ಭಾರತದಲ್ಲಿ ಮನೆ ಮನೆಗೆ ತೆರಳಿ ಮತದಾರರ ಎಣಿಕೆ ಅಗತ್ಯ, ಹೊರತು ಎಸ್‌ಐಆರ್ ಅಲ್ಲ

ಕಾತ್ಯಾಯಿನಿ ಚಾಮರಾಜ್

ತಮಿಳುನಾಡಿನಲ್ಲಿ ನಡೆಸಲಾದ SIR ಅನ್ನು ಆಧರಿಸಿ, ಲೆಫ್ಟಿನೆಂಟ್ ಕರ್ನಲ್ ಎ.ಕೆ. ಆಂಟನಿ (ನಿವೃತ್ತ) ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಸಿವಿಲ್ ರಿಟ್ ಅರ್ಜಿ (2025 ರ 1072), SIR ಅನುಸರಿಸುತ್ತಿರುವ ಕಾರ್ಯವಿಧಾನಗಳನ್ನು ಪ್ರಶ್ನಿಸಿದೆ. 1960 ರ ಮತದಾರರ ನೋಂದಣಿ ನಿಯಮಗಳ ನಿಯಮ 25 ಅನ್ನು ಉಲ್ಲೇಖಿಸಿ, ‘ತೀವ್ರ ಪರಿಷ್ಕರಣೆ’ಯು ಹಿಂದಿನ ಪಟ್ಟಿಯನ್ನು ಅವಲಂಬಿಸದೆ, ಮನೆ-ಮನೆ ಸಮೀಕ್ಷೆಯ ಮೂಲಕ ಎಲ್ಲಾ ಮತದಾರರ ಹೊಸ ಎಣಿಕೆಯನ್ನು ಒಳಗೊಂಡಿರಬೇಕು, SIR ಅನ್ನು ತೀವ್ರ ಪರಿಷ್ಕರಣೆ ಎಂದು ಕರೆಯಲಾಗಿದ್ದರೂ, ಇದು ಹಿಂದಿನ ಪಟ್ಟಿಯನ್ನು ಆಧರಿಸಿದೆ ಮತ್ತು ಹೊಸ ಮನೆ-ಮನೆ ಎಣಿಕೆಯ ಮೂಲಕ ಅಲ್ಲ, ಇದು ಸಂಕ್ಷೇಪವಾದ ಪರಿಷ್ಕರಣೆಯಾಗಿದೆ ಹೊರತು ತೀವ್ರ ಪರಿಷ್ಕರಣೆಯಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಸ್ತಾವಿತ ವಿಶೇಷ ತೀವ್ರ ಪರಿಷ್ಕರಣೆ (SIR) ಯನ್ನು ಅಧ್ಯಯನ ಮಾಡಲು ಕರ್ನಾಟಕ ಸಚಿವ ಸಂಪುಟವು ರಾಜ್ಯ ಕಾನೂನು ಇಲಾಖೆಯನ್ನು ಕೇಳಲು ನಿರ್ಧರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಈಗಾಗಲೆ ಈ ಪ್ರಕ್ರಿಯೆ ನಡೆದ ರಾಜ್ಯಗಳಲ್ಲಿ ಲಕ್ಷಾಂತರ ಅಥವಾ ಕೋಟ್ಯಂತರ ಮತದಾರರ ಹೆಸರುಗಳು ಅಳಿಸಿಹೋಗುತ್ತಿವೆ.

ಆದಾಗ್ಯೂ, SIR ಮೂಲಕ ಮತದಾರರ ಹೆಸರುಗಳ ಅಳಿಸುವಿಕೆಯತ್ತ ಗಮನ ಸೆಳೆಯುವ ಟೀಕಾಕಾರರು, ಚುನಾವಣಾ ನೋಂದಣಿ ಅಧಿಕಾರಿಗಳನ್ನು (EROs) ಬೈಪಾಸ್ ಮಾಡುವ ಕ್ರಿಯೆಯಿಂದ ಆಗಿದೆಯೆ; ECI ಯ ಸಾಫ್ಟ್‌ವೇರ್ ಬಳಕೆಯಿಂದ ಅಳಿಸುವಿಕೆಗಳು ಸಂಭವಿಸಿವೆಯೇ ಅಥವಾ ಸುಳ್ಳು ಫಾರ್ಮ್ 7 ಗಳನ್ನು ಸಲ್ಲಿಸುವುದರಿಂದ ಉಂಟಾಗಿವೆಯೇ ಅಥವಾ ಇವು ಕೇವಲ ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ತೆಗೆದುಹಾಕುವ ಕಾರ್ಯದ ಪರಿಣಾಮವೇ ಎಂಬುದನ್ನು ಪುರಾವೆಗಳೊಂದಿಗೆ ದೃಢೀಕರಿಸಬೇಕಾಗಿದೆ. ಆಧಾರವಿಲ್ಲದ ಟೀಕೆಯು ವಿಶ್ವಾಸಾರ್ಹತೆಯ ಕೊರತೆಗೆ ಕಾರಣವಾಗಬಹುದು.

ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಪ್ರಸ್ತುತ ವ್ಯವಸ್ಥೆಯಲ್ಲಿ ಲಕ್ಷಾಂತರ ಮೃತ ವ್ಯಕ್ತಿಗಳ ಹೆಸರುಗಳು, ಸ್ಥಳಾಂತರಗೊಂಡ ಮತದಾರರ ಹೆಸರುಗಳು ಮತ್ತು ಮತದಾರರ ಪಟ್ಟಿಯಲ್ಲಿ ನಕಲಿ ನಮೂದುಗಳನ್ನು ಸೇರಿಸಲಾಗುತ್ತಿದೆ ಎಂಬುದು ಒಂದು ಐತಿಹಾಸಿಕ ವಾಸ್ತವ. ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ಸಮರ್ಥಿಸುವ ತನ್ನ ಜೂನ್ 24, 2025 ರ ಆದೇಶದಲ್ಲಿ, ಭಾರತೀಯ ಚುನಾವಣಾ ಆಯೋಗ (ECI) 20 ವರ್ಷಗಳ ತ್ವರಿತ ನಗರೀಕರಣ ಮತ್ತು ವಲಸೆಯು ಮತದಾರರ ಪಟ್ಟಿಯಲ್ಲಿ ವ್ಯಾಪಕವಾದ ನಕಲಿ ನಮೂದುಗಳಿಗೆ ಕಾರಣವಾಗಿದೆ ಎಂದು ಹೇಳಿದೆ. “ಪರಿಸ್ಥಿತಿಯು ಮತದಾರರಾಗಿ ದಾಖಲಾಗುವ ಮೊದಲು ಪ್ರತಿಯೊಬ್ಬ ವ್ಯಕ್ತಿಯನ್ನು ಪರಿಶೀಲಿಸಲು ತೀವ್ರವಾದ ಪರಿಶೀಲನಾ ಅಭಿಯಾನವನ್ನು ಬಯಸುತ್ತದೆ” ಎಂದು ಆಯೋಗ ತೀರ್ಮಾನಿಸಿದೆ.

ಎಲ್ಲಾ ಕ್ಷೇತ್ರಗಳಲ್ಲೂ ಮತದಾರರ ಪಟ್ಟಿ ಅವ್ಯವಸ್ಥೆಯಿಂದ ಕೂಡಿದ್ದು, ಬಿಹಾರದಲ್ಲಿ ಕಂಡುಬಂದಂತೆ, SIR ನಂತರವೂ ಪಟ್ಟಿಯು ಅದೇ ಗೊಂದಲದಿಂದ ಹೊರಬರುತ್ತಿರುವುದರಿಂದ, ಈ ಪರಿಷ್ಕರಣೆಯ ಕಾರ್ಯ ಹೇಗೆ ನಡೆಯಬೇಕು ಎಂಬ ಮೂಲಭೂತ ಪ್ರಶ್ನೆಗೆ ಎಡೆಮಾಡಿಕೊಡುತ್ತದೆ.  ಮತದಾರರ ಪಟ್ಟಿಯನ್ನು ರಚಿಸುವ ವಿಧಾನವೇ ದೋಷಪೂರಿತವಾಗಿರುವುದರಿಂದ ಮೊದಲು ವ್ಯವಸ್ಥೆಯನ್ನು ಸರಿ ಮಾಡುವ ಪ್ರಯತ್ನ ಮಾಡಬೇಕು. ಈ ವ್ಯವಸ್ಥೆಯು ಜನನಗಳ ಸೇರ್ಪಡೆ ಮತ್ತು ಸಾವುಗಳ ಅಳಿಸುವಿಕೆಯನ್ನು ಸಕ್ರಿಯಗೊಳಿಸಬೇಕು. ನಕಲು ಹೆಸರುಗಳನ್ನು ತೆಗೆದುಹಾಕಬೇಕು ಮತ್ತು ಚುನಾವಣೆಗೆ ಸ್ವಲ್ಪ ಮೊದಲು ಬೃಹತ್ ಸೇರ್ಪಡೆ ಮತ್ತು ಅಳಿಸುವಿಕೆಗಳನ್ನು ತಡೆಯಬೇಕು. ಆದರೆ ಈ ವ್ಯವಸ್ಥೆಯಲ್ಲಿ ಅಂತಹ ಬದಲಾವಣೆಯನ್ನು ತರುವ ಬೇಡಿಕೆ ಕಡಿಮೆ ಇದೆ.

ಎಲ್ಲಾ ಕ್ಷೇತ್ರಗಳಲ್ಲೂ ಮತದಾರರ ಪಟ್ಟಿ ಅವ್ಯವಸ್ಥೆಯಿಂದ ಕೂಡಿದ್ದು, ಬಿಹಾರದಲ್ಲಿ ಕಂಡುಬಂದಂತೆ, SIR ನಂತರವೂ ಪಟ್ಟಿಯು ಅದೇ ಗೊಂದಲದಿಂದ ಹೊರಬರುತ್ತಿರುವುದರಿಂದ, ಈ ಪರಿಷ್ಕರಣೆಯ ಕಾರ್ಯ ಹೇಗೆ ನಡೆಯಬೇಕು ಎಂಬ ಮೂಲಭೂತ ಪ್ರಶ್ನೆಗೆ ಎಡೆಮಾಡಿಕೊಡುತ್ತದೆ.  ಮತದಾರರ ಪಟ್ಟಿಯನ್ನು ರಚಿಸುವ ವಿಧಾನವೇ ದೋಷಪೂರಿತವಾಗಿರುವುದರಿಂದ ಮೊದಲು ವ್ಯವಸ್ಥೆಯನ್ನು ಸರಿ ಮಾಡುವ ಪ್ರಯತ್ನ ಮಾಡಬೇಕು.

ತಮಿಳುನಾಡಿನಲ್ಲಿ ನಡೆಸಲಾದ SIR ಅನ್ನು ಆಧರಿಸಿ, ಲೆಫ್ಟಿನೆಂಟ್ ಕರ್ನಲ್ ಎ.ಕೆ. ಆಂಟನಿ (ನಿವೃತ್ತ) ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಸಿವಿಲ್ ರಿಟ್ ಅರ್ಜಿ (2025 ರ 1072), SIR ಅನುಸರಿಸುತ್ತಿರುವ ಕಾರ್ಯವಿಧಾನಗಳನ್ನು ಪ್ರಶ್ನಿಸಿದೆ.

ದೇಶಾದ್ಯಂತ SIR ಪ್ರಕ್ರಿಯೆಯನ್ನು “ಅಸಂವಿಧಾನಿಕವೆಂದು ಪರಿಗಣಿಸಲಾಗಿದೆ ಮತ್ತು 1950 ರ ಜನತಾ ಪ್ರಾತಿನಿಧ್ಯ ಕಾಯ್ದೆ, 1960 ರ ಮತದಾರರ ನೋಂದಣಿ ನಿಯಮಗಳು (RER) ಮತ್ತು ECI ಯ ಸ್ವಂತ ಮತದಾರರ ಪಟ್ಟಿಗಳ ಕೈಪಿಡಿ, 2023 ರ ವಿರುದ್ಧವಾಗಿದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಪ್ರಕ್ರಿಯೆಯನ್ನು ಮುಂದುವರಿಸಲು ಅನುಮತಿಸಿದರೆ, ಅದು ವಿವಿಧ ಕಾಯಿದೆಗಳು, ನಿಯಮಗಳು ಮತ್ತು ಕೈಪಿಡಿಗಳಲ್ಲಿ ಸೂಚಿಸಲಾದ ರೀತಿಯಲ್ಲಿ ಇರಬೇಕು ಎಂದು ಅದು ಒತ್ತಾಯಿಸುತ್ತದೆ. RER ನ ನಿಯಮ 25 ಅನ್ನು ಉಲ್ಲೇಖಿಸಿ, ‘ತೀವ್ರ ಪರಿಷ್ಕರಣೆ’ಯು ಹಿಂದಿನ ಪಟ್ಟಿಯನ್ನು ಅವಲಂಬಿಸದೆ, ಮನೆ-ಮನೆ ಸಮೀಕ್ಷೆಯ ಮೂಲಕ ಎಲ್ಲಾ ಮತದಾರರ ಹೊಸ ಎಣಿಕೆಯನ್ನು ಒಳಗೊಂಡಿರಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಆದರೆ SIR ಅನ್ನು ತೀವ್ರ ಪರಿಷ್ಕರಣೆ ಎಂದು ಕರೆಯಲಾಗಿದ್ದರೂ, ಇದು ಹಿಂದಿನ ಪಟ್ಟಿಯನ್ನು ಆಧರಿಸಿದೆ ಮತ್ತು ಹೊಸ ಮನೆ-ಮನೆ ಎಣಿಕೆಯ ಮೂಲಕ ಅಲ್ಲ, ಇದು ಸಂಕ್ಷೇಪವಾದ ಪರಿಷ್ಕರಣೆಯಾಗಿದೆ ಹೊರತು ತೀವ್ರ ಪರಿಷ್ಕರಣೆಯಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

RERನ ನಿಯಮ 6 ರ ಅಡಿಯಲ್ಲಿ ಕಡ್ಡಾಯವಾಗಿ ಅಗತ್ಯವಿರುವಂತೆ ಮನೆ ಸಂಖ್ಯೆಗಳ ಅನುಕ್ರಮದಲ್ಲಿ ಕರಡು ಮತದಾರರ ಪಟ್ಟಿಯನ್ನು ಜೋಡಿಸಲಾಗಿಲ್ಲ ಎಂದು ಅರ್ಜಿಯು ಮುಂದುವರಿದು ಉಲ್ಲೇಖಿಸಿದೆ. “ಅಂತಹ ಅನುಸರಣೆಯು ಯಾವುದೇ ಪಾಲುದಾರ ಅಥವಾ ಜಾಗರೂಕ ನಾಗರಿಕರು ಪಟ್ಟಿಯನ್ನು ಪರಿಶೀಲಿಸಲು ಅಥವಾ ಯಾವುದೇ ತಪ್ಪಾದ ಸೇರ್ಪಡೆ, ಅಳಿಸುವಿಕೆ ಅಥವಾ ಹೆಸರುಗಳ ಲೋಪವನ್ನು ಗುರುತಿಸಲು ಮತ್ತು ಆಕ್ಷೇಪಿಸಲು ಅಸಾಧ್ಯ ಮಾಡುತ್ತದೆ” ಎಂದು ಅದು ಹೇಳುತ್ತದೆ.

SIR ಪ್ರಕ್ರಿಯೆಯ ಸಮಯದಲ್ಲಿ BLO ಗಳು ನೀಡುವ ಗಣತಿ ನಮೂನೆಗಳು ಮನೆಯ ವಿಳಾಸವನ್ನು ಮತ್ತು ಅನೇಕ ಸಂದರ್ಭಗಳಲ್ಲಿ, ಮನೆ ಸಂಖ್ಯೆಯನ್ನು ಸಹ ಒಳಗೊಂಡಿರುವುದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಸದರಿ ನಮೂನೆಗಳನ್ನು ವ್ಯಕ್ತಿಯ ಹೆಸರು ಮತ್ತು ಚುನಾವಣಾ ಫೋಟೋ ಗುರುತಿನ ಚೀಟಿ (EPIC) ಸಂಖ್ಯೆಯನ್ನು ಮಾತ್ರ ಆಧರಿಸಿ ರೂಪಿಸಲಾಗಿದೆ. ಅಂತಹ ವ್ಯಕ್ತಿಗಳು ವಾಸ್ತವವಾಗಿ ಸದರಿ ಸ್ಥಳಗಳ ಸಾಮಾನ್ಯ ನಿವಾಸಿಗಳೇ ಎಂಬುದನ್ನು ಪರಿಶೀಲಿಸಲು BLO ಗಳಿಗೆ ನಿರ್ದೇಶಿಸಲಾಗಿಲ್ಲ. ಗಣತಿ ನಮೂನೆಯನ್ನು ಹಳೆಯ ವಿಳಾಸದಲ್ಲಿ ನೀಡಲಾಗುತ್ತದೆ (ಅಲ್ಲಿ ಅವರ ಹೆಸರು ಈಗಾಗಲೇ ಸೇರಿಸಲ್ಪಟ್ಟಿದ್ದರೂ) ಮತ್ತು ಅವರು ಸ್ಥಳಾಂತರಗೊಂಡ ಹೊಸ ವಿಳಾಸದಲ್ಲಿ ಅಲ್ಲ.

ಇದಕ್ಕೆ ವ್ಯತಿರಿಕ್ತವಾಗಿ, ಹೊಸ ಪ್ರಕ್ರಿಯೆಯ ಪ್ರಯೋಜನವೆಂದರೆ ಅದು ಪಟ್ಟಿಯಲ್ಲಿರುವ ದೋಷಗಳನ್ನು ಪುನರಾವರ್ತಿಸುವುದಿಲ್ಲ ಮತ್ತು SIR ಮೂಲಕ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿರುವ ಸೇರ್ಪಡೆ ಮತ್ತು ಹೊರಗಿಡುವ ದೋಷಗಳಿಗೆ ಕಾರಣವಾಗುವುದಿಲ್ಲ. ಹೊಸ ಪ್ರಕ್ರಿಯೆಗೆ ನಿಗದಿತ ನಮೂನೆ 4 ಅನ್ನು ಭರ್ತಿ ಮಾಡಬೇಕಾಗುತ್ತದೆ, ಗಣತಿ ನಮೂನೆಯನ್ನು ಭರ್ತಿ ಮಾಡುವ ಅಗತ್ಯವಿಲ್ಲ.

ಮನೆ-ಮನೆ ಸಮೀಕ್ಷೆಯ ಪ್ರಯೋಜನವೆಂದರೆ ಅದು ಪಟ್ಟಿಯಲ್ಲಿರುವ ದೋಷಗಳನ್ನು ಪುನರಾವರ್ತಿಸುವುದಿಲ್ಲ ಮತ್ತು SIR ಮೂಲಕ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿರುವ ಸೇರ್ಪಡೆ ಮತ್ತು ಹೊರಗಿಡುವ ದೋಷಗಳಿಗೆ ಕಾರಣವಾಗುವುದಿಲ್ಲ. ಹೊಸ ಪ್ರಕ್ರಿಯೆಗೆ ನಿಗದಿತ ನಮೂನೆ 4 ಅನ್ನು ಭರ್ತಿ ಮಾಡಬೇಕಾಗುತ್ತದೆ, ಗಣತಿ ನಮೂನೆಯನ್ನು ಭರ್ತಿ ಮಾಡುವ ಅಗತ್ಯವಿಲ್ಲ.

ಹೊಸದಾಗಿ ಮತಗಟ್ಟೆಗೆ ಸೇರ್ಪಡೆಗೊಂಡವರು ಸೇರಿದಂತೆ, ಮತಗಟ್ಟೆ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬರನ್ನೂ ನಮೂನೆ 4 ಸೇರಿಸಿಕೊಳ್ಳುವುದನ್ನು ಖಚಿತಪಡಿಸುತ್ತದೆ. ತಮ್ಮ ಸಾಮಾನ್ಯ ವಾಸಸ್ಥಳದಲ್ಲಿ ತಮ್ಮ ಹೆಸರುಗಳನ್ನು ಉಳಿಸಿಕೊಳ್ಳಲು ಬಯಸುವ ತಾತ್ಕಾಲಿಕ ವಲಸಿಗರನ್ನು ಸಹ ನಮೂನೆ 4 ರಲ್ಲಿ ಎಣಿಸಲಾಗುತ್ತದೆ ಮತ್ತು ಕರಡು ಪಟ್ಟಿಯಲ್ಲಿ ಸ್ಥಾನ ನೀಡಲಾಗುತ್ತದೆ. ಈ ಕ್ರಿಯೆಯ ಮನೆ-ಮನೆಯ ಬೇಟಿಯ ಸ್ವರೂಪದಿಂದಾಗಿ ಸ್ಥಳಾಂತರಗೊಂಡವರನ್ನು ತೆಗೆದುಹಾಕಲಾಗುತ್ತದೆ.

ಆದರೆ ಹಿಂದಿನ ಪಟ್ಟಿಯ ಆಧಾರದ ಮೇಲೆ SIR ಅನ್ನು ಆಧರಿಸಿದರೆ, ಸ್ಥಳಾಂತರಗೊಂಡವರ ಹೆಸರುಗಳು ಪುನರಾವರ್ತನೆಯಾಗುತ್ತವೆ. ಆದರೆ ಹೊಸದಾಗಿ ಸ್ಥಳಾಂತರಗೊಂಡವರ ಹೆಸರುಗಳು ಉಲ್ಲೇಖವನ್ನು ಪಡೆಯುವುದಿಲ್ಲ.

ಪಟ್ಟಿಯಿಂದ ಹೊರಗುಳಿದವರೆಲ್ಲರೂ ನಮೂನೆ 6 ಅನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ವಲಸಿಗರು ಗಣತಿ ನಮೂನೆಗಳನ್ನು ಭರ್ತಿ ಮಾಡಬೇಕು. ಗಣತಿ ನಮೂನೆಗಳನ್ನು ಹಿಂತಿರುಗಿಸದಿದ್ದರೆ ಅವರ ಹೆಸರುಗಳನ್ನು ಸೇರಿಸಲಾಗುವುದಿಲ್ಲ. ಇದು ಕೆಲಸಕ್ಕಾಗಿ ನಗರಗಳಿಗೆ ವಲಸೆ ಹೋಗುವ ಗ್ರಾಮೀಣ ಕಾರ್ಮಿಕರಿಗೆ ಹೆಚ್ಚಿನ ತೊಂದರೆಯನ್ನುಂಟು ಮಾಡುತ್ತದೆ.

ನಮೂನೆ 6 ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದವರ ಹೆಸರುಗಳನ್ನು ಯಾವುದೇ ವಿಚಾರಣೆಗೆ ಕರೆಯಲಾಗುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಗಣತಿ ನಮೂನೆಗಳನ್ನು ಸ್ವೀಕರಿಸಿದವರಿಗೆ ಮಾತ್ರ ವಿಚಾರಣೆಗೆ ನೋಟಿಸ್ ನೀಡಲಾಗುತ್ತದೆ.

ಎಸ್‌ಐಆರ್ ಕೈಗೊಂಡಿರುವ ಪ್ರಸ್ತುತ ಮತ್ತು ಹಿಂದಿನ ಪಟ್ಟಿಯ ನಡುವಿನ ಮ್ಯಾಪಿಂಗ್ ಕಾರ್ಯ ಮತ್ತು ಅಜ್ಜ-ಅಜ್ಜಿ, ಪೋಷಕರು ಮತ್ತು ಮಕ್ಕಳ ನಡುವಿನ ವಯಸ್ಸಿನ ವ್ಯತ್ಯಾಸಗಳನ್ನು ಪ್ರಶ್ನಿಸುವ ಹೊಸ ಕಾರಣಗಳು ಯಾವುದೇ ಪೂರ್ವನಿದರ್ಶನಗಳಿಲ್ಲದ ಕೋಟ್ಯಂತರ ‘ತಾರ್ಕಿಕ ವ್ಯತ್ಯಾಸ’ಗಳಿಗೆ ಕಾರಣವಾಗಿವೆ. ಇವುಗಳನ್ನು ಪರಿಹರಿಸದಿದ್ದರೆ ಕೋಟ್ಯಂತರ ಅಳಿಸುವಿಕೆಗಳಿಗೆ ಕಾರಣವಾಗಬಹುದು. ಕೆಲವು ವ್ಯತ್ಯಾಸಗಳನ್ನು ಗುರುತಿಸಲಾಗಿರುವ ಕೋಟ್ಯಂತರ ಜನರ ವಿಚಾರಣೆಗಳನ್ನು ನಡೆಸುವ ಸಂಪೂರ್ಣ ಕೆಲಸಕ್ಕೆ ನೀಡಲಾದ ಅತಿ ಕಡಿಮೆ ಸಮಯವು ಯಾವುದೇ ತರ್ಕದ ಆಧಾರ ಹೊಂದಿಲ್ಲ.

ಹೊಸ ಮನೆ-ಮನೆ ಸಮೀಕ್ಷೆಯನ್ನು ಅನುಸರಿಸಿದ್ದರೆ, ನಕ್ಷೆ ರಚನೆಯ (mapping) ಅಗತ್ಯವಿರಲಿಲ್ಲ. ಕರ್ನಾಟಕ ಸರ್ಕಾರವು ಸಿಇಒ ಅವರನ್ನು ಬೀದಿವಾರು ಮನೆ-ಮನೆ ಸಮೀಕ್ಷೆಯನ್ನು ಅಳವಡಿಸಿಕೊಳ್ಳುವಂತೆ ಕೇಳಿಕೊಂಡಿದ್ದು ಶ್ಲಾಘನೀಯ, ಇದು ಹೊಸ ಸಮೀಕ್ಷೆಗೆ ಅನುಗುಣವಾಗಿದೆ.

(ಕಾತ್ಯಾಯಿನಿ ಚಾಮರಾಜ್ ಅವರು ಸಿವಿಕ್-ಬೆಂಗಳೂರಿನ ಕಾರ್ಯನಿರ್ವಾಹಕ ಟ್ರಸ್ಟಿ ಮತ್ತು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನ ಕರ್ನಾಟಕ ರಾಜ್ಯ ಸಂಯೋಜಕರಾಗಿದ್ದಾರೆ. ಅವರ ಮೂಲಇಂಗ್ಲಿಷ್ ಲೇಖನ  ದಿನ್ಯೂಸ್‍ಮಿನಿಟ್‍.ಕಾಂ ನಲ್ಲಿ ಪ್ರಕಟವಾಗಿದೆ. ಅನು: ಜಿ.ಎಸ್‍ಮಣಿ .)

 

Donate Janashakthi Media

Leave a Reply

Your email address will not be published. Required fields are marked *