ಬೆಂಗಳೂರು: ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು ಎಲ್ಲೆಡೆ ಅಮೃತಮಹೋತ್ಸವ ಆಚರಣೆಯಲ್ಲಿವೆ. ಹಾಗೆಯೇ ರಾಜ್ಯ ಸರಕಾರದ ವತಿಯಿಂದಲೂ ಘೋಷಿಸಲಾಗಿರುವ ಯೋಜನೆಗಳ ಅನುಷ್ಠಾನ ಮತ್ತು ಫಲಾನುಭವಿಗಳ ಆಯ್ಕೆ ಬಗೆಗಿನ ಎಲ್ಲವನ್ನು ನಡೆಸುವ ಬಗ್ಗೆ ನಡೆಸಲಾಗುವ ಸಭೆಯ ಅಧ್ಯಕ್ಷತೆ ವಹಿಸಲು ಜಿಲ್ಲಾವಾರು ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ಆಗಸ್ಟ್ 15 ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಹೊಸ ಕಾರ್ಯಕ್ರಮಗಳನ್ನು ಘೊಷಣೆ ಮಾಡಿದರು. ಸರಕಾರದ ಯೋಜನೆಗಳ ಅನುಷ್ಠಾನ ಹಾಗೂ ಫಲಾನುಭವಿಗಳ ಆಯ್ಕೆ ನಡೆಯಲಿದೆ.
ಜಿಲ್ಲೆಗಳಲ್ಲಿ ಕೋವಿಡ್ ಮತ್ತು ನೆರೆ ಪರಿಹಾರ ಉಸ್ತುವಾರಿಗಾಗಿ ನೇಮಕ ಮಾಡಿರುವ ಸಚಿವರನ್ನೇ ಅಮೃತ ಮಹೋತ್ಸವ ಯೋಜನೆಗಳ ಅನುಷ್ಠಾನದ ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ. ಯೋಜನೆಗಳು ಹಾಗೂ ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಮಂತ್ರಿಗಳು ಎಂಬ ಮಾಹಿತಿ ಕೆಳಗಿನಂತಿವೆ.
- ಗೋವಿಂದ ಕಾರಜೋಳ – ಬೆಳಗಾವಿ ಜಿಲ್ಲೆ
- ಕೆ.ಎಸ್. ಈಶ್ವರಪ್ಪ – ಶಿವಮೊಗ್ಗ ಜಿಲ್ಲೆ
- ಆರ್. ಅಶೋಕ್ – ಬೆಂಗಳೂರು ನಗರ ಜಿಲ್ಲೆ
- ಬಿ. ಶ್ರೀರಾಮುಲು – ಚಿತ್ರದುರ್ಗ ಜಿಲ್ಲೆ
- ವಿ. ಸೋಮಣ್ಣ – ರಾಯಚೂರು ಜಿಲ್ಲೆ
- ಉಮೇಶ್ ಕತ್ತಿ – ಬಾಗಲಕೋಟೆ ಜಿಲ್ಲೆ
- ಎಸ್. ಅಂಗಾರ – ದಕ್ಷಿಣ ಕನ್ನಡ ಜಿಲ್ಲೆ
- ಜೆ.ಸಿ. ಮಾಧುಸ್ವಾಮಿ – ತುಮಕೂರು ಜಿಲ್ಲೆ
- ಆರಗ ಜ್ಞಾನೇಂದ್ರ – ಚಿಕ್ಕಮಗಳೂರು ಜಿಲ್ಲೆ
- ಡಾ. ಸಿ. ಎನ್. ಅಶ್ವಥ್ ನಾರಾಯಣ – ರಾಮನಗರ ಜಿಲ್ಲೆ
- ಸಿ.ಸಿ. ಪಾಟೀಲ್ – ಗದಗ ಜಿಲ್ಲೆ
- ಆನಂದ್ ಸಿಂಗ್ – ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು
- ಕೋಟ ಶ್ರೀನಿವಾಸ ಪೂಜಾರಿ – ಕೊಡಗು ಜಿಲ್ಲೆ
- ಪ್ರಭು ಚೌಹಾಣ್ – ಬೀದರ್ ಜಿಲ್ಲೆ
- ಮುರುಗೇಶ ನಿರಾಣಿ – ಕಲಬುರಗಿ ಜಿಲ್ಲೆ
- ಅರಬೈಲ್ ಶಿವರಾಮ್ ಹೆಬ್ಬಾರ್ – ಉತ್ತರ ಕನ್ನಡ ಜಿಲ್ಲೆ
- ಎಸ್.ಟಿ. ಸೋಮಶೇಖರ್ – ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು
- ಬಿ.ಸಿ. ಪಾಟೀಲ್ – ಹಾವೇರಿ ಜಿಲ್ಲೆ
- ಬಿ. ಎ. ಬಸವರಾಜು – ದಾವಣಗೆರೆ ಜಿಲ್ಲೆ
- ಡಾ. ಕೆ. ಸುಧಾಕರ್ – ಚಿಕ್ಕಬಳ್ಳಾಪುರ ಜಿಲ್ಲೆ
- ಕೆ. ಗೋಪಾಲಯ್ಯ – ಹಾಸನ ಜಿಲ್ಲೆ
- ಶಶಿಕಲಾ ಜೊಲ್ಲೆ – ವಿಜಯಪುರ ಜಿಲ್ಲೆ
- ಎಂ. ಟಿ. ಬಿ. ನಾಗರಾಜು – ಬೆಂಗಳೂರು ಗ್ರಾಮಾಂತರ ಜಿಲ್ಲೆ
- ಡಾ. ಕೆ. ಸಿ. ನಾರಾಯಣಗೌಡ – ಮಂಡ್ಯ ಜಿಲ್ಲೆ
- ಬಿ. ಸಿ. ನಾಗೇಶ್ – ಯಾದಗಿರಿ ಜಿಲ್ಲೆ
- ವಿ. ಸುನೀಲ್ ಕುಮಾರ್ – ಉಡುಪಿ ಜಿಲ್ಲೆ
- ಹಾಲಪ್ಪ ಆಚಾರ್ – ಕೊಪ್ಪಳ ಜಿಲ್ಲೆ
- ಶಂಕರ ಪಾಟೀಲ್ ಮುನೇನಕೊಪ್ಪ – ಧಾರವಾಡ ಜಿಲ್ಲೆ
- ಎಂ. ಮುನಿರತ್ನ – ಕೋಲಾರ ಜಿಲ್ಲೆ