ಫ್ಯಾಕ್ಟ್‌ಚೆಕ್ | ಚರಕ ಪೂಜೆಯ ಅಣಕು ನರಬಲಿ ಆಚರಣೆ ‘ನಿಜ’ ಎಂಬಂತೆ ವೈರಲ್!

ಯುವಕರಿಬ್ಬರ ತಲೆಯನ್ನು ಕತ್ತರಿಸಿ ಅವರ ದೇಹದ ಬಳಿದ ಕಾಳಿ ದೇವಿಯ ವೇಷ ಧರಿಸಿದ ವ್ಯಕ್ತಿ ನೃತ್ಯ ಮಾಡುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿದ್ದು, “ನರಬಲಿ ನೀಡುವ ಇಂತಹ ಧಾರ್ಮಿಕ ಆಚರಣೆಗಳು ಬೇಕೆ?” ಎಂದು ಪ್ರಶ್ನಿಸಲಾಗುತ್ತಿದೆ. ವಿಡಿಯೊದಲ್ಲಿ ವ್ಯಕ್ತಿಗಳಿಬ್ಬರ ತಲೆಯಿಲ್ಲದ ದೇಹ ನೆಲದಲ್ಲಿ ಬಿದ್ದಿದ್ದು ಕಾಣುತ್ತದೆ, ಜೊತೆಗೆ ಅವರ ಎರಡು ತಲೆಗಳನ್ನು ಅಲ್ಲೆ ಹತ್ತಿರದಲ್ಲಿ ಕಾಣುವಂತೆ ಇಟ್ಟಿರುವುದು ಕಾಣುತ್ತದೆ. ಸುತ್ತ ನಿಂತಿರುವ ಜನರು ಜೈಕಾರ ಹಾಕುವುದು ಕೂಡಾ ವಿಡಿಯೊದಲ್ಲಿ ದಾಖಲಾಗಿದೆ. ಚರಕ ಪೂಜೆ

ಇಷ್ಟೆ ಅಲ್ಲದೆ, ಈ ವಿಡಿಯೊ ಆಧಾರದಲ್ಲಿ ಕನ್ನಡದ ಪ್ರಮುಖ ಸುದ್ದಿ ಮಾಧ್ಯಮವಾದ ಟಿವಿ9 ಕೂಡಾ ವಿಶೇ‍ಷ ಕಾರ್ಯಕ್ರಮವೊಂದನ್ನು ಡಿಸೆಂಬರ್ ನಾಲ್ಕರ ಸೋಮವಾರದಂದು ಪ್ರಸಾರ ಮಾಡಿದೆ. ಜೊತೆಗೆ ಹಲವಾರು ಜನರು ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ನರಬಲಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.ಚರಕ ಪೂಜೆಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಮುಸ್ಲಿಂ ಆಧ್ಯಾತ್ಮಿಕ ನಾಯಕನನ್ನು ಭಯೋತ್ಪಾದಕ ಬೆಂಬಲಿಗ ಎಂದು ಸುಳ್ಳು ಹೇಳಿದ ಬಿಜೆಪಿ ಶಾಸಕ ಯತ್ನಾಳ್ 

ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡುವಂತೆ ಜನಶಕ್ತಿ ಮೀಡಿಯಾದ +916361984022 ನಂಬರ್‌ಗೆ ವಿನಂತಿಗಳು ಬಂದಿವೆ. ಜನಶಕ್ತಿ ಮೀಡಿಯಾದ ಫ್ಯಾಕ್ಟ್‌ಚೆಕ್ ಗ್ರೂಪ್‌ಗೆ ಸೇರಿಲು ಇಲ್ಲಿ ಕ್ಲಿಕ್ ಮಾಡಿ. ಚರಕ ಪೂಜೆ

 

ಫ್ಯಾಕ್ಟ್‌ ಚೆಕ್

ಈ ಬಗ್ಗೆ ನಾವು ಹುಡುಕಾಡಿದಾಗ ಈ ಆಚರಣೆಯು ಅವಿಭಜಿತ ಬಂಗಾಳ ಪ್ರಾಂತ್ಯದಲ್ಲಿ ನಡೆಯುವ ಧಾರ್ಮಿಕ ಹಬ್ಬವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಇದನ್ನು ಸಾಮಾನ್ಯವಾಗಿ ಚರಕ ಪೂಜೆ ಎಂದು ಕರೆಯುತ್ತಾರೆ. ಅಷ್ಟೆ ಅಲ್ಲದೆ ಇದನ್ನು ಚೈತ್ರ ಪೂಜೆ ಹಾಗೂ ಹಜರ ಪೂಜೆ ಎಂದೂ ಕರೆಯುತ್ತಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಕ್ಲಿಪ್ ಮಾಡಿದ ವಿಡಿಯೊ ಬಳಸಿ, ‘ರಾಹುಲ್ ಗಾಂಧಿ ಭಾರತ ಮಾತೆಗೆ ಅವಮಾನಿಸಿದ್ದಾರೆ’ ಎಂದು ಸುಳ್ಳು ಹೇಳಿದ ಬಿಜೆಪಿ

ಚರಕ ಪೂಜೆಯು ಸಾಂಪ್ರದಾಯಿಕ ಉತ್ಸವವಾಗಿದ್ದು ಇದನ್ನು ಬಾಂಗ್ಲಾದೇಶ ಮತ್ತು ಭಾರತದ ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಹೂಗ್ಲಿ, ಹೌರಾ ಮತ್ತು ಮೇದಿನಿಪುರ ಹಾಗೂ ಅಸ್ಸಾಂನ ಕೆಲವು ಜಿಲ್ಲೆಗಳಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವು ಸಾಮಾನ್ಯವಾಗಿ ಚೈತ್ರ ಮಾಸದ ಕೊನೆಯಲ್ಲಿ ನಡೆಯುತ್ತದೆ.

ಈ ಹಿನ್ನೆಲೆಯಲ್ಲಿ ನಾವು ಮತ್ತಷ್ಟು ಹುಡುಕಾಡಿದ್ದು, ನಮಗೆ ಹಲವಾರು ವಿಡಿಯೊಗಳು ಮತ್ತು ಮಾಹಿತಿಗಳು ಲಭ್ಯವಾಗಿದೆ. ಈ ಆಚರಣೆಯನ್ನು ವೇಳೆ ಹುಕ್‌ಗಳನ್ನು ಬೆನ್ನಿಗೆ ಸಿಕ್ಕಿಸಿ ನೇತಾಡುವುದು ಸೇರಿದಂತೆ ದೇಹವನ್ನು ದಂಡಿಸುವ ಮೂಲಕ ಕೂಡಾ ಆಚರಿಸುತ್ತಾರೆ. ಸಂಕ್ಷಿಪ್ತ ಮಾಹಿತಿಗೆ ಇಲ್ಲಿ ನೋಡಬಹುದು.

ಈ ಆಚರಣೆಯಲ್ಲಿ ನರಬಲಿ ನೀಡಲಾಗುತ್ತದೆಯೆ?

ಈ ಬಗ್ಗೆ ನಾವು ಮತ್ತಷ್ಟು ಹುಡುಕಾಡಿದಾಗ, ಚರಕ ಪೂಜೆಯಲ್ಲಿ ಹಿಂಸೆ ಇದೆಯಾದರೂ, ಯಾರನ್ನೂ ಬಲಿ ನೀಡಲಾಗುವುದಿಲ್ಲ ಎಂದು ನಮಗೆ ತಿಳಿದುಬಂದಿದೆ. ಈ ಆಚರಣೆಯ ಬಗ್ಗೆ DAY WITH PROVASH ಎಂಬ ಯುಟ್ಯೂಬ್ ಚಾನೆಲ್ ವಿಡಿಯೊವೊಂದು ಅಪ್‌ಲೋಡ್ ಮಾಡಲಾಗಿದ್ದು ಅದರಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಪೊಲೀಸರಿಗೆ ಥಳಿಸುತ್ತಿರುವ ಈ ವಿಡಿಯೊ ರಾಜಸ್ಥಾನದಲ್ಲ; ಥಳಿಸುತ್ತಿರುವವರು ಮುಸ್ಲಿಂ ಗುಂಪಲ್ಲ

ಫ್ಯಾಕ್ಟ್‌ಚೆಕ್,ಚರಕ ಪೂಜೆ, ಅಣಕು, ನರಬಲಿ ,ಆಚರಣೆ ,ನಿಜ, ವೈರಲ್, FactCheck , Charaka Puja, Mock, Human Sacrifice, Ritual, Viral

ಅಲ್ಲದೆ ಈ ವಿಡಿಯೊಗೆ ಜನರು ನರಬಲಿಯ ಬಗ್ಗೆ ಪ್ರಶ್ನಿಸಿದಾಗ ವಿಡಿಯೊ ಚಾನೆಲ್ ಈ ಬಗ್ಗೆ ಹೆಚ್ಚಿನ ಸ್ಪಷ್ಟನೆ ನೀಡಿದೆ. “ಇಲ್ಲಿ ಯಾರನ್ನೂ ಬಲಿ ನೀಡಿಲ್ಲ. ತಾಯಿ ಕಾಳಿಯು ರಾಕ್ಷಸ ಜನಾಂಗವನ್ನು ನಾಶಪಡಿಸುವ ಕೆಲವು ಚಿತ್ರಣಗಳು ಮತ್ತು ತಾಯಿ ಕಾಳಿಯ ವಿನಾಶಕಾರಿ ರೂಪವನ್ನು ತಡೆಯಲು ಮಹಾದೇವ ಏನು ಮಾಡಿದನು ಎಂಬುದನ್ನು ಇಲ್ಲಿ ನಟಿಸಿ ತೋರಿಸಲಾಗುತ್ತದೆ” ಎಂದು ಉತ್ತರ ನೀಡಿದ್ದಾರೆ.

ಅಲ್ಲದೆ ಈ ಆಚರಣೆಯಲ್ಲಿ ನಟಿಸುವುದು ಮತ್ತು ನರಬಲಿಯಂತೆ ಕಾಣುವ ವಿಡಿಯೊದ ಸತ್ಯಾಸತ್ಯತೆ ಬಗ್ಗೆ ಬೇರೆ ವಿಡಿಯೊಗಳಲ್ಲಿ ಕಾಣಬಹುದಾಗಿದೆ. ಅದರಲ್ಲಿ ಅವರು ತಲೆಯನ್ನು ನೆಲದಲ್ಲಿ ಹೂತಿರುವುದು ಅಥವಾ ಬಟ್ಟೆ ಹಾಕಿ ಮುಚ್ಚಿಟ್ಟಿರುವುದು ಸೂಕ್ಷ್ಮವಾಗಿ ನೋಡಿದರೆ ಗಮನಿಸಬಹುದು. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಹಿಂದೂಗಳ ವ್ಯಾಪಾರ ಬಹಿಷ್ಕರಿಸುವಂತೆ ಬೆಂಗಳೂರಿನಲ್ಲಿ ಮುಸ್ಲಿಮರು ಕರೆ ನೀಡಿಲ್ಲ

 

ಒಟ್ಟಿನಲ್ಲಿ ಹೇಳಬಹುದಾದರೆ, ನರಬಲಿ ನೀಡುವ ಆಚರಣೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಆಚರಣೆಯಲ್ಲಿ ದೈಹಿಕ ದಂಡನೆ ಮಾಡಲಾಗುತ್ತದೆ ಎಂಬುವುದು ನಿಜವಾದರೂ ನಿಜವಾಗಿಯು ನರಬಲಿ ನೀಡುವುದಿಲ್ಲ. ನರಬಲಿ ನೀಡಿದಂತೆ ಅಣಕು ಪ್ರದರ್ಶನ ಮಾಡುತ್ತಾರೆ. ಇದರಲ್ಲಿ ವ್ಯಕ್ತಿಗಳ ತಲೆಯನ್ನು ನೆಲದಲ್ಲಿ ಹೂತಿರುತ್ತಾರೆ ಅಥವಾ ಮುಚ್ಚಿರುತ್ತಾರೆ.


ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.


ವಿಡಿಯೊ ನೋಡಿ: ಮಹಾಧರಣಿ : ದುಡಿಯುವ ಜನರ ಹೋರಾಟದ ಹಾಡುಗಳು| ಕ್ರಾಂತಿಯಾಗಲಿ ಈ ನೆಲದ ಕ್ರಾಂತಿಯಾಗಲಿ Janashakthi Media

Donate Janashakthi Media

Leave a Reply

Your email address will not be published. Required fields are marked *