ಕಲಬುರಗಿ| ನೀರು ಸರಬರಾಜು ಗುತ್ತಿಗೆ ಪಡೆದಿರುವ ಕುಡಿಯುವ ನೀರು ಪೈಪ್‌ ಗಳಿಗೆ ಬೆಂಕಿ!

ಕಲಬುರಗಿ: ಡಿಸೆಂಬರ್‌ 13ರ ಮಧ್ಯಾಹ್ನ ಮಹಾತ್ಮಾ ಬಸವೇಶ್ವರ ಕಾಲೋನಿಯಲ್ಲಿ ಮಹಾನಗರಕ್ಕೆ ನೀರು ಸರಬರಾಜು ಗುತ್ತಿಗೆ ಪಡೆದಿರುವ ಎಲ್‌ ಆಂಡ್‌ ಟಿ ಕಂಪನಿಗೆ ಸೇರಿದ ಕುಡಿಯುವ ನೀರು ಪೈಪ್‌ ಗಳಿಗೆ ಬೆಂಕಿ ಹತ್ತಿಕೊಂಡು ಕೆಲಕಾಲ ಆತಂಕ ಮೂಡಿಸಿದ ಘಟನೆ ನಡೆದಿದೆ.

ರಸ್ತೆ ಬದಿಯ ಕಸದ ರಾಶಿಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯು ಕ್ಷಣಾರ್ದದಲ್ಲೇ ಸಮೀಪದಲ್ಲಿ ಸಂಗ್ರಹಿಸಿ ಇಟ್ಟಿದ್ದ ಪೈಪ್ ಗಳ ರಾಶಿಗೆ ವ್ಯಾಪಿಸಿದ ಕಾರಣ ಬೆಂಕಿ ಅವಘಡ ಸಂಭವಿಸಿತು.

ಇದನ್ನೂ ಓದಿ: ಸಾರಿಗೆ ಬಸ್ಸುಗಳ ನೆರವಿಗಾಗಿ “ಅಪಘಾತ ತುರ್ತು ಸ್ಪಂದನ ವಾಹನ” ಗಳಿಗೆ ಚಾಲನೆ

ಪರಿಣಾಮ ದಟ್ಟವಾದ ಹೊಗೆಯೊಂದಿಗೆ ಪೈಪ್ ಗಳು ಹೊತ್ತಿ ಉರಿದವು. ನೀರು ಪೂರೈಕೆಯ ಕಾಮಗಾರಿಗಾಗಿ ಪೈಪ್ ಗಳನ್ನು ಇಡಲಾಗಿತ್ತು. ಅದಕ್ಕೆ ಬೆಂಕಿ ಹತ್ತಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬೆಂಕಿ ವಿಸ್ತಾರಗೊಂಡು ಅಕ್ಕ ಪಕ್ಕದ ಮನೆ ಅಂಗಡಿಗಳಿಗೆ ವ್ಯಾಪಿಸಬಹುದಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ ನಂದಿಸಿದರು. ಎಂ.ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ನೋಡಿ: ಡಿಸೆಂಬರ್ 10| ಮಾನವ ಹಕ್ಕುಗಳ ದಿನ ; ನಮ್ಮ ದೈನಂದಿನ ಹಕ್ಕುಗಳು Janashakthi Media

Donate Janashakthi Media

Leave a Reply

Your email address will not be published. Required fields are marked *