ಬಡತನವನ್ನು ಅಂದಾಜು ಮಾಡುವ ಪ್ರತಿಯೊಂದು ವಿಧಾನವನ್ನೂ ಒಂದಲ್ಲ ಒಂದು ನೆಲೆಯಲ್ಲಿ ನ್ಯಾಯಸಮ್ಮತವಾಗಿ ಟೀಕಿಸಬಹುದು; ಆದರೆ ಸುಮಾರು 80 ಕೋಟಿ ಜನರಿಗೆ ತಿಂಗಳಿಗೆ ಒಬ್ಬ ವ್ಯಕ್ತಿಗೆ 5 ಕಿಲೋಗ್ರಾಂಗಳಷ್ಟು ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುತ್ತಿದ್ದರೂ, ಹಸಿವು ದೇಶವನ್ನು ಕಾಡುತ್ತಿರುವಾಗ, ಭಾರತದಲ್ಲಿ ಬಡತನ ಕಣ್ಮರೆಯಾಗಿದೆ ಎಂದು ಹೇಳುವುದು ಅಸಂಬದ್ಧತೆಯ ಪರಮಾವಧಿಯಾಗಿದೆ. ವಿಶ್ವಬ್ಯಾಂಕ್ ಮಾಡುತ್ತಿರುವುದು ಇದನ್ನೇ. ಅದು ‘ಬಡತನ ರೇಖೆ‘ಯನ್ನು ಒಬ್ಬ ವ್ಯಕ್ತಿಗೆ ದಿನಕ್ಕೆ 3 ಡಾಲರ್ಗಳನ್ನು ಮಾನದಂಡವಾಗಿ ಬಳಸಿ ಅಂದಾಜು ಮಾಡಿದೆ, ಈ ಮೊತ್ತವನ್ನು ರೂಪಾಯಿಗೆ ಪರಿವರ್ತಿಸುವಾಗ, ಮಾರುಕಟ್ಟೆ ವಿನಿಮಯ ದರದ ಸುಮಾರು ಶೇ.28ರಷ್ಟಿರುವ ದರವನ್ನು ಬಳಸಲಾಗಿದೆ. ನವ ಉದಾರವಾದದ ಪರಿಣಾಮಗಳನ್ನು ಸುಂದರಗೊಳಿಸಬೇಕಾದ ಪಟ್ಟಭದ್ರ ಹಿತಾಸಕ್ತಿಯನ್ನು ಹೊಂದಿರುವ ಅದರ ಬೆಂಬಲಿಗ ಸಂಸ್ಥೆಯಾದ ವಿಶ್ವ ಬ್ಯಾಂಕ್ನ ಈ ಲೆಕ್ಕಾಚಾರ ಅದನ್ನು ಮುದ್ರಿಸಿರುವ ಕಾಗದದ ಮೌಲ್ಯವನ್ನೂ ಹೊಂದಿಲ್ಲ. ಬಡತನ
ಪ್ರೊ. ಪ್ರಭಾತ್ ಪಟ್ನಾಯಕ್
ವಿಶ್ವ ಬ್ಯಾಂಕ್ ಇತ್ತೀಚೆಗಷ್ಟೇ ಭಾರತದಲ್ಲಿನ ಬಡತನದ ಕುರಿತು ಅಂದಾಜುಗಳನ್ನು ಪ್ರಕಟಿಸಿದೆ. ಇದರ ಪ್ರಕಾರ, 2011ರಲ್ಲಿ ಒಟ್ಟು ಜನಸಂಖ್ಯೆಯ ಶೇ.27.1ರಷ್ಟನ್ನು ಬಾಧಿಸುತ್ತಿದ್ದ “ತೀವ್ರ ಬಡತನ” (extreme poverty), ಈಗ ಕೇವಲ ಶೇ.2.6ಕ್ಕೆ ಇಳಿದಿದೆ. ಈ ಅಂದಾಜು, 2022-23 ಮತ್ತು 2023-24ರ ಅವಧಿಯಲ್ಲಿ ಸಂಗ್ರಹಿಸಲಾದ ‘ರಾಷ್ಟ್ರೀಯ ಮಾದರಿ ಸಮೀಕ್ಷೆ’ಯ (ಎನ್ಎಸ್ಎಸ್) ಬಳಕೆಯ ವೆಚ್ಚದ (consumption expenditure) ದತ್ತಾಂಶವನ್ನು ಆಧರಿಸಿದೆ.
ಮೋದಿ ಸರ್ಕಾರವು ಇದೇ ದತ್ತಾಂಶವನ್ನು ಬಳಸಿಕೊಂಡು, ಈ ವರ್ಷಗಳಲ್ಲಿ ತೀವ್ರ ಬಡತನವು ಜನಸಂಖ್ಯೆಯ ಶೇಕಡಾ 5ಕ್ಕೆ ಇಳಿದಿದೆ ಎಂದು ಹೇಳಿಕೊಂಡಿತ್ತು. ಈಗ ವಿಶ್ವ ಬ್ಯಾಂಕ್ನ ಇತ್ತೀಚಿನ ವರದಿಯು ಬೇರೊಂದು ಬಡತನ ರೇಖೆಯನ್ನು ಆಧರಿಸಿ ಇನ್ನೂ ಕಡಿಮೆ ಬಡತನದ ಪ್ರಮಾಣವನ್ನು ತೋರಿಸಿರುವ ಬಗ್ಗೆ ಅದು ಭಾರೀ ಸಂಭ್ರಮಪಡುತ್ತಿದೆ. ವಿಶ್ವ ಬ್ಯಾಂಕ್ ‘ಬಡತನ ರೇಖೆ’ಯನ್ನು ಒಬ್ಬ ವ್ಯಕ್ತಿಗೆ ದಿನಕ್ಕೆ 3 ಡಾಲರ್ಗಳನ್ನು ಮಾನದಂಡವಾಗಿ ಬಳಸಿ ಅಂದಾಜು ಮಾಡಿದೆ, ಈ ಮೊತ್ತವನ್ನು ರೂಪಾಯಿಗೆ ಪರಿವರ್ತಿಸುವಾಗ, ಮಾರುಕಟ್ಟೆ ವಿನಿಮಯ ದರದ ಸುಮಾರು ಶೇ.28ರಷ್ಟಿರುವ ದರವನ್ನು (ಇದನ್ನು ಅದು ‘ಖರೀದಿ ಶಕ್ತಿ ಸಾಮ್ಯತೆ ಹೊಂದಾಣಿಕೆ’ -Purchasing Power Parity adjustment -ಎಂದು ಹೆಸರಿಸುತ್ತದೆ) ಬಳಸಲಾಗಿದೆ. ಆದರೆ, ವಿಶ್ವ ಬ್ಯಾಂಕ್ನ ಈ ಲೆಕ್ಕಾಚಾರ ಅದನ್ನು ಮುದ್ರಿಸಿರುವ ಕಾಗದದ ಮೌಲ್ಯವನ್ನೂ ಹೊಂದಿಲ್ಲ.
ಎರಡು ಸ್ಫುಟವಾದ ಸಮಸ್ಯೆಗಳು
ವಿಶ್ವ ಬ್ಯಾಂಕ್ನ ತೀರ್ಮಾನದಲ್ಲಿ ಎರಡು ಸ್ಫುಟವಾದ ಸಮಸ್ಯೆಗಳಿವೆ: ಮೊದಲನೆಯದಾಗಿ, 2011 ಮತ್ತು 2022-23ರ ನಡುವೆ ದತ್ತಾಂಶ ಸಂಗ್ರಹಣಾ ವಿಧಾನದಲ್ಲಿ ಗಣನೀಯ ಬದಲಾವಣೆಯಾಗಿದೆ. ಈ ಕಾರಣದಿಂದಾಗಿ, ಈ ಎರಡು ವರ್ಷಗಳ ಅಂಕಿಅಂಶಗಳನ್ನು ನೇರವಾಗಿ ಹೋಲಿಸಲು ಸಾಧ್ಯವಿಲ್ಲ. ಉದಾಹರಣೆಗೆ, ಹಿಂದೆ ಎನ್ಎಸ್ಎಸ್ ಸಮೀಕ್ಷೆ ನಡೆಸುವವರು ಒಂದು ಕುಟುಂಬಕ್ಕೆ ಸಮೀಕ್ಷೆಯ ಅವಧಿಯಲ್ಲಿ ಒಮ್ಮೆ ಮಾತ್ರ ಭೇಟಿ ನೀಡುತ್ತಿದ್ದರು, ಆದರೆ ಈಗ ಮೂರು ಬಾರಿ ಭೇಟಿ ನೀಡುತ್ತಾರೆ. ಭೇಟಿಗಳ ಸಂಖ್ಯೆ ಹೆಚ್ಚಾದಷ್ಟೂ, ಕುಟುಂಬವು ವರದಿ ಮಾಡುವ ಬಳಕೆಯ ವೆಚ್ಚವೂ ಹೆಚ್ಚಾಗುತ್ತದೆ. ಆದ್ದರಿಂದ, 2011 ಮತ್ತು 2022-23ರ ಅಂಕಿಅಂಶಗಳನ್ನು ಹೋಲಿಸಿದಾಗ, ನಂತರದ ವರ್ಷದಲ್ಲಿ ಬಡತನವನ್ನು ವಾಸ್ತವಕ್ಕಿಂತ ಕಡಿಮೆ ಅಂದಾಜಿಸುವ ಪ್ರವೃತ್ತಿ ಸಹಜವಾಗಿಯೇ ಇದರಲ್ಲಿ ಅಡಗಿದೆ.
ಮೊದಲನೆಯದಾಗಿ, 2011 ಮತ್ತು 2022-23ರ ನಡುವೆ ದತ್ತಾಂಶ ಸಂಗ್ರಹಣಾ ವಿಧಾನದಲ್ಲಿ ಗಣನೀಯ ಬದಲಾವಣೆಯಾಗಿದೆ. ಈ ಕಾರಣದಿಂದಾಗಿ, ಈ ಎರಡು ವರ್ಷಗಳ ಅಂಕಿಅಂಶಗಳನ್ನು ನೇರವಾಗಿ ಹೋಲಿಸಲು ಸಾಧ್ಯವಿಲ್ಲ. ಎರಡನೆಯದಾಗಿ, ಅದು ಬಳಸುವ ‘ಬಡತನ’ದ ವ್ಯಾಖ್ಯೆಯೇ ದೋಷಪೂರಿತವಾಗಿದೆ.
ವಿಶ್ವ ಬ್ಯಾಂಕ್ನ ಅಂದಾಜುಗಳಲ್ಲಿರುವ ಎರಡನೆಯ ಸಮಸ್ಯೆ ಪರಿಕಲ್ಪನೆಗೆ ಸಂಬಂಧಿಸಿರುವಂತದ್ದು: ಬ್ಯಾಂಕ್ ಬಳಸುವ ‘ಬಡತನ’ದ ವ್ಯಾಖ್ಯೆಯೇ ದೋಷಪೂರಿತವಾಗಿದೆ; ಅದು ಏಕೆ ಎಂದು ನೋಡೋಣ. ಒಬ್ಬ ವ್ಯಕ್ತಿಯು ಆಧಾರ ವರ್ಷದಲ್ಲಿ (base year) ಬಳಸುತ್ತಿದ್ದ ಸರಕುಗಳನ್ನು, ನಂತರದ ವರ್ಷದಲ್ಲಿ ಹೆಚ್ಚು ಪ್ರಮಾಣದಲ್ಲಿ ಬಳಸುತ್ತಿದ್ದರೆ, ಆತ ಆರ್ಥಿಕವಾಗಿ ಉತ್ತಮ ಸ್ಥಿತಿಗೆ ತಲುಪಿದ್ದಾನೆ ಮತ್ತು ಬಡತನದ ಮಟ್ಟ ಕಡಿಮೆಯಾಗಿದೆ ಎಂದು ಅರ್ಥೈಸಬಹುದು. ಆದರೆ, ಒಬ್ಬ ವ್ಯಕ್ತಿಯು ಕೆಲವು ವಸ್ತುಗಳನ್ನು ಹೆಚ್ಚು ಮತ್ತು ಇನ್ನು ಕೆಲವು ವಸ್ತುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ, ಆ ವ್ಯಕ್ತಿಯ ಸ್ಥಿತಿ ಸುಧಾರಿಸಿದೆಯೇ ಅಥವಾ ಹದಗೆಟ್ಟಿದೆಯೇ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ಹೋಲಿಕೆ ಮಾಡಲು ಸಾಮಾನ್ಯವಾಗಿ ಬಳಸುವ ವಿಧಾನವೆಂದರೆ, ನಂತರದ ವರ್ಷದ ಒಟ್ಟು ವೆಚ್ಚವನ್ನು ‘ಬೆಲೆ ಸೂಚ್ಯಂಕ’ವೊಂದರ ಮೂಲಕ ಸರಿಹೊಂದಿಸುವುದು (deflate ಮಾಡುವುದು). ಈ ಸೂಚ್ಯಂಕವು ವಿವಿಧ ವಸ್ತುಗಳ ಬೆಲೆ ಬದಲಾವಣೆಗಳ ‘ಭಾರಿತ ಸರಾಸರಿ’ಯಾಗಿರುತ್ತದೆ; ಇಲ್ಲಿ ‘ಭಾರ’ (weight) ಎಂದರೆ, ಆಧಾರ ವರ್ಷದಲ್ಲಿ (base year) ವಿವಿಧ ಸರಕುಗಳ ಮೇಲೆ ಮಾಡಲಾದ ಒಟ್ಟು ವೆಚ್ಚದ ಪ್ರಮಾಣವಾಗಿರುತ್ತದೆ. ಬಡತನದ ಅಂದಾಜುಗಳನ್ನು ಮಾಡುವಾಗ, ಈ ವಿಧಾನವನ್ನು ಹೀಗೆ ಅನ್ವಯಿಸಲಾಗುತ್ತದೆ: ಆಧಾರ ವರ್ಷದ ಬಡತನ ರೇಖೆಯನ್ನು (poverty line) ಇಂತಹ ‘ಆಧಾರ-ಭಾರಿತ ಬೆಲೆ ಸೂಚ್ಯಂಕ’ವನ್ನು ಬಳಸಿ ನಂತರದ ವರ್ಷಕ್ಕೆ ಅನುಗುಣವಾಗಿ ಸಮಕಾಲಿಕಗೊಳಿಸಲಾಗುತ್ತದೆ ಮತ್ತು ಎಷ್ಟು ಜನರು ಈ ಸಮಕಾಲಿಕಗೊಳಿಸಿದ (updated) ರೇಖೆಗಿಂತ ಕೆಳಗಿದ್ದಾರೆ ಎಂದು ಪರಿಶೀಲಿಸಲಾಗುತ್ತದೆ.
ಯಾರಾದರೂ ಈ ವಿಧಾನವನ್ನು ಒಪ್ಪದಿರಬಹುದು, ಆದರೆ ಇದರ ಹಿಂದೆ ಒಂದು ತಾರ್ಕಿಕ ಆಧಾರವಿದೆ. ನಂತರದ ವರ್ಷದಲ್ಲಿ ಸೇವಿಸುವ ವಸ್ತುಗಳು ಆಧಾರ ವರ್ಷದಲ್ಲಿ ಸೇವಿಸಿದ ವಸ್ತುಗಳಂತೆಯೇ ಇಲ್ಲದಿದ್ದಾಗ ಮತ್ತು ಕೆಲವು ಸಾಮಾನ್ಯ ವಸ್ತುಗಳ ಸೇವನೆಯ ಪ್ರಮಾಣ ಕಡಿಮೆಯಾದಾಗ ಸಮಸ್ಯೆ ಉದ್ಭವಿಸುತ್ತದೆ. ಇಂತಹ ಸಂದರ್ಭದಲ್ಲೂ ಬಡತನವನ್ನು ಅಂದಾಜಿಸಲು, ಆಧಾರ ವರ್ಷದ ಬಡತನ ರೇಖೆಯನ್ನು ‘ಆಧಾರ-ಭಾರಿತ ಬೆಲೆ ಸೂಚ್ಯಂಕ’ದ ಮೂಲಕ ಸಮಕಾಲಿಕಗೊಳಿಸುವ ಪದ್ಧತಿಯನ್ನೇ ಅನುಸರಿಸಲಾಗುತ್ತದೆ; ಆದರೆ ಇದಕ್ಕೆ ಯಾವುದೇ ತಾರ್ಕಿಕ ಸಮರ್ಥನೆಯಿಲ್ಲ.
ಇದಕ್ಕೆ ನೀಡಲಾಗುವ ತಾರ್ಕಿಕ ಸಮರ್ಥನೆಯು ಸಾಮಾನ್ಯವಾಗಿ ಹೀಗಿರುತ್ತದೆ: ಒಂದು ವೇಳೆ ನಂತರದ ವರ್ಷದಲ್ಲಿ ಹಳೆಯ ಸರಕುಗಳನ್ನು ಬಳಸುತ್ತಿದ್ದರೆ, ಸಮಕಾಲಿಕಗೊಳಿಸಿದ ಬಡತನ ರೇಖೆಗಿಂತ ಮೇಲೆ ಇರುವ ವ್ಯಕ್ತಿಯನ್ನು ‘ಬಡವರಲ್ಲದವರು’ ಎಂದು ಪರಿಗಣಿಸಬಹುದು. ಇನ್ನು, ಆ ವ್ಯಕ್ತಿಯು ವಾಸ್ತವವಾಗಿ ಬೇರೆ ಸರಕುಗಳನ್ನು ಬಳಸುತ್ತಿದ್ದರೆ, ಆತ ಹಳೆಯ ವಸ್ತುಗಳಿಗಿಂತ ಈ ಹೊಸ ವಸ್ತುಗಳನ್ನೇ ಹೆಚ್ಚು ಇಷ್ಟಪಡುತ್ತಿರಲೇ ಬೇಕು; ಹಾಗಾಗಿ ಆತನ ಸ್ಥಿತಿ ಇನ್ನೂ ಉತ್ತಮವಾಗಿದೆ ಎಂದು ಭಾವಿಸಬಹುದು. ಆದ್ದರಿಂದ, ‘ಆಧಾರ-ಭಾರಿತ ಬೆಲೆ ಸೂಚ್ಯಂಕ’ ಬಳಸಿ ಬಡತನ ರೇಖೆಯನ್ನು ಸಮಕಾಲಿಕಗೊಳಿಸುವುದು ಇಂತಹ ಸಂದರ್ಭದಲ್ಲೂ ಸಂಪೂರ್ಣವಾಗಿ ಸಮಂಜಸವಾಗಿರುತ್ತದೆ ಎಂದು ಸಮರ್ಥಿಸಿಕೊಳ್ಳಲಾಗುತ್ತದೆ. ಬಡತನ
ಇದನ್ನೂ ಓದಿ : ಸಿಒಪಿ31 ಶೃಂಗಸಭೆ: ಪ್ರಮುಖ ಹವಾಮಾನ ವಿಚಾರಗಳಲ್ಲಿ ಪ್ರಗತಿಗೆ ಶ್ರೀಮಂತ ರಾಷ್ಟ್ರಗಳ ಅಡ್ಡಿ
ಆಯ್ಕೆ-ಇಷ್ಟದಿಂದಲೋ, ಅಭಾವದಿಂದಲೋ?
ಆದರೆ ಇಲ್ಲಿರುವ ಸಮಸ್ಯೆಯೆಂದರೆ, ಒಬ್ಬ ವ್ಯಕ್ತಿ ಒಂದು ವಸ್ತುವನ್ನು ಆರಿಸಿಕೊಂಡಿದ್ದಾನೆ ಎಂದ ಮಾತ್ರಕ್ಕೆ, ಆತ ಅದನ್ನು ನಿಜವಾಗಿಯೂ ಇಷ್ಟಪಡುತ್ತಾನೆ ಎಂದರ್ಥವಲ್ಲ. ಆಧಾರ ವರ್ಷದಲ್ಲಿ ಲಭ್ಯವಿದ್ದ ವಸ್ತುಗಳು ನಂತರದ ವರ್ಷದಲ್ಲಿ ಸಿಗದಿದ್ದಾಗಲೂ, ವ್ಯಕ್ತಿಯು ಬೇರೆ ವಸ್ತುಗಳನ್ನು ಆರಿಸಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು. ಇದಕ್ಕೆ ಸಾರ್ವಜನಿಕ ಆರೋಗ್ಯ ಸೇವೆಯು ಒಂದು ಸ್ಪಷ್ಟ ಉದಾಹರಣೆ. ಆರ್ಥಿಕ ‘ಮಿತವ್ಯಯ’ (fiscal austerity) ನೀತಿಯನ್ನು ಅನುಸರಿಸುವ ಭರದಲ್ಲಿ, ಸರ್ಕಾರವು ಸಾರ್ವಜನಿಕ ಆಸ್ಪತ್ರೆಗಳ ನಿರ್ವಹಣೆ ಮತ್ತು ಹೊಸ ಆಸ್ಪತ್ರೆಗಳ ನಿರ್ಮಾಣಕ್ಕಾಗಿ ಮಾಡುವ ವೆಚ್ಚವನ್ನು ಕಾಲಕ್ರಮೇಣ ಕಡಿಮೆ ಮಾಡಬಹುದು. ಇದರ ಪರಿಣಾಮವಾಗಿ, ಹೆಚ್ಚು ದುಬಾರಿಯಾದ ಖಾಸಗಿ ಆಸ್ಪತ್ರೆಗಳು ಅಸ್ತಿತ್ವಕ್ಕೆ ಬರಬಹುದು. ಆಗ, ಅತ್ಯಂತ ಬಡವರೂ ಸೇರಿದಂತೆ ಅನೇಕ ರೋಗಿಗಳು ಅನಿವಾರ್ಯವಾಗಿ ಈ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ, ಆರೋಗ್ಯ ಸೇವೆಯ ನೈಜ ಬೆಲೆಯು ಗಣನೀಯವಾಗಿ ಏರಿಕೆಯಾಗಿರುತ್ತದೆ; ಆದರೆ, ಯಾವುದೇ ‘ಆಧಾರ-ಭಾರಿತ ಬೆಲೆ ಸೂಚ್ಯಂಕ’ದಲ್ಲಿ ಈ ಏರಿಕೆಯು ಎಂದೂ ಬಿಂಬಿತವಾಗುವುದಿಲ್ಲ. ಆಧಾರ-ಭಾರಿತ ಬೆಲೆ ಸೂಚ್ಯಂಕವು ಹೆಚ್ಚೆಂದರೆ ಸಾರ್ವಜನಿಕ ಆರೋಗ್ಯ ಸೇವೆ ವೆಚ್ಚಗಳಲ್ಲಿನ ಏರಿಕೆಯನ್ನು (ಆಧಾರ ವರ್ಷದಲ್ಲಿ ಸರ್ಕಾರಿ ಆಸ್ಪತ್ರೆಗಳು ಮಾತ್ರ ಅಸ್ತಿತ್ವದಲ್ಲಿದ್ದರೆ) ಸೆರೆಹಿಡಿಯುತ್ತದೆ, ಆದರೆ ಅಂತಹ ಆಸ್ಪತ್ರೆಗಳ ಪ್ರಾಮುಖ್ಯತೆ ಎರಡನೇ ಮಟ್ಟಕ್ಕೆ ಇಳಿದಾಗ ನಿಜವಾದ ಆರೋಗ್ಯ ಸೇವೆ ವೆಚ್ಚಗಳಲ್ಲಿನ ಏರಿಕೆಯನ್ನು ಸೆರೆಹಿಡಿಯುವುದಿಲ್ಲ. ಆದ್ದರಿಂದ ನಿಜವಾದ ಬೆಲೆ ಏರಿಕೆಯ ಕೆಳಂದಾಜು(underestimate) ಆಗುತ್ತದೆ ಮತ್ತು ಸಮಕಾಲಿಕಗೊಳಿಸಿದ ಬಡತನ ರೇಖೆಯನ್ನು ಕೂಡ, ಮತ್ತು ಆ ಮೂಲಕ ಅಂದಾಜು ಬಡತನ ಅನುಪಾತವನ್ನು ಸಹ ಕೆಳಂದಾಜು ಮಾಡಲಾಗಿರುತ್ತದೆ.
ಶಿಕ್ಷಣ ಮತ್ತು ಇತರ ಸೇವೆಗಳ ಬಗ್ಗೆ ನಿಖರವಾಗಿ ಅದೇ ರೀತಿ ಹೇಳಬಹುದು, ಅಲ್ಲಿ ಸರ್ಕಾರಿ ಸೇವೆಗಳನ್ನು ಹಿಂತೆಗೆದುಕೊಳ್ಳುವುದರಿಂದ ನಿಜವಾದ ಬೆಲೆ ಏರಿಕೆಯ ಕೆಳಂದಾಜು ಉಂಟಾಗುತ್ತದೆ ಮತ್ತು ಅದರಿಂದ ಬಡತನ ರೇಖೆ ಮತ್ತು ಬಡತನ ಅನುಪಾತ ಅಂದಾಜು ಕೂಡ ಕಡಿಮೆಯಾಗುತ್ತದೆ. ಹೀಗೆ ಸರ್ಕಾರಿ ಸೇವೆಗಳನ್ನು ಹಿಂತೆಗೆದುಕೊಳ್ಳುವುದರ ಮಹತ್ವವೇನು ಎಂಬುದನ್ನು ಪ್ರಪಂಚದಾದ್ಯಂತ ವಿದ್ಯಾರ್ಥಿಗಳು ಮತ್ತು ಯುವಜನರು ಪ್ರಸ್ತುತ ಸಾರ್ವಜನಿಕ ಸೇವೆಗಳಲ್ಲಿನ ಕುಸಿತದ ಪರಿಣಾಮಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂಬ ಸಂಗತಿಯನ್ನು ನೋಡಿ ನಿರ್ಣಯಿಸಬಹುದು.
ಲಭ್ಯವಿರುವ ಸರಕುಗಳ ಬುಟ್ಟಿಯಲ್ಲಿ ಬಲವಂತದ ಬದಲಾವಣೆಯಾದಾಗ ಬಡತನವನ್ನು ಅಂದಾಜು ಮಾಡುವ ವಿಧಾನದಲ್ಲಿಯೇ ಅದನ್ನು ಕೆಳಂದಾಜು ಮಾಡುವ ಪಕ್ಷಪಾತ ಅಡಕವಾಗಿರುವುದರಿಂದಾಗಿ, ಭಾರತೀಯ ಸಂಖ್ಯಾಶಾಸ್ತ್ರಜ್ಞರು 1973-74ರಲ್ಲಿ ಬಡತನವನ್ನು ಅಂದಾಜು ಮಾಡುವ ಪರ್ಯಾಯ ವಿಧಾನವನ್ನು ಅಳವಡಿಸಿಕೊಳ್ಳಲು ಯೋಜನಾ ಆಯೋಗವನ್ನು ಮನವೊಲಿಸಿದರು.
ಲಭ್ಯವಿರುವ ಸರಕುಗಳ ಬುಟ್ಟಿಯಲ್ಲಿ ಬಲವಂತದ ಬದಲಾವಣೆಯಾದಾಗ ಬಡತನವನ್ನು ಅಂದಾಜು ಮಾಡುವ ವಿಧಾನದಲ್ಲಿಯೇ ಅದನ್ನು ಕೆಳಂದಾಜು ಮಾಡುವ ಪಕ್ಷಪಾತ ಅಡಕವಾಗಿರುವುದರಿಂದಾಗಿ, ಭಾರತೀಯ ಸಂಖ್ಯಾಶಾಸ್ತ್ರಜ್ಞರು 1973-74ರಲ್ಲಿ ಬಡತನವನ್ನು ಅಂದಾಜು ಮಾಡುವ ಪರ್ಯಾಯ ವಿಧಾನವನ್ನು ಅಳವಡಿಸಿಕೊಳ್ಳಲು ಯೋಜನಾ ಆಯೋಗವನ್ನು ಮನವೊಲಿಸಿದರು. ಬಳಕೆ ಸರಕುಗಳ ಬುಟ್ಟಿಯು ಬದಲಾದಾಗ (ಮೇಲೆ ಹೇಳಿದಂತೆ ಅದು ಜನರ ಆಯ್ಕೆಯ ಪ್ರಕಾರವೇ ಆಗಿರಬೇಕೆಂದೇನಿಲ್ಲ), ಬಳಕೆಯ ಬುಟ್ಟಿಯಲ್ಲಿ ಬದಲಾಗದ ಕೆಲವು ಸರಕುಗಳಿರುತ್ತವೆ ಮತ್ತು ಅದರ ಬಳಕೆಯು ಜನರು ಪರಿಸ್ತಿತಿ ಉತ್ತಮವಾಗುತ್ತಿದ್ದಂತೆ ಹೆಚ್ಚುವುದು ಕಂಡುಬಂದಿದೆ. ಎರಡು ಅವಧಿಗಳಲ್ಲಿ ಇಂತಹ ಸರಕುಗಳ ಬಳಕೆಯನ್ನು ಭೌತಿಕವಾಗಿ ಹೋಲಿಸಬಹುದು, ನಂತರ ಜನರ ಪರಿಸ್ಥಿತಿ ಉತ್ತಮವಾಗುತ್ತಿದೆಯೇ ಅಥವಾ ಹದಗೆಡುತ್ತಿದೆಯೇ ಎಂಬುದಕ್ಕೆ ಬದಲಿ( ಪ್ರಾಕ್ಸಿ)ಯಾಗಿ ಅದನ್ನು ತೆಗೆದುಕೊಳ್ಳಬಹುದು.
ಉದಾಹರಣೆಗೆ, ಆಹಾರಧಾನ್ಯಗಳು ಅಂತಹ ಒಂದು ಸರಕು ಮತ್ತು ಅವುಗಳ ನೇರ ಸೇವನೆ ಮತ್ತು ಪ್ರಾಣಿಜನ್ಯ ಉತ್ಪನ್ನಗಳನ್ನು ಸೇರುವ ತಿಂಡಿಧಾನ್ಯಗಳು ಮತ್ತು ಸಂಸ್ಕರಿಸಿದ ಧಾನ್ಯಗಳ ಮೂಲಕದ ಪರೋಕ್ಷ ಸೇವನೆಯೂ ಸೇರಿದಂತೆ ಪರೋಕ್ಷ ಸೇವನೆ ಒಟ್ಟಾಗಿ ಇಂತಹ ಪ್ರಾಕ್ಸಿಯಾಗಬಹುದು. ಆಹಾರಧಾನ್ಯಗಳು ಸ್ವತಃ ಸಾಕಷ್ಟು ವೈವಿಧ್ಯಮಯವಾಗಿರುವುದರಿಂದ, ಎರಡು ವಿಭಿನ್ನ ದಿನಾಂಕಗಳಲ್ಲಿ ಅವುಗಳ ಒಟ್ಟು ಸೇವನೆಯನ್ನು ಹೋಲಿಸುವ ಒಂದು ವಿಧಾನವೆಂದರೆ, ಸೇವಿಸುವ ಕ್ಯಾಲೊರಿಗಳನ್ನು ತೆಗೆದುಕೊಳ್ಳುವುದು, ಬೆಲೆಗಳನ್ನು ತರದೆಯೇ ಇದನ್ನು ಭೌತಿಕವಾಗಿ ಅಳೆಯಬಹುದು. ಇದು “ಕ್ಯಾಲೋರಿ ಮೂಲಭೂತವಾದ” ಅಲ್ಲ ಮತ್ತು ಕ್ಯಾಲೋರಿಗಳು ಮಾತ್ರ ಮುಖ್ಯವೆಂದು ಹೇಳಿಕೊಳ್ಳುವುದಿಲ್ಲ; ಇದು ಅಗತ್ಯವಾಗಿ ದೋಷಪೂರಿತವಾದ ಬೆಲೆ-ಸೂಚ್ಯಂಕಗಳನ್ನು ತರದೆ ಜೀವನ ಮಟ್ಟಕ್ಕೆ ಪ್ರಾಕ್ಸಿಯಾಗಿ ಕ್ಯಾಲೊರಿಗಳನ್ನು ತೆಗೆದುಕೊಳ್ಳುತ್ತದೆಯಷ್ಟೇ.
ಬಡತನವನ್ನು ಅಂದಾಜು ಮಾಡುವ ಪ್ರತಿಯೊಂದು ವಿಧಾನವನ್ನೂ ಒಂದಲ್ಲ ಒಂದು ನೆಲೆಯಲ್ಲಿ ನ್ಯಾಯಸಮ್ಮತವಾಗಿ ಟೀಕಿಸಬಹುದು; ಆದರೆ ಸುಮಾರು 80 ಕೋಟಿ ಜನರಿಗೆ ತಿಂಗಳಿಗೆ ಒಬ್ಬ ವ್ಯಕ್ತಿಗೆ 5 ಕಿಲೋಗ್ರಾಂಗಳಷ್ಟು ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುತ್ತಿದ್ದರೂ, ಹಸಿವು ದೇಶವನ್ನು ಕಾಡುತ್ತಿರುವಾಗ, ಭಾರತದಲ್ಲಿ ಬಡತನ ಕಣ್ಮರೆಯಾಗಿದೆ ಎಂದು ಹೇಳುವುದು ಅಸಂಬದ್ಧತೆಯ ಪರಮಾವಧಿಯಾಗಿದೆ.
ಅದರಂತೆ, ಯೋಜನಾ ಆಯೋಗವು ವರ್ಷಗಟ್ಟಲೆ ನಗರ ಭಾರತದಲ್ಲಿ ಪ್ರತಿ ವ್ಯಕ್ತಿಗೆ ದಿನಕ್ಕೆ 2100 ಕ್ಯಾಲೋರಿ ಲಭ್ಯವಾಗದ ಎಷ್ಟು ವ್ಯಕ್ತಿಗಳಿದ್ದಾರೆ, ಮತ್ತು ಗ್ರಾಮೀಣ ಭಾರತದಲ್ಲಿ ಪ್ರತಿ ವ್ಯಕ್ತಿಗೆ 2200 ಕ್ಯಾಲೊರಿಗಳು ಲಭ್ಯವಾಗದ (ಗ್ರಾಮೀಣ ಭಾರತದ ಮೂಲ ಮಾನದಂಡವು 2400 ಕ್ಯಾಲೊರಿ,ಆದರೆ ಅಜ್ಞಾತ ಕಾರಣಗಳಿಗಾಗಿ ಇದನ್ನು 2200 ಕ್ಕೆ ಇಳಿಸಲಾಯಿತು) ಎಷ್ಟು ವ್ಯಕ್ತಿಗಳಿದ್ದಾರೆ ಎಂಬ ಮಾನದಂಡವನ್ನು ಬಡತನದ ಅಂದಾಜು ಮಾಡಲು ಬಳಸಿಕೊಂಡು ಬಂದಿದೆ. ಈ ಮಾನದಂಡದಲ್ಲಿ ನವ-ಉದಾರವಾದಿ ಅವಧಿಯಲ್ಲಿ ಬಡತನದಲ್ಲಿ ಗಮನಾರ್ಹವಾದ ಹೆಚ್ಚಳ ಕಂಡುಬಂದಿದೆ: ಈ ಮಾನದಂಡದ ಮೇಲೆ “ಬಡವರು” ಎಂದು ವ್ಯಾಖ್ಯಾನಿಸಲಾದ ಜನಸಂಖ್ಯೆಯ ಪ್ರಮಾಣವು 1993-94 ರಿಂದ 2011-12 ರ ನಡುವೆ ನಗರ ಭಾರತದಲ್ಲಿ 57 ಪ್ರತಿಶತದಿಂದ 65 ಪ್ರತಿಶತಕ್ಕೆ ಏರಿತು ಮತ್ತು ಅದೇ ಅವಧಿಯಲ್ಲಿ “ಗ್ರಾಮೀಣದಲ್ಲಿ 58 ರಿಂದ 68 ಕ್ಕೇರಿತು. ಹೆಚ್ಚಳವಾಯಿತು. 2017-18 ರ ಮುಂದಿನ ಪಂಚವಾರ್ಷಿಕ ಎನ್ಎಸ್ಎಸ್ ಸಮೀಕ್ಷೆಯ ಅಂಕಿ-ಅಂಶಗಳು ಎಷ್ಟು ಹೆಚ್ಚಿದ್ದವೆಂದರೆ , ಮೋದಿ ಸರ್ಕಾರವು ಸಾರ್ವಜನಿಕ ಗಮನದಿಂದ ಆ ದತ್ತಾಂಶವನ್ನು ಹಿಂತೆಗೆದುಕೊಳ್ಳಲು, ಕ್ಯಾಲೋರಿ ಸೇವನೆಯ ಅಂದಾಜುಗಳನ್ನು ಮಾಡುವುದನ್ನು ನಿಲ್ಲಿಸಲು ಮತ್ತು ಎನ್ಎಸ್ಎಸ್ ಅಡಿಯಲ್ಲಿ ದತ್ತಾಂಶ ಸಂಗ್ರಹಣೆ ವಿಧಾನವನ್ನು ಬದಲಾಯಿಸಲು ನಿರ್ಧರಿಸಿತು. ಈ ಸಮೀಕ್ಷೆಯಲ್ಲಿ ಗ್ರಾಮೀಣ ಭಾರತದಲ್ಲಿ ಬಡತನದ ಪ್ರಮಾಣ ಶೇ. 80 ಕ್ಕಿಂತಲೂ ಹೆಚ್ಚು ಎಂದು ಕಂಡುಬಂದಿತ್ತು ಎಂದು ವರದಿಯಾಗಿತ್ತು.
ಅಸಂಬದ್ಧತೆಯ ಪರಮಾವಧಿ
ಖಂಡಿತವಾಗಿಯೂ, ಬಡತನವನ್ನು ಅಂದಾಜು ಮಾಡುವ ಪ್ರತಿಯೊಂದು ವಿಧಾನವನ್ನೂ ಒಂದಲ್ಲ ಒಂದು ನೆಲೆಯಲ್ಲಿ ನ್ಯಾಯಸಮ್ಮತವಾಗಿ ಟೀಕಿಸಬಹುದು; ಆದರೆ ಸುಮಾರು 80 ಕೋಟಿ ಜನರಿಗೆ ತಿಂಗಳಿಗೆ ಒಬ್ಬ ವ್ಯಕ್ತಿಗೆ 5 ಕಿಲೋಗ್ರಾಂಗಳಷ್ಟು ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುತ್ತಿದ್ದರೂ, ಹಸಿವು ದೇಶವನ್ನು ಕಾಡುತ್ತಿರುವಾಗ, ಭಾರತದಲ್ಲಿ ಬಡತನ ಕಣ್ಮರೆಯಾಗಿದೆ ಎಂದು ಹೇಳುವುದು ಅಸಂಬದ್ಧತೆಯ ಪರಮಾವಧಿಯಾಗಿದೆ. ವಿಶ್ವಬ್ಯಾಂಕ್ ಮಾಡುತ್ತಿರುವುದು ಇದನ್ನೇ. ದತ್ತಾಂಶವು ಲಭ್ಯವಿದ್ದು, ಹಸಿವಿನ ಸೂಚ್ಯಂಕವನ್ನು ಲೆಕ್ಕಾಚಾರ ಮಾಡಬಹುದಾದ 122 ದೇಶಗಳಲ್ಲಿ ಭಾರತವು ಪ್ರಸ್ತುತ 100 ನೇ ಸ್ಥಾನದಲ್ಲಿದೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಪರಿಚಯಿಸಲಾದ ಉಚಿತ ಆಹಾರ ಧಾನ್ಯಗಳ ಯೋಜನೆಯನ್ನು ಕೊನೆಗೊಳಿಸಿದಾಗ (ಅದು ಶೀಘ್ರದಲ್ಲೇ ಸಂಭವಿಸುತ್ತದೆ ಎಂದು ಸರ್ಕಾರ ಈಗಾಗಲೇ ಸೂಚಿಸಿದೆ), ಸಂಗತಿಗಳು ಇನ್ನಷ್ಟು ಗಂಭೀರವಾಗುತ್ತವೆ. ಆಗ ವಿಶ್ವಬ್ಯಾಂಕ್ ಪ್ರಕಾರ ಬಡತನ ಕಣ್ಮರೆಯಾದ, ಆದರೆ ಜನರು ಹಸಿವಿನಿಂದ ಹತಾಶರಾಗಿರುವ ದೇಶವನ್ನು ನಾವು ಹೊಂದುತ್ತೇವೆ!
ವಿಶ್ವ ಹಸಿವಿನ ಸೂಚ್ಯಂಕವನ್ನು ಲೆಕ್ಕಹಾಕುವ ಮಾನದಂಡಗಳನ್ನು ಭಾರತ ಸರ್ಕಾರವು ಆಕ್ಷೇಪಿಸುತ್ತದೆ: ಮಕ್ಕಳ ಅಪೌಷ್ಟಿಕತೆಗೆ ಹೆಚ್ಚಿನ ತೂಕವನ್ನು ನೀಡಲಾಗುತ್ತದೆ, ಆದರೆ ಒಟ್ಟು ಜನಸಂಖ್ಯೆಯಲ್ಲಿ ಅದಕ್ಕೆ ಸಾಕಷ್ಟು ತೂಕವನ್ನು ನೀಡುತ್ತಿಲ್ಲ ಎಂದು ಅದು ವಾದಿಸುತ್ತದೆ. ಆದರೆ ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆಯೇ ವಂಚನೆಯ ಒಂದು ನಿರ್ಣಾಯಕ ಸೂಚಕವಾಗಿದೆ, ಆದ್ದರಿಂದ ಸರ್ಕಾರದ ವಾದಕ್ಕೆ ಹೆಚ್ಚೇನೂ ಬೆಲೆಯಿಲ್ಲ.
ವಿಶ್ವಬ್ಯಾಂಕ್, ನವ ಉದಾರವಾದದ ಬೆಂಬಲಿಗ ಸಂಸ್ಥೆಯಾಗಿದ್ದು, ಅದರ ಪರಿಣಾಮಗಳನ್ನು ಸುಂದರಗೊಳಿಸಬೇಕಾದ ಪಟ್ಟಭದ್ರ ಹಿತಾಸಕ್ತಿಯನ್ನು ಹೊಂದಿದೆ. ಇದು ಸಂಭವಿಸುವುದು, ನಿಸ್ಸಂಶಯವಾಗಿಯೂ, ದತ್ತಾಂಶ ಅಥವಾ ಅವುಗಳ ಆಧಾರದ ಮೇಲಿನ ಅಂದಾಜುಗಳಲ್ಲಿ ಅಲ್ಲ; ಇದು ಬಡತನದ ಹಿಂದಿನ ಪರಿಕಲ್ಪನೆಯಲ್ಲಿಯೇ ಸಂಭವಿಸುತ್ತದೆ. ಅದೇ ರೀತಿಯಲ್ಲಿ, ಆಕ್ಸ್ಫರ್ಡ್ ಬಹುಆಯಾಮೀಯ ಬಡತನ ಸೂಚ್ಯಂಕವು “ಆಧುನಿಕತೆಯನ್ನು” ಬಡತನದ ಅಭಾವವನ್ನು ಸೂಚಿಸುತ್ತದೆ ಎಂಬ ಪರಿಕಲ್ಪನಾ ಆಧಾರವನ್ನು ಹೊಂದಿದೆ. ಆದ್ದರಿಂದ ಈ ಸಂಸ್ಥೆಗಳೊಂದಿಗೆ ಪರಿಕಲ್ಪನಾ ಮಟ್ಟದಲ್ಲಿ ವಾದಿಸಬೇಕಾಗಿದೆ, ಬಡತನದ ಇಳಿಕೆಯ ಬಗ್ಗೆ ಭಾರತದಲ್ಲಿನ ಚರ್ಚೆಯು ಇಲ್ಲಿಯವರೆಗೆ ಇದನ್ನು ಮಾಡಿಲ್ಲ. ಬಡತನ
ಇದನ್ನೂ ನೋಡಿ : ವೊಂಬಾಟ್ ಎಂಬ ವಿಸ್ಮಯ | ಚೌಕಾಕಾರದ ಮಲ ವಿಸರ್ಜಿಸುವ ಪ್ರಾಣಿ! Janashakthi Media
