ಗಣಪತಿ ಪೂಜೆ ನಮ್ಮ ಸಂಸ್ಕೃತಿಯಲ್ಲ, ಮೌಢ್ಯದ ಆಚರಣೆ| ಸಾಣೇಹಳ್ಳಿ ಸ್ವಾಮೀಜಿ

ಚಿತ್ರದುರ್ಗ: ವೇದಿಕೆ ಕಾರ್ಯಕ್ರಮಗಳಲ್ಲಿ ಅಥವಾ ಮನೆಗಳಲ್ಲಿ ಗಣಪತಿಯನ್ನು ವಿಘ್ನ ನಿವಾರಕನನ್ನಾಗಿ ಪೂಜಿಸುವುದು, ಪ್ರಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಲ್ಲ. ಅದರ ಬದಲು ವಾಸ್ತವಕ್ಕೆ ತಕ್ಕುದಾದ ವಚನಗಳನ್ನು ಪಠಿಸಬೇಕು’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಂಸ್ಕೃತಿಯಲ್ಲ

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿಯಲ್ಲಿ ಗುರುವಾರದಿಂದ ಆರಂಭವಾದ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಶಿವಾಚಾರ್ಯ ಸ್ವಾಮೀಜಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಇದನ್ನೂ ಓದಿ:ಸರ್ವ ಧರ್ಮೀಯರು ಸೇರಿ ನಿರ್ಮಿಸಿದ ಮಸೀದಿ ಉದ್ಘಾಟಿಸಿದ ಗವಿಮಠ ಸ್ವಾಮೀಜಿ

ಗಣಪತಿ ಸ್ತುತಿಸುವುದು ಮೌಢ್ಯದ ಆಚರಣೆ, ವಚನ ಪ್ರಸ್ತುತ ಪಡಿಸುವುದು ನಿಜವಾದ ಪ್ರಾರ್ಥನೆ. ಶಿವಕುಮಾರ ಸ್ವಾಮೀಜಿ ಕಾರ್ಯಕ್ರಮಗಳ ಆರಂಭದಲ್ಲಿ ವಚನಗಳನ್ನು ಹಾಡಬಹುದು ಎಂದು ತೋರಿಸಿದ್ದಾರೆ ಎಂದು ಹೇಳಿದ್ದಾರೆ.

ಗಣಪತಿ ಕಾಲ್ಪನಿಕ ದೇವರು, ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ನೆಪ ಮಾತ್ರಕ್ಕೆ ಹುಟ್ಟಿಕೊಂಡ ದೇವರದು. ಬಾಹ್ಯ ವಸ್ತುಗಳಿಂದ ಮಾಡಿದ ದೇವರುಗಳು ದೇವರಲ್ಲ, ಮನೆಗಳಲ್ಲಿ ಅಥವಾ ಯಾವುದೇ ಸಮಾರಂಭಗಳಲ್ಲಿ ಮೊದಲು ಗಣಪತಿ ಪೂಜೆ, ಸ್ತೋತ್ರ ಶ್ಲೋಕ ಪಠಸಬೇಕು ಎಂಬುದು ಹಲವರ ನಂಬಿಕೆಯಾಗಿದ್ದು, ಅದರ ಬದಲು ವಚನಗಳನ್ನು ಪ್ರಾರ್ಥನೆಯಂತೆ ಪಠಿಸಬೇಕು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೋ ನೋಡಿ:ದೇವದಾಸಿ ಪದ್ದತಿ ಹುಟ್ಟಿದ್ದು ಸನಾತನ ಧರ್ಮದಿಂದ – ಬಿ. ಮಾಳಮ್ಮ Janashakthi Media

Donate Janashakthi Media

Leave a Reply

Your email address will not be published. Required fields are marked *