ಎಸ್‌ಐಆರ್ ವಿರುದ್ಧ ಪ್ರತಿಭಟನೆಗೆ ಕರೆ: ರಾಜ್ಯಾದ್ಯಂತ ಜೂನ್‌ 30ಂದು ಆಂದೋಲನಕ್ಕೆ ಸಿದ್ಧತೆ

ಬೆಂಗಳೂರು: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವಿರೋಧಿಸಿ ಸಂಘಟನೆಗಳು ಜೂನ್‌ 30ರಂದು ರಾಜ್ಯದ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿವೆ. ಇದೇ ದಿನ ಕರ್ನಾಟಕದಾದ್ಯಂತ ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಸಂಗ್ರಹ ಪ್ರಕ್ರಿಯೆ ಆರಂಭವಾಗಲಿದೆ.

ಜೂನ್‌ 28ರಂದು ಪ್ರಕಟಿಸಿದ ಪ್ರಕಟಣೆಯಲ್ಲಿ, ಈ ವೇದಿಕೆಗಳು ಎಸ್‌ಐಆರ್ ಪ್ರಕ್ರಿಯೆಯನ್ನು “ಸಂವಿಧಾನ ವಿರೋಧಿ, ವೈಜ್ಞಾನಿಕತೆಯಿಲ್ಲದ, ದೋಷಪೂರ್ಣ ಮತ್ತು ದುರುದ್ದೇಶಪೂರಿತ” ಎಂದು ಟೀಕಿಸಿವೆ.

ವಿರೋಧಿ ಎಸ್‌ಐಆರ್ ಮೈತ್ರಿಯ ಪದಾಧಿಕಾರಿಗಳಾದ ಜೆ.ಎಂ. ವೀರಸಂಗಯ್ಯ ಹಾಗೂ ಕೆ.ಎಲ್. ಅಶೋಕ್ ಅವರು ಮೇ 30 ಮತ್ತು ಜೂನ್ 20ರಂದು ತಮ್ಮ ನಾಲ್ಕು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈಗಾಗಲೇ ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಇರಾನ್ ಮೇಲೆ ಅಮೆರಿಕದ ಮತ್ತಷ್ಟು ದಾಳಿ; ಲೆಬನಾನ್, ಇಸ್ರೇಲ್ – ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ತೀವ್ರ

ಅವರ ಪ್ರಮುಖ ಬೇಡಿಕೆಗಳು ಇಂತಿವೆ: ಚುನಾವಣಾ ಕೈಪಿಡಿಯಲ್ಲಿ ಉಲ್ಲೇಖಿಸದ ಲಾಜಿಕ್ ಡಿಸ್ಕ್ರೆಪೆನ್ಸಿ ಸಾಫ್ಟ್‌ವೇರ್ ಅನ್ನು ಕರ್ನಾಟಕದಲ್ಲಿ ಬಳಸಬಾರದು; ಕರಡು ಮತದಾರರ ಪಟ್ಟಿಯನ್ನು ಗ್ರಾಮ/ವಾರ್ಡ್ ಸಭೆಗಳಲ್ಲಿ ಸಾರ್ವಜನಿಕ ಪರಿಶೀಲನೆಗೆ ಲಭ್ಯ ಮಾಡಿಸಬೇಕು; ಪಟ್ಟಿಯನ್ನು ಓದಲು ಸುಲಭವಾದ ರೂಪದಲ್ಲಿ ನೀಡಬೇಕು; ಮನವಿ ಮತ್ತು ಆಕ್ಷೇಪಣೆ ಸಲ್ಲಿಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಬೇಕು.

ಆದರೆ, ಈ ಬೇಡಿಕೆಗಳಿಗೆ ಚುನಾವಣಾ ಆಯೋಗ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

“ಮಂಗಳವಾರ ನಾವು ಕಪ್ಪು ಬಟ್ಟೆ ಧರಿಸಿ, ಎಸ್‌ಐಆರ್ ವಿರೋಧಿ ಫಲಕಗಳನ್ನು ಹಿಡಿದು ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಷ್ಟೇ ಅಲ್ಲದೆ ಕೆಲಸದ ಸ್ಥಳಗಳಲ್ಲಿ, ವಸತಿ ಪ್ರದೇಶಗಳಲ್ಲಿ ಹಾಗೂ ಮನೆಗಳ ಮುಂದೆಯೂ ಪ್ರತಿಭಟನೆ ನಡೆಸುತ್ತೇವೆ,” ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, “ನಮ್ಮ ಗ್ರಾಮ ನಮ್ಮ ಜವಾಬ್ದಾರಿ” ಮತ್ತು “ನಮ್ಮ ಪ್ರದೇಶ ನಮ್ಮ ಜವಾಬ್ದಾರಿ” ಎಂಬ ಘೋಷಣೆಗಳೊಂದಿಗೆ ಗ್ರಾಮ ಪಂಚಾಯಿತಿಗಳು ಮತ್ತು ವಾರ್ಡ್‌ಗಳಲ್ಲಿ ‘ವೋಟ್ ಗಾರ್ಡ್ ಸಮಿತಿಗಳನ್ನು’ ರಚಿಸುವ ಅಭಿಯಾನವನ್ನೂ ಆರಂಭಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.\

ಇದನ್ನೂ ನೋಡಿ: ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ‘ವಿಐಪಿ’! ಪಾಸ್‌ಪೋರ್ಟ್‌ ಕಥೆ ಏನು? ಎಸ್‌ಐಆರ್‌ ಸುತ್ತ ಪ್ರಶ್ನೆಗಳ ಹುತ್ತ |

Donate Janashakthi Media

Leave a Reply

Your email address will not be published. Required fields are marked *