ಬೆಂಗಳೂರು : ಕಾರ್ಮಿಕ ಚಳವಳಿಯ ಹಿರಿಯ ನಾಯಕ, ಲೇಖಕ ಹಾಗೂ ಸಿಐಟಿಯು (CITU) ರಾಜ್ಯ ಉಪಾಧ್ಯಕ್ಷ ವಿ.ಜಿ.ಕೆ. ನಾಯರ್ ಅವರ “ಜನತಾಪ್ರಜಾಪ್ರಭುತ್ವಕ್ಕಾಗಿ ಬದುಕು” ಕೃತಿಯ ಪುಸ್ತಕ ಬಿಡುಗಡೆ ಸಮಾರಂಭವು ಜೂನ್ 30ರಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿರುವ ಸೆಕ್ರೆಟರಿಯೇಟ್ ಕ್ಲಬ್ನಲ್ಲಿ ನಡೆಯಲಿದೆ.
ಈ ಕೃತಿಯನ್ನು ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಸಿಐಟಿಯು ಅಖಿಲ ಭಾರತ ಕಾರ್ಯದರ್ಶಿ ಶ್ರೀ ಎಲಿಮರಂ ಕರೀಂ ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ: ವೆನೆಜುವೆಲಾ ಭೂಕಂಪ ದುರಂತ: ಸಾವು 1,430ಕ್ಕೆ ಏರಿಕೆ!
ಕಾರ್ಯಕ್ರಮದಲ್ಲಿ ಸಿಐಟಿಯು ಅಖಿಲ ಭಾರತ ಅಧ್ಯಕ್ಷ ಸುದೀಪ್ ದತ್ತ, ಸಿಐಟಿಯು ಅಖಿಲ ಭಾರತ ಉಪಾಧ್ಯಕ್ಷ ತಪನ್ ಸೇನ್ ಹಾಗೂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ.ಎನ್. ಉಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಜಯ ನಾಯರ್ ಗೌರವ ಉಪಸ್ಥಿತರಾಗಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಐಟಿಯು ರಾಜ್ಯ ಅಧ್ಯಕ್ಷೆ ಮೀನಾಕ್ಷಿ ಸುಂದರಂ ವಹಿಸಲಿದ್ದಾರೆ.
ಕಾರ್ಮಿಕ ಚಳವಳಿಯಲ್ಲಿ ಹಲವು ದಶಕಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿ.ಜಿ.ಕೆ. ನಾಯರ್ ಅವರ ಹೋರಾಟದ ಬದುಕು, ಜನತಾಂತ್ರಿಕ ಮೌಲ್ಯಗಳ ಬದ್ಧತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರು ನಡೆಸಿದ ಹೋರಾಟದ ಅನುಭವಗಳನ್ನು ಈ ಕೃತಿ ದಾಖಲಿಸುತ್ತದೆ. ಕಾರ್ಮಿಕ ಚಳವಳಿ, ಪ್ರಗತಿಪರ ರಾಜಕೀಯ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಈ ಕೃತಿ ಮಹತ್ವದ ದಾಖಲೆಯಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಇದನ್ನೂ ನೋಡಿ: ದುಡಿಯುವ ಭೂಮಿ ಕಿತ್ತುಕೊಂಡ ಸರಕಾರ – ಯು.ಬಸವರಾಜ Janashakthi Media
