ಬೆಂಗಳೂರು: ಆರನೇ ತರಗತಿಯ ಕನ್ನಡ ವಿಷಯಕ್ಕಾಗಿ NCERT ಬಿಡುಗಡೆ ಮಾಡಿರುವ ಹೊಸ ಪಠ್ಯಪುಸ್ತಕದ ಬಗ್ಗೆ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದೊಂದಿಗೆ ಯಾವುದೇ ರೀತಿಯ ಸಮಾಲೋಚನೆ ನಡೆಸದೇ ಪುಸ್ತಕ ಪ್ರಕಟಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರವು ಶಿಕ್ಷಣದ ಮೂಲಕ ಸೈದ್ಧಾಂತಿಕ ವಿಚಾರಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ. ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲೂ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಹಲವು ದೋಷಗಳು ಕಂಡುಬಂದಿದ್ದವು ಎಂದು ಅವರು ನೆನಪಿಸಿದ್ದಾರೆ.
ಇದನ್ನೂ ಓದಿ: ಮಳೆ ಕೊರತೆ 41%: ವಿಫಲ ಮಾನ್ಸೂನ್ ಎಚ್ಚರಿಕೆ, ‘ಸೂಪರ್ ಎಲ್ನಿನೊ’ ಭೀತಿ
ಈ ಹೊಸ ಪಠ್ಯಪುಸ್ತಕಕ್ಕೆ “ಕೃಷ್ಣ” ಎಂಬ ಶೀರ್ಷಿಕೆ ನೀಡಲಾಗಿದ್ದು, ಕನ್ನಡದ ವೈಚಾರಿಕ ಪರಂಪರೆ ಹಾಗೂ ಸ್ಥಳೀಯ ಸಂಸ್ಕೃತಿಗೆ ತಕ್ಕಷ್ಟು ಪ್ರಾಮುಖ್ಯತೆ ನೀಡಿಲ್ಲ ಎಂದು ಮಧು ಬಂಗಾರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಅದೇ ರೀತಿ, ಸಮತೋಲಿತ ಆಹಾರ ಕುರಿತ ಪಾಠದಲ್ಲಿ ಮೊಟ್ಟೆ, ಮೀನು ಮತ್ತು ಮಾಂಸಾಹಾರ ಕುರಿತ ಉಲ್ಲೇಖವಿಲ್ಲದೆ ಕೇವಲ ಸಸ್ಯಾಹಾರಕ್ಕೆ ಮಾತ್ರ ಒತ್ತು ನೀಡಲಾಗಿದೆ ಎಂದು ಅವರು ಟೀಕಿಸಿದ್ದಾರೆ. ಇದು ಸಮತೋಲಿತ ಶಿಕ್ಷಣ ನಿರೂಪಣೆ ಅಲ್ಲ ಎಂದು ಹೇಳಿರುವ ಅವರು, ಮಕ್ಕಳ ಶಿಕ್ಷಣವು ಅವರ ಹಿತಾಸಕ್ತಿಗೆ ಅನುಗುಣವಾಗಿರಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ: ದಲಿತ ಪ್ಯಾಂಥರ್ಸ್ ಮುಂದೆ ಆರೆಸ್ಸೆಸ್ ಮಂಡಿಯೂರಿದ್ದು ಹೇಗೆ? : ಕಾರವಾನ್ Janashakthi Media
