ಸುಳ್ಳು ಹೇಳಿದ್ದೆ ಬಿಜೆಪಿಯ ಹತ್ತು ವರ್ಷದ ಸಾಧನೆ – ರಾಘವಲು

ಚಿಕ್ಕಬಳ್ಳಾಪುರ : ಸುಳ್ಳು ಹೇಳಿದ್ದೆ ಬಿಜೆಪಿಯ ಹತ್ತು ವರ್ಷದ ಸಾಧನೆ ಎಂದು ಸಿಪಿಐಎಂ ಪೊಲಿಟ್ ಬ್ಯೂರೋ ಸದಸ್ಯ ಬಿ ವಿ ರಾಘವಲು ಹೇಳಿದರು. ರಾಘವಲು

ಚಿಕ್ಕಬಳ್ಳಾಪುರ ಸಿಪಿಐಎಂ ಅಭ್ಯರ್ಥಿ ಎಂ.ಪಿ ಮುನಿವೆಂಕಟಪ್ಪ ನಾಮಪತ್ರ ಮತ್ತು ಪ್ರಚಾರಾರ್ಥ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಬಿಜೆಪಿ ಹತ್ತು ವರ್ಷದಲ್ಲಿ ಸುಳ್ಳಿನ ಮನೆ ಕಟ್ಟಿ, ಭ್ರಷ್ಟಾಚಾರದ ಮೂಲಕ ದೇಶವನ್ನು ಹಿಮ್ಮುಖವಾಗಿಸಿದೆ ಎಂದರು. ರಾಘವಲು

 

ಈ ಹತ್ತು ವರ್ಷದಲ್ಲಿ ಜನರ ಸಂಕಷ್ಟಗಳನ್ನು ನಿವಾರಿಸುವ ಯಾವ ಯೋಜನೆಗಳು ಬರಲಿಲ್ಲ. ರೈತರನ್ನು, ಕಾರ್ಮಿಕರನ್ನು, ಕೂಲಿಕಾರರನ್ನು, ದಲಿತರನ್ನು, ಅಲ್ಪಸಂಖ್ಯಾತರನ್ನು ಬಲ ಪಡಿಸದ ಮೋದಿ, ಆದಾನಿ, ಅಂಬಾನಿಯವರ ಆದಾಯವನ್ನು ದುಪ್ಪಟ್ಟುಗೊಳಿಸಿದರು ಎಂದು ಖಾರವಾಗಿ ಮತನಾಡಿದರು.

ಚುನಾವಣಾ ಬಾಂಡ್ ವಿರುದ್ಧ ಕೋರ್ಟ್ನಲ್ಲಿ ಹೋರಾಡಿ ಹಗರಣವನ್ನು ಬಯಲಿಗೆಳೆದೆದ್ದು ಸಿಪಿಐಎಂ ಪಕ್ಷ. ನಾನು ತಿನ್ನೂವುದಿಲ್ಲ, ಬೇರೆಯವರನ್ನು ತಿನ್ನಲು ಬಿಡುವುದಿಲ್ಲ ಎನ್ನುತ್ತಲೆ ಮೋದಿ 8 ಸಾವಿರ ಕೋಟಿ ರೂಗಳ ಚುನಾವಣಾ ಬಾಂಡ್ ನ್ನು ತಮ್ಮ ಪಕ್ಷಕ್ಕೆ ಕೊಡಿಸಿದರು. ದಾನಿಗಳಿಗೆ, ಇಡಿ, ಐಟಿ, ಸಿಬಿಐ ನಂತಹ ಸಾಂವಿಧಾನಿಕ ಸಂಸ್ಥೆಗಳ ಮೂಲಕ ಹೆದರಿಸಿ ಹಣ ಲೂಟಿ ಮಾಡಿದ್ದಾರೆ ಎಂದರು.

ಧೋರಣೆಯ ವಿಚಾರದಲ್ಲಿ ಕಾಂಗ್ರೆಸ್ ಕೂಡಾ ಅದೇ ರೀತಿ ಇದೆ. ಕರ್ನಾಟಕದಲ್ಲಿ ತೆರಿಗೆ ಅನ್ಯಾಯವಗಿದೆ ಎಂದು ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷ, ಕೇರಳ ಸರ್ಕರ ಇದೇ ವಿಚಾರದಡಿ ಹೋರಾಟ ಮಾಡಿದಾಗ ಬೆಂಬಲ ನೀಡಲಿಲ್ಲ. ಹಾಗಾಗಿ ಚಿಕ್ಕಬಳ್ಳಾಪುರದಲ್ಲಿ ಸಿಪಿಐಎಂ ಅಭ್ಯರ್ಥಿಗೆ ನೀವು ಮತಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಸಿಪಿಐಎಂ ಅಭ್ಯರ್ಥಿ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ಗೆ ಜನರ ಕಷ್ಟಗಳನ್ನು ನಿವಾರಿಸಲು ಆಸಕ್ತಿ ಇಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನೀರಾವರಿ ಸೇರದಂತೆ ನೂರಾರು ಸಮಸ್ಯೆಗಳಿವೆ. ಎರಡು ಪಕ್ಷಗಳಿಂದ ಸಂಸದರಾಗಿ ಹೋದವರು ಈ ಕ್ಷೇತ್ರಕ್ಕೆ ಯಾವುದೆ ಕೊಡುಗೆ ನೀಡಿಲ್ಲ ಎಂದರು. ರಾಘವಲು

ಜನರ ಬೇಡಿಕೆಯನ್ನಿಟ್ಟುಕೊಂಡು ಸಿಪಿಐಎಂ ಮಾತ್ರ ಹೋರಾಟ ನಡೆಸಿದೆ. ಶಾಶ್ವತ ನೀರಾವರಿಗಾಗಿ ಸಿಪಿಐಎಂ ನಡೆಸಿದ ಹೋರಾಟ ಸರ್ಕಾರದ ಗಮನ ಸೆಳೆದಿತ್ತು. ಪರ್ಯಾಯ ನೀತಿಗಳಿಗಾಗಿ ಸಿಪಿಐಎಂ ಬೆಂಬಲಿಸಿ, ಜನಪರ ಹೋರಾಟಗಳ ಪ್ರಭಾವ ನನಗೆ ಮತಗಳಾಗಿ ಪರಿವರ್ತನೆ ಆಗಲಿವೆ ಎಂದರು.

ಇದನ್ನು ಓದಿ : ಮತ್ತೊಬ್ಬ ಬಿಜೆಪಿ ನಾಯಕಿಯಿಂದ ಸಂವಿಧಾನ ಬದಲಾಯಿಸುವ ಹೇಳಿಕೆ

ಸಿಪಿಐಎಂ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್ ವರಲಕ್ಷ್ಮಿ ಮಾತನಾಡಿ, ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುವ ನೀತಿಗಳ ಮೂಲಕ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಮೂಲಕ ಜನರನ್ನು ವಂಚಿಸುತ್ತಿದೆ. ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಪದೆ ಪದೆ ಛೀಮಾರಿ ಹಾಕುತ್ತಿದೆ. ಆದರೂ ಅವರು ಇನ್ನೂ ಬುದ್ದಿ ಕಲಿತಿಲ್ಲ. ಮಹಿಳೆಯರ ಮೇಲೆ ಅತೀ ಹೆಚ್ಚು ದೌರ್ಜನ್ಯ ನಡೆಸಿದ್ದು ಮೋದಿ ಸರ್ಕಾರ. 45 ಕೋಟಿ ಮಹಿಳಾ ಮತದಾರರು ಇದ್ದಾರೆ. ಅವರನ್ನು ಮೆಚ್ಚಿಸುವುದಕ್ಕಾಗಿ ಮೀಸಲಾತಿಯನ್ನು ಮೂಗಿಗೆ ತುಪ್ಪದಂತೆ ಸವರಿದ್ದಾರೆ. ಯುವಕರಿಗೆ ಉದ್ಯೋಗ ನೀಡಲಿಲ್ಲ ಹಾಗಾಗಿ ಜನ ನಿಮ್ಮನ್ನು ಈ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲಿದ್ದಾರೆ ಎಂದರು.

ಸುಳ್ಳು ಹೇಳಿದ್ದೆ ಬಿಜೆಪಿಯ ಹತ್ತು ವರ್ಷದ ಸಾಧನೆ - ರಾಘವಲು

ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿ, ಕೇಂದ್ರದಲ್ಲಿ ಹತ್ತು ವರ್ಷ ಆಡಳಿತ ನಡೆಸಿದ ಬಿಜೆಪಿ, ಕೋಮುವಾದದ ಮೂಲಕ ಜನರ ಭಾವನೆಗಳನ್ನು ಕೆರಳಿಸಿ ಹಿಂಸೆ, ಗಲಭೆಗಳನ್ನು ಸೃಷ್ಟಿಸಿದೆ. ಇಂತಹ ಸರ್ಕಾರವನ್ನು ಕಿತ್ತೆಸೆಯುವ ಸಮಯ ಬಂದಿದೆ ಎಂದರು. ರಾಘವಲು

ಸಿಪಿಐಎಂ ಅಭ್ಯರ್ಥಿಯಾಗಿ ಎಂ.ಪಿ ಮುನಿವೆಂಕಟಪ್ಪ ನಾಮಪತ್ರ ಸಲ್ಲಿಸಿದರು

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಇನ್ನಷ್ಟು ಜನರ ಪರವಾಗಿರುವ ನೀತಿಗಳನ್ನು ರೂಪಿಸಬೇಕಿದೆ. ಗ್ಯಾರಂಟಿಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಆಗ್ರಹಿಸಿದರು.

ಸಿಪಿಐಎಂ ಜಿಲ್ಲಾ ಮುಖಂಡ ಡಾ. ಅನೀಲ್ ಕುಮಾರ್ ಮಾತನಾಡಿ, ಬಿಡಿಗಾಸು ಇಲ್ಲದ ಅಭ್ಯರ್ಥಿಯನ್ನು ನಾವು ಕಣಕ್ಕೆ ಇಳಿಸಿದ್ದೇವೆ. ಜನರೆ ನಮ್ಮ ಪಕ್ಷದ ಖರ್ಚನ್ನು ನೀಡಲಿದ್ದರೆ. ಈ ಚುನಾವಣೆಯನ್ನು ಜನರೆ ನಡೆಸಲಿದ್ದಾರೆ. ಈ ಚುನಾವಣೆಯಲ್ಲಿ ಕೋಮುವಾದಿ ಪಕ್ಷ ಬಿಜೆಪಿಯನ್ನು ಸೋಲಿಸಲಿದ್ದಾರೆ. ಸಿಪಿಐಎಂ ಕುಡಗೋಲು, ಸುತ್ತಿಗೆ ನಕ್ಷತ್ರದ ಗುರುತಿಗೆ ಜನ ಮತಹಾಕಲಿದ್ದಾರೆ ಎಂದರು

ವೇದಿಕೆಯ ಮೇಲೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮೀನಾಕ್ಷಿ ಸುಂದರಂ, ಕೆ.ಪ್ರಕಾಶ್, ಗೋಪಾಲಕೃಷ್ಣ ಅರಳಹಳ್ಳಿ, ಮುಖಂಡರಾದ ಚಂದ್ರ ತೇಜಸ್ವಿ, ಗೌರಮ್ಮ, ಮಂಜುನಾಥ್, ರಘುರಾಮ ರೆಡ್ಡಿ, ಜಯರಾಮ ರೆಡ್ಡಿ, ಸಿದ್ದಗಂಗಪ್ಪ ಸೇರಿದಂತೆ ಅನೇಕ ನಾಯಕರು ವೇದಿಕೆಯ ಮೇಲೆ ಇದ್ದರು. ರಾಘವಲು

ಠೆವಣಿ ನಿಧಿ ನೀಡಿದ ರೈತ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿಯ ಠೇವಣಿ ನಿಧಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎನ್. ವೀರಣ್ಣ ದೇವನಹಳ್ಳಿ ನೀಡಿದರು.

25 ಸಾವಿರ ರೂಗಳನ್ನು ದೇಣಿಗೆ ನೀಡಿದ ಅವರು, ರೈತ, ಕಾರ್ಮಿಕ, ಕೂಲಿಕಾರ, ಹಾಗೂ ಜನರಪರವಾಗಿ ಕೆಲಸ ಮಾಡುತ್ತಿರುವ ಏಕೈಕ ಪಕ್ಷ ಸಿಪಿಐಎಂ. ಹಾಗಾಗಿ ನನ್ನ ಕೃಷಿಯಲ್ಲಿ ಸಂಪಾದಿಸಿದ ಹಣವನ್ನು ದೇಣಿಗೆಯಾಗಿ ನೀಡಿದ್ದೇನೆ. ಸಿಪಿಐಎಂ ಪಕ್ಷ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್, ಬಿಜೆಪಿಗೆ ತೀವ್ರ ಪೈಪೋಟಿ ನೀಡಲಿದೆ ಎಂದರು.

 

ಇದನ್ನು ನೋಡಿ : 2024ರ ಚುನಾವಣೆಯಲ್ಲಿ BJP ಸೋಲಲಿದೆ, INDIA ಕೂಟ ಅಧಿಕಾರಕ್ಕೆ ಬರುತ್ತದೆ- ಬಿ ಕೆ ಹರಿಪ್ರಸಾದ್ Janashakthi Media

Donate Janashakthi Media

Leave a Reply

Your email address will not be published. Required fields are marked *