ಸಿಪಿಐಎಂ ಪ್ರಣಾಳಿಕೆ | ಯುಎಪಿಎ, ಸಿಎಎ ರದ್ದು : ಶಿಕ್ಷಣ, ಉದ್ಯೋಗ, ಆರೋಗ್ಯ ಖಾತ್ರಿ ಭರವಸೆ

ಬೆಂಗಳೂರು : ಬಿಜೆಪಿ ಮತ್ತು ಅದರ ಮೈತ್ರಿಕೂಟವನ್ನು ಸೋಲಿಸುವುದು ಪ್ರತಿಯೊಬ್ಬ ದೇಶಪ್ರೇಮಿಯ ಮೊದಲ ಹಾಗೂ ಅತ್ಯಂತ ಅತ್ಯಗತ್ಯವಾದ ಕರ್ತವ್ಯ ಎಂಬ ಸ್ಪಷ್ಟ ತಿಳುವಳಿಕೆಯೊಂದಿಗೆ ಸಿಪಿಐ(ಎಂ) ಪಕ್ಷವು ತನ್ನ ಪ್ರಣಾಳಿಕೆಯನ್ನು ಭಾರತದ ಜನರ ಮುಂದೆ ಇಡುತ್ತಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾತ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಲೋಕಸಭಾ ಚುನಾವಣೆಗೆ ಕೇಂದ್ರ ಸಮಿತಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆ  ಕನ್ನಡ ಅವತರಣಿಕೆಯ ಬಿಡುಗಡೆ ಗೊಳಿಸಿ ಮಾತನಾಡುತ್ತಾ, ಕೇಂದ್ರದಲ್ಲಿ ಜಾತ್ಯತೀತ  ಸರ್ಕಾರವೊಂದನ್ನು ಸ್ಥಾಪಿಸಲು ಸಹಾಯವಾಗುವಂತೆ ತನ್ನ ಶಕ್ತಿಮೀರಿ ಸಾಧ್ಯವಾದುದೆಲ್ಲ ಪ್ರಯತ್ನವನ್ನು ಕೈಗೊಳ್ಳಲು ಸಿಪಿಐ(ಎಂ) ಪ್ರತಿಜ್ಞೆ ಮಾಡುತ್ತದೆ. ಇದಕ್ಕಾಗಿ ಮತ್ತು ಜನಪರ ನೀತಿಗಳನ್ನು ಖಾತ್ರಿಪಡಿಸುವ ಸಲುವಾಗಿ ಸಂಸತ್ತಿನಲ್ಲಿ ಒಂದು ಶಕ್ತಿಯುತವಾದ  ಸಿಪಿಐ(ಎಂ)ನ ಉಪಸ್ಥಿತಿಯ ಅವಶ್ಯಕತೆ ಎಂದರು.

ಸಂವಿಧಾನದ ನಾಲ್ಕು ಆಧಾರ ಸ್ತಂಭಗಳನ್ನು – ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸಾರ್ವಭೌಮತ್ವ, ಒಕ್ಕೂಟವಾದ ಮತ್ತು ಸಾಮಾಜಿಕ ನ್ಯಾಯ – ವ್ಯವಸ್ಥಿತವಾಗಿ ಕಳಚಿ ಹಾಕುತ್ತಿರುವ ಪ್ರಕ್ರಿಯೆಗೆ ಭಾರತ ಇಂದು ಸಾಕ್ಷಿಯಾಗುತ್ತಿದೆ. ಭಾರತದ ದುಡಿಯುವ ಜನರ ಹಕ್ಕುಗಳನ್ನು ನಾಶಮಾಡಲು ಮೋದಿ ಸರ್ಕಾರದ ಸರ್ವಾಧಿಕಾರಿ-ಕೋಮುವಾದಿ ಆಳ್ವಿಕೆಯು ಫ್ಯಾಸಿಸ್ಟ್ ಮಾದರಿಯ ವಿಧಾನಗಳನ್ನು ಬಳಸುತ್ತಿದೆ; ಸರ್ಕಾರದ ಅಧಿಕಾರ ಯಂತ್ರಗಳನ್ನು ಮತ್ತು ತನ್ನ ಸಂಸದೀಯ ಬಹುಮತವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ; ಆ ಮೂಲಕ ಭಾರತವನ್ನು ಜಗತ್ತಿನ ಅತ್ಯಂತ ಅಸಮಾನ ಸಮಾಜವನ್ನಾಗಿ ಪರಿವರ್ತಿಸುತ್ತಿದೆ; ಸಂಕುಚಿತ ಮನೋಭಾವದ ಆಧಾರದಲ್ಲಿ ಜನರಲ್ಲಿ ವಿಭಜನೆ ಉಂಟು ಮಾಡುವ ಸಲುವಾಗಿ ಅವರ ಮೇಲೆ ತನ್ನ ವಿಷಪೂರಿತ ಕೋಮುವಾದಿ ಸಿದ್ಧಾಂತವನ್ನು ಹೇರುತ್ತಿದೆ ಎಂದರು.

ಆ ಕಾರಣದಿಂದ 18 ನೇ ಲೋಕಸಭಾ ಚುನಾವಣೆಯು ನಿರ್ಣಾಯಕ ಪ್ರಾಮುಖ್ಯತೆಯನ್ನು ಪಡೆಯುತ್ತದೆ; ‘ನಾವು ಭಾರತದ ಜನರು’ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಭಾರತದ ಸಂವಿಧಾನದಲ್ಲಿ ಘೋಷಿಸಿರುವಂತೆ ಭಾರತೀಯ ಗಣತಂತ್ರದ ಗುಣಲಕ್ಷಣಗಳಾದ ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಸಾಧ್ಯವೇ ಎನ್ನುವುದನ್ನು ಅದರ ಫಲಿತಾಂಶವು ನಿರ್ಧರಿಸುತ್ತದೆ. ಭಾರತೀಯ ಗಣತಂತ್ರದ ಗುಣಲಕ್ಷಣಗಳಾದ ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವವನ್ನು ಒಂದು ವಿವೇಕರಹಿತವಾದ ಅಸಹಿಷ್ಣುತೆ, ದ್ವೇಷ ಹಾಗೂ ಹಿಂಸೆಯ ಆಧಾರದ ಸರ್ವಾಧಿಕಾರಿ ಫ್ಯಾಸಿಸ್ಟ್ ಮಾದರಿಯ ಹಿಂದುತ್ವ ರಾಷ್ಟ್ರವನ್ನಾಗಿ ರೂಪಾಂತರಿಸುವ ಬಿಜೆಪಿಯ ಪ್ರಯತ್ನದ ವಿರುದ್ಧ ಭಾರತವನ್ನು ರಕ್ಷಿಸುವ ಬಗ್ಗೆ ಈ ಬಾರಿಯ ಲೋಕಸಭಾ ಚುನಾವಣೆಯು ಇದೆ ಎನ್ನುವುದರ ಬಗ್ಗೆ ನಮಗೆ ಅನುಮಾನವೇ ಬೇಡ. ಭಾರತದ ನರನಾಡಿಗಳಲ್ಲಿ ಕೋಮುದ್ವೇಷವನ್ನು ಹರಡುತ್ತಿರುವ ಬಿಜೆಪಿಯ ಪಿತೃ ಸಂಘಟನೆಯಾದ ಆರ್.ಎಸ್.ಎಸ್. ಬಹಿರಂಗವಾಗಿ ಘೋಷಿಸಿದ ಗುರಿ ಅದಾಗಿದೆ. ಹಿಂದೆಂದೂ ಕಂಡು ಕೇಳರಿಯದಂತಹ ರೀತಿಯಲ್ಲಿ ಆರ್.ಎಸ್.ಎಸ್.  ಈಗ ಭಾರತದ ಉದ್ದಕ್ಕೂ ಇರುವ ಪ್ರತಿಯೊಂದು ಸಂಘ ಸಂಸ್ಥೆಗಳನ್ನು ತನ್ನ ವಶಕ್ಕೆ ಪಡೆದಿದೆ ಎಂದು ಆರೋಪಿಸಿದರು.

ಇದನ್ನೂ ಓದಿ :ಸುಳ್ಳು ಹೇಳಿದ್ದೆ ಬಿಜೆಪಿಯ ಹತ್ತು ವರ್ಷದ ಸಾಧನೆ – ರಾಘವಲು

ಕರ್ನಾಟಕದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಎಂ.ಪಿ ಮುನಿವೆಂಕಟಪ್ಪ ಸಿಪಿಐಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.  ಅವರನ್ನು ಗೆಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡುತ್ತಿದ್ದೇವೆ. ಉಳಿದ 28 ಕ್ಷೇತ್ರಗಳಲ್ಲಿ ಬಿಜಿಪಿ, ಜೆಡಿಎಸ್ ಮೈತ್ರಿ ಸೋಲಿಸುವುದಕ್ಕಾಗಿ ಇಂಡಿಯಾ ಕೂಟಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದರು.

ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೆ ಪ್ರಕಾಶ್‌ ಮಾತನಾಡಿ, 2019ರ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ನಾವು ರದ್ದುಗೊಳಿಸುತ್ತೇವೆ. ದ್ವೇಷ ಭಾಷಣ ಮತ್ತು ಅಪರಾಧಗಳ ವಿರುದ್ಧದ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ.  ಉದ್ಯೋಗ ಖಾತ್ರಿ ಯೋಜನೆ MGNREGA ಗೆ ಬಜೆಟ್ ಹಂಚಿಕೆಯನ್ನು ದ್ವಿಗುಣಗೊಳಿಸಬೇಕು ಮತ್ತು ನಗರ ಉದ್ಯೋಗವನ್ನು ಖಾತರಿಪಡಿಸುವ ಹೊಸ ಕಾನೂನನ್ನು ಕಾನೂನುಬದ್ಧಗೊಳಿಸಲು ಸಂಸತ್ತಿನಲ್ಲಿ ಹೋರಾಟ ನಡೆಸುತ್ತೇವೆ ಎಂದರು.

ಸಿಪಿಐ(ಎಂ) ಪ್ರಣಾಳಿಕೆಯ ಪ್ರಮುಖಾಂಶಗಳು

-ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯತೀತ ತತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಿ.
-ರೈತರು ತಮ್ಮ ಉತ್ಪನ್ನವನ್ನು ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡುವ ಹಕ್ಕನ್ನು ಜಾರಿಗೊಳಿಸಿ, ಇದು ಒಟ್ಟು ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಪ್ರತಿಶತ ಅಧಿಕವಾಗಿದೆ.
– ಕಾರ್ಮಿಕರಿಗೆ ಶಾಸನಬದ್ಧ ಕನಿಷ್ಠ ವೇತನ ರೂ. ತಿಂಗಳಿಗೆ 26,000
-ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆಯು ಪ್ರತಿ ವ್ಯಕ್ತಿಗೆ 10 ಕೆಜಿ ಆಹಾರ ಧಾನ್ಯಗಳನ್ನು ಒದಗಿಸಲು – 5 ಕೆಜಿ ಉಚಿತವಾಗಿ ಮತ್ತು 5 ಕೆಜಿ ಸಬ್ಸಿಡಿ ದರದಲ್ಲಿ.
– ಉಚಿತ ಆರೋಗ್ಯ ರಕ್ಷಣೆಯ ಹಕ್ಕು; ಖಾಸಗಿ ವಿಮೆ ನೇತೃತ್ವದ ಆರೋಗ್ಯ ರಕ್ಷಣೆಯನ್ನು ಕೊನೆಗೊಳಿಸಿ –
ಜನಗಣತಿ ಮತ್ತು ಡಿಲಿಮಿಟೇಶನ್‌ಗೆ ಲಿಂಕ್ ಮಾಡದೆ ಸಂಸತ್ತಿನಲ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಗಾಗಿ ಕಾನೂನನ್ನು ತಕ್ಷಣವೇ ಜಾರಿಗೊಳಿಸಿ
– ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ರದ್ದುಗೊಳಿಸಿ.
– ಸಾಂವಿಧಾನಿಕ ಹಕ್ಕಿನಂತೆ ಕೆಲಸ ಮಾಡುವ ಹಕ್ಕು; ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುವುದು.
ಕನಿಷ್ಠ ವೇತನದ ಅರ್ಧಕ್ಕಿಂತ ಕಡಿಮೆಯಿಲ್ಲದ ಕನಿಷ್ಠ ಮಾಸಿಕ ಪಿಂಚಣಿಯೊಂದಿಗೆ ವೃದ್ಧಾಪ್ಯ ಪಿಂಚಣಿ, ಅಥವಾ, ರೂ. ಎಲ್ಲಾ ಹಿರಿಯ ನಾಗರಿಕರಿಗೆ ತಿಂಗಳಿಗೆ 6,000, ಯಾವುದು ಹೆಚ್ಚು.
-ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣವನ್ನು ನಿಲ್ಲಿಸಿ ಮತ್ತು
ರಕ್ಷಣೆ, ಇಂಧನ, ರೈಲ್ವೆ ಮತ್ತು ಮೂಲ ಸೇವೆಗಳಲ್ಲಿ ಖಾಸಗೀಕರಣವನ್ನು ಹಿಮ್ಮೆಟ್ಟಿಸುವುದು.
-ಎಸ್‌ಸಿ ಎಸ್‌ಟಿಗಳು, ಒಬಿಸಿಗಳು ಮತ್ತು ಅಂಗವಿಕಲರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ.
– ಶ್ರೀಮಂತ ಮತ್ತು ಕಾರ್ಪೊರೇಟ್ ಲಾಭಗಳ ಮೇಲೆ ತೆರಿಗೆಗಳನ್ನು ಹೆಚ್ಚಿಸಿ; ಅತಿ ಶ್ರೀಮಂತರಿಗೆ ಸಂಪತ್ತು ತೆರಿಗೆಯನ್ನು ಮರುಸ್ಥಾಪಿಸಿ ಮತ್ತು ಪಿತ್ರಾರ್ಜಿತ ತೆರಿಗೆಯನ್ನು ಪರಿಚಯಿಸಿ; ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯನ್ನು ಮರುಸ್ಥಾಪಿಸಿ.
-ಆಂಶಿಕ ಪಟ್ಟಿ ವ್ಯವಸ್ಥೆಯೊಂದಿಗೆ ಅನುಪಾತ ಪ್ರಾತಿನಿಧ್ಯವನ್ನು ಪರಿಚಯಿಸುವ ಮೂಲಕ ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವುದು; ಚುನಾವಣಾ ವೆಚ್ಚಗಳಿಗಾಗಿ ರಾಜ್ಯದಿಂದ ಹಣ.

 

Donate Janashakthi Media

Leave a Reply

Your email address will not be published. Required fields are marked *