ನವದೆಹಲಿ: ನೀಟ್-ಯುಜಿ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಮ್ ಆಪ್ ಮೇಲೆ ವಿಧಿಸಲಾಗಿದ್ದ ತಾತ್ಕಾಲಿಕ ನಿರ್ಬಂಧವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ನಿರ್ಬಂಧ ತೆರವುಗೊಳ್ಳುತ್ತಿದ್ದಂತೆ, ಟೆಲಿಗ್ರಾಮ್ ಆಪ್ ಮತ್ತೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಿದ್ದು, ಬಳಕೆದಾರರು ಮಂಗಳವಾರ ಬೆಳಿಗ್ಗೆಯಿಂದಲೇ ಸೇವೆಯನ್ನು ಬಳಸಲು ಆರಂಭಿಸಿದ್ದಾರೆ.
ಇದನ್ನೂ ಓದಿ: ಕೋಲ್ಕತ್ತಾ| ರಸ್ತೆ ಮರುನಾಮಕರಣ ವಿವಾದ: ಹಸನ್ ಸುಹ್ರಾವರ್ಡಿ – ಹುಸೇನ್ ಸುಹ್ರಾವರ್ಡಿ ಹೆಸರಿನಲ್ಲಿ ಗೊಂದಲ
ಆದರೆ, ಆಯಪಲ್ ಆಪ್ ಸ್ಟೋರ್‌ನಲ್ಲಿ ಕೆಲವು ಕಾಲ ಟೆಲಿಗ್ರಾಮ್ ಲಭ್ಯವಾಗಿರಲಿಲ್ಲ. ಬೆಳಿಗ್ಗೆ 10 ಗಂಟೆಯವರೆಗೆ ಹಲವು ಬಳಕೆದಾರರಿಗೆ ಆಪ್ ಸಿಗದೆ ಇರುವ ಸಮಸ್ಯೆ ಕಂಡುಬಂದಿದ್ದು, ಕೆಲವರು ಇನ್ನೂ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.
ಇದಕ್ಕೂ ಮೊದಲು, ಟೆಲಿಗ್ರಾಮ್ ಮೇಲಿನ ತಾತ್ಕಾಲಿಕ ನಿರ್ಬಂಧಕ್ಕೆ ದೆಹಲಿ ಹೈಕೋರ್ಟ್ ಬೆಂಬಲ ವ್ಯಕ್ತಪಡಿಸಿ, ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.
ಇದನ್ನೂ ನೋಡಿ: “ಟಾಟಾ ಕಂಪನಿಗೆ ವಿದ್ಯುತ್, ಜನತೆಗೆ ಕಾದಿದೆ ಆಪತ್ತು? | ವಿದ್ಯುತ್ ಖಾಸಗೀಕರಣ ವಿರುದ್ಧ ಸಮಾವೇಶ” Janashakthi Media
