ಕೇರಳ : “ನಮಗೆ ಬೆದರಿಕೆ ಹಾಕಲು ಪ್ರಯತ್ನಿಸಬೇಡಿ – ಅದು ಕಾರ್ಯಕ್ರಮವನ್ನು ನಿಲ್ಲಿಸಲು ಸಾಧ್ಯವಿಲ್ಲ” ವಿರೋಧ ಪಕ್ಷಗಳು, ಬಿಜೆಪಿ ನಾಯಕರು ಮತ್ತು ಹಿಂದೂ ಸಂಘಟನೆಗಳ ತೀವ್ರ ಟೀಕೆಗಳ ಹೊರತಾಗಿಯೂ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸೆಪ್ಟೆಂಬರ್ 20, 2025 ರಂದು ಪಂಪಾದಲ್ಲಿ ಜಾಗತಿಕ ಅಯ್ಯಪ್ಪ ಸಂಗಮವನ್ನು ನಡೆಸಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ಆಗಸ್ಟ್ 27 ರಂದು ಹೇಳಿದರು. ಈ ಕಾರ್ಯಕ್ರಮವು ಟಿಡಿಬಿ ಉಪಕ್ರಮವಾಗಿದೆ ಎಂದು ಒತ್ತಿ ಹೇಳಿದರು.
ಕೇರಳ ಸರ್ಕಾರವು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಔಪಚಾರಿಕವಾಗಿ ಆಹ್ವಾನಿಸಿತ್ತು. ಸಚಿವರಾದ ಪಿ.ಕೆ. ಶೇಖರಬಾಬು ಮತ್ತು ಪಳನಿವೇಲ್ ತಿಯಾಗ ರಾಜನ್ ಸಂಗಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ಟಾಲಿನ್ ಕೇರಳ ಸಿಎಂಗೆ ತಿಳಿಸಿದರು.
ಇದನ್ನೂ ಓದಿ: ಅಲಾಸ್ಕಾ ದಲ್ಲಿ ಟ್ರಂಪ್-ಪುಟಿನ್ ಶೃಂಗಸಭೆ : ಉಕ್ರೇನ್ ಶಾಂತಿಯತ್ತ ನಡೆ ಸಾಧ್ಯವೇ?
“ಶಬರಿಮಲೆ ನಮ್ಮ ದೇಶದಲ್ಲಿ ಒಂದು ಮಾದರಿ ಯಾತ್ರಾ ಕೇಂದ್ರವಾಗಿದೆ. ಇದು ಜಾತಿ ಮತ್ತು ಧರ್ಮವನ್ನು ಮೀರಿದ ಸ್ಥಳವಾಗಿದೆ. ಎಲ್ಲಾ ಧರ್ಮದ ಜನರು ಅಲ್ಲಿಗೆ ಬರಬಹುದು. ಅಲ್ಲಿನ ಯಾತ್ರಿಕರು ಅಯ್ಯಪ್ಪನ ಮುಸ್ಲಿಂ ಒಡನಾಡಿ ಎಂದು ನಂಬಲಾದ ವಾವರ್ ಅವರನ್ನು ಭೇಟಿ ಮಾಡಲು ಹೋಗುತ್ತಾರೆ. ಲಕ್ಷಾಂತರ ಜನರು ಅಲ್ಲಿಗೆ ಬರುತ್ತಿದ್ದಾರೆ. ತಿರುವಾಂಕೂರು ದೇವಸ್ವಂ ಮಂಡಳಿಯು ತಮ್ಮ ಜಯಂತಿ ಆಚರಣೆಯ ಭಾಗವಾಗಿ ವಿಶ್ವ ಅಯ್ಯಪ್ಪ ಸಂಗಮವನ್ನು ನಡೆಸಲು ನಿರ್ಧರಿಸಿದೆ. ಇದು ದೇವಸ್ವಂ ಮಂಡಳಿಯ ಕಾರ್ಯಕ್ರಮ, ಸರ್ಕಾರಿ ಕಾರ್ಯಕ್ರಮವಲ್ಲ,” ಎಂದು ಅವರು ಹೇಳಿದರು.
ಬಹುಶಃ ಕೇರಳದ ಪರಿಸ್ಥಿತಿ ಬಗ್ಗೆ ರಾಜೀವ್‌ಗೆ ತಿಳುವಳಿಕೆ ಇಲ್ಲದಿರಬಹುದು. ಅದಕ್ಕಾಗಿಯೇ ಬೆದರಿಕೆಯ ರೀತಿಯಲ್ಲಿ ಮಾತನಾಡುತ್ತಾರೆ. ‘ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅಡ್ಡಿಪಡ್ಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮನವಿಯ ಮೇರೆಗೆ ಈಗಾಗಲೇ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೊರತುಪಡಿಸಿ ಇತರೆಲ್ಲ ಪ್ರಕರಣಗಳನ್ನು ಹಿಂಪಡೆಯಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಮೂಲ ಶಿಬಿರವಾದ ಪಂಪಾದಲ್ಲಿ ಸೆಪ್ಟೆಂಬರ್ 20, 2025 ರಂದು ಟಿಡಿಬಿಯ 75 ನೇ ವಾರ್ಷಿಕೋತ್ಸವದ ಅಂಗವಾಗಿ ಜಾಗತಿಕ ಅಯ್ಯಪ್ಪ ಸಂಗಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು ಮತ್ತು ಇತರ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ವಿಶ್ವದಾದ್ಯಂತ ಸುಮಾರು 3,000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಇದನ್ನೂ ನೋಡಿ: ಹೊಟ್ಟೆಗೆ ಹಿಟ್ಟಿಲ್ಲದ ಭಾರತವೂ, ಆರ್ಥಿಕವಾಗಿ 4ನೆ ಸ್ಥಾನ ಎನ್ನುವ ಜುಟ್ಟಿಗೆ ಮಲ್ಲಿಗೆ ಹೂವೂ.. Janashakthi Media
