದಿ: ಎಸ್‌ಐಆರ್ ಬಳಿಕ ಬೆಂಗಳೂರಿನ ಮತದಾರರ ಸಂಖ್ಯೆ 1.03 ಕೋಟಿಯಿಂದ 59.08 ಲಕ್ಷಕ್ಕೆ ಇಳಿಕೆ!
ಏನಾಗಿತ್ತು, ಪ್ರತಿಭಟನೆಗೆ ಕಾರಣ ಏನು?
ಅ.18ರಂದು ವೈಟ್ ಫೀಲ್ಡ್ ಬಳಿಯ ಪಟ್ಟಂದೂರು ಅಗ್ರಹಾರದಲ್ಲಿ ಮಂಜುನಾಥ್ ಅವರನ್ನು ಬಾಡಿಗೆ ವಿಚಾರಕ್ಕಾಗಿ ಬಿಹಾರ ಮೂಲದ ಫುಡ್ ಡೆಲಿವರಿ ಬಾಯ್ ಗುಂಡಿಕ್ಕೆ ಹತ್ಯೆ ಮಾಡಿದ್ದರು. ಪಂಕಜ್ ಮತ್ತು ಅನಿಲ್ ದುಬೆ ಆರೋಪಿಗಳು ಎಂದು ಗುರುತಿಸಲಾಗಿದೆ. ಅನ್ನಪೂರ್ಣೇಶ್ವರಿನಗರದ ವಕೀಲ ಶ್ರೀರಾಮ್ ಹತ್ಯೆ ಹಾಗೂ ಗೌರಿಬಿದನೂರಿನಲ್ಲಿ ವಕೀಲ ವೆಂಕಟರಮಣ ಸಣ್ಣಕ್ಕಿ ಮೇಲಿನ ಕೊಲೆ ಯತ್ನ ನಡೆದಿತ್ತು. ಈ ಘಟನೆಗಳು ವಕೀಲರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಕಾನೂನಾತ್ಮಕ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ವಕೀಲರ
ಇದನ್ನೂ ನೋಡಿ: ನ್ಯಾಯ ಕೊಡಿಸುವವರಿಗೇ ರಕ್ಷಣೆ ಇಲ್ಲವೇ? ರಾಜ್ಯಾದ್ಯಂತ ಬೀದಿಗಿಳಿದ ವಕೀಲರು Janashakthi Media
