ಹಂಪ್‌ ಕಾಣದೆ ಅಪಘಾತ: ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ

ಕುಶಾಲನಗರ: ರಾಜ್ಯ ಹೆದ್ದಾರಿಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಹಂಪ್‌ಗಳು ವಾಹನ ಸವಾರರಿಗೆ ಸರಿಯಾಗಿ ಗೋಚರಿಸದ ಕಾರಣ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ರಸ್ತೆ ಸುರಕ್ಷತೆಗಾಗಿ ವಿನೂತನ ಕ್ರಮ ಕೈಗೊಂಡಿದೆ. ಹಂಪ್‌ 

ಸಾರ್ವಜನಿಕರಿಂದ ಬರುತ್ತಿದ್ದ ದೂರುಗಳು ಹಾಗೂ ಅಪಘಾತಗಳ ಹಿನ್ನೆಲೆಯಲ್ಲಿ ಸಂಘಟನೆಯ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ಸ್ವತಃ ರಸ್ತೆಗಿಳಿದು ಕುಶಾಲನಗರ ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಅಪಾಯಕಾರಿ ಹಂಪ್‌ಗಳಿಗೆ ಬಿಳಿ ಬಣ್ಣ ಬಳಿಸಿದ್ದಾರೆ. ಒಟ್ಟು ಆರು ಹಂಪ್‌ಗಳಿಗೆ ಬಣ್ಣ ಬಳಿದು ವಾಹನ ಚಾಲಕರಿಗೆ ಅವು ದೂರದಿಂದಲೇ ಗೋಚರಿಸುವಂತೆ ಮಾಡಲಾಗಿದೆ.

ಮೈಸೂರಿನಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ, ಬೈಲಕುಪ್ಪೆಯ ಗೋಲ್ಡನ್‌ ಟೆಂಪಲ್‌ಗೆ ತೆರಳುವ ರಸ್ತೆಯ ಸಮೀಪವಿರುವ ಹಂಪ್‌ಗೆ ಬಣ್ಣ ಬಳಿಯಲಾಯಿತು.

ಈ ಮಾರ್ಗದಲ್ಲಿ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಬಣ್ಣವಿಲ್ಲದ ಹಂಪ್‌ಗಳು ಚಾಲಕರಿಗೆ ಸರಿಯಾಗಿ ಕಾಣಿಸದೆ ಅಪಘಾತಗಳಿಗೆ ಕಾರಣವಾಗುತ್ತಿದ್ದವು ಎನ್ನಲಾಗಿದೆ. ಬಿಳಿ ಬಣ್ಣ ಬಳಿದ ಬಳಿಕ ಹಂಪ್‌ಗಳು ಸ್ಪಷ್ಟವಾಗಿ ಗೋಚರಿಸುವಂತಾಗಿದ್ದು, ವಾಹನಗಳ ವೇಗ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ ಎಂದು ಸಂಘಟನೆ ತಿಳಿಸಿದೆ. ಹಂಪ್‌ 

ಪ್ರಮುಖ ರಸ್ತೆಗಳಲ್ಲಿ ಆರು ಹಂಪ್‌ಗಳಿಗೆ ಬಣ್ಣ

ಕುಶಾಲನಗರ ತಾಲೂಕಿನ ವಿವಿಧ ಭಾಗಗಳಲ್ಲಿ ರಸ್ತೆ ಸುರಕ್ಷತಾ ಕಾರ್ಯಾಚರಣೆ ಮುಂದುವರಿಸಿದ ಸಂಘಟನೆಯ ಪದಾಧಿಕಾರಿಗಳು ಒಟ್ಟು ಆರು ಹಂಪ್‌ಗಳಿಗೆ ಬಣ್ಣ ಬಳಿಸಿದ್ದಾರೆ.

  • ಗೋಲ್ಡನ್‌ ಟೆಂಪಲ್‌ ರಸ್ತೆಯ ಸಮೀಪದ ಹೆದ್ದಾರಿಯ ಹಂಪ್‌
  • ಕುಶಾಲನಗರ ಹಳೆ ಮಾರ್ಕೆಟ್‌ ರಸ್ತೆಯ ಎರಡು ಹಂಪ್‌ಗಳು
  • ಐಬಿ ರಸ್ತೆಯ ಎರಡು ಹಂಪ್‌ಗಳು
  • ಸೋಮವಾರಪೇಟೆ ಮುಖ್ಯ ರಸ್ತೆಯ ಒಂದು ಹಂಪ್‌

ಹೆಚ್ಚಿನ ವಾಹನ ಸಂಚಾರವಿರುವ ಈ ರಸ್ತೆಗಳಲ್ಲಿ ಹಂಪ್‌ಗಳು ಸ್ಪಷ್ಟವಾಗಿ ಕಾಣುವಂತೆ ಮಾಡುವ ಮೂಲಕ ಅಪಘಾತಗಳನ್ನು ತಡೆಯುವ ಪ್ರಯತ್ನ ಮಾಡಲಾಗಿದೆ. ಹಂಪ್‌ 

ಇದನ್ನೂ ಓದಿ : ಎಸ್‌ಐಆರ್‌: ಬೆಂಗಳೂರಿನ ದೀರ್ಘಕಾಲದ ನಿವಾಸಿಗಳ ಹೆಸರೇ ಕರಡು ಪಟ್ಟಿಯಿಂದ ಮಾಯ; 36.49 ಲಕ್ಷ ನೋಟಿಸ್‌ ವಿತರಣೆ ಬಾಕಿ

ಸಾರ್ವಜನಿಕರಿಂದ ಮೆಚ್ಚುಗೆ

ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಬೇಕಾದ ಕಾರ್ಯವನ್ನು ಸಂಘಟನೆಯ ಪದಾಧಿಕಾರಿಗಳೇ ಸ್ವಯಂಪ್ರೇರಿತವಾಗಿ ಕೈಗೊಂಡಿರುವುದಕ್ಕೆ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಚಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲಿರುವ ಹಂಪ್‌ಗಳಿಗೆ ನಿಯಮಾನುಸಾರ ಬಣ್ಣ ಬಳಿಯುವುದು, ಎಚ್ಚರಿಕೆ ಫಲಕ ಅಳವಡಿಸುವುದು ಹಾಗೂ ಸೂಕ್ತ ನಿರ್ವಹಣೆ ಮಾಡುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದೆ. ಆದರೆ ಈ ಕಾರ್ಯ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಘಟನೆ ಈ ಕ್ರಮ ಕೈಗೊಂಡಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಕರವೇ ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, ಗೌರವಾಧ್ಯಕ್ಷ ಚಂದ್ರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಪ್ರಚಾರ ಸಮಿತಿ ಅಧ್ಯಕ್ಷ ಫ್ರೆಡ್ಡಿ, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಶಿವ, ಉಪಾಧ್ಯಕ್ಷ ನಾಸಿರ್, ಕಾರ್ಮಿಕ ಘಟಕದ ಅಧ್ಯಕ್ಷ ಆರ್. ಚಂದ್ರು, ಉಪಾಧ್ಯಕ್ಷ ಮಣಿಕಂಠ, ಸಂಚಾಲಕ ವಿಪಿ ಚಂದ್ರಶೇಖರ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ರಸ್ತೆ ಸುರಕ್ಷತೆಯಂತಹ ಸಾರ್ವಜನಿಕ ಹಿತಾಸಕ್ತಿಯ ವಿಷಯದಲ್ಲಿ ಸಂಘಟನೆ ಕೈಗೊಂಡಿರುವ ಈ ಕ್ರಮವನ್ನು ಮುಂದುವರಿಸುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ. ಹಂಪ್‌ 

ಇದನ್ನೂ ನೋಡಿ : ತೀವ್ರ ಬಲಪಂಥೀಯವಾದಿ ಸ್ವತಂತ್ರ ಭಾರದ್ವಾಜ್ ಬಹಿರಂಗಗೊಳಿಸಿದ ಘೋರ ವಾಸ್ತವಗಳೇನು? Janashakthi Media

Donate Janashakthi Media

Leave a Reply

Your email address will not be published. Required fields are marked *