ಭಾರತದಲ್ಲಿ ವೇಗವಾಗಿ ಕುಸಿಯುತ್ತಿರುವ ಜನನ ಪ್ರಮಾಣ: ವೃದ್ಧ ಸಮಾಜದತ್ತ ದೇಶ?

ನವದೆಹಲಿ: ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಜನನ ಪ್ರಮಾಣ ನಿರೀಕ್ಷೆಗಿಂತ ವೇಗವಾಗಿ ಕುಸಿಯುತ್ತಿದ್ದು, ದೇಶದ ಜನಸಂಖ್ಯಾ ಸ್ವರೂಪದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಆರನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್‌–6) ಪ್ರಕಾರ, ದೇಶದ ಒಟ್ಟು ಫಲವತ್ತತೆ ಪ್ರಮಾಣ 2.0ಕ್ಕೆ ಇಳಿದಿದೆ. ಜನಸಂಖ್ಯೆಯನ್ನು ಸ್ಥಿರವಾಗಿಡಲು ಅಗತ್ಯವಿರುವ 2.1ರ ಬದಲಿ ಪ್ರಮಾಣಕ್ಕಿಂತ ಇದು ಕಡಿಮೆಯಾಗಿದೆ. ಜನನ

ಎನ್‌ಎಫ್‌ಎಚ್‌ಎಸ್‌–5ರಲ್ಲೂ ಫಲವತ್ತತೆ ಪ್ರಮಾಣ 2.0ರಷ್ಟೇ ದಾಖಲಾಗಿತ್ತು. ದೇಶದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಫಲವತ್ತತೆ ಪ್ರಮಾಣ ಬದಲಿ ಮಟ್ಟಕ್ಕಿಂತ ಕೆಳಗಿದೆ. ಬಿಹಾರದಲ್ಲಿ 2.7ರಷ್ಟು ಅತ್ಯಧಿಕ ಫಲವತ್ತತೆ ಪ್ರಮಾಣ ದಾಖಲಾಗಿದ್ದರೆ, ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ 0.9ರಷ್ಟು ಕಡಿಮೆಯಾಗಿದೆ. ನಗರ ಪ್ರದೇಶಗಳಲ್ಲಿ ಫಲವತ್ತತೆ ಪ್ರಮಾಣ 1.6ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 2.1ರಷ್ಟಿದೆ. ಮೇ ತಿಂಗಳಲ್ಲಿ ಬಿಡುಗಡೆಯಾದ 2024ರ ಮಾದರಿ ನೋಂದಣಿ ವ್ಯವಸ್ಥೆ ವರದಿಯೂ ದೇಶದ ಫಲವತ್ತತೆ ಪ್ರಮಾಣ 1.9ಕ್ಕೆ ಇಳಿದಿರುವುದನ್ನು ಅಂದಾಜಿಸಿತ್ತು.

1950ರಲ್ಲಿ ಐದಕ್ಕಿಂತ ಹೆಚ್ಚು ಮಕ್ಕಳಿದ್ದ ಭಾರತದ ಸರಾಸರಿ ಫಲವತ್ತತೆ ಪ್ರಮಾಣ ಈಗ ಎರಡಕ್ಕೆ ಇಳಿದಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಕುಸಿತ ಮತ್ತಷ್ಟು ವೇಗ ಪಡೆದುಕೊಂಡಿದೆ. 2020ರಲ್ಲಿ ಸುಮಾರು 2.35 ಕೋಟಿ ಇದ್ದ ವಾರ್ಷಿಕ ಜನನಗಳ ಸಂಖ್ಯೆ 2025ರಲ್ಲಿ ಸುಮಾರು 2.3 ಕೋಟಿಗೆ ಇಳಿದಿದ್ದು, ಮುಂದಿನ ವರ್ಷಗಳಲ್ಲೂ ಈ ಸಂಖ್ಯೆ ಕುಸಿಯುವ ನಿರೀಕ್ಷೆಯಿದೆ. ಜನನ

ಇದನ್ನೂ ಓದಿ : ಜಮ್ಮು-ಕಾಶ್ಮೀರದಲ್ಲಿ ಪ್ರಕೃತಿ ವಿಕೋಪದ ಭೀಕರ ಹೊಡೆತ: 24 ಸಾವಿರಕ್ಕೂ ಹೆಚ್ಚು ಮನೆ, 5 ಸಾವಿರ ರಸ್ತೆ ಹಾನಿ

ಆದರೆ ಫಲವತ್ತತೆ ಪ್ರಮಾಣ ಕುಸಿದ ತಕ್ಷಣವೇ ಭಾರತದ ಜನಸಂಖ್ಯೆ ಇಳಿಕೆಯಾಗುವುದಿಲ್ಲ. ಯುವ ಜನಸಂಖ್ಯೆಯ ದೊಡ್ಡ ಪ್ರಮಾಣದಿಂದಾಗಿ ‘ಜನಸಂಖ್ಯಾ ಚಲನೆ’ ಮುಂದುವರಿಯಲಿದೆ. ಪ್ರಸ್ತುತ ಜನಸಂಖ್ಯಾ ಬೆಳವಣಿಗೆಯಲ್ಲಿ ಸುಮಾರು ಶೇ.70ರಷ್ಟು ಕೊಡುಗೆ ಇದೇ ಅಂಶದಿಂದ ಬರುತ್ತಿದೆ ಎಂದು ವರದಿ ವಿವರಿಸಿದೆ. ಹೀಗಾಗಿ ಮುಂದಿನ ಎರಡು ದಶಕಗಳಲ್ಲಿ ಜನಸಂಖ್ಯಾ ಬೆಳವಣಿಗೆಯ ವೇಗ ತೀವ್ರವಾಗಿ ನಿಧಾನಗೊಳ್ಳುವ ಸಾಧ್ಯತೆಯಿದೆ.

ಇದರ ಮತ್ತೊಂದು ಪರಿಣಾಮ ದೇಶದ ವಯೋಸಂರಚನೆಯಲ್ಲಿ ಗೋಚರಿಸಲಿದೆ. 2011ರಲ್ಲಿ ಒಟ್ಟು ಜನಸಂಖ್ಯೆಯಲ್ಲಿ 0–19 ವರ್ಷದವರ ಪಾಲು ಶೇ.41ರಷ್ಟಿದ್ದರೆ, 2041ರ ವೇಳೆಗೆ ಅದು ಶೇ.25ಕ್ಕೆ ಇಳಿಯುವ ಅಂದಾಜಿದೆ. ಇದೇ ಅವಧಿಯಲ್ಲಿ 60 ವರ್ಷ ಮೇಲ್ಪಟ್ಟವರ ಪ್ರಮಾಣ ಶೇ.8.6ರಿಂದ ಶೇ.16ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಅಂದರೆ, ಜನಸಂಖ್ಯಾ ಸ್ಥಿರೀಕರಣದ ಜೊತೆಗೆ ದೇಶದ ಹಲವು ರಾಜ್ಯಗಳು ಮುಂದಿನ ದಶಕಗಳಲ್ಲಿ ವೃದ್ಧ ಸಮಾಜದತ್ತ ಸಾಗುವ ಪರಿಸ್ಥಿತಿ ಎದುರಾಗಲಿದೆ. ಜನನ

ಇದನ್ನೂ ನೋಡಿ : ಮತದಾರರ ಹಕ್ಕಿಗಾಗಿ ಹೋರಾಟ: SIR ವಿರುದ್ಧ ಪ್ರತಿರೋಧ ಪ್ರವಾಸ! Janashakthi Media

Donate Janashakthi Media

Leave a Reply

Your email address will not be published. Required fields are marked *