‘ಫ್ರೀಡಂ ಫ್ರಂ ವೆಸ್ಟ್’ ಅಭಿಯಾನ: 5 ದಿನಗಳಲ್ಲಿ 2,495 ಟನ್ ಅವಶೇಷ ವಿಲೇವಾರಿ
ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆ (BWCC) ವಿಜಯನಗರ 6ನೇ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 250 ಮೀಟರ್ ವ್ಯಾಪ್ತಿಯಲ್ಲಿ ಇದ್ದ 35 ಅತಿಕ್ರಮಣಗಳನ್ನು ಆಗಸ್ಟ್ 6ರಂದು ತೆರವುಗೊಳಿಸಿದೆ. ‘ವಿಜಯನಗರ ಫುಡ್ ಸ್ಟ್ರೀಟ್’ ಎಂದು ಪ್ರಸಿದ್ಧಿಯಾದ ಈ ರಸ್ತೆ ಗೋವಿಂದರಾಜನಗರ ವಿಭಾಗಕ್ಕೆ ಸೇರಿದೆ. ವಿಜಯನಗರ
ಪಾದಚಾರಿ ದಾರಿಗಳ ಅಕ್ರಮ ಆಕ್ರಮಣ ಮತ್ತು ವಾಹನ ಸಂಚಾರಕ್ಕೆ ಉಂಟಾಗುತ್ತಿದ್ದ ತೊಂದರೆ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪಾಲಿಕೆ ಅಧಿಕಾರಿಗಳ ಪ್ರಕಾರ, ಸಂಜೆ ವೇಳೆಯಲ್ಲಿ ಆಹಾರ ವ್ಯಾಪಾರಿಗಳು ರಸ್ತೆಯ ಒಂದು ಬದಿಯನ್ನು ಆಕ್ರಮಿಸಿಕೊಂಡಿದ್ದರೆ, ಇನ್ನೊಂದು ಬದಿಯಲ್ಲಿ ಶಾಶ್ವತ ಕಟ್ಟಡಗಳು ಪಾದಚಾರಿ ದಾರಿಯನ್ನು ಅತಿಕ್ರಮಿಸಿದ್ದವು. ಇದರಿಂದ ವಾಹನಗಳನ್ನು ಅಸ್ತವ್ಯಸ್ತವಾಗಿ ನಿಲ್ಲಿಸುವುದು ಸಾಮಾನ್ಯವಾಗಿದ್ದು, ಸಂಚಾರ ದಟ್ಟಣೆ ಮತ್ತು ಪಾದಚಾರಿಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿತ್ತು.
ಇದನ್ನೂ ಓದಿ: ಮುದಿಗೊಂಡ ಗುಂಡಿನ ದಾಳಿ: ಭೂ ಹಕ್ಕಿಗಾಗಿ ಹೋರಾಟ ರಕ್ತಪಾತವಾಗಿ ಬದಲಾದ ದಿನ
“ಸುಮಾರು 10 ವರ್ಷಗಳಿಂದ ಫುಡ್ ಸ್ಟ್ರೀಟ್ ಸಮಸ್ಯೆಯಿಂದ ಬಳಲುತ್ತಿದ್ದೇವೆ. ಲೋಕಾಯುಕ್ತರ ಹಸ್ತಕ್ಷೇಪದಿಂದ ಇದೀಗ ಪರಿಹಾರ ಸಿಕ್ಕಿದೆ. ಮುಂದೆಯೂ ಪಾದಚಾರಿ ದಾರಿಗಳು ಅತಿಕ್ರಮಣಮುಕ್ತವಾಗಿರಲಿ ಎಂದು ಆಶಿಸುತ್ತೇವೆ,” ಎಂದು ಸ್ಥಳೀಯ ನಿವಾಸಿ ವೀರೇಶ್ ಬೆಳ್ಳೂರು ಹೇಳಿದ್ದಾರೆ.
5 ದಿನಗಳಲ್ಲಿ 2,495 ಟನ್ ಮಣ್ಣು – ಅವಶೇಷ ವಿಲೇವಾರಿ
ಇನ್ನೊಂದೆಡೆ, ‘ಫ್ರೀಡಂ ಫ್ರಂ ವೆಸ್ಟ್’ ಅಭಿಯಾನದ ಭಾಗವಾಗಿ ಬೆಂಗಳೂರು ಉತ್ತರ ನಗರ ಪಾಲಿಕೆ ಐದು ದಿನಗಳಲ್ಲಿ 2,495 ಮೆಟ್ರಿಕ್ ಟನ್ ನಿರ್ಮಾಣ ಮತ್ತು ಧ್ವಂಸ (C&D) ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಭಿಯಾನದ ಭಾಗವಾಗಿ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಅವರು ಮಾರೆನಹಳ್ಳಿ ಅವಶೇಷ ವಿಲೇವಾರಿ ಕೇಂದ್ರಕ್ಕೆ ಅಚ್ಚರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ, ವಾಹನಗಳ ಸಂಚಾರ, ಅವಶೇಷ ಇಳಿಸುವ ವ್ಯವಸ್ಥೆ ಮತ್ತು ಕೇಂದ್ರದ ಸಾಮರ್ಥ್ಯವನ್ನು ಅವರು ಪರಿಶೀಲಿಸಿದರು.
ನಗರದಲ್ಲಿ ಹೆಚ್ಚುತ್ತಿರುವ ನಿರ್ಮಾಣ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಈ ಕ್ರಮಗಳು ಸಹಕಾರಿ ಆಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ನೋಡಿ: ಕಥೆ ಮೊಗಳ್ಳಿ ಗಣೇಶ್ ಅವರನ್ನು ಬೆಳೆಸಿತು; ಮೊಗಳ್ಳಿ ಗಣೇಶ್ ಕೂಡ ಕಥೆಯನ್ನು ಬೆಳೆಸಿದರು – ಪ್ರೊ.ನಟರಾಜ್ ಹುಳಿಯಾರ್
