– ಹುಲಿಕಟ್ಟಿ ಚನ್ನಬಸಪ್ಪ ಸಿರುಗುಪ್ಪ
ಸಂಪುಟ – 06, ಸಂಚಿಕೆ 02, ಜನವರಿ, 08, 2012

ಅವರು ಬಂದರು
ನಕಲಿ ದೇಶಭಕ್ತಿಯ
ವೇಷ ಧರಿಸಿದರು
ಅಫ್ಜಲ್ ಗುರುವಿಗೆ ಗಲ್ಲು
ಎಲ್ಲೆಲ್ಲೂ
ಎಬ್ಬಿಸಿದರು ಗುಲ್ಲು
ಅವರ ಧ್ವನಿಯನ್ನು
ಪ್ರತಿಧ್ವನಿಸಿದವು
ಪಾಲರ್ಿಮೆಂಟಿನ ಕಂಬಗಳು
ಮತ್ತೆ ಕೂಗಿದರು ಅವರು
ಕಸಬ್ನಿಗೂ
ಆಗಬೇಕು ಗಲ್ಲು
ಹೌದೆಂದವು
ನೆತ್ತರು ಚೆಲ್ಲಿದ
ಮುಂಬೈನ ಬೀದಿಗಳು
ಗುಜರಾತ್ ಗಲಭೆಯಲ್ಲಿ
ಸತ್ತವರ ಗೋರಿಗಳು
ಕೂಗಿ ಹೇಳಿದವು
ನರೇಂದ್ರ ಮೋದಿಗೂ
ಆಗಲೇ ಬೇಕು ಗಲ್ಲು
ಆಗ, ಇವರು
ಎತ್ತಲೇ ಇಲ್ಲ ಸೊಲ್ಲು.
