ಎನ್‍ಸಿ ಡಬ್ಲ್ಯು ಅಧ್ಯಕ್ಷೆಯ ರಾಜೀನಾಮೆಗೆ ಮಹಿಳಾ ಸಂಘಟನೆಗಳ ಆಗ್ರಹ

ಮಣಿಪುರದಲ್ಲಿ ಮೂವರು ಮಹಿಳೆಯರನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಅತ್ಯಾಚಾರವೆಸಗಿದ ಹೇಯ ಘಟನೆಯ ಬಗ್ಗೆ 2023ರ ಜೂನ್ 12ರಂದು ಎನ್‌ಸಿಡಬ್ಲ್ಯುಗೆ ದೂರು ನೀಡಲಾಗಿದ್ದರೂ ರಾಷ್ಟ್ರೀಯ…

ಮಣಿಪುರ ಹಿಂಸಾಚಾರದ ಆಘಾತಕಾರಿ  ವೀಡಿಯೋ-ಮಹಿಳಾ ಸಂಘಟನೆಗಳ ಖಂಡನೆ-ಮಣಿಪುರ ಮುಖ್ಯಮಂತ್ರಿಯ ರಾಜೀನಾಮೆಗೆ ಆಗ್ರಹ

ಮಣಿಪುರದಲ್ಲಿ ಮೇ 3 ರಂದು ಜನಾಂಗೀಯ ಹಿಂಸಾಚಾರ ಪ್ರಾರಂಭವಾದ ಮರುದಿನವೇ  ಮೇ 4 ರಂದು ನಡೆದ ಅತ್ಯಾಚಾರದ ಆಘಾತಕಾರಿ ವೀಡಿಯೋಗಳು ಸಾಮಾಜಿಕ…

NFHS-6 ರ ಸಮೀಕ್ಷೆಯ ಸೂಚಕಗಳಿಂದ ರಕ್ತಹೀನತೆಯನ್ನು ತೆಗೆದುಹಾಕುವ ಸರಕಾರದ ನಿರ್ಧಾರ : ಎಐಡಿಡಬ್ಲ್ಯುಎ ಕಳವಳ

ನವದೆಹಲಿ : ರಾಷ್ಟ್ರೀಯ  ಕುಟುಂಬ ಆರೋಗ್ಯ ಸಮೀಕ್ಷೆ-6 (NFHS-6 )ರ ಸೂಚಕಗಳಿಂದ ರಕ್ತಹೀನತೆಯನ್ನು ತೆಗೆದುಹಾಕುವ ನಿರ್ಧಾರವನ್ನು ಬಿಜೆಪಿ ಸರಕಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.…

ಏಕರೂಪತೆಯೇ ಸಮಾನತೆ ಅಲ್ಲ – ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ

ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಕಾನೂನು ಆಯೋಗಕ್ಕೆ ಪತ್ರ ಜೂನ್ 14 ರಂದು ಪ್ರಸ್ತುತ ಕಾನೂನು ಆಯೋಗ  ಯು.ಸಿ.ಸಿ. ಕುರಿತಂತೆ…

ಗ್ಯಾರಂಟಿಗಳ ಭರವಸೆಯನ್ನು ಈಡೇರಿಸಿದ್ದು ಸ್ವಾಗತ – ಜೆಎಂಎಸ್

ಬೆಂಗಳೂರು: ಕರ್ನಾಟಕದ ಹೊಸ ಸರಕಾರದ ಬಜೆಟ್ ಮಂಡನೆಯಾಗಿದೆ. ಚುನಾವಣಾ ಪೂರ್ವದ ವಾಗ್ದಾನಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈ ಬಜೆಟ್ ಕೂಡಾ ಇದೆ. ಮಹಿಳಾ…

ಅವಮರ್ಯಾದಯಿಂದ ಕೊಲೆಯಾದ ಹುಡುಗ ಮತ್ತು ಹುಡುಗಿಯ ಮನೆಗೆ ಮಹಿಳಾ ಸಂಘಟನೆ ಭೇಟಿ

ಕೋಲಾರ : ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ   ಬೋಡಗುರ್ಕಿ  ಗ್ರಾಮದಲ್ಲಿ ಇತ್ತೀಚೆಗೆ  ನಡೆದ  ಅವಮರ್ಯಾದಯಿಂದ  ಕೊಲೆಯಾದ ಹುಡುಗ ಮತ್ತು ಹುಡುಗಿಯ ಮನೆಗೆ ಅಖಿಲ…

ಅನ್ನಭಾಗ್ಯ : ನಗದು ಹಣ ವರ್ಗಾವಣೆ ತಾತ್ಕಾಲಿಕ ವ್ಯವಸ್ಥೆ ಮಾತ್ರವಾಗಿರಲಿ – ಜನವಾದಿ ಮಹಿಳಾ ಸಂಘಟನೆ

ಬೆಂಗಳೂರು: ಉಚಿತ ಅಕ್ಕಿಯ ಬದಲು ನಗದು ಹಣವನ್ನು ವರ್ಗಾವಣೆ ಮಾಡುವ ಸಚಿವ ಸಂಪುಟದ ತೀರ್ಮಾನ ಪರ್ಯಾಯ ವ್ಯವಸ್ಥೆಯ‌ವರೆಗಿನ ತಾತ್ಕಾಲಿಕ ವ್ಯವಸ್ಥೆ ಮಾತ್ರವಾಗಲಿ…

ಬಡವರ ಅನ್ನ ಕಸಿದು ನೀಚತನ – ಕೇಂದ್ರದ ವಿರುದ್ಧ ಜನವಾದಿ ಮಹಿಳಾ ಸಂಘಟನೆ ಕಿಡಿ

ಆಹಾರ ಗೋದಾಮು ಮುಂದೆ ಪ್ರತಿಭಟನೆ ನಡೆಸಿದ ಜನವಾದಿ ಮಹಿಳಾ ಸಂಘಟನೆ ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ತಾನು ಗೆದ್ದು ಬರಲಿಲ್ಲ ಎಂಬ ಕಾರಣಕ್ಕಾಗಿ…

ರೈತರ ಹಕ್ಕುಗಳನ್ನು ಬೆಂಬಲಿಸಿದ ಸಂಶೋಧಕಿಯನ್ನು ತನಿಖೆಗೆ ಗುರಿಪಡಿಸಿದ ಇ.ಡಿ.: ವಿಶ್ವಾದ್ಯಂತ ತೀವ್ರ ಖಂಡನೆ-ಪ್ರತಿಭಟನೆ

ಸಂಶೋಧಕಿ, ಲೇಖಕಿ ಮತ್ತು ಸಕ್ರಿಯ ಕಾರ್ಯಕರ್ತೆ ಮತ್ತು ಪ್ರಧಾನ ಮಂತ್ರಿಗಳನ್ನು ಮಣಿಸಿದ ರೈತರ ಐತಿಹಾಸಿಕ ಹೋರಾಟವನ್ನು ಸಕ್ರಿಯವಾಗಿ ಬೆಂಬಲಿಸಿದ ಡಾ. ನವಶರಣ್ ಸಿಂಗ್ ಅವರನ್ನು ಮೇ 10ರಂದು ಏಳು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ (ಇ.ಡಿ.) ಪಿಎಂಎಲ್‌ಎ(ಕಪ್ಪು ಹಣವನ್ನು ಬಿಳುಪು ಮಾಡುವುದನ್ನು ತಡೆಯುವ) ಕಾಯ್ದೆಯ ಅಡಿಯಲ್ಲಿ ವಿಚಾರಣೆಗೆ ಗುರಿಪಡಿಸಿರುವುದಕ್ಕೆ ದೇಶ-ವಿದೇಶಗಳಲ್ಲಿ ವ್ಯಾಪಕ ಖಂಡನೆ ಮತ್ತು ಪ್ರತಿಭಟನೆಗಳು ವ್ಯಕ್ತವಾಗಿವೆ. ರೈತ ಹೋರಾಟಕ್ಕೆ ನೇತೃತ್ವ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಒಂದು ಹೇಳಿಕೆಯನ್ನು ನೀಡಿ, ಡಾ. ನವಶರಣ ಅವರು ದಿಲ್ಲಿ ಗಡಿಗಳಲ್ಲಿ ಐತಿಹಾಸಿಕ ರೈತ ಚಳವಳಿಯ ಪ್ರಮುಖ ಬೆಂಬಲಿಗರಲ್ಲಿ ಒಬ್ಬರು, ರೈತರ ಹೋರಾಟದ ಸಂದೇಶವನ್ನು ಅಂತಾರಾಷ್ಟ್ರೀಯ ವೇಧಿಕೆಗಳಿಗೆ ಕೊಂಡೊಯ್ದರು. ಇದಕ್ಕಾಗಿಯೇ ಮೋದಿ ಸರ್ಕಾರ ಆಕೆಯ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ ಎನ್ನುತ್ತ ,ನ್ಯಾಯಕ್ಕಾಗಿ ಆಕೆಯ ಅನ್ವೇಷಣೆಯಲ್ಲಿ ಎಸ್‌ಕೆಎಂ ಅವರಿಗೆ ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದೆ. ಇದು ಡಾ.ನವಶರಣ್ ಸಿಂಗ್ ಅವರಿಗೆ ಕಿರುಕುಳ ನೀಡುವ ಮತ್ತು ಬೆದರಿಸುವ ಬಿಜೆಪಿ ಸರ್ಕಾರದ ದುಷ್ಟ ಪ್ರಯತ್ನ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ತೀವ್ರವಾಗಿ ಖಂಡಿಸಿದೆ. ಪಿಎಂಎಲ್‌ಎ ಅಡಿಯಲ್ಲಿ ಅವರನ್ನು ಪ್ರಶ್ನಿಸುವ ಜಾರಿ ನಿರ್ದೇಶನಾಲದ ಕ್ರಮ ಭಿನ್ನಾಭಿಪ್ರಾಯದ ದನಿಗಳನ್ನು ಅಡಗಿಸುವ ಇನ್ನೊಂದು ಪ್ರಯತ್ನವಾಗಿದೆ. ಪ್ರಜಾಸತ್ತಾತ್ಮಕ ಹಕ್ಕುಗಳ ಪ್ರತಿಪಾದಕರಾಗಿ, ಸಾರ್ವಜನಿಕ ಚಿಂತಕರಾಗಿ ಮಹತ್ವದ ಪಾತ್ರ ವಹಿಸುತ್ತಿರುವ ಅವರು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ರೈತ-ವಿರೋಧಿ ಮತ್ತು ಜನವಿರೋಧಿ ನೀತಿಗಳಿಗೆ ತಮ್ಮ ವಿರೋಧವನ್ನು ನಿರಂತರವಾಗಿ ವ್ಯಕ್ತಪಡಿಸುತ್ತ ಬಂದಿರುವವರು. ಖ್ಯಾತ ನಾಟಕಕಾರ ದಿವಂಗತ ಗುರುಶರಣ್ ಸಿಂಗ್ ಅವರ ಪುತ್ರಿಯಾಗಿರುವ ಅವರು ರೈತ ಚಳವಳಿಗಳ ಕಟ್ಟಾ ಬೆಂಬಲಿಗರಾಗಿ ಬಿಜೆಪಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದು ಎಐಕೆಎಸ್ ಕೂಡ ನೆನಪಿಸಿದೆ. ಖ್ಯಾತ ಹಕ್ಕು ಕಾರ್ಯಕರ್ತ ಹರ್ಷ್ ಮಂದರ್ ನೇತೃತ್ವದ ಟ್ರಸ್ಟ್ ‘ಅಮನ್ ಬಿರಾದಾರಿ’ ಮಂಡಳಿಯ ಸದಸ್ಯರಾಗಿರುವ ಅವರನ್ನು ಈ ಟ್ರಸ್ಟ್£ ಕೆಲವು ಹಣಕಾಸಿನ ವಹಿವಾಟುಗಳು ಮತ್ತು ಹರ್ಷಮಂದರ್ ಅವರೊಂದಿಗಿನ ಸಂಬAಧದ ಬಗ್ಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ. ಜನರ ಹಕ್ಕುಗಳನ್ನು ಮತ್ತು ಕೋಮು ಸೌಹಾರ್ದವನ್ನು ಪ್ರತಿಪಾದಿಸುತ್ತ, ಈ ಹಕ್ಕುಗಳ ಮತ್ತು ಸೌಹಾರ್ದದ ಉಲ್ಲಂಘನೆಯ ವಿರುದ್ಧ ದೇಶವಿಡೀ ಸಂಚರಿಸುತ್ತಿರುವ ಮಾಜಿ ಉನ್ನತ ಸರಕಾರೀ ಅಧಿಕಾರಿ ಹರ್ಷ ಮಂದರ್ ಅವರ ದನಿಯನ್ನು ಅಡಗಿಸಲು ಆರಂಭಿಸಿರುವ ಈ ತನಿಖೆಯಲ್ಲಿ ಈಗ ನವಶರಣ್ ಸಿಂಗ್‌ರವರನ್ನು ಕೂಡ ಸೇರಿಸಿರುವುದು ದೇಶದಾದ್ಯಂತ ಬುದ್ಧಿಜೀವಿಗಳು ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಕಾರ್ಯಕರ್ತರನ್ನು ಗುರಿಯಾಗಿಸುವ ಮೋದಿ ಸರ್ಕಾರದ ವಿಶಾಲ ಮಾದರಿಯ ಭಾಗವಾಗಿದೆ ಎಂದಿರುವ ಎಐಕೆಎಸ್ ಪ್ರಗತಿಪರ ಮತ್ತು ಪ್ರಜಾಪ್ರಭುತ್ವವಾದಿ ದನಿಗಳ ಮೇಲೆ ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ದಾಳಿಗಳ ವಿರುದ್ಧ ದನಿ ಎತ್ತುವಂತೆ ಜನಾಂದೋಲನದ ಎಲ್ಲಾ ವಿಭಾಗಗಳಿಗೆ ಮನವಿ ಮಾಡಿದೆ. ಅಖಿಲ ಭಾರತ ಅರಣ್ಯ ದುಡಿಯುವ ಜನರ ಸಂಘ ಮತ್ತು ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ ಕೂಡ ಇದು ಭಿನ್ನಾಭಿಪ್ರಾಯದ ದನಿಗಳನ್ನು ತೊಡೆದುಹಾಕಲು ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸುವ ನಿಂದನೀಯ ಕೃತ್ಯ ಎಂದು ಖಂಡಿಸಿವೆ. ಡಾ.ನವಶರಣ್ ಸಿಂಗ್ ಕೆನಡಾದ ಕಾರ್ಲೆಟನ್ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಅಲ್ಲಿಯೂ ಬೌದ್ಧಿಕ ವಲಯದಲ್ಲಿ ಖ್ಯಾತರಾಗಿರುವ ಅವರನ್ನು ಬೆಂಬಲಿಸಿ ಕೆನಡಾದ 20 ಕ್ಕೂ ಹೆಚ್ಚು ಸಂಸ್ಥೆಗಳು ಜಂಟಿ ಹೇಳಿಕೆಯನ್ನು ನೀಡಿದ್ದು, ಇ.ಡಿ. ಯ ಈ ಕ್ರಮವನ್ನು ಪ್ರಗತಿಪರ ಧ್ವನಿಗಳನ್ನು ಗುರಿಯಾಗಿಸಿಕೊಂಡಿರುವ ಮೋದಿ ಸರ್ಕಾರದ ಬಂಧನಗಳೋAದಿಗೆ ತಳುಕು ಹಾಕುತ್ತ “ದಕ್ಷಿಣ ಏಷ್ಯಾದ ಒಬ್ಬ ಸಾಧಕಿ, ವಿದ್ವಾಂಸೆ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಡಾ. ಸಿಂಗ್ ಅವರು ತಳಮಟ್ಟದ ಕೆಲಸದ ಸುದೀರ್ಘ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಅವರ ದಿವಂಗತ ತಂದೆಯಿAದ ಪಡೆದ ಪರಂಪರೆಯನ್ನು ಮುಂದಕ್ಕೊಯ್ಯುತ್ತಿದ್ದಾರೆ ಗ್ರಾಮೀಣ ಪಂಜಾಬ್ ಮತ್ತು ಇತರೆಡೆಗಳಲ್ಲಿ ಬಡವರು ಮತ್ತು ವಂಚಿತರನ್ನು ತಲುಪುವ ಮೂಲಕ, ಅವರ ಬೆಂಬಲ ಮತ್ತು ವಕಾಲತ್ತು ಅವರಿಗೆ ಜನಸಾಮಾನ್ಯರ ಪ್ರೀತಿ ಮತ್ತು ಗೌರವವನ್ನು ಗಳಿಸಿ ಕೊಟ್ಟಿದೆ. ಇದು ಅವರು ಮೋದಿಯ ಕಠೋರ ಕಾನೂನುಗಳ ವಿರುದ್ಧ ಭಾರತೀಯ ರೈತರ ಹೋರಾಟವನ್ನು ಧೈರ್ಯದಿಂದ ಬೆಂಬಲಿಸಿದಾಗ ಸ್ಪಷ್ಟವಾಗಿದೆ. …ಡಾ. ನವಶರಣ್ ಸಿಂಗ್ ಮತ್ತು ಅವರ ತಳಮಟ್ಟದ ಮತ್ತು ಶೈಕ್ಷಣಿಕ ಕೆಲಸಗಳ ಬಗ್ಗೆ ತಿಳಿದಿರುವ ಅಥವಾ ಪರಿಚಿತರಾಗಿರುವ ನಮಗೆ, ಆಡಳಿತದ ತನಿಖಾ ಸಂಸ್ಥೆಗಳಿAದ ಆಕೆಯ ಕಿರುಕುಳವು ಆಕ್ರೋಶ ಉಂಟು ಮಾಡಿದೆ, ಇದನ್ನು ಒಪ್ಪಲು ಸಾಧ್ಯವಿಲ್ಲ , ಅದನ್ನು ದೃಢವಾಗಿ ವಿರೋಧಿಸಬೇಕು” ಎಂದಿವೆ.

ಲೈಂಗಿಕ ದೌರ್ಜನ್ಯದ ವಿರುದ್ಧ ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲಿಸಿ ನ್ಯಾಯಕ್ಕಾಗಿ ಪ್ರತಿಭಟನೆ

ಬೆಂಗಳೂರು : ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟವನ್ನುನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳಿಗೆ ಬೆಂಬಲವಾಗಿ ಹಾಗೂ ಕಿರುಕಳಕ್ಕೆ ಕಾರಣ ಎನ್ನಲಾದ WFI ಅಧ್ಯಕ್ಷರು ಮತ್ತು…

ಮನುವ್ಯಾಧಿಗ್ರಸ್ಥ ಸಂಸದ ಮುನಿಸ್ವಾಮಿ ವಿರುದ್ಧ ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ

ಬೆಂಗಳೂರು: ಹಣೆಗೆ ಬೊಟ್ಟುಇಟ್ಟಿಲ್ಲವೆಂದು ಹೀಯಾಳಿಸಿದ ಕೋಲಾರದ ಸಂಸದ ಮುನಿಸ್ವಾಮಿ ಮಹಿಳೆಯರ ಕ್ಷಮೆ ಕೇಳಬೇಕು. ಹಣೆಗೆ ಬೊಟ್ಟು ಇಟ್ಟಿಲ್ಲ ಎಂಬ ಕಾರಣಕ್ಕೆ, ಗಂಡ…

ʻʻಬೊಟ್ಟು ಯಾಕಿಟ್ಟಿಲ್ಲʼʼ : ಮುನಿಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಬೆಂಗಳೂರು : ಕೋಲಾರದ ಸಂಸದ ಮುನಿಸ್ವಾಮಿ ಅವರು ಮಹಿಳಾ ದಿನಾಚರಣೆಯಂದು ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರಿಗೆ ನೀನು ಹಣೆಗೆ ಕುಂಕುಮ ಇಟ್ಟಿಲ್ಲ ಏಕೆ…

ಮಹಿಳೆಯರು ಭಾಗವಹಿಸದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ: ಎಸ್ ವರಲಕ್ಷ್ಮಿ

ಮಂಗಳೂರು: ದೇಶದ ಜನಸಂಖ್ಯೆಯಲ್ಲಿ ಅರ್ಧ ಭಾಗದಷ್ಟು ಮಹಿಳೆಯರಿದ್ದರೂ ಮಹಿಳಾ ಸಬಲೀಕರಣದ ಪ್ರಶ್ನೆ ಮುಂಚೂಣಿಗೆ ಬರುತ್ತಿಲ್ಲ. ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರನ್ನು ಅತ್ಯಂತ…

ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ನಿಯಂತ್ರಿಸುವ ಕೆಲಸ ನಡೆಯುತ್ತದೆ – ಶೈಲಜಾ ಟೀಚರ್

ತುಮಕೂರು : ಹೆಣ್ಣು ಮಕ್ಕಳ ರಕ್ಷಣೆ ಎಂಬ ಪದವನ್ನು ಕೆಲವರು ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ನಿಯಂತ್ರಿಸುವ ಕೆಲಸವನ್ನು…

ಲೈಂಗಿಕ ದೌರ್ಜನ್ಯದ ವಿರುದ್ಧ ರಾಜ್ಯ ಮಟ್ಟದ ಸಮಾವೇಶ

ಬೆಂಗಳೂರು: ಲೈಂಗಿಕ ದೌರ್ಜನ್ಯದ ವಿರುದ್ಧ ಕರ್ನಾಟಕ ವತಿಯಿಂದ ಬೆಂಗಳೂರು ನಗರದ ಸೈಂಟ್ ಜೋಸೆಫ್ಸ್ ಕಾಲೇಜಿನಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಯಿತು. ಅತ್ಯಾಚಾರದ…

ಅಂಗನವಾಡಿ ನೌಕರರ ಮೇಲಿನ ಮೊಕದ್ದಮೆ ಹಿಂತೆಗೆದುಕೊಳ್ಳಲು ಜನವಾದಿ ಮಹಿಳಾ ಸಂಘಟನೆ ಒತ್ತಾಯ

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತನ್ನ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಸಾಂವಿಧಾನಿಕ ಹಕ್ಕಿನ ಭಾಗವಾಗಿ ನಡೆಸಿದ…

ಐಡ್ವಾ (AIDWA) ಅಧ್ಯಕ್ಷರಾಗಿ ಶ್ರೀಮತಿ ಪಿಕೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮರಿಯಮ್ ಧವಳೆ ಆಯ್ಕೆ

ತಿರುವನಂತಪುರಂ :ಕೇರಳದ ತಿರುವನಂತಪುರಂ ‌ನಲ್ಲಿ ನಡೆಯುತ್ತಿದ್ದಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 13 ನೇ ರಾಷ್ಟ್ರೀಯ ಸಮ್ಮೇಳನ ಇಂದು ಮುಕ್ತಾಯವಾಯಿತು. ಇದೇ…

ಹರ್ಯಾಣದ ಕ್ರೀಡಾ ಸಚಿವರ ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ನ್ಯಾಯಯುತ ತನಿಖೆಗೆ ಅಡ್ಡಿ ನಿವಾರಿಸಲು ಮಧ್ಯಪ್ರವೇಶಿಸಬೇಕು – ಐಒಎ ಅಧ್ಯಕ್ಷೆಗೆ ಬಹಿರಂಗ ಪತ್ರ

ಹರ್ಯಾಣ ರಾಜ್ಯದ ಕ್ರೀಡಾ ವಿಭಾಗದಲ್ಲಿ ಜೂನಿಯರ್‍ ಕೋಚ್‍ ಆಗಿ ಸೇವೆ ಸಲ್ಲಿಸುತ್ತಿರುವ ಖ್ಯಾತ ಅಂತರರಾಷ್ಟ್ರೀಯ ಮಹಿಳಾ ಕ್ರೀಡಾ ಪಟುವಿಗೆ ಲೈಂಗಿಕ ಕಿರುಕುಳ…

ಮಹಿಳೆಯರ ಹಕ್ಕುಗಳ ವಿರುದ್ಧ ಧರ್ಮವನ್ನು ಬಳಸುವ ನಿರಂಕುಶ ಪ್ರಭುತ್ವದ ವಿರುದ್ಧ ಇರಾನಿನ ಮಹಿಳೆಯರ ಐತಿಹಾಸಿಕ ವಿಜಯ

ಜನವಾದಿ ಮಹಿಳಾ ಸಂಘಟನೆಯ ಅಭಿನಂದನೆ ಅಖಿಲ ಭಾರತ ಜನವಾದಿ ಮಹಿಳಾ ಸಂಘ(ಎಐಡಿಡಬ್ಲ್ಯುಎ) 22 ವರ್ಷದ ಮಹ್ಸಾ ಅಮೀನಿ ಇರಾನಿನ  “ನೈತಿಕತೆ ಪೋಲೀಸ್”ನ…

ʻಪ್ರಾಚೀನ ಭಾರತದ ತಾಯಿʼ ಉಪನ್ಯಾಸಗಳ ಬಗ್ಗೆ ಯುಜಿಸಿ ಸುತ್ತೋಲೆ: ಎಐಡಿಡಬ್ಲ್ಯೂಎ ಖಂಡನೆ

ನವದೆಹಲಿ: ಪ್ರಾಚೀನ ಭಾರತದ ಪ್ರಜಾಪ್ರಭುತ್ವ ಕುರಿತು ಸಂವಿಧಾನದ ದಿನ (ನವೆಂಬರ್‌ 26, 2022) ಉಪನ್ಯಾಸಗಳನ್ನು ಏರ್ಪಡಿಸಲು ಯುಜಿಸಿಯು (ವಿಶ್ವವಿದ್ಯಾಲಯ ಅನುದಾನ ಆಯೋಗ)…