ಬರಹ: ನವೀನ್ ಸೂರಿಂಜೆ
ಬಿ ಕೆ ಇಮ್ತಿಯಾಜ್ (ಅರ್ಜಿದಾರರು/Petitioner) ಅವರು ಈ ನ್ಯಾಯಾಲಯದ ಮುಂದೆ ಅವರ ಮೇಲೆ ದಾಖಲಾದ ಎಫ್ಐಆರ್ ನಂ 160/2026 ಅನ್ನು ಪ್ರಶ್ನಿಸಿದ್ದಾರೆ. ಬಿ ಕೆ ಇಮ್ತಿಯಾಜ್ ಅವರು ದಕ್ಷಿಣ ಕನ್ನಡ ಬೀದಿ ಬದಿ ವ್ಯಾಪಾರಸ್ಥರ ಸಂಘದ ಮುಖಂಡರಾಗಿದ್ದಾರೆ. ಅವರು ಬೀದಿ ಬದಿ ವ್ಯಾಪಾರಸ್ಥರನ್ನು ಅಕ್ರಮವಾಗಿ ತೆರವುಗೊಳಿಸುವಾಗ ಪ್ರತಿಭಟನೆ ಮಾಡಿರುತ್ತಾರೆ. ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡುವಾಗ ಕಾನೂನು ಪಾಲಿಸಿಲ್ಲ ಎಂಬುದು ಬಿ ಕೆ ಇಮ್ತಿಯಾಜ್ ಅವರ ಪ್ರತಿಭಟನೆಯ ಮುಖ್ಯ ಅಂಶವಾಗಿತ್ತು.
ತೆರವು ಕಾರ್ಯಾಚರಣೆಯನ್ನು ಸುಪ್ತಿಂ ಕೋರ್ಟ್ ತೀರ್ಪಿನಂತೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಸುಪ್ರಿಂ ಕೋರ್ಟ್ ನ ತೀರ್ಪಿನಲ್ಲಿ ಎಲ್ಲೂ ಕೂಡಾ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಎಂದು ಹೇಳಲಾಗಿಲ್ಲ. ಸಹಜವಾದ ಮತ್ತು ಸ್ಥಾಪಿತವಾದ ಕಾನೂನು ತತ್ವ ಏನು ಹೇಳುತ್ತದೆ ಎಂದರೆ, ಯಾರನ್ನಾದರೂ ತೆರವುಗೊಳಿಸಬೇಕಾದರೆ, ಆತ ಬೀದಿ ಬದಿ ವ್ಯಾಪಾರಿಯಾದರೂ ಕೂಡಾ ಕಾನೂನನ್ನು ಪಾಲಿಸಿಯೇ ಮಾಡಬೇಕು. ಬೀದಿ
ಇದನ್ನೂ ಓದಿ :ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಸುಪ್ರೀಂ ಕೋರ್ಟ್ ಆದೇಶವಿಲ್ಲ: ಸರ್ಕಾರಕ್ಕೆ ಹೈಕೋರ್ಟ್ ಸ್ಪಷ್ಟನೆ
ಈಗ Street Vendors (Protection of Livelihood and Regulation of Street Vending) Act, 2014 ಅಡಿಯಲ್ಲಿ ವ್ಯಾಪಾರಿಗಳಿಗೆ ರಕ್ಷಣೆ ಇದೆ. ಸುಪ್ರಿಂ ಕೋರ್ಟ್ ತೀರ್ಪು ಮತ್ತು Street Vendors (Protection of Livelihood and Regulation of Street Vending) Act, 2014 ಅನ್ನು ಅನುಸರಿಸದೇ ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸುವ ರಾಜ್ಯ ಸರ್ಕಾರದ ಕ್ರಮದ ವಿರುದ್ದ ಬಿ ಕೆ ಇಮ್ತಿಯಾಜ್ ಅವರು ಪ್ರತಿಭಟನೆ ಮಾಡಿದ್ದಾರೆ.
ಈಗ, ಬಿ.ಕೆ. ಇಮ್ತಿಯಾಜ್ ವಿರುದ್ಧ ಬಿಎನ್ಎಸ್ನ ಸೆಕ್ಷನ್ 132ರ ಅಡಿಯಲ್ಲಿ ಕ್ರೈಂ ಎನ್ನುವ ಕತ್ತಿ (Axe of Crime) ಬೀಸಲಾಗಿದೆ. ಅಕ್ರಮವಾಗಿ ತೆರವು ಕಾರ್ಯಾಚರಣೆ ಮಾಡುತ್ತಿದ್ದ ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ದ ಬಿ ಕೆ ಇಮ್ತಿಯಾಜ್ ಬಲಪ್ರಯೋಗ ಮಾಡಿದ ಮಾಹಿತಿಗಳು ದೂರಿನಲ್ಲಿ ಇಲ್ಲ.
ಹಾಗಾಗಿ, ಬಿ ಕೆ ಇಮ್ತಿಯಾಜ್ ಮತ್ತು ಇತರರ ವಿರುದ್ದ ದಾಖಲಾದ ಎಫ್ಐಆರ್ ನ ಮುಂದಿನ ವಿಚಾರಣೆಗೆ ತಡೆ ನೀಡಲಾಗಿದೆ. ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.” ಬೀದಿ
– ಜಸ್ಟಿಸ್ ಎಂ. ನಾಗಪ್ರಸನ್ನ, ನ್ಯಾಯಮೂರ್ತಿಗಳು, ಕರ್ನಾಟಕ ಹೈಕೋರ್ಟ್
ಇದನ್ನೂ ನೋಡಿ : ಉಚಿತ ಯುಪಿಐಗೆ ಶುಲ್ಕ ಬೀಳುತ್ತಾ? ಕಾರ್ಪೊರೇಟ್ ಲಾಭದ ಸಾಧನವಾಯ್ತೆ ಯುಪಿಐ? Janashakthi Media
