ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮಹತ್ವದ ಸಡಗರದ ಸುದ್ದಿ ಹೊರಬಿದ್ದಿದೆ. ಶನಿವಾರದ ತರಗತಿ ವೇಳಾಪಟ್ಟಿಯಲ್ಲಿ ಏಕರೂಪತೆಯನ್ನು ತರಲು ಸರ್ಕಾರ ಹೊಸ ಸಮಯವನ್ನು ಅಧಿಕೃತವಾಗಿ ಜಾರಿಗೆ ತಂದಿದೆ. ನಿಯಮ
ಹೊಸ ಆದೇಶದಂತೆ, ಇನ್ನು ಮುಂದೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶನಿವಾರದ ತರಗತಿಗಳು ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿವೆ. ಇದುವರೆಗೆ ಜಿಲ್ಲೆಗಿಂತ ಜಿಲ್ಲೆಗೆ ಸಮಯದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಕೆಲವೆಡೆ ಬೆಳಗ್ಗೆ 8ರಿಂದ 12ರವರೆಗೆ, ಇನ್ನೂ ಕೆಲ ಶಾಲೆಗಳಲ್ಲಿ 7.30ರಿಂದ 11.30ರವರೆಗೆ ತರಗತಿಗಳು ನಡೆಯುತ್ತಿದ್ದವು.
ಇದನ್ನೂ ಓದಿ: SIR – ಸಾಂಸ್ಕೃತಿಕ ರಂಗದ ವಿಶ್ಲೇಷಣೆ – ವಿಚಾರ ಸಂಕಿರಣ 28ಕ್ಕೆ
ಈ ಗೊಂದಲಕ್ಕೆ ಅಂತ್ಯಹಾಕುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಏಕೀಕೃತ ವೇಳಾಪಟ್ಟಿಯನ್ನು ಕಡ್ಡಾಯಗೊಳಿಸಿದೆ. ಸರಕಾರಿ, ಅನುದಾನಿತ ಹಾಗೂ ಖಾಸಗಿ ಎಲ್ಲಾ ಶಾಲೆಗಳಿಗೂ ಈ ನಿಯಮ ಅನ್ವಯವಾಗಲಿದೆ.
ಇದೇ ವೇಳೆ, ಶಾಲೆಗಳಲ್ಲಿ ಆನ್ಲೈನ್ ಹಾಜರಾತಿ ವ್ಯವಸ್ಥೆ ಈಗಾಗಲೇ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ, ನಿಗದಿತ ಸಮಯದಲ್ಲಿ ಶಿಕ್ಷಕರು ಸುಲಭವಾಗಿ ಹಾಜರಾತಿ ದಾಖಲಿಸಲು ಈ ಹೊಸ ವೇಳಾಪಟ್ಟಿ ಸಹಾಯಕವಾಗಲಿದೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ನೋಡಿ: ಬೀದಿ ವ್ಯಾಪಾರಿಗಳನ್ನು ರಕ್ಷಿಸಿ – ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ Janashakthi Media
