ಆರೋಗ್ಯ ಹಕ್ಕು ಮತ್ತು ಸಾರ್ವತ್ರಿಕ ಆರೋಗ್ಯಪಾಲನೆಗಾಗಿ ರಾಷ್ಟ್ರೀಯ ಜನಾರೋಗ್ಯ ಅಭಿಯಾನ

ʻಜನ ಸ್ವಾಸ್ಥ್ಯಅಭಿಯಾನ ʼ(ಜೆಎಸ್‌ಎ) ಸಂಘಟನೆ ಆರೋಗ್ಯ ಮತ್ತು ಆರೋಗ್ಯ ಪಾಲನೆಯ ಹಕ್ಕಿಗಾಗಿ ಒಂದು ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಸಿದೆ. ಜನ ಸ್ವಾಸ್ಥ್ಯ ಅಭಿಯಾನ(ಜೆಎಸ್‌ಎ) 20 ರಾಜ್ಯಗಳಲ್ಲಿ ಆರೋಗ್ಯ ಹಕ್ಕುಗಳ ಯಾತ್ರೆ ಮತ್ತು 2027 ರಲ್ಲಿ ಜನತಾ ಆರೋಗ್ಯ ಸಂಸತ್ಸೇರಿದಂತೆ ರಾಷ್ಟ್ರವ್ಯಾಪಿಯಾಗಿ ಈ ಅಭಿಯಾನವನ್ನು ಅದು ನಿರ್ಧರಿಸಿದೆ. ಸಾರ್ವತ್ರಿಕ

2026 ರ ಜೂನ್ 20-21 ರಂದು ಹೈದರಾಬಾದ್‌ನಲ್ಲಿ ನಡೆದ ಅದರ ಎರಡು ದಿನಗಳ ವಿಸ್ತೃತ ರಾಷ್ಟ್ರೀಯ ಸಮನ್ವಯ ಸಮಿತಿ (NCC) ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಜೆಎಸ್‌ಎ ಅಂತರರಾಷ್ಟ್ರೀಯ ಜನತಾ ಆರೋಗ್ಯ ಚಳವಳಿಯ (PHM) ಅಖಿಲ ಭಾರತ ವೇದಿಕೆಯಾಗಿದೆ. ಇದು ದೇಶಾದ್ಯಂತ ಆರೋಗ್ಯ ಮತ್ತು ಆರೋಗ್ಯ ಪಾಲನೆಯ ಚಟುವಟಿಕೆಗಳು ಮತ್ತು ಕಾರ್ಯಾಚರಣೆಗಳನ್ನು ಸಂಘಟಿಸುತ್ತದೆ. ಸಾರ್ವತ್ರಿಕ

ಇತರ ಉದ್ದೇಶಗಳ ಜೊತೆಗೆ, ದೇಶದಲ್ಲಿ ಆರೋಗ್ಯ ಪಾಲನೆಯ ಒಟ್ಟಾರೆ ಖರ್ಚನ್ನು ಇಳಿಸುವುದು ಮತ್ತು ಲಭ್ಯತೆಯನ್ನು ಖಚಿತಪಡಿಸುವುದರ ಮೇಲೆ ಈ ಪ್ರಚಾರಾಂದೋಲನ  ಗಮನ ಕೇಂದ್ರೀಕರಿಸಲು. ಈ ಅಭಿಯಾನವು ಭಾರತದಾದ್ಯಂತ ಅಸ್ತಿತ್ವದಲ್ಲಿರುವ ಆರೋಗ್ಯ ಚಳುವಳಿಗಳನ್ನು ಆದರಿಸಿ ಅವನ್ನು ಮುಂದಕ್ಕೆ ಒಯ್ಯುತ್ತದೆ, ಮತ್ತು ರೈತರು, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಮತ್ತು ಮಹಿಳಾ ಚಳುವಳಿಗಳಂತಹ ವಿಶಾಲ ಜನಸಮೂಹಗಳೊಂದಿಗೆ ಕಾರ್ಯಸೂಚಿಗಳನ್ನು ಹಂಚಿಕೊಂಡು ಅವುಗಳನ್ನು ಜತೆಗೂಡಿಸಿಕೊಳ್ಳುವುದರ ಮೇಲೆ ಹೊಸ ಒತ್ತು ನೀಡುವುದಾಗಿ ಹೇಳಿದೆ. ಸಾರ್ವತ್ರಿಕ

ಇದನ್ನೂ ಓದಿ: ಮನೆಮನೆಗೆ BLO ಭೇಟಿ ಆರಂಭ: ಮೊದಲ ದಿನವೇ 12.48 ಲಕ್ಷ ಫಾರ್ಮ್ ವಿತರಣೆ

ಡಿಸೆಂಬರ್ 2025 ರಲ್ಲಿ ದಿಲ್ಲಿಯಲ್ಲಿ ನಡೆದ ಯಶಸ್ವಿ ಸಮಾವೇಶದ ನಂತರ ಅಖಿಲ ಭಾರತ ಅಭಿಯಾನದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಈ ಸಮಾವೇಶದಲ್ಲಿ ವಿವಿಧ ರಾಜ್ಯಗಳು, ಜನ ಚಳುವಳಿಗಳು, ಕಾರ್ಮಿಕ ಸಂಘಗಳು, ಸಮುದಾಯಿಕ ಸಂಸ್ಥೆಗಳು, ಯುವ ಮತ್ತು ವಿದ್ಯಾರ್ಥಿ ಗುಂಪುಗಳು ಮತ್ತು ಆರೋಗ್ಯ ವೃತ್ತಿಪರರಿಂದ 600 ಪ್ರತಿನಿಧಿಗಳು ಒಟ್ಟಿಗೆ ಕಲೆತು ಅಂಶಗಳ ಕಾರ್ಯಸೂಚಿಯನ್ನು ಚರ್ಚಿಸಿದರು., ಇದರಲ್ಲಿ ಆರೋಗ್ಯ ಪಾಲನೆಯ ಹಕ್ಕು, ಆರೋಗ್ಯಕ್ಕಾಗಿ ಜನರು ಜೇಬಿನಿಂದ ಮಾಡುವ ಖರ್ಚಿನ ಪ್ರಮಾಣವನ್ನು  ಇಳಿಸುವುದು, ಜನ-ಕೇಂದ್ರಿತ ಔಷಧೀಯ ನೀತಿ ಮತ್ತು ಆರೋಗ್ಯ ವಿಮೆಯನ್ನು ಹಂತಹಂತವಾಗಿ ರದ್ದುಗೊಳಿಸುವುದು ಸೇರಿವೆ.

ಸಮಾವೇಶದ ಕಾರ್ಯಸೂಚಿಯನ್ನು ಒಟ್ಟುಗೂಡಿಸಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನೆಯು ಐದು ಪರಸ್ಪರ ಸಂಬಂಧ ಹೊಂದಿರುವ ಕಾಳಜಿಗಳನ್ನು ಮುನ್ನೆಲೆಯಲ್ಲಿ ಇಡುತ್ತದೆ. ಮೊದಲನೆಯದು, ಪ್ರಸ್ತುತ ಆರೋಗ್ಯ ಪರಿಸ್ಥಿತಿಗಳನ್ನು , ಅಂದರೆ  ಹೊರಗಿಡುವ ವಾಸ್ತವ ಸಂಗತಿಗಳು, ಆರೋಗ್ಯ ಪಾಲನೆಯ ವೆಚ್ಚಗಳು ಮತ್ತು ಅಡೆತಡೆಗಳು ಮತ್ತು ಸ್ಥಳೀಯ ಆರೋಗ್ಯ ಸೌಲಭ್ಯಗಳ ಸ್ಥಿತಿ ಇವುಗಳನ್ನು ಸಂಯೋಜಿಸುವುದು. ಎರಡನೆಯದು, ʻಎಲ್ಲರಿಗೂ ಆರೋಗ್ಯಪಾಲನೆʼಯ  ತತ್ವದ ಸುತ್ತ ವಿವಿಧ ಸಾಮಾಜಿಕ ಗುಂಪುಗಳು ಮತ್ತು ಚಳುವಳಿಗಳನ್ನು ಒಂದುಗೂಡಿಸಿ ಆರೋಗ್ಯ ಒಗ್ಗಟ್ಟನ್ನು ನಿರ್ಮಿಸುವುದು.

ಮೂರನೆಯದು, ಜನ-ಕೇಂದ್ರಿತ ಮತ್ತು ಸ್ಥಳೀಯವಾಗಿ ಬೇರೂರಿರುವ ಕಾರ್ಯಸಾಧ್ಯ  ಆರೋಗ್ಯ ಪರಿಹಾರಗಳನ್ನು ಮುಂದಿಡುವುದು. ನಾಲ್ಕನೆಯದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ರಕ್ಷಿಸುವುದು, ವಿಸ್ತರಿಸುವುದು ಮತ್ತು ಪ್ರಜಾಪ್ರಭುತ್ವೀಕರಿಸುವುದು ಮತ್ತು ಪಿಪಿಪಿ ಮತ್ತು ಕಾರ್ಪೊರೇಟ್-ಚಾಲಿತ ಮಾದರಿಗಳಿಗೆ ಸವಾಲು ಹಾಕುವುದು ಮತ್ತು ಕೊನೆಯದಾಗಿ,  ಅಭಿಯಾನದ ಗುರಿಗಳನ್ನು ಸಾಧಿಸಲು ವಿವಿಧ ಹಂತಗಳಲ್ಲಿ ಸಾಮೂಹಿಕ ಆರೋಗ್ಯ ಹೋರಾಟಗಳನ್ನು ನಡೆಸುವುದು. ಸಾರ್ವತ್ರಿಕ

ಅಭಿಯಾನದ ಪ್ರಾಥಮಿಕ ಹಂತದಲ್ಲಿ, ಅಕ್ಟೋಬರ್ 2026 ರಲ್ಲಿ, ಜೆಎಸ್‌ಎ ʻಜನತಾ ಆರೋಗ್ಯ ಕಾವಲು’ ವರದಿ(ಪೀಪಲ್ಸ್ ಹೆಲ್ತ್ ವಾಚ್ ರಿಪೋರ್ಟ್‌, PHWR) ಬಿಡುಗಡೆ ಮಾಡುವ ವಿಚಾರ ಮುಂದಿಟ್ಟಿದೆ. ಈ ವರದಿಯು ಭಾರತದಲ್ಲಿ ಪ್ರಾಥಮಿಕ ಆರೋಗ್ಯ ರಕ್ಷಣೆಯ ಸ್ಥಿತಿಯ ಮೌಲ್ಯಮಾಪನವಾಗಿರುತ್ತದೆ. ಇದನ್ನು ಸಮೀಕ್ಷೆಗಳು, ಆರೋಗ್ಯ ಸೌಲಭ್ಯಗಳಿಂದ ನಿರ್ಗಮಿಸುವಾಗಿನ ಸಂದರ್ಶನಗಳು, ಗ್ರಾಮ/ಸಮುದಾಯ ಆರೋಗ್ಯ ಸಂವಾದಗಳು ಮತ್ತು ಇತರ ಮೂಲಗಳಿಂದ ಸಂಗ್ರಹಿಸಲಾಗುತ್ತದೆ. ಇದು ಸರ್ವಸಾಮಾನ್ಯ ಆರೋಗ್ಯ ಮತ್ತು ಸಾಮಾಜಿಕ ಭದ್ರತಾ ಪ್ರಶ್ನೆಗಳು ಮತ್ತು ಜನರು ಎದುರಿಸುತ್ತಿರುವ ಆರೋಗ್ಯ ರಕ್ಷಣೆಯ ಲಭ್ಯತೆಯಲ್ಲಿನ ಅಡಚಣೆಗಳನ್ನು ಗುರುತಿಸುತ್ತದೆ. ಸಾರ್ವತ್ರಿಕ

ಅಕ್ಟೋಬರ್ 2026 ಮತ್ತು ಫೆಬ್ರವರಿ 2027 ರ ನಡುವೆ, ಹಂತ ಹಂತದ ರಾಷ್ಟ್ರೀಯ ಆರೋಗ್ಯ ಹಕ್ಕುಗಳ ಯಾತ್ರೆ (ಸ್ವಾಸ್ಥ್ಯ ಅಧಿಕಾರ್‌ ಯಾತ್ರಾ) ಯೋಜಿಸಲಾಗಿದೆ. ಇದು 20 ರಾಜ್ಯಗಳ ಮೂಲಕ ಚಲಿಸುತ್ತದೆ, ಪ್ರತಿಯೊಂದರಲ್ಲೂ ಸಾರ್ವಜನಿಕ ಆರೋಗ್ಯ ಸಂವಾದಗಳ ಸರಣಿಯನ್ನು ನಡೆಸುತ್ತದೆ. ಈ ಯಾತ್ರೆಯು ಪ್ರಮುಖ ರಾಜ್ಯಗಳ ಐದರಿಂದ ಹತ್ತು ಜಿಲ್ಲೆಗಳನ್ನು ಮತ್ತು ಸಣ್ಣ ರಾಜ್ಯಗಳ ಕೆಲವು ಜಿಲ್ಲೆಗಳನ್ನು ಒಳಗೊಂಡಿದ್ದು, ದೇಶಾದ್ಯಂತ 100 ಕ್ಕೂ ಹೆಚ್ಚು ಜಿಲ್ಲೆಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆರೋಗ್ಯದ ಹಕ್ಕಿನ ಕುರಿತು ಸಾಮೂಹಿಕ ಸಹಿ ಅಭಿಯಾನವನ್ನೂ ಯೋಜಿಸಲಾಗಿದೆ.

ಆರೋಗ್ಯಪಾಲನೆಯ ಹಕ್ಕು ಶಾಸನ, ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಜಿಡಿಪಿಯ 3.5% ಕ್ಕೆ ಹೆಚ್ಚಿಸುವುದು, ಉಚಿತ ಔಷಧಗಳು ಮತ್ತು ರೋಗನಿರ್ಣಯ ಸೌಕರ್ಯ, ಆರೋಗ್ಯ ಕಾರ್ಯಕರ್ತರ ಹಕ್ಕುಗಳು, ರೋಗಿಗಳ ಹಕ್ಕುಗಳೊಂದಿಗೆ ಖಾಸಗಿ ಆರೋಗ್ಯ ಪಾಲನೆಯ ನಿಯಂತ್ರಣ, ಆರೋಗ್ಯ ವ್ಯವಸ್ಥೆಗಳಲ್ಲಿ ಲಿಂಗ ಮತ್ತು ಸಾಮಾಜಿಕ ನ್ಯಾಯ ಮತ್ತು ಒಂದು ಸಾರ್ವತ್ರಿಕ ಆರೋಗ್ಯಪಾಲನೆ ವ್ಯವಸ್ಥೆಯತ್ತ ಸಾಗುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಯಾತ್ರೆಯು ಜನಜನಿತಗೊಳಿಸುತ್ತದೆ. ಪ್ರತಿ ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಮಟ್ಟದಲ್ಲಿ, ಅವರವರ ಬೇಡಿಕೆಗಳನ್ನು ಸೇರಿಸಲಾಗುವುದು.

ಈ ಅಭಿಯಾನವು ಮಾರ್ಚ್ 2027 ರಲ್ಲಿ ಸಂಸತ್ತಿನ ಬಜೆಟ್ ಅಧಿವೇಶನದ ಸಮಯಕ್ಕೆ ಹೊಂದಿಕೊಂಡು ಒಂದು ʼಜನತಾ  ಆರೋಗ್ಯ ಸಂಸತ್ʼನೊಂದಿಗೆ ಮುಕ್ತಾಯಗೊಳ್ಳುತ್ತದೆ. ಇದಕ್ಕೆ ವಿಪಕ್ಷಗಳ  ಸಂಸದರಿಗೆ ಆಹ್ವಾನವನ್ನು ನೀಡಲಾಗುವುದು ಮತ್ತು ಇದರಲ್ಲಿ ಆರೋಗ್ಯದ ಹಕ್ಕಿನ ಮಸೂದೆಯನ್ನು ಮಂಡಿಸಲಾಗುವುದು ಎಂದು ಜೆಎಸ್‌ಎ ಹೇಳಿದೆ.

ಇದನ್ನೂ ನೋಡಿ: ‘ಅರ್ಬುದನ ಡೈರಿ’ | ಕ್ಯಾನ್ಸರ್ ಪೀಡಿತರಿಗೆ ವಿಶ್ವಾಸ ತುಂಬುವ ಅನುಭವ ಕಥನ Janashakthi Media

Donate Janashakthi Media

Leave a Reply

Your email address will not be published. Required fields are marked *