ಬ್ರಿಜ್ ಭೂಷಣ್ ಸಿಂಗ್ ಖುಲಾಸೆ-ಅಸಮಾನ ಸಮರದ ಪರಾಕಾಷ್ಠೆ: ಬೃಂದಾ ಕಾರಟ್

ಮಹಿಳಾ ದೂರುದಾರರ ಧೈರ್ಯದ ಧ್ವನಿಯಾದ ವಿನೇಶ್ ಫೋಗಟ್ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ, ನ್ಯಾಯವನ್ನು ಅಧಿಕಾರ ಮತ್ತು ಪ್ರಭಾವದ ಒತ್ತೆಯಾಳಾಗಿಸಲು ಬಿಡಲು ಸಾಧ್ಯವಿಲ್ಲ ಎಂದು ನಂಬುವ ಎಲ್ಲರ ಬೆಂಬಲವೂ ಅವರಿಗೆ ಇರುತ್ತದೆ. ಖುಲಾಸೆ
ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಭಾರತದ ಅತ್ಯಂತ ಪ್ರಸಿದ್ಧ ಮಹಿಳಾ ಕುಸ್ತಿಪಟುಗಳು ನ್ಯಾಯಾಲಯದ ಗಮನಕ್ಕೆ ತಂದ ಸರಣಿ ಲೈಂಗಿಕ ಕಿರುಕುಳದ ಆರೋಪದಲ್ಲಿ ಅವರನ್ನು ಖುಲಾಸೆಗೊಳಿಸಿರುವುದು ಶೋಚನೀಯವಾಗಿದೆ. ಇದು ಒಂದು ಅಸಮಾನ ಸಮರದ ಪರಾಕಾಷ್ಠೆಯಾಗಿದೆ ಎಂದು ದೇಶದ ಮಹಿಳಾ ಆಂದೋಲನದ  ಹಿರಿಯ ಹೋರಾಟಗಾರರೂ, ಸಿಪಿಐ(ಎಂ)ನ ಹಿರಿಯ ಮುಖಂಡರೂ ಆಗಿರುವ  ಬೃಂದಾಕಾರಟ್‌ ಖೇದ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ದೇಶದ ಆಳುವ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ತರಗಳಲ್ಲಿರುವವರು ಅನುವು ಮಾಡಿಕೊಟ್ಟಿರುವ ಅಧಿಕಾರ, ಪ್ರಭಾವ ಮತ್ತು ಜಾತಿ ಸಮೀಕರಣಗಳು  ಪ್ರತಿ ಹಂತದಲ್ಲೂ ಆರೋಪಿಗೆ ಅಭಯವನ್ನು ಖಾತ್ರಿಪಡಿಸಿದವು ಎಂದು ಅವರು  ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸುತ್ತ ಹೇಳಿದ್ದಾರೆ. (ಇಂಡಿಯನ್‌ ಎಕ್ಸ್‌ಪ್ರೆಸ್‌, ಆಗಸ್ಟ್‌ 5) ಖುಲಾಸೆ

ಈ ಮಹಿಳೆಯರು ಅಧಿಕಾರಿಗಳಿಗೆ ನೀಡಿದ ದೂರುಗಳನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಲಾಯಿತು. 2023 ರ ಜನವರಿಯಲ್ಲಿ ಅವರು ಧರಣಿ ಕುಳಿತಾಗ, ಅದು ಕ್ರೀಡಾವಲಯದಿಂದ  ವ್ಯಾಪಕ ಬೆಂಬಲವನ್ನು ಗಳಿಸಿದಾಗಲಷ್ಟೇ, ಸರ್ಕಾರವು ಆರೋಪಗಳ ವಿಚಾರಣೆಗೆ ಒಂದು ಉಸ್ತುವಾರಿ ಸಮಿತಿಯನ್ನು ನೇಮಿಸಿತು. ಅದನ್ನು ಪ್ರಾಮಾಣಿಕವಾಗಿ ನಂಬಿ ಮಹಿಳೆಯರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು. ಆದರೆ ಸಮಿತಿಯ ವರದಿಯನ್ನು ರಹಸ್ಯವಾಗಿಡಲಾಯಿತು, ದೂರುದಾರರೊಂದಿಗೆ ಹಂಚಿಕೊಳ್ಳಲಿಲ್ಲ. ಮಹಿಳೆಯರು ತಮ್ಮ ಹೋರಾಟವನ್ನು ಮುಂದುವರೆಸಿದರು ಮತ್ತು ಎಫ್ಐಆರ್‌ಗೆ ಒತ್ತಾಯಿಸಿದರು. ಪೋಲೀಸರಿಗೆ ಅವರು ಸಲ್ಲಿಸಿದ ಲಿಖಿತ ದೂರುಗಳಲ್ಲಿ ದೈಹಿಕ ಕಿರುಕುಳಗಳಿಂದ ಹಿಡಿದು ಬೆದರಿಕೆ, ಲೈಂಗಿಕ ಆಗ್ರಹಗಳ ವರೆಗೆ ಹೇಳಲಾಗಿದ್ದರೂ,  ಸಂಸತ್ ಸದಸ್ಯರಾಗಿದ್ದ ಮತ್ತು ಭಾರತದ ಕುಸ್ತಿ ಒಕ್ಕೂಟದ (WFI) ಪ್ರಬಲ ಮುಖ್ಯಸ್ಥರಾಗಿದ್ದ ಆರೋಪಿಯ  ವಿರುದ್ಧ ಎಫ್‌ಐಆರ್ ದಾಖಲಿಸಲು ಗೃಹ ಸಚಿವ ಅಮಿತ್ ಶಾ ಅವರ ಅಡಿಯಲ್ಲಿರುವ ದಿಲ್ಲಿ ಪೊಲೀಸರು ನಿರಾಕರಿಸಿದರು.

ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಪಿಓಪಿ ಮೂರ್ತಿಗಳಿಗೆ ನಿಷೇಧ: ಮಣ್ಣಿನ ಗಣಪತಿಗೆ ಪ್ರೋತ್ಸಾಹ

ಕುಸ್ತಿಪಟುಗಳ ಸಾಧನೆ, ಅವರು ಭಾರತಕ್ಕೆ ತಂದ ಕೀರ್ತಿ ಇವು ಯಾವವೂ ಲೆಕ್ಕಕ್ಕೇ  ಬರಲಿಲ್ಲ. ಎಫ್‌ಐಆರ್ ದಾಖಲಿಸಲಿಕ್ಕೆ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕಾಗಿ ಬಂತು ಎಂದು ನೆನಪಿಸುತ್ತ “ಆಪಾದಿತ ಲೈಂಗಿಕ ಭಕ್ಷಕರು ಸರ್ಕಾರದ ಸಾರ್ವಜನಿಕ ರಕ್ಷಣೆಯನ್ನು ಅನುಭವಿಸುತ್ತಿರುವಾಗ, ಎಷ್ಟೆಂದರೆ, ಸಂಸತ್ತಿಗೆ ಮೆರವಣಿಗೆ ಹೊರಟ ದೂರುದಾರರನ್ನು ಪೋಲೀಸರು ಕ್ಯಾಮೆರಾಗಳ ಸಂಪೂರ್ಣ ಎದುರೇ, ಹೊಡೆದ, ಎಳೆದು ಹಾಕಿದ ದಿನವೇ, ಆರೋಪಿಯು ತನ್ನ ಆಸನದಲ್ಲಿ ಸೊಕ್ಕಿನಲ್ಲಿ ಕುಳಿತು ಪ್ರಧಾನಿಯನ್ನು ಶ್ಲಾಘಿಸುತ್ತಿದ್ದುದನ್ನು ತೋರಿಸುತ್ತಿದ್ದಾಗಲೇ   ಸಂದೇಶವು ಸ್ಪಷ್ಟವಾಗಿತ್ತು” ಎಂದು ಬೃಂದಾ ಕಾರಟ್‌ ಹೇಳುತ್ತಾರೆ.  ಎಫ್‌ಐಆರ್ ದಾಖಲಾದ ನಂತರವೂ ಆ ವ್ಯಕ್ತಿಯನ್ನು ಬಂಧಿಸಿರಲಿಲ್ಲ. ಅದರ ನಂತರ, ತನಿಖೆಯ ಹಾದಿಯ ಮೇಲೆ  ಪ್ರಭಾವ ಬೀರುವುದು,, ದೂರನ್ನು  ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರುವುದು ಮತ್ತು ಸಾಕ್ಷಿಗಳು ಉಲ್ಟಾ ಹೊಡೆಯುವಂತೆ ಮಾಡುವುದು  ಸುಲಭ ತಾನೇ. ಖುಲಾಸೆ

ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ, ಫೇಸ್‌ ಬುಕ್

“ಪೂರ್ಣ ತೀರ್ಪು ಇನ್ನೂ ಬಹಿರಂಗವಾಗಿಲ್ಲ, ಆದರೆ ನ್ಯಾಯಾಲಯದ ಅಧಿಕೃತ ವರದಿಯು ಸಾಕಷ್ಟು ಸ್ಫುಟವಾಗಿದೆ: ಅಪರಾಧವನ್ನು ಫಿರ್ಯಾದಿ ಪಕ್ಷ, “ಸಮಂಜಸ ಸಂದೇಹಾತೀತ”ವಾಗಿ ಸಾಬೀತು ಪಡಿಸುವಲ್ಲಿ ವಿಫಲವಾಗಿದೆ ಎನ್ನಲಾಗಿದೆ. ಲೈಂಗಿಕ ಕಿರುಕುಳದ ಸಂದರ್ಭಗಳಲ್ಲಿ ಸಮಯ ಮತ್ತು ಸ್ಥಳವನ್ನು ಕಿರುಕುಳಕೋರ ಆರಿಸಿಕೊಳ್ಳುತ್ತಾನೆ, ಸಾಕ್ಷಿಗಳಿರುವುದು ಅಪರೂಪವೇ; ಸಂತ್ರಸ್ತರ ಹೇಳಿಕೆಗಳೇ ಸಾಕ್ಷಿ. ಇದು ನ್ಯಾಯಾಲಯಗಳಿಗೆ ಸಾಕಷ್ಟು ಪುರಾವೆ ಅಲ್ಲವಾದರೆ, ಇಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣವು ಮೂರನೇ ಒಂದು ಭಾಗಕ್ಕಿಂತ ಕಡಿಮೆಯಿರುವುದನ್ನು ಸುಧಾರಿಸುವ ಭರವಸೆಯನ್ನೇ ಇಟ್ಟುಕೊಳ್ಳುವಂತಿಲ್ಲ ಎಂದು ಬೃಂದಾ ಕಾರಟ್‌ ಖೇದದಿಂದ ಹೇಳುತ್ತಾರೆ. ಖುಲಾಸೆ

ದೂರು ದಾಖಲು ವಿಳಂಬವೂ ಕಾರಣ ಎನ್ನಲಾಗಿದೆ. ಅಧಿಕಾರಸ್ಥರು ಬಲಿಪಶುಗಳ ಬಾಯಿಮುಚ್ಚಿಸುತ್ತಾರೆ,  ಅವರು ಮಾತನಾಡುವ ಧೈರ್ಯ ಮಾಡಿದರೆ ಅವರ ಮೇಲೆ ಹೇಗೆ ಮುಗಿ ಬೀಳುತ್ತಾರೆ ಎಂಬ ಮೂಲಭೂತ ವಾಸ್ತವಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಇನ್ನೂ ಎಷ್ಟು ಸಮಯ ಬೇಕು,  ಒಂದು ನಿರ್ದಿಷ್ಟ ಕಾನೂನು ಇದ್ದರೂ, ಮಹಿಳೆಯರು ಪ್ರತೀಕಾರ ಅಥವಾ ಕಳಂಕದ ಭಯವಿಲ್ಲದೆ ಕಿರುಕುಳವನ್ನು ವರದಿ ಮಾಡಬಹುದಾದಂತಹ  ಸುರಕ್ಷಿತ ಕೆಲಸದ ಸ್ಥಳಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಒದಗಿಸುವಲ್ಲಿ ನಾವು ಸಂಪೂರ್ಣವಾಗಿ ವಿಫಲರಾಗಿದ್ದೇವೆ ಎಂದು ಮುಂದುವರೆದು ಬೃಂದಾ ಕಾರಟ್‌ ಹೇಳಿದ್ದಾರೆ.  ಭಾರತವು ತನ್ನದೇ ಆದ ಜೆಫ್ರಿ ಎಪ್ಸ್ಟೀನ್ ಗಳನ್ನು ಹೊಂದಿದೆ, ಅವರಿಗೆ  ಅಧಿಕಾರಸ್ಥರ ರಕ್ಷಣಾ ಪದರಗಳಿವೆ ಎಂದು ಅವರು ಮಾರ್ಮಿಲವಾಗಿ ಟಿಪ್ಪಣಿ ಮಾಡಿದ್ದಾರೆ. ಖುಲಾಸೆ

ಇದನ್ನೂ ನೋಡಿ: ‘ಪ್ರತಿ ಐವರಲ್ಲಿ ಒಬ್ಬ ಮತದಾರ ಪಟ್ಟಿಯಿಂದ ಹೊರಗೆ’ : SIR ವಿರುದ್ಧ ಗಂಭೀರ ಆರೋಪ Janashakthi Media

ಈ ತೀರ್ಪು ಕಾಕ್ರೋಚ್‌  ಜನತಾ ಪಾರ್ಟಿಯ ನೇತೃತ್ವದ ಐತಿಹಾಸಿಕ ಜಂತರ್ ಮಂತರ್ ವಿದ್ಯಾರ್ಥಿ ಹೋರಾಟದಲ್ಲಿ ಸಕ್ರಿಯವಾಗಿದ್ದ ಯುವತಿಯರ ವಿರುದ್ಧ ವಿಷಕಾರಿ, ಸ್ತ್ರೀದ್ವೇಷದಿಂದ ತುಂಬಿದ ಪ್ರತಿಕ್ರಿಯೆಗಳನ್ನು ಕೇಳುತ್ತಿರುವ, ಕಾಣುತ್ತಿರುವ ಸಮಯದಲ್ಲಿ  ಬಂದಿದೆ. ಅವರನ್ನು ಹೆದರಿಸಲು, ಶಿಕ್ಷಿಸಲು , ಹೇಗಾದರೂ ಮಾಡಿ ಬಾಯಿ ಮುಚ್ಚಿಸಲು ಅತ್ಯಾಚಾರದ ಬೆದರಿಕೆಯ ವರೆಗೂ ಹೋಗುತ್ತಿದ್ದಾರೆ.  ಯುವತಿಯರ ಆಕ್ರೋಶದ ಪದ ಬಳಕೆಯನ್ನು ಕೇಳುವುದು “ಸಂಸ್ಕೃತಿ ಆಘಾತ” ಎನ್ನುವ  ಪ್ರಧಾನಿ, ಪುರುಷರ ಲೈಂಗಿಕ ಬೈಗುಳಗಳಿಗೆ ಏನೇನೂ ಹೇಳದೆ ಸಮ್ಮತಿಯ ಮುದ್ರೆಯೊತ್ತುತ್ತಾರೆ, ಎಷ್ಟೆಂದರೂ, ಅವರು ಪುರುಷರು ತಾನೇ- ಎಂದು ಅವರು  ವ್ಯಂಗ್ಯವಾಡಿದ್ದಾರೆ. ಖುಲಾಸೆ

ಮಹಿಳಾ ದೂರುದಾರರ ಧೈರ್ಯದ ಧ್ವನಿಯಾದ ವಿನೇಶ್ ಫೋಗಟ್ ಈ ತೀರ್ಪಿನ ವಿರುದ್ಧ ಮೇಲ್ಮನವಿಸಲ್ಲಿಸುವುದಾಗಿ ಹೇಳಿದ್ದಾರೆ, ನ್ಯಾಯವನ್ನು ಅಧಿಕಾರ ಮತ್ತು ಪ್ರಭಾವದ ಒತ್ತೆಯಾಳಾಗಿಸಲು ಬಿಡಲು ಸಾಧ್ಯವಿಲ್ಲ ಎಂದು ನಂಬುವ ಎಲ್ಲರ ಬೆಂಬಲವೂ ಅವರಿಗೆ ಇರುತ್ತದೆ ಎಂದು ಬೃಂದಾ ಕಾರಟ್‌ ಹೇಳಿದ್ದಾರೆ.

ಆತನಿಗೆ ಶಿಕ್ಷೆಯಾಗಿದ್ದರೆ ಇನ್ನೊಂದು ‌
ʼಸಾಂಸ್ಕೃತಿಕʼ ಆಘಾತವಾಗುತ್ತಿತ್ತು!

ವ್ಯಂಗ್ಯಚಿತ್ರ ಕೃಪೆ: ಸಜಿತ್‌ ಕುಮಾರ್‌, ಡೆಕ್ಕನ್‌ ಹೆರಾಲ್ಡ್

Donate Janashakthi Media

Leave a Reply

Your email address will not be published. Required fields are marked *