ಜಾಲಹಳ್ಳಿ ಮೌಲಾನಾ ಆಜಾದ್ ಶಾಲೆ ಸ್ಥಳಾಂತರಕ್ಕೆ ಆಗ್ರಹಿಸಿ ಶಾಲೆ ಮುಂದೆ ಎಸ್‌ಎಫ್‌ಐ ಬೃಹತ್ ಪ್ರತಿಭಟನೆ

ಜಾಲಹಳ್ಳಿ: ಗ್ರಾಮದ ಸರ್ಕಾರಿ ಮೌಲಾನಾ ಆಜಾದ್ ಶಾಲೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ದೇವದುರ್ಗ ತಾಲೂಕು ಸಮಿತಿಯ ನೇತೃತ್ವದಲ್ಲಿ ಜೂನ್ 19ರಂದು ಶಾಲೆಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು,

ಶಾಲೆಯು ಹಲವು ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ಶಿಕ್ಷಣ ಪಡೆಯುವಂತಾಗಿದೆ ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ ಆರೋಪಿಸಿದ್ದರು,

ಹಟ್ಟಿ–ಜಾಲಹಳ್ಳಿ ಮುಖ್ಯ ರಸ್ತೆಯ ಪಕ್ಕದಲ್ಲೇ ಶಾಲೆ ಇರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆಗೆ ಗಂಭೀರ ಅಪಾಯ ಉಂಟಾಗಿದ್ದು, ಶಾಲೆಯ ಪ್ರವೇಶ ದ್ವಾರ ರಸ್ತೆಯ ಅಂಚಿನಲ್ಲಿರುವುದರಿಂದ ಮಕ್ಕಳು ಜೀವಭಯದಲ್ಲೇ ಶಾಲೆಗೆ ಹಾಜರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಹೇಳಿದರು,

ಇದನ್ನೂ ಓದಿ: ಶಿವಸೇನೆ (ಯುಬಿಟಿ) ಸಂಸದರ ವಿಭಜನೆ ಸಾಧ್ಯತೆ: 6 ಸಂಸದರು ಶಿಂಡೆ ಶಿಬಿರಕ್ಕೆ ಸೇರ್ಪಡೆ ಸುಳಿವು

ಶಾಲೆಯಲ್ಲಿ ಶುದ್ಧ ಕುಡಿಯುವ ನೀರು, ಸಮರ್ಪಕ ಶೌಚಾಲಯ, ಆಟದ ಮೈದಾನ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯಿದ್ದು, ಶಾಲೆಯ ಸುತ್ತಮುತ್ತ ಅಕ್ರಮ ಮದ್ಯ ಮತ್ತು ಧೂಮಪಾನ ವಸ್ತುಗಳ ಮಾರಾಟ ನಡೆಯುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು,

ಈ ಕುರಿತು ಎಸ್‌ಎಫ್‌ಐ ತಾಲೂಕು ಮುಖಂಡ ಸಂತೋಷ ತ್ಯಾಪ್ಲಿ ಮಾತನಾಡಿ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಈ ಹಿಂದೆ ಜಿಲ್ಲಾಡಳಿತದ ಸೂಚನೆಯಂತೆ ಜಾಲಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದಲ್ಲಿ ಶಾಲೆ ನಡೆಸಲು ಅಗತ್ಯ ಅನುಮತಿ ದೊರೆತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಶಾಲೆ ಸ್ಥಳಾಂತರ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು

ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮೌಲಾನಾ ಆಜಾದ್ ಶಾಲೆಯನ್ನು ಕೂಡಲೇ ಜಾಲಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡಕ್ಕೆ ಸ್ಥಳಾಂತರಿಸಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು.

ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿಕರು ಹಾಗೂ ಎಸ್‌ಎಫ್‌ಐ ಕಾರ್ಯಕರ್ತರ ನೇತೃತ್ವದಲ್ಲಿ ಶಾಲೆಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು , ಒಂದು ವೇಳೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸದೆ ಹೋದರೆ ಹೋರಾಟ ಇನ್ನಷ್ಟು ಬೇರೆ ರೀತಿಯಲ್ಲಿ ಮಾಡಲಾಗುವುದು ಎಂದು ಹೇಳಿದರು,

ಇದೆ ಸಂದರ್ಭದಲ್ಲಿ ರೈತ ಸಂಘಟನೆ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ,ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ, ರೈತ ಮುಖಂಡ ಮೌನೇಶ ಜಾಲಹಳ್ಳಿ, ಡಿವೈಎಫ್ಐ ಮುಖಂಡ ರಿಯಾಜ್ ಆರ್ಥಿ,ಬಸವರಾಜ ಲಿಂಗದಹಳ್ಳಿ, ಮೈಬೂ, ಯಲ್ಲಪ್ಪ ಸುಣದಕಲ್, ಶಿವು ಊಟಿ, ಸುರೇಶ್, ರಿಯಾಜ್ ಖುರೀಷ್, ಮತ್ತು ವಿದ್ಯಾರ್ಥಿಗಳು ಪಾಲಕರು ಇತರರು ಇದ್ದರು.

ಇದನ್ನೂ ನೋಡಿ: ಕಡಬ ಸಮುದಾಯ ಆಸ್ಪತ್ರೆ ಅವ್ಯವಸ್ಥೆ | ವೈದ್ಯರ ಕೊರತೆ, ಔಷಧಿ ಅಭಾವ, ಲ್ಯಾಬ್ ಸಿಬ್ಬಂದಿ ಕೊರತೆಯಿಂದ ರೋಗಿಗಳ ಪರದಾಟ

Donate Janashakthi Media

Leave a Reply

Your email address will not be published. Required fields are marked *