ಅಮೋನಿಯಾ ಅನಿಲ ಸೋರಿಕೆ ದುರಂತ: ಸಾವಿನ ಸಂಖ್ಯೆ 5ಕ್ಕೆ ಏರಿಕೆ

ಚೆನ್ನೈ: ತಿರುಳ್ಳೂರು ಜಿಲ್ಲೆಯ ಪೇರಿಯಪಾಳಯಂ ಸಮೀಪದ ಸೇಂಟ್ ಪೀಟರ್ & ಪೌಲ್ ಸೀ ಫುಡ್ಸ್ ಎಕ್ಸ್‌ಪೋರ್ಟ್ಸ್ ಘಟಕದಲ್ಲಿ ಸಂಭವಿಸಿದ ಅಮೋನಿಯಾ ಅನಿಲ ಸೋರಿಕೆ ದುರಂತದಲ್ಲಿ ಸಾವಿನ ಸಂಖ್ಯೆ ಜೂನ್‌ 22ಕ್ಕೆ ಐದುಕ್ಕೆ ಏರಿಕೆಯಾಗಿದೆ. ರಾತ್ರಿ ವೇಳೆ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ, ಜೂನ್‌ 21ರ ರಾತ್ರಿ ಇಬ್ಬರು ಮೃತಪಟ್ಟಿದ್ದು, ಸೋಮವಾರ ಬೆಳಗ್ಗೆ ಇನ್ನೂ ಮೂವರು ಸಾವನ್ನಪ್ಪಿದ್ದಾರೆ. ವಿಷಕಾರಿ ಅನಿಲಕ್ಕೆ ಒಳಗಾದ 74 ಮಂದಿಯಲ್ಲಿ 67 ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರನ್ನು ಬಿಡುಗಡೆ ಮಾಡಲಾಗಿದೆ.

ಅನಿಲಕ್ಕೆ ಒಳಗಾದವರು ಉಸಿರಾಟದ ತೊಂದರೆ, ಕಣ್ಣಿನ ಮತ್ತು ಶ್ವಾಸಕೋಶದ ಉರಿತ, ಕೆಮ್ಮು, ಎದೆ ನೋವು ಸೇರಿದಂತೆ ವಿವಿಧ ಲಕ್ಷಣಗಳನ್ನು ಅನುಭವಿಸಿದ್ದಾರೆ. ಅನಿಲ ಸೋರಿಕೆಯ ಕಾರಣದ ಬಗ್ಗೆ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಚೆನ್ನೈ| ಅಮೋನಿಯಾ ಅನಿಲ ಸೋರಿಕೆ: ಇಬ್ಬರು ಕಾರ್ಮಿಕರು ಸಾವು, ಹಲವರ ಸ್ಥಿತಿ ಗಂಭೀರ

ಬಾಧಿತ ಕಾರ್ಮಿಕರಲ್ಲಿ ಬಹುತೇಕರು ಒಡಿಶಾ, ಜಾರ್ಖಂಡ್, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಮೂಲದ 19-20 ವರ್ಷದ ಯುವತಿಯರಾಗಿದ್ದು, ಘಟಕದ ಅಮೋನಿಯಾ ಪ್ಲಾಂಟ್‌ನಿಂದ ಸುಮಾರು 50 ಮೀಟರ್ ದೂರದಲ್ಲಿರುವ ವಸತಿ ಗೃಹದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.

ರಕ್ಷಣೆ ಕಾರ್ಯಾಚರಣೆಗೆ ತಮಿಳುನಾಡು ಸರ್ಕಾರ ಆಹ್ವಾನಿಸಿದ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಿಳಿಸಿದಂತೆ, ಅನಿಲ ವಸತಿ ಪ್ರದೇಶಕ್ಕೂ ಹರಡಿ ಕಾರ್ಮಿಕರಲ್ಲಿ ಉಸಿರಾಟದ ತೊಂದರೆ ಉಂಟುಮಾಡಿತು.

ಘಟನೆಯಲ್ಲಿ ಪೀಡಿತರಾಗದ ಸುಮಾರು 130 ಕಾರ್ಮಿಕರನ್ನು ಕನ್ನಿಗೈಪೈರ್‌ನ ಗೋವಿಂದ ಭವನ ಮದುವೆ ಮಂದಿರಕ್ಕೆ ಸ್ಥಳಾಂತರಿಸಲಾಗಿದ್ದು, ಅವರಿಗೆ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಆರೋಗ್ಯ ಸಚಿವ ಕೆ.ಜಿ. ಅರುಣರಾಜ್ ಮಾಹಿತಿ ಪ್ರಕಾರ, ಘಟಕದ ವಾತಾವರಣದಲ್ಲಿ ಅಮೋನಿಯಾ ಪ್ರಮಾಣವು ಸುಮಾರು 300 ಪಿಪಿಎಂ ಮಟ್ಟದಲ್ಲಿ ದಾಖಲಾಗಿದೆ.

ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ 105 ಮತ್ತು 125(ಎ) ಕಲಂಗಳಡಿ ಪ್ರಕರಣ ದಾಖಲಿಸಿದ್ದು, ಘಟಕದ ಮಾಲೀಕರಾದ ಮೋಹನ್ ಮತ್ತು ಜೋಸೆಫ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಮೃತದೇಹಗಳನ್ನು ತಿರುಳ್ಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ. ಬಾಧಿತರ ಮೃತದೇಹಗಳನ್ನು ಅವರ ಮೂಲ ರಾಜ್ಯ ಒಡಿಶಾಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಇದನ್ನೂ ನೋಡಿ: ಕಾಂಗ್ರೆಸ್‌ ಸರ್ಕಾರಕ್ಕೆ 3 ವರ್ಷ | ಮಹಿಳಾ ಮತ್ತು ಮಕ್ಕಳ ಕಲ್ಯಾಣ: ಘೋಷಣೆ ಎಷ್ಟು? ಸಾಧನೆ ಎಷ್ಟು? Janashakthi Media

Donate Janashakthi Media

Leave a Reply

Your email address will not be published. Required fields are marked *