ಬೆಂಗಳೂರು:ತೆರೆ ಕಾಣಲು ಸಜ್ಜಾಗಿರುವ ಸಿನಿಮಾಗಳು ಕೇಂದ್ರ ಸೆನ್ಸಾರ್ ಮಂಡಳಿಯ (ಸಿಬಿಎಫ್ಸಿ) ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಇಲ್ಲದೆ ಕನ್ನಡ ಸಿನಿಮಾಗಳ ಸೆನ್ಸರ್ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತ ಗೊಂಡಿದ್ದು, ಡಿಸೆಂಬರ್ ತಿಂಗಳಿನಲ್ಲಿ ತೆರೆಗೆ ಬರಬೇಕಿದ್ದ ಹಲವು ಸಿನಿಮಾಗಳಿಗೆ ಸಂಕಷ್ಟ ಎದುರಾಗಿದೆ. 132 ಕನ್ನಡ ಸಿನಿಮಾಗಳಿಗೆ ಸಂಕಷ್ಟ ಎದುರಾಗಿದೆ.
ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಪ್ರಶಾಂತ್ ಕುಮಾರ್ ಕನ್ನಡ ಸಿನಿಮಾವೊಂದಕ್ಕೆ ಸೆನ್ಸಾರ್ ಸರ್ಟಿಫಿಕೆಟ್ ನೀಡಲು ಲಂಚ ಪಡೆಯುತ್ತಿದ್ದರು ಎಂಬ ಆರೋಪದ ಮೇಲೆ ನ.30ರಂದು ಸಿಬಿಐ ಬಂಧಿಸಿತ್ತು. ಹೀಗಾಗಿ ಸಿನಿಮಾಗಳಿಗೆ ಸೆನ್ಸಾರ್ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
132 ಸಿನಿಮಾಗಳು ಸೆನ್ಸಾರ್ ಸಂಕಷ್ಟ: 132 ಸಿನಿಮಾಗಳು ಸೆನ್ಸಾರ್ಗಾಗಿ ಕಾಯುತ್ತಿವೆ. ಈ ಸಂಬಂಧ ಚಲನಚಿತ್ರ ವಾಣಿಜ್ಯ ಮಂಡಳಿಯು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಮೂರು ತಂಡಗಳನ್ನು ಮಾಡಿ ದಿನಕ್ಕೆ ಮೂರು ಚಿತ್ರಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಂಡಬೇಕೆಂದು ವಿನಂತಿಸಿದ್ದೇವೆ’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಖಜಾಂಚಿ ಭಾ.ಮಾ.ಗಿರೀಶ್ ಹೇಳಿದ್ದಾರೆ.
ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಆನ್ಲೈನ್ ಮೂಲಕವೇ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಸಿನಿಮಾ ವೀಕ್ಷಿಸಿ, ಸೆನ್ಸಾರ್ ಪ್ರಮಾಣಪತ್ರ ನೀಡಲು ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಇರಬೇಕಾದದ್ದು ಅಗತ್ಯ. ಈ ವರ್ಷದ ಸೆನ್ಸಾರ್ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ನ.15 ಕೊನೆಯ ದಿನವಾಗಿತ್ತು. ಚಿತ್ರಮಂದಿರಕ್ಕೆ ಬರುವು ಚಿತ್ರಗಳ ಜೊತೆಗೆ ಭಾರತೀಯ ಚಿತ್ರೋತ್ಸವಗಳಿಗೆ ಸೀಮಿತವಾಗಿರುವ ಸಾಕಷ್ಟು ಚಿತ್ರಗಳು ಡಿಸೆಂಬರ್ನಲ್ಲಿ ಸೆನ್ಸಾರ್ ಬರುತ್ತವೆ. ಜನವರಿಯಿಂದ ಹಲವಾರು ಚಿತ್ರೋತ್ಸವಗಳು ಪ್ರಾರಂಭವಾಗುವುದೆ ಇದಕ್ಕೆ ಕಾರಣ’ ಎಂದು ಹೆಸರು ಹೇಳ ಇಚ್ಛಿಸದ ಸೆನ್ಸಾರ್ ಮಂಡಳಿಯ ಸದಸ್ಯರೊಬ್ಬರು ಹೇಳಿದ್ದಾರೆ.
‘ಕಾಟೇರ’ ಸೇರಿ ಇದೇ ತಿಂಗಳು ಬಿಡುಗಡೆಗೆ ಸಿದ್ಧವಿರುವ ಹಲವು ಸಿನಿಮಾಗಳಿಗೆ ತೊಂದರೆಯಾಗುತ್ತಿದೆ. ಅಧಿಕಾರಿಯ ಕೊರತೆಯಿಂದಾಗಿ 132 ಕನ್ನಡ ಸಿನಿಮಾಗಳಿಗೆ ಸಂಕಷ್ಟ ಎದುರಾಗಿದೆ.