ಐದು ರಾಜ್ಯಗಳ ಚುನಾವಣೆ : ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ ಕೇರಳದಲ್ಲಿ ಎಲ್‌ಡಿಎಫ್‌ – ಯುಡಿಎಫ್‌ ಸಮಬಲ

ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ (Election Results 2026) ಪ್ರಕಟವಾಗುತ್ತಿದ್ದು, ಆರಂಭದಲ್ಲಿ ಬಿಜೆಪಿಯು ಮೂರು ರಾಜ್ಯಗಳಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ಪಶ್ಚಿಮ ಬಂಗಾಳ, ಪುದುಚೇರಿ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದೆ.

ಹಾಗೆಯೇ, ಕೇರಳದಲ್ಲಿ ಎಲ್ ಡಿಎಫ್ ಹಾಗೂ ಯುಡಿಎಫ್ ಬಗ್ಗೆ ನೆಕ್ ಟು ನೆಕ್ ಫೈಟ್ ಕಾಣಿಸುತ್ತಿದೆ. ಇನ್ನು ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆಯೇ ಮತ್ತೆ ಅಧಿಕಾರ ರಚಿಸುವತ್ತ ದಾಪುಗಾಲು ಇರಿಸುತ್ತಿದೆ.

ತೀವ್ರ ಕುತೂಹಲ ಕೆರಳಿಸಿರುವ, ದೇಶದ ಗಮನ ಸೆಳೆದಿರುವ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿಗಿಂತ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದೆ. ಬಿಜೆಪಿಯು 110 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಟಿಎಂಸಿ ಅಭ್ಯರ್ಥಿಗಳು 105 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಎಡಪಕ್ಷಗಳು ಮೂರು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಬಂಗಾಳದಲ್ಲಿ ಅಧಿಕಾರ ರಚಿಸಬೇಕು ಎಂಬ ಬಿಜೆಪಿ ಕನಸಿಗೆ ಇದು ಆರಂಭಿಕ ಮುನ್ನಡೆ ನೀಡಿದೆ. ಬಂಗಾಳದಲ್ಲಿ ಅಧಿಕಾರ ರಚಿಸಲು 147 ಮ್ಯಾಜಿಕ್ ನಂಬರ್ ಆಗಿದೆ.

ಅಸ್ಸಾಂನ 126 ಕ್ಷೇತ್ರಗಳ ಪೈಕಿ ಬಿಜೆಪಿಯು 68 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಸಿದ್ಧವಾದಂತೆ ಕಾಣಿಸುತ್ತಿದೆ. ಇನ್ನು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲೂ ಬಿಜೆಪಿ 30 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಇಲ್ಲೂ ಅಧಿಕಾರ ರಚಿಸುವತ್ತ ಬಿಜೆಪಿ ಹೆಜ್ಜೆ ಇರಿಸುತ್ತಿದೆ.

ಇದನ್ನೂ ಓದಿ :ಸಾಮ್ರಾಜ್ಯಶಾಹಿ ಯು.ಎಸ್ ವಿರುದ್ಧ ಇರಾನ್ ಪ್ರತಿರೋಧ ಜಾಗತಿಕವಾಗಿ ಮನ್ನಣೆ – ರಾಘವಲು

ತಮಿಳುನಾಡಿನಲ್ಲಿ ಡಿಎಂಕೆಯು 55 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕೇರಳಂನಲ್ಲಿ ಎಲ್ ಡಿಎಫ್ 60 ಹಾಗೂ ಯುಡಿಎಫ್ 74 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ತಮಿಳುನಾಡಿನಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು 34 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಇದನ್ನೂ ನೋಡಿ : ಪಿಚ್ಚರ್‌ ಪಯಣ – 171 | ಫಾಲ್ಸ್‌ ಮೆಮರಿ ಮತ್ತು ವಾಸ್ತವದ ಗಡಿ -“ಫಾದರ್‌” ಸಿನಿಮಾ ವಿಮರ್ಶೆ | ಮ ಶ್ರಿ ಮುರಳಿ ಕೃಷ್ಣ

Donate Janashakthi Media

Leave a Reply

Your email address will not be published. Required fields are marked *