ಬೆಂಗಳೂರು: ಪ್ರಸ್ತಾವಿತ 16 ಕಿಮೀ ಉದ್ದದ ಟ್ವಿನ್ ಟನಲ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಮುಂದಿನ ತಿಂಗಳಲ್ಲಿ ಆಯ್ಕೆಯಾಗುವ ಗುತ್ತಿಗೆದಾರರಿಗೆ ಮಾಹಿತಿ ನೀಡುವಂತೆ ಕರ್ನಾಟಕ ಹೈಕೋರ್ಟ್ ಜುಲೈ 16ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. “ಯಾವುದೇ ‘ಇಕ್ವಿಟಿ’ (ಹಕ್ಕು ಸ್ಥಿತಿ) ಉಂಟಾಗದಂತೆ, ಇಂತಹ ಒಪ್ಪಂದಗಳು ಅರ್ಜಿಗಳ ಅಂತಿಮ ತೀರ್ಪಿಗೆ ಒಳಪಟ್ಟಿರಬೇಕು,” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮರ
ಈ ಪ್ರಕರಣವನ್ನು ಆಗಸ್ಟ್ 20ಕ್ಕೆ ಮುಂದೂಡಲಾಗಿದೆ. ಲಾಲ್‌ಬಾಗ್‌ನಲ್ಲಿ ಮರಗಳನ್ನು ಕಡಿತಗೊಳಿಸುವುದರ ವಿರುದ್ಧ ನೀಡಿದ್ದ ಹಿಂದಿನ ತಾತ್ಕಾಲಿಕ ಆದೇಶವನ್ನೂ ನ್ಯಾಯಾಲಯ ವಿಸ್ತರಿಸಿದೆ. ಮರ
ಮುಖ್ಯ ನ್ಯಾಯಮೂರ್ತಿ ವಿಭು ಬಾಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ನಿರ್ದೇಶನ ನೀಡಿತು. ಯೋಜನೆಗೆ ಸವಾಲು ಹಾಕಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ಈ ಆದೇಶ ಹೊರಡಿಸಲಾಯಿತು. ಅರ್ಜಿದಾರರ ಪರವಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ವಕೀಲರು ಹಾಜರಾಗಿ, ಸುಮಾರು 7,000 ಪುಟಗಳ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ: ಟ್ರಸ್ಟ್ ಖಜಾಂಚಿ ಗೋವಿಂದ್ ಗಿರಿಯನ್ನು ವಿಚಾರಣೆ ನಡೆಸಬೇಕು – ಸಂಜಯ್ ರಾವುತ್
ಈ ಅರ್ಜಿಗಳನ್ನು ಆದಿಕೇಶವಲು ರವೀಂದ್ರ, ರಂಗಭೂಮಿ ವ್ಯಕ್ತಿತ್ವ ಪ್ರಕಾಶ್ ಬೆಳವಾಡಿ ಸೇರಿದಂತೆ ಇತರರು ಸಲ್ಲಿಸಿದ್ದಾರೆ. 2025ರ ಜುಲೈ 14ರಂದು ರಾಜ್ಯ ಸರ್ಕಾರ ಮತ್ತು ಹಿಂದಿನ ಬಿಬಿಎಂಪಿ (ಈಗ ಜಿಬಿಎ) ಹೊರಡಿಸಿದ ಟೆಂಡರ್ ಸೂಚನೆ, ಯೋಜನೆಗೆ ಸಂಬಂಧಿಸಿದ ವಿವಿಧ ಸಂವಹನಗಳು, 2024 ಡಿಸೆಂಬರ್‌ನ ಸಾಧ್ಯತಾ ಅಧ್ಯಯನ ವರದಿ ಹಾಗೂ ಈ ವರ್ಷದ ಫೆಬ್ರವರಿ–ಮಾರ್ಚ್‌ನಲ್ಲಿ ಪ್ರಕಟವಾದ ಡೀಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್‌ಗಳನ್ನು ಅವರು ಪ್ರಶ್ನಿಸಿದ್ದಾರೆ.
ಅರ್ಜಿದಾರರ ವಾದದ ಪ್ರಕಾರ, ಸುಮಾರು ₹19,000 ಕೋಟಿ ವೆಚ್ಚದ ಈ ಯೋಜನೆ ಆರ್ಥಿಕ ಸಾಧ್ಯತೆ, ಸಾಮಾಜಿಕ ಪರಿಣಾಮ ಹಾಗೂ ಸಂವಿಧಾನಾತ್ಮಕ ಮಾನ್ಯತೆಗಳ ಸಮಗ್ರ ಮೌಲ್ಯಮಾಪನವಿಲ್ಲದೆ ಮುಂದುವರಿಯುತ್ತಿದೆ. ಇದು ಕಾರು ಆಧಾರಿತ ಸೌಲಭ್ಯವಾಗಿದ್ದು, ಶ್ರೀಮಂತ ವರ್ಗಕ್ಕೆ ಮಾತ್ರ ಅನುಕೂಲವಾಗುವ ರೀತಿಯಲ್ಲಿ ಭೇದಭಾವದ ಸ್ವರೂಪ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಇದರ ನಡುವೆ, 2026ರ ಬಿಎಮ್‌ಎಲ್‌ಟಿಎ ನಿಯಮಗಳ Rule 24 ಅನ್ನು ಪ್ರಶ್ನಿಸಿರುವ ಮತ್ತೊಂದು ಅರ್ಜಿಗೆ ಸಂಬಂಧಿಸಿ, ರಾಜ್ಯ ಸರ್ಕಾರ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (BMLTA) ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಇದನ್ನೂ ನೋಡಿ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಎಡವಟ್ಟುಗಳೇ ಹೆಚ್ಚು? ಗೊಂದಲದ ಗೂಡಾದ ಎಸ್‌ಐಆರ್ | ಕೆ ಎಸ್ ವಿಮಲಾ
