ಪಣಜಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ ನಡೆದ ಸಂಭ್ರಮಾಚರಣೆ ವೇಳೆ, ಜೈಲಿನಲ್ಲಿರುವ ವಿದ್ಯಾರ್ಥಿ ಕಾರ್ಯಕರ್ತ ಉಮರ್ ಖಾಲಿದ್ಗೆ ಬೆಂಬಲ ವ್ಯಕ್ತಪಡಿಸಿದ್ದರೆಂದು ಆರೋಪಿಸಿ ಪಣಜಿಯಲ್ಲಿ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮರ್ ಖಾಲಿದ್ ಬಂಧಿತರಾಗಿದ್ದಾರೆ.
ಜುಲೈ 25ಎಂದು ಇಲ್ಲಿ ಆಜಾದ್ ಮೈದಾನದಲ್ಲಿ ಪ್ರಧಾನ್ ರಾಜೀನಾಮೆಯನ್ನು ಆಚರಿಸುತ್ತಿದ್ದ ಗುಂಪಿನ ನಡುವೆ, ಡ್ಯಾನಿಶ್ ಎಂಬ ಯುವಕ ಖಾಲಿದ್ ಬೆಂಬಲದ ಫಲಕ ಪ್ರದರ್ಶಿಸಿದ್ದನು.
ಇದನ್ನೂ ಓದಿ: ‘ಸಂಸದ್ ಚಲೋ’ ಮೆರವಣಿಗೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ: 57 ಸಂಘಟನೆಗಳಿಂದ ಖಂಡನೆ
ಮಾಧ್ಯಮಗಳು ಪ್ರಶ್ನಿಸಿದಾಗ, ಖಾಲಿದ್ ಬಿಡುಗಡೆಗೆ ತಾನು ಬೆಂಬಲ ವ್ಯಕ್ತಪಡಿಸುತ್ತೇನೆ ಎಂದು ಆತ ಹೇಳಿದ್ದಾನೆ.
ಪ್ರತಿಭಟನೆ ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು, ತನ್ನ ಗುರುತು ತಿಳಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಡ್ಯಾನಿಶ್ ಅನ್ನು ವಶಕ್ಕೆ ಪಡೆದರು. ಯುವಕನ ಬಂಧನದ ಬಳಿಕ, ಆಜಾದ್ ಮೈದಾನದಲ್ಲಿ ಸೇರಿದ್ದವರು ಪೊಲೀಸ್ ಮುಖ್ಯ ಕಚೇರಿಗೆ ಮೆರವಣಿಗೆ ನಡೆಸಿ ಅವನ ಬಿಡುಗಡೆಗೆ ಆಗ್ರಹಿಸಿದರು.
ಈ ನಡುವೆ, ಡ್ಯಾನಿಶ್ ಪರ ಘೋಷಣೆಗಳನ್ನು ಕೂಗುತ್ತಿದ್ದ ವೇಳೆ ಮತ್ತೊಬ್ಬ ಯುವಕ ಸುದೀನ್ ದಲ್ವಿ ಕೂಡ ಖಾಲಿದ್ ಬೆಂಬಲ ವ್ಯಕ್ತಪಡಿಸಿ ಮಾಧ್ಯಮ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪದ ಮೇಲೆ ಪೊಲೀಸರು ಅವನನ್ನೂ ವಶಕ್ಕೆ ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇವರ ವಿರುದ್ಧ ಪ್ರಥಮ ಮಾಹಿತಿ ವರದಿ (FIR) ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ, ಭಾರತೀಯ ಜನತಾ ಯುವ ಮೋರ್ಚಾ (BJYM) ನಾಯಕರು ಪಣಜಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬಿಜೆವೈಎಂ ಗೋವಾ ಅಧ್ಯಕ್ಷ ತುಷಾರ್ ಕೆಲ್ಕರ್, “ಆಂಟಿ-ನ್ಯಾಷನಲ್” ವ್ಯಕ್ತಿಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಜಾಮೀನು ಸಿಗದ ವಿಧಿಗಳಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ನೋಡಿ: ನೀಟ್ ಹಗರಣಕ್ಕೆ ದೇಶಾದ್ಯಂತ ಆಕ್ರೋಶ! ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ Janashakthi Media
