ನವದೆಹಲಿ: ಯುಜಿಸಿ ನೆಟ್ ಜೂನ್ 2026 ಪರೀಕ್ಷೆಯ ತಾತ್ಕಾಲಿಕ ಉತ್ತರ ಕೀ ಮತ್ತು ಫಲಿತಾಂಶಗಳನ್ನು ತಕ್ಷಣ ಪ್ರಕಟಿಸುವಂತೆ ಸಂಸದ ಡಾ. ವಿ. ಶಿವದಾಸನ್ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಪತ್ರ ಬರೆದಿದ್ದಾರೆ.
ಪರೀಕ್ಷೆ ನಡೆದ 30 ದಿನಗಳಾದರೂ ಉತ್ತರ ಕೀ ಹಾಗೂ ಫಲಿತಾಂಶ ಪ್ರಕಟವಾಗದಿರುವುದು ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಆತಂಕ ಉಂಟುಮಾಡಿದೆ. ಈ ವಿಳಂಬದಿಂದ ಫೆಲೋಶಿಪ್‌ಗಳು, ಸಹಾಯಕ ಪ್ರಾಧ್ಯಾಪಕರ ಅರ್ಹತೆ ಹಾಗೂ ಶೈಕ್ಷಣಿಕ ಅವಕಾಶಗಳಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.
ಇದನ್ನೂ ಓದಿ: ಆಗಸ್ಟ್ 13ರಿಂದ 27ರವರೆಗೆ ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನ
ಪರೀಕ್ಷೆಗಳ ನಿರ್ವಹಣೆಯಲ್ಲಿ ಈಗಾಗಲೇ ಹಲವು ಅಸಮರ್ಪಕತೆಗಳಿಗೆ ಟೀಕೆಗೊಳಗಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತನ್ನ ಕಾರ್ಯಪದ್ದತಿಯಲ್ಲಿ ಸುಧಾರಣೆ ತರದಿರುವುದನ್ನು ಈ ವಿಳಂಬ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯುಜಿಸಿ ನೆಟ್ ಜೂನ್ 2026ರ ಉತ್ತರ ಕೀ ಮತ್ತು ಫಲಿತಾಂಶಗಳನ್ನು ತಕ್ಷಣ ಪ್ರಕಟಿಸುವಂತೆ ಎನ್‌ಟಿಎಗೆ ಸೂಚಿಸಲು ಕೇಂದ್ರ ಶಿಕ್ಷಣ ಸಚಿವಾಲಯವನ್ನು ಅವರು ಮನವಿ ಮಾಡಿದ್ದಾರೆ.
ಇದನ್ನೂ ನೋಡಿ: NEET ಹೋರಾಟದ ಒಳನೋಟ | ಗೋದಿ ಮೀಡಿಯಾ ನ್ಯೂಸ್‌ರೂಮ್‌ನಲ್ಲಿ ಸ್ಕ್ರಿಪ್ಟ್ ಹೇಗೆ ರೂಪುಗೊಳ್ಳುತ್ತಿತ್ತು? | ಗುರುರಾಜ
