AI ದುರುಪಯೋಗಕ್ಕೆ ಎಚ್ಚರಿಕೆ: ನಕಲಿ ಚಿತ್ರ–ತಪ್ಪು ಮಾಹಿತಿಗೆ ಕಠಿಣ ಕ್ರಮ – ಈಶ್ವರ ಖಂಡ್ರೆ

ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ದಾರಿತಪ್ಪಿಸುವ ಮಾಹಿತಿ ಹಾಗೂ ನಕಲಿ ಚಿತ್ರಗಳನ್ನು ಹಂಚುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ. ದುರುಪಯೋಗ

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಇತ್ತೀಚಿನ ದಿನಗಳಲ್ಲಿ AI ತಂತ್ರಜ್ಞಾನ ಬಳಸಿ ರಾಜಕೀಯ ನಾಯಕರುಗಳ ನಕಲಿ ಹಾಗೂ ಅವಹೇಳನಕಾರಿ ಚಿತ್ರಗಳನ್ನು ಸೃಷ್ಟಿಸಿ, ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಕೆಲವು ವ್ಯಕ್ತಿಗಳು ಹಂಚುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ದುರುಪಯೋಗ

ಇದನ್ನೂ ಓದಿ: ಪುದುಚೇರಿಯಲ್ಲಿ ಸಚಿವರಿಗೆ ಖಾತೆ ಹಂಚಿಕೆ ವಿಳಂಬ: ಮೈತ್ರಿ ಒಳಜಗಳ ಆರೋಪ

“ಈ ರೀತಿಯ ಯಾವುದೇ ಪೋಸ್ಟ್‌ಗಳು ಅಥವಾ ಚಿತ್ರಗಳು ನಮ್ಮ ಅಧಿಕೃತ ನಿಲುವನ್ನು ಪ್ರತಿನಿಧಿಸುವುದಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ಪ್ರಚಾರಗಳಿಗೆ ಮರುಳಾಗಬಾರದು ಮತ್ತು ಅವುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು” ಎಂದು ಅವರು ಮನವಿ ಮಾಡಿದ್ದಾರೆ.

AI ಆಧಾರಿತ ನಕಲಿ ಚಿತ್ರಗಳು, ಮಾನಹಾನಿಕರ ವಿಷಯಗಳು ಹಾಗೂ ತಪ್ಪು ಮಾಹಿತಿಯನ್ನು ಸೃಷ್ಟಿಸುವುದು, ಹಂಚುವುದು ಅಥವಾ ಪ್ರಸಾರ ಮಾಡುವವರ ವಿರುದ್ಧ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿಯಿಂದ ವರ್ತಿಸಿ, ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ.

ಇದನ್ನೂ ನೋಡಿ: ಮಹಿಳಾ ಮೀಸಲಾತಿ ತಕ್ಷಣ ಜಾರಿಗೊಳಿಸಿ; ಜನಗಣತಿ–ಡಿಲಿಮಿಟೇಶನ್‌ ಹೆಸರಲ್ಲಿ ವಿಳಂಬ ಬೇಡ: ನಾಗಮೋಹನ ದಾಸ್

Donate Janashakthi Media

Leave a Reply

Your email address will not be published. Required fields are marked *