ಶ್ರಮಿಕ ವರ್ಗಕ್ಕೆ ನ್ಯಾಯ ಕೊಡಿಸಲು ಬದುಕನ್ನೇ ಮುಡುಪಾಗಿಸಿದ ಹಿರಿಯ ನ್ಯಾಯವಾದಿ ಕೆ.ಸುಬ್ಬರಾವ್ ಇನ್ನಿಲ್ಲ

ಹಿರಿಯ ನ್ಯಾಯವಾದಿ ಕೆ. ಸುಬ್ಬರಾವ್ ಅವರು ಇಂದು ಬೆಳಿಗ್ಗೆ 6.30ಕ್ಕೆ ನಿಧನರಾದರು ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ಕರ್ನಾಟಕ ಕಂಡ…

‘ಸತ್ಯಪಾಲ್ ಮಲಿಕ್ ಸಂದರ್ಶನ : ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮೋದಿ ಸರ್ಕಾರ ಉತ್ತರಿಸಲೇಬೇಕು’

“ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾಜಿ ರಾಜ್ಯಪಾಲ ಶ್ರೀ . ಸತ್ಯಪಾಲ್ ಮಲಿಕ್  ಎತ್ತಿರುವ ಎಲ್ಲಾ ಗಂಭೀರ ಆರೋಪಗಳ ಬಗ್ಗೆ  ಮೋದಿ ಸರ್ಕಾರವು ಸ್ಪಷ್ಟಗೊಳಿಸಬೇಕು, ಅವಕ್ಕೆಲ್ಲ ಉತ್ತರಿಸಬೇಕು” ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಗ್ರಹಿಸಿದೆ. “40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಕುರಿತಂತೆ ಆರೋಪಗಳು ನಮ್ಮ ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಯಾವುದೇ ಲೋಪವಾಗುವುದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಪೊಲಿಟ್‍ಬ್ಯುರೊ ಹೇಳಿದೆ. ಇದು ಸರಕಾರದ ತಪ್ಪಿನಿಂದಾಗಿ ಸಂಭವಿಸಿರುವ ದುರಂತ, ಸಿಆರ್ ಪಿ ಎಫ್ ನವರು ಕೇಳಿದಂತೆ  ದಳದ ಸದಸ್ಯರನ್ನು ಸಾಗಿಸಲು ಐದು ವಿಮಾನಗಳನ್ನು  ಕೊಟ್ಟಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಪ್ರಧಾನ ಮಂತ್ರಿಗಳಿಗೆ ಹೇಳಿದಾಗ ಅವರು ಈಗ ಈ ಬಗ್ಗೆ ಸುಮ್ಮನಿರಿ ಎಂದು ಹೇಳಿದುದಾಗಿ ಪ್ರಖ್ಯಾತ ಪತ್ರಕರ್ತ ಕರಣ್ ಥಾಪರ್‍ ರೊಂದಿಗೆ ಸಂದರ್ಶನದಲ್ಲಿ ಸತ್ಯಪಾಲ್‍ ಮಲಿಕ್‍ ಅವರು ಹೇಳಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು. ತನಗೆ ಅಷ್ಟು ಹೊತ್ತಿಗೆ ಗೊತ್ತಾಗಿ ಹೋಗಿತ್ತು, ಈ ಎಲ್ಲಾ ದೋಷ ಪಾಕಿಸ್ತಾನದ ಕಡೆಗೆ ತಿರುಗಿಸಬೇಕಾಗಿತ್ತು, ಆದ್ದರಿಂದ ಮಾತಾಡುವುದು ಬೇಡ ಎಂದು ಹೇಳಲಾಗಿತ್ತು ಎಂದೂ ಮಲಿಕ್‍ ಹೇಳಿದ್ದಾರೆ.  ಈ ಘಟನೆಗೆ ಪ್ರತೀಕಾರವೆಂದು ಮುಂದೆ ಬಾಲಾಕೋಟ್‍ ವಿಮಾನ ದಾಳಿ ನಡೆಸಿ ಅದನ್ನು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಳಸಿಕೊಂಡದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು. “ಸಂವಿಧಾನದ 370 ಮತ್ತು 35 ಎ ಕಲಮುಗಳನ್ನು  ರದ್ದುಗೊಳಿಸಿದ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ರಾಜ್ಯವನ್ನು ವಿಸರ್ಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ್ದಕ್ಕೆ ಸಂಬಂಧಿಸಿದ ಆರೋಪಗಳು ಕೂಡ ಅಷ್ಟೇ ಗಂಭೀರವಾಗಿವೆ” ಎಂದೂ ಸಿಪಿಐ(ಎಂ) ಪೊಲಿಟ್‍ಬ್ಯುರೊ ಆತಂಕ ವ್ಯಕ್ತಪಡಿಸಿದೆ.   ಆಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯಿದ್ದು, ಅಲ್ಲಿಯ ಆಡಳಿತಕ್ಕೆ  ಪೂರ್ಣ ಹೊಣೆಗಾರರಿದ್ದ ರಾಜ್ಯಪಾಲರಿಗೂ ಹಿಂದಿನ ರಾತ್ರಿಯ ವರೆಗೂ ಇದರ ಸುಳಿವಿರಲಿಲ್ಲ ಎಂದು ಈ ಸಂದರ್ಶನದಿಂದ ಈಗ ತಿಳಿದು ಬಂದಿದೆ. ಅಲ್ಲದೆ ಪ್ರಧಾನಿಗಳಿಗೆ ಕಾಶ್ಮೀರದ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ, ಅದನ್ನು ಪಡೆದುಕೊಳ್ಳಬೇಕು ಎಂದನಿಸದಷ್ಟು ದರ್ಪ ಅವರಲ್ಲಿದ್ದಂತಿತ್ತು ಎಂದೂ ಸತ್ಪಾಲ್‍ ಮಲಿಕ್‍ ಸಂದರ್ಶನದಲ್ಲಿ ಸೂಚಿಸಿದ್ದಾರೆ ಎಂಬುದನ್ನು ಕೂಡ ಇಲ್ಲಿ ಗಮನಿಸಬಹುದು. “ಈ ವಿಷಯಗಳ ಬಗ್ಗೆ ಮೋದಿ ಸರ್ಕಾರದ ಮೌನವು ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಐಕ್ಯತೆ  ಮತ್ತು ಸಮಗ್ರತೆ ಕುರಿತಂತೆ ಬಹಳ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಾಂವಿಧಾನಿಕ ಪಾವಿತ್ರ್ಯದ ಹಿತದೃಷ್ಟಿಯಿಂದ ಮೋದಿ ಸರ್ಕಾರ ಈ ಆರೋಪಗಳಿಗೆ ಉತ್ತರಿಸಬೇಕು. ಮೋದಿ ಸರ್ಕಾರ ಮೌನವಾಗಿರಲು ಸಾಧ್ಯವಿಲ್ಲ” ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಮುಂದುವರೆದು ಹೇಳಿದೆ. 

ಉತ್ತರ ಪ್ರದೇಶದಲ್ಲಿ ಪೋಲಿಸ್ ಬೆಂಗಾವಲಿನ ನಡುವೆಯೇ ಭೀಕರ ಹತ್ಯೆ ಉನ್ನತ ಮಟ್ಟದ ತನಿಖೆ ಅಗತ್ಯ : ಸಿಪಿಐ(ಎಂ)

ಉತ್ತರಪ್ರದೇಶಧ ಪ್ರಯಾಗ್‍ರಾಜ್‍ನಲ್ಲಿ ಮಾಜಿ ಸಂಸತ್‍ ಸದಸ್ಯ  ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮತ್ತು ಮಾಧ್ಯಮಗಳ ಸಮ್ಮುಖದಲ್ಲಿಯೇ…

ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 8 : ರಾಹುಲ್ ಗಾಂಧಿ, ರಾಜ್ಯಪಾಲರ ನೇಮಕ

ಅನುವಾದ : ಅಬ್ದುಲ್ ರಹಮಾನ್ ಪಾಷಾ ದಿ ವೈರ್ (THE WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್…

ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 7 : ‘ಅದಾನಿ ಹಗರಣ’

ಅನುವಾದ : ಅಬ್ದುಲ್ ರಹಮಾನ್ ಪಾಷಾ ದಿ ವೈರ್ (THE WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್…

ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 6 : ‘ಮೋದಿ ಬಹಳ ill informed, BBC’

ಅನುವಾದ : ಅಬ್ದುಲ್ ರಹಮಾನ್ ಪಾಷಾ ದಿ ವೈರ್ (THE WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್…

ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 5 : ರಿಲಯನ್ಸ್ ಇನ್ಶೂರೆನ್ಸ್, ಭ್ರಷ್ಟಾಚಾರ

ಅನುವಾದ : ಅಬ್ದುಲ್ ರಹಮಾನ್ ಪಾಷಾ ದಿ ವೈರ್ (THE WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್…

ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 4 : ಅನುಚ್ಛೇದ ೩೭೦ರ ರದ್ದತಿ

ಅನುವಾದ : ಅಬ್ದುಲ್ ರಹಮಾನ್ ಪಾಷಾ ದಿ ವೈರ್ (THE WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್…

ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 3 : ಫುಲ್ವಾಮಾ ದುರ್ಘಟನೆ

ಅನುವಾದ : ಅಬ್ದುಲ್ ರಹಮಾನ್ ಪಾಷಾ ದಿ ವೈರ್ (THE WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್…

ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 2-ಕಾಶ್ಮೀರದ ವಿಧಾನ ಸಭೆಯ ವಿಸರ್ಜನೆ

ಅನುವಾದ : ಅಬ್ದುಲ್ ರಹಮಾನ್ ಪಾಷಾ ದಿ ವೈರ್ (THE WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್…

ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 1- ಪೀಠಿಕೆ

ಅನುವಾದ : ಅಬ್ದುಲ್ ರಹಮಾನ್ ಪಾಷಾ ವೈರ್ (WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್ ೨೦೧೯ರ ವರೆಗೆ …

ಅಮಾಯಕ ಇದ್ರೀಶ್ ಕೊಲೆ ದೀರ್ಘ ಸಂಚಿನ ಭಾಗ : ಟಿ.ಎಲ್.ಕೃಷ್ಣೇಗೌಡ

ಟಿ.ಎಲ್.ಕೃಷ್ಣೇಗೌಡ ಹಳೇ ಮೈಸೂರು ಭಾಗವನ್ನು ಹೇಗಾದರೂ ವಶಕ್ಕೆ ಪಡೆಯಬೇಕು ಎಂಬ ದೀರ್ಘ ಸಂಚಿನ ಭಾಗವಾಗಿಯೇ ಇದ್ರಿಶನ ಕೊಲೆಯಾಗಿದೆ ಎನ್ನುವುದು ಸ್ಪಷ್ಟ. ಕಳೆದ…

ಫಿನ್ ಲ್ಯಾಂಡ್ : ನಾಟೋ ಕೂಟದ 31ನೆಯ ಸದಸ್ಯ, ಬಲಪಂಥೀಯ ಸರಕಾರ

  ಫಿನ್ ಲ್ಯಾಂಡ್ ಇತ್ತೀಚೆಗೆ ಎರಡು ಕಾರಣಗಳಿಗೆ ಸುದ್ದಿಯಲ್ಲಿತ್ತು. ಆದರೆ ಬಹುಶಃ ಎರಡಕ್ಕೂ ನೇರ ಸಂಬಂಧವಿಲ್ಲ. ಫಿನ್ ಲ್ಯಾಂಡ್ ನಾಟೋ ಮಿಲಿಟರಿ…

ಕರ್ನಾಟಕದ ಸಾಮರಸ್ಯ ಪರಂಪರೆ : ಡಾ. ಮೀನಾಕ್ಷಿ ಬಾಳಿ

– ಡಾ. ಮೀನಾಕ್ಷಿ ಬಾಳಿ ಕನ್ನಡ ನಾಡವರು ಕೇವಲ ತಾತ್ವಿಕವಾಗಿ ಮಾತ್ರ ಸಾಮರಸ್ಯ ಹೇಳಲಿಲ್ಲ.  ಬದುಕಿನ ಪ್ರತಿ ಹಂತದಲ್ಲಿಯೂ ಧರ್ಮ ಸಮನ್ವಯತೆಯನ್ನು…

ಜನಮತ-2023: ಪರ್ಯಾಯ ರಾಜಕಾರಣಕ್ಕಾಗಿ ಸ್ಪರ್ಧಿಸುತ್ತಿರುವ ಪಕ್ಷಗಳು

– ವಸಂತರಾಜ ಎನ್.ಕೆ.- ಕಾಂಗ್ರೆಸ್, ಬಿಜೆಪಿ, ಜೆಡಿ-ಎಸ್ – ಈ ಮೂರು ಪ್ರಮುಖ ಪಕ್ಷಗಳ ನೀತಿ ಮತ್ತು ಆಚರಣೆಗಳಲ್ಲಿ ಭಾರಿ ವ್ತ್ಯತ್ಯಾಸಗಳು…

ಇರಾನ್-ಸೌದಿ ರಾಜಿ ಸಂಧಾನದತ್ತ, ರಾಯಭಾರ ಕಚೇರಿ ಆರಂಭಿಸುವ ಘೋಷಣೆ

ಪಶ್ಚಿಮ ಏಶ್ಯಾದ ಪ್ರಮುಖ ದೇಶಗಳೂ ಹಲವು ವರ್ಷಗಳಿಂದ ಪರಸ್ಪರ ವೈರತ್ವವನ್ನೂ ಹೊಂದಿದ್ದ ಇರಾನ್ ಮತ್ತು ಸೌದಿ ಅರೇಬಿಯಾ ರಾಜಿ ಸಂಧಾನ ಆರಂಭಿಸಿವೆ.…

ಫ್ಯಾಸಿಸ್ಟರನ್ನು ಅಧಿಕಾರಕ್ಕೆ ಬರದಂತೆ ತಡೆಯಬೇಕೆಂಬ ಒಕ್ಕೊರಲಿನ ಕೂಗು

ಫ್ಯಾಸಿಸ್ಟ್ ಮಾದರಿಯ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಬೇಕು. ಸಾಮಾಜಿಕ ನ್ಯಾಯ ಸ್ಥಾಪಿಸಲು; ಪ್ರಾದೇಶಿಕ ಅಸ್ಮಿತೆ, ಸ್ವಾಯತ್ತತೆಗಳನ್ನು ಕಾಪಾಡುವ ಒಕ್ಕೂಟ ವ್ಯವಸ್ಥೆಯನ್ನು…

“ಧೀರ ಟಿಪ್ಪುವಿನ ಲಾವಣಿಗಳು” ಜನವರಿ 8 ರಂದು ‘ಜನಸಾಹಿತ್ಯ ಸಮ್ಮೇಳನ’ದಲ್ಲಿ ಬಿಡುಗಡೆಯಾಗಲಿದೆ.

ಟಿಪ್ಪು ಸುಲ್ತಾನ್ ಕರ್ನಾಟಕದ ಇತಿಹಾಸದಲ್ಲಿ ಒಂದು ವಿಶಿಷ್ಟ ವ್ಯಕ್ತಿ. ಆದರೆ ಅವನ ವಿಶಿಷ್ಟ ವ್ಯಕ್ತಿತ್ವ, ವಿಶಿಷ್ಟ ಚಾರಿತ್ರಿಕ ಪಾತ್ರದ ಬದಲಾಗಿ, ವಿವಾದಾಸ್ಪದ…

ಡಾ.ವಸುಂದರಾ ಭೂಪತಿಯವರಿಂದ 8 ಪುಸ್ತಕಗಳ ಗುಚ್ಛ ಬಿಡುಗಡೆ

ಡಾ.ವಸುಂದರಾ ಭೂಪತಿಯವರು 8 ಪುಸ್ತಕಗಳ ಗುಚ್ಛವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂದು ನಡೆಯುವ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ. ಡಾ.ಕೆ.ಶರೀಫಾ ಅವರ ‘ಬಯಲಿಗೂ…

‘ಲು ಷುನ್ ಕತೆಗಳು’ ಕುರಿತು “ಪುಸ್ತಕಪ್ರೀತಿ ತಿಂಗಳ ಮಾತುಕತೆ’ ಇದೇ ಶನಿವಾರ (ಸೆ.10) ಸಂಜೆ 5ಕ್ಕೆ

  ಚೀನಿ ಸಣ್ಣ ಕತೆಗಳ ಪಿತಾಮಹ ಎಂದೇ ಖ್ಯಾತರಾದ ಮತ್ತು ಚೀನಾದ ಊಳಿಗಮಾನ್ಯ ಶಕ್ತಿಗಳ ವಿರುದ್ದ ಯುದ್ದ ಸಾರಿದ ಲೇಖಕ ಹಾಗೂ…