‘ಮುರಿದ ಬೆನ್ನಿನ ಮೇಲೆ ಮತ್ತೆ ಮಣಭಾರ’: BMTC ಬಸ್ ಟಿಕೆಟ್ ದರ ಏರಿಕೆಗೆ CPIM ತೀವ್ರ ಖಂಡನೆ

  • ಹಾಲಿನ ದರ ಏರಿಕೆ ನಂತರ ಬಸ್‌ ಟಿಕೆಟ್‌ ದರ ಏರಿಕೆ ಮಾಡಿದ ಕಾಂಗ್ರೆಸ್‌ ಸರ್ಕಾರ  
  • ʻಮುರಿದ ಬೆನ್ನಿನ ಮೇಲೆ ಮತ್ತೆ ಮಣಭಾರʼ ಎಂದು ಸಿಪಿಐ(ಎಂ) ಕಿಡಿ
  • ಸರ್ಕಾರದ ಮುಂದೆ ಸಾಲು ಸಾಲು ಬೇಡಿಕೆಗಳನ್ನಿಟ್ಟ ಸಿಪಿಐಎಂ
ಬೆಂಗಳೂರು: ಅಗತ್ಯ ವಸ್ತುಗಳ ದರ ಏರಿಕೆ, ಹಾಲು ದರ ಏರಿಕೆ ನಂತರ ಈಗ ಬಸ್‌ ಪ್ರಯಾಣ ದರದಲ್ಲಿಯೂ ಸರ್ಕಾರ ಏರಿಕೆ ಮಾಡಿದ್ದು, ಕರ್ನಾಟಕದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದ್ಯ ಈ ವಿರುದ್ಧ ಸಿಪಿಐ(ಎಂ) ತೀವ್ರ ಕಿಡಿಕಾರಿದೆ. BMTC 

ದರ ಏರಿಕೆ, ಬರಗಾಲದಲ್ಲಿ ಜನರ ಬಳಿ ಸರ್ಕಾರ ಹಣ ಪೀಕುತ್ತಿರುವ  ಬಗ್ಗೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಡಾ. ಪ್ರಕಾಶ್ ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಡೆ ವಿರುದ್ಧ ಮುಂದಾಗುವ ಸಮಸ್ಯೆ ಬಗ್ಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಮುರಿದ

ಗ್ರಾಹಕರು-ಉತ್ಪಾದಕರ ನಡುವೆ ವೈರತ್ವ?

ಈಗಾಗಲೇ ಹಾಲಿನ ಬೆಲೆ ಏರಿಕೆ, ಅಕ್ಕಿ, ಬೇಳೆ ಹಾಗೂ ಮತ್ತಿತರ ಜೀವನಾವಶ್ಯಕ ಸಾಮಗ್ರಿಗಳ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಿರುವುದರಿಂದ ದುಡಿದು ಬದುಕುವ ಜನತೆ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಹೈನುಗಾರಿಕೆಯ ರೈತರ ಕಷ್ಟಕ್ಕೆ ಸಬ್ಸಿಡಿ ಹೆಚ್ಚಿಸುವ ಮೂಲಕ ನೆರವಾಗುವ ಬದಲು, ಹಾಲಿನ ದರ ಹೆಚ್ಚಿಸಿ ಗ್ರಾಹಕರು ಮತ್ತು ಉತ್ಪಾದಕರ ನಡುವೆ ವೈರತ್ವ ತರುವ ಕೆಲಸ ಮಾಡಲಾಗಿದೆ.ಗಾಯದ ಮೇಲೆ ಬರೆ ಎಳೆದು ಉಪ್ಪು ಸವರಿದಂತೆ, ಈಗ ಸಾರಿಗೆ ದರವನ್ನು ಕೂಡ ಹೆಚ್ಚಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ದರದಲ್ಲಿ ಕನಿಷ್ಠ ರೂ. ೯ ರಂತೆ ಇಂದಿನಿಂದಲೇ ಮಧ್ಯರಾತ್ರಿಯಿಂದ ಹೆಚ್ಚಳವಾಗಲಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ದೂರದ ಊರುಗಳಿಗೆ ಪ್ರಯಾಣಿಸುವವರ ಮೇಲೆಯೂ ಇದರ ಹೊರೆ ಇನ್ನಷ್ಟು ಹೆಚ್ಚಾಗಲಿದೆ.

BMTC ಟಿಕೆಟ್ ದರದಲ್ಲಿ ಭಾರಿ ಏರಿಕೆ

ಬೆಂಗಳೂರು ನಗರದಲ್ಲಿ ಸಂಚರಿಸುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ದರವನ್ನು ಕನಿಷ್ಠ 6ರೂ.ಯಿಂದ 10ಕ್ಕೆ ಏರಿಕೆ ಮಾಡಲಾಗಿದೆ.  ಗರಿಷ್ಠ 10 ರೂ.ಯಿಂದ 12 ರೂ.ಗೆ ಏರಿಕೆ ಮಾಡಲಾಗಿದೆ.  ಮಹಿಳೆಯರಿಗೆ ರಿಯಾಯಿತಿ ಇಲ್ಲದ ‘ವಜ್ರ’ ಬಸ್ ದರವನ್ನೂ ಸಹ ಏರಿಕೆ ಮಾಡಲಾಗಿದೆ ಎಂದು ಡಾ. ಪ್ರಕಾಶ್ ಕೆ ಉಲ್ಲೇಖಿಸಿದರು. ಮುರಿದ 

ಇದನ್ನೂ ಓದಿ: ʼಭಕ್ತಿʼಯ ಕಣ್ಣುಪಟ್ಟಿ ಮತ್ತು ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ

ಬರಗಾಲದ ಮಧ್ಯೆ ಹಣ ಪೀಕುತ್ತಿರುವ ಸರ್ಕಾರ

ರಾಜ್ಯವು ಭೀಕರ ಬರ ಎದುರಿಸುತ್ತಿದ್ದು, ಜನತೆ ಈಗಾಗಲೇ ಇದರಿಂದ ತತ್ತರಿಸುತ್ತಿದ್ದಾರೆ. ಇದರ ಜೊತೆಗೆ ಸರಕಾರವೇ ಸಾರಿಗೆ ದರಗಳನ್ನು ಏರಿಸಿ ಜನರ ನಡು ಮುರಿಯುವ ಕೆಲಸಕ್ಕೆ ಕೈಹಾಕಿದೆ. ಇದು ಜನರನ್ನು ಸುಲಿಗೆ ಮಾಡುವ ಕ್ರಮವಾಗಿದ್ದು, ರಾಜ್ಯ ಕಾಂಗ್ರೆಸ್ ಸರಕಾರ ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಸಿಪಿಐ(ಎಂ) ಎಚ್ಚರಿಸಿದೆ. ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯ ಮೂವರು ಸದಸ್ಯರ ಶಿಫಾರಸಿನ ಮೇರೆಗೆ ಈ ದರ ಏರಿಕೆ ಮಾಡಲಾಗಿದ್ದು, ಈ ಸಮಿತಿಯು ದಂತಗೋಪುರದ ಒಳಗೆ ಕುಳಿತು ಯೋಚಿಸುವವರ ವಲಯಕ್ಕೆ ಸೇರಿದೆ. ಇದರಿಂದ ಬಡ, ದುಡಿದು ಬದುಕುವ ಜನರ ಬದುಕಿನ ಬಗ್ಗೆ ಅವರಿಗೇತರ ಕಾಳಜಿಯೂ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಹೇಳಿದರು.

ಸಿಪಿಐಎಂ ಬೇಡಿಕೆಗಳಿವು

  • ನಿಗಮಗಳಲ್ಲಿ ನಡೆಯುವ ಭ್ರಷ್ಟಾಚಾರ, ಸೋರಿಕೆ ಹಾಗೂ ಅವ್ಯವಹಾರಗಳನ್ನು ತಡೆಯಲು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು.
  •  ಅದು ಬಿಟ್ಟು ಜನರ ಮೇಲೆ ನೇರವಾಗಿ ಹೊರೆ ಹೊರಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು.
  •  ರಾಜ್ಯ ಕಾಂಗ್ರೆಸ್ ಸರಕಾರ ಈ ಯದ್ವಾತದ್ವಾ ದರ ಪರಿಷ್ಕರಣೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯು ಬಲವಾಗಿ ಒತ್ತಾಯಿಸುತ್ತದೆ.

ಇದನ್ನೂ ನೋಡಿ: SIR 2026 | ಸುಪ್ರೀಂ ಕೋರ್ಟ್‌ಗೆ 7 ಪ್ರಶ್ನೆಗಳು – ಉತ್ತರಗಳು ಎಷ್ಟು ಸಮಂಜಸ? | ಕೆ.ಎಸ್‌.ವಿಮಲಾ Janashakthi Media

Donate Janashakthi Media

Leave a Reply

Your email address will not be published. Required fields are marked *