ರೆಡ್‌ಫೋರ್ಟ್ ಕಾರ್ ಬಾಂಬ್ ಸ್ಫೋಟ ಪ್ರಕರಣ: ಮೂವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್

ನವದೆಹಲಿ: ಕಳೆದ ವರ್ಷ ದೆಹಲಿಯ ರೆಡ್‌ಫೋರ್ಟ್ ಸಮೀಪ ನಡೆದ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತಷ್ಟು ಮೂವರ ವಿರುದ್ಧ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದೆ.

ಈ ಪೂರಕ ಆರೋಪಪಟ್ಟಿಯಲ್ಲಿ ಜಮ್ಮು-ಕಾಶ್ಮೀರ ಮೂಲದ ಜಮೀರ್ ಅಹ್ಮದ್ ಅಹಂಗರ್, ತುಫೈಲ್ ಅಹ್ಮದ್ ಭಟ್ ಮತ್ತು ಮುಜಫರ್ ಅಹ್ಮದ್ ಅಲಿಯಾಸ್ ಫರಾಜ್/ಜಫರ್ ಅವರನ್ನು ಆರೋಪಿಗಳಾಗಿ ಗುರುತಿಸಲಾಗಿದೆ. ಇದರಿಂದ ಈ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮುಖ್ಯ ಆರೋಪಿ ಉಮರ್ ಉನ್ ನಬಿ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ. ಬಾಂಬ್ 

ಎನ್‌ಐಎ ಮಾಹಿತಿ ಪ್ರಕಾರ, ಮುಜಫರ್ ಅಹ್ಮದ್ ವೃತ್ತಿಯಿಂದ ಶಿಶು ವೈದ್ಯರಾಗಿದ್ದು, ಸಹ ಆರೋಪಿ ಡಾ. ಅದೀಲ್ ಅಹ್ಮದ್ ರಾಥರ್ ಅವರ ಅಣ್ಣನಾಗಿದ್ದಾನೆ. ಆತ ‘ಅನ್ಸಾರ್ ಘಜ್ವತ್-ಉಲ್-ಹಿಂದ್’ (AGuH) ಎಂಬ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬನಾಗಿದ್ದಾನೆ.

ಇದನ್ನೂ ಓದಿ: ಬರ ತೀವ್ರತೆ: ಬೆಳೆಸಾಲ ಮನ್ನಾ, ಪರಿಹಾರಕ್ಕೆ ರೈತರ ಒತ್ತಾಯ

2022ರ ಜೂನ್‌ನಲ್ಲಿ ಶ್ರೀನಗರದ ಈದ್ಗಾ ಮೈದಾನದಲ್ಲಿ ನಡೆದ ಸಭೆಯಲ್ಲಿ ಈ ಸಂಘಟನೆ ಸ್ಥಾಪನೆಯಾಗಿದ್ದು, ಅದರಲ್ಲಿ ಮುಜಫರ್ ಭಾಗವಹಿಸಿದ್ದಾನೆ ಎಂದು ಎನ್‌ಐಎ ಹೇಳಿದೆ.

ಇನ್ನೂ, ಉಮರ್ ಮತ್ತು ಮುಜಮ್ಮಿಲ್ ನಡೆಸುತ್ತಿದ್ದ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಐಇಡಿ ತಯಾರಿ, ಪರೀಕ್ಷೆ ಮತ್ತು ಸಂಗ್ರಹಣೆಯಲ್ಲಿ ಮುಜಫರ್ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಅವನ ವಿರುದ್ಧ ನ್ಯಾಯಾಲಯದಿಂದ ಜಾಮೀನಿಲ್ಲದ ವಾರಂಟ್ ಜಾರಿಯಾಗಿದೆ.

ಜಮೀರ್ ಅಹಂಗರ್ ಈ ಸಂಘಟನೆಯ ‘ಒವರ್‌ಗ್ರೌಂಡ್ ವರ್ಕರ್’ ಆಗಿ ಶಸ್ತ್ರಾಸ್ತ್ರ ಹಾಗೂ ಹಣ ಸಾಗಣೆ ಕಾರ್ಯದಲ್ಲಿ ತೊಡಗಿದ್ದಾನೆ ಎಂದು ಹೇಳಲಾಗಿದೆ. ತುಫೈಲ್ ಭಟ್, ಲಷ್ಕರ್-ಇ-ತೊಯ್ಬಾ ಸಂಘಟನೆಯ ಮಾಜಿ ಒವರ್‌ಗ್ರೌಂಡ್ ಕಾರ್ಯಕರ್ತನಾಗಿದ್ದು, ಈ ಗುಂಪಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದಾನೆ ಎಂದು ಎನ್‌ಐಎ ಆರೋಪಿಸಿದೆ.

ಅವನು ಏಕೆ-47, ಕ್ರಿಂಕೋವ್ ರೈಫಲ್, ಪಿಸ್ತೂಲ್ ಹಾಗೂ ಗುಂಡು-ಸಾಮಗ್ರಿಗಳನ್ನು ರೂ. 3 ಲಕ್ಷಕ್ಕೆ ಪಡೆದು ಡಾ. ನಬಿಗೆ ಒದಗಿಸಿದ್ದಾನೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಇದನ್ನೂ ನೋಡಿ: ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ‘ವಿಐಪಿ’! ಪಾಸ್‌ಪೋರ್ಟ್‌ ಕಥೆ ಏನು? ಎಸ್‌ಐಆರ್‌ ಸುತ್ತ ಪ್ರಶ್ನೆಗಳ ಹುತ್ತ |

Donate Janashakthi Media

Leave a Reply

Your email address will not be published. Required fields are marked *