ಚೀನಾ ಪರ ಪ್ರಚಾರಕ್ಕಾಗಿ ವಿದೇಶಿ ಹಣವನ್ನು ಸ್ವೀಕರಿಸಿ, ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ಯತ್ನಿಸಿದ್ದಾರೆಂಬ ಆರೋಪ ಹೊರಿಸಿ, ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಅವರ ವಿರುದ್ಧ ಇ.ಡಿ. ದಾಖಲಿಸಿದ ಪ್ರಕರಣವನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. “ಈ ಪ್ರಕರಣವನ್ನು ಮುಂದುವರಿಸುವುದು ಕಾನೂನನ್ನು ದುರುಪಯೋಗಪಡಿಸಿಕೊಂಡಂತೆ” ಎಂದು ನ್ಯಾಯಾಲಯ ವ್ಯಾಖ್ಯಾನ ಮಾಡಿದೆ. ಪ್ರಕರಣ ಸಾಬೀತಾಗುವ ಮೊದಲೇ ವ್ಯಕ್ತಿಯನ್ನು ಸಾಮಾಜಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಾನಿಗೊಳಿಸಲಾಗಿದೆ. ಇಲ್ಲಿರುವ ಒಂದು ಪ್ರಮುಖವಾದ ಪ್ರಶ್ನೆಯೆಂದರೆ, ಅಂತಿಮವಾಗಿ ಪ್ರಕರಣವು ನಿಲ್ಲದೇಹೋದರೆ, ಆ ವ್ಯಕ್ತಿ ಕಳೆದ ಜೈಲು ಜೀವನ, ಕಳೆದುಕೊಂಡ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನಸಿಕ ಯಾತನೆಗೆ ಹೊಣೆಯಾರದು? ಖುಲಾಸೆ
– ಸಿ. ಸಿದ್ದಯ್ಯ
ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿಸರ್ಕಾರ ತಪ್ಪುಗಳನ್ನು ಮಾಡಿದರೆ ಅದನ್ನು ಪ್ರಶ್ನಿಸುವುದು ಪತ್ರಕರ್ತರ ಜವಾಬ್ದಾರಿ. ಆದರೆ, ಪ್ರಶ್ನಿಸುವವರನ್ನು ಅಪರಾಧಿಗಳಂತೆ ಬಿಂಬಿಸುವುದು, ಅವರನ್ನು ವರ್ಷಗಟ್ಟಲೆ ಜೈಲಿನಲ್ಲಿ ಇಡುವುದು, ನ್ಯಾಯಾಲಯಗಳಿಗೆ ಅಲೆದಾಡುವಂತೆ ಮಾಡುವುದು ಇಂದಿನ ಆಡಳಿತದ ದುಷ್ಟ ಸ್ವರೂಪವಾಗಿದೆ. ದಾಖಲು ಮಾಡುವ ಪ್ರಕರಣಗಳು, ಮಾಡಿದ ಆರೋಪಗಳು ಸಾಬೀತಾಗದಿದ್ದರೆ? ಅಪರಾಧ ಯಾರದು? ಯಾರಿಗೆ ಶಿಕ್ಷೆ ಕೊಡಬೇಕು?
ಚೀನಾ ಪರವಾದ ಪ್ರಚಾರ ಎಂಬ ಆರೋಪ
ವಿದೇಶಿ ನಿಧಿಗಳಮೂಲಕ ಚೀನಾ ಪರವಾದ ಪ್ರಚಾರ ನಡೆಸಿದ್ದಾರೆಎಂದು ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಅವರ ವಿರುದ್ಧ ಇ.ಡಿ. ದಾಖಲಿಸಿದ ಪ್ರಕರಣವನ್ನು ದೆಹಲಿ ಹೈಕೋರ್ಟ್ 2026ರ ಜೂನ್ 10ರಂದು ವಜಾಗೊಳಿಸಿದೆ. “ಈ ಪ್ರಕರಣವನ್ನು ಮುಂದುವರಿಸುವುದು ಕಾನೂನನ್ನು ದುರುಪಯೋಗ ಮಾಡಿಕೊಂಡಂತೆ” ಎಂದು ನ್ಯಾಯಾಲಯವ್ಯಾಖ್ಯಾನ ಮಾಡಿದೆ. ಖುಲಾಸೆ
ಇದನ್ನೂ ಓದಿ: POCSO ಪ್ರಕರಣಗಳಲ್ಲಿ ವಯಸ್ಸು ದೃಢಪಡಿಸದೆ ದೂರು ದಾಖಲಿಸುವುದು ಅಪಾಯಕರ: ಹೈಕೋರ್ಟ್
ಇದಲ್ಲದೆ, ಪ್ರಕರಣದ ತನಿಖೆಯಲ್ಲಿ ಸರ್ಕಾರಿ ತನಿಖಾ ಸಂಸ್ಥೆಗಳು ಕಾನೂನು ಕಾರ್ಯವಿಧಾನಗಳನ್ನು ಅನುಸರಿಸಲಿಲ್ಲ ಎಂದೂ, ಬಂಧನ ಪ್ರಕ್ರಿಯೆಯಲ್ಲಿಯೇ ಗಂಭೀರ ಲೋಪಗಳಿವೆ ಎಂದೂ ಅದು ಗುರುತಿಸಿದೆ. ಕಾನೂನು ನಿರ್ಧೇಶಿಸುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದರಿಂದ ಬಂಧನ ಅಮಾನ್ಯವಾಗಿದೆ ಎಂದು ಅದು ತೀರ್ಪು ನೀಡಿದೆ. ಈ ತೀರ್ಪು ಕೇವಲ ಒಬ್ಬ ವ್ಯಕ್ತಿಗೆ ನೀಡಿದ ನ್ಯಾಯವೆಂದು ನೋಡಬಾರದು, ಕುಸಿಯುತ್ತಿರುವ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಇದು ಒಂದು ಪರಿಹಾರವೆಂದು ಭಾವಿಸಬೇಕು. ಅಷ್ಟೇ ಅಲ್ಲ, ಅಪರಾಧವನ್ನು ಸಾಬೀತು ಪಡಿಸಲು ಸಾಧ್ಯವಾಗದ ಕೇಂದ್ರಕ್ಕೆ ಇದೊಂದು ಕಪಾಳಮೋಕ್ಷವನ್ನಾಗಿ ನೋಡಬೇಕು. ಖುಲಾಸೆ
ಪ್ರಬೀರ್ ಪುರ್ಕಾಯಸ್ಥ ಮಾಡಿದ ಅಪರಾಧವೇನು?
ಇಷ್ಟಕ್ಕೂ ಪ್ರಬೀರ್ ಪುರ್ಕಾಯಸ್ಥ ಮಾಡಿದ ಅಪರಾಧವೇನು? ನ್ಯೂಸ್‌ಕ್ಲಿಕ್ ಎಂಬ ವೆಬ್ ಪೋರ್ಟಲ್ ಮೂಲಕ, ಸಾರ್ವಜನಿಕ ಪತ್ರಿಕೋದ್ಯಮದ ಅನೇಕ ಸಮಸ್ಯೆಗಳನ್ನು ಪ್ರಬೀರ್ ಪುರ್ಕಾಯಸ್ಥ ಬೆಳಕಿಗೆ ತಂದರು. ಖುಲಾಸೆ
2020-21ರಲ್ಲಿ, ಮೂರು ಕರಾಳ ಕೃಷಿ ಕಾನೂನುಗಳನ್ನು ತಂದಿದ್ದ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಗಡಿಗಳಲ್ಲಿ ರೈತರು ಕೈಗೊಂಡಿದ್ದ ಐತಿಹಾಸಿಕವಾದ ಬೃಹತ್ ಚಳವಳಿಗೆ ಬೆಂಬಲವಾಗಿ ಅನೇಕ ಲೇಖನಗಳನ್ನು ಅವರು ಬರೆದರು. ಸರ್ಕಾರಿ ನೀತಿಗಳನ್ನು, ಕಾರ್ಪೊರೇಟ್ ಶಕ್ತಿಗಳ ಯೋಜನೆಗಳನ್ನು ಸಮಾಜದ ಎದುರು ತೆರೆದಿಟ್ಟರು. ನಿರುದ್ಯೋಗ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಕ್ಷೇತ್ರ ಮತ್ತು ಆರ್ಥಿಕ ಅಸಮಾನತೆಗಳಂತಹ ನ್ಯೂನತೆಗಳನ್ನು ಬಹಿರಂಗಪಡಿಸಿದರು. ಖುಲಾಸೆ
ಇ.ಡಿ.ಯನ್ನು ಛೂಬಿಟ್ಟಿತು
ಮುಖ್ಯವಾಹಿನಿಯ ಮಾಧ್ಯಮವನ್ನು ಮೋದಿಯವರ ಜಪ ಮಾಡುವಂತೆ ಪರಿವರ್ತಿಸಿರುವ ಕೇಂದ್ರ ಸರ್ಕಾರಕ್ಕೆ ಪ್ರಬೀರ್ ಪುರ್ಕಾಯಸ್ಥರ ಈ ರೀತಿಯ ಲೇಖನಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರವಿ ರುದ್ಧED ಯನ್ನು ಛೂಬಿಟ್ಟಿತು. ಖುಲಾಸೆ
‘ನ್ಯೂಸ್‌ಕ್ಲಿಕ್’ ಚೀನಾ ಪರ ಪ್ರಚಾರಕ್ಕಾಗಿ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ಅಕ್ರಮವಾಗಿ ಹಣ ಪಡೆದಿದೆ ಎಂಬ ನ್ಯೂಯಾರ್ಕ್ ಟೈಮ್ಸ್ ನ ಆಧಾರರಹಿತ ಒಂದು ವರದಿಯ ಆಧಾರದ ಮೇಲೆ, ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ಯತ್ನಿಸಿದ್ದಾರೆಂಬ ಆರೋಪಹೊರಿಸಿ, ದೆಹಲಿ ಪೊಲೀಸರು ಅಕ್ಟೋಬರ್ 2023 ರಲ್ಲಿ ಪುರ್ಕಾಯಸ್ಥ ಅವರನ್ನು ʻಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆʼ(ಯುಎಪಿಎ) ಕಾಯಿದೆಯಡಿ ಬಂಧಿಸಿದರು.
ನ್ಯೂಸ್‌ಕ್ಲಿಕ್ ಕಚೇರಿಯ ಮೇಲೆ ದಾಳಿ ನಡೆಸಲಾಯಿತು ಮತ್ತು ಹಲವಾರು ಫೈಲ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಪ್ರಬೀರ್ ಜೊತೆಗೆ ಮತ್ತೊಬ್ಬ ಉದ್ಯೋಗಿ ಅಮಿತ್ ಚಕ್ರವರ್ತಿ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಖುಲಾಸೆ

ಪುರ್ಕಾಯಸ್ಥ ಅವರ ಬಂಧನದ ಆಧಾರಗಳನ್ನು ಲಿಖಿತವಾಗಿ ನೀಡದೆ, ಕಾನೂನು ಪ್ರಕ್ರಿಯೆಗಳನ್ನು ಉಲ್ಲಂಘಿಸಿ ಬಂಧಿಸಲಾಗಿದೆ ಎಂದು 2024 ರಲ್ಲಿಯೇ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯವು, ಈ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಿತು.
ಯುಎಪಿಎ ಬಂಧನವು ಅಸಿಂಧುಗೊಂಡಿದ್ದರೂ, ದೆಹಲಿ ಪೊಲೀಸರು ಅವರ ವಿರುದ್ಧ ಪ್ರತ್ಯೇಕವಾಗಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈಗದೆಹಲಿ ಹೈಕೋರ್ಟ್ ಪುರ್ಕಾಯಸ್ಥ ವಿರುದ್ಧದ ಎಫ್‌ಐಆರ್ ಹಾಗೂ ಜಾರಿ ನಿರ್ದೇಶನಾಲಯದ (ED) ಮನಿ ಲಾಂಡರಿಂಗ್ ಪ್ರಕರಣಗಳನ್ನು ರದ್ದುಗೊಳಿಸಿ ತೀರ್ಪು ನೀಡಿದೆ.
ಆದರೆ, ಇಲ್ಲಿ ಒಂದು ಪ್ರಮುಖವಾದ ಪ್ರಶ್ನೆ? ಅಂತಿಮವಾಗಿ ಪ್ರಕರಣದಲ್ಲಿ ಮಾಡಲಾದ ಆರೋಪಗಳು ಸಾಭೀತಾಗದಿದ್ದರೆ, ಆ ವ್ಯಕ್ತಿ ಕಳೆದ ಜೈಲು ಜೀವನ, ಕಳೆದುಕೊಂಡ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನಸಿಕ ಯಾತನೆಗೆ ಹೊಣೆಯಾರದು? ತನಿಖೆಯ ಹೆಸರಿನಲ್ಲಿ ನಡೆದ ಕಿರುಕುಳದ ಕೃತ್ಯವು ಶಿಕ್ಷೆಯ ಅಡಿಯಲ್ಲಿ ಬರುತ್ತದೆ. ಮಾಡದ ತಪ್ಪಿಗೆ ಇಂತಹ ಶಿಕ್ಷೆ ಅನುಭವಿಸಬಹುದೇ?
ಈ ಸಮಸ್ಯೆ ಅವರೊಬ್ಬರದೇಅಲ್ಲ
ನ್ಯಾಯಾಲಯವು ಅಂತಿಮವಾಗಿ ಖುಲಾಸೆಗೊಳಿಸಿದ್ದರೂ ಸಹ,ಕಳೆದುಹೋದ ಸಮಯವನ್ನು ಹಿಂದಿರುಗಿಸಲಿಲ್ಲ. ಪ್ರಬೀರ್ ಪುರ್ಕಾಯಸ್ಥ ಪ್ರಕರಣವನ್ನೇ ನೋಡಿ. ಅಕ್ಟೋಬರ್ 2023 ರಲ್ಲಿಅವರನ್ನುED ಬಂಧಿಸಿತು. ಮೂರು ವರ್ಷಗಳ ಕಾಲ ವಿಚಾರಣೆ, ಏಳು ತಿಂಗಳುಗಳಕಾಲ ಜೈಲಿನಲ್ಲಿರಿಸಲಾಯಿತು.
ಪ್ರಕರಣ ಸಾಬೀತಾಗುವ ಮೊದಲೇವ್ಯಕ್ತಿಯನ್ನು ಸಾಮಾಜಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಾನಿಗೊಳಿಸಿತು. ಪ್ರಬೀರ್ ಪುರ್ಕಾಯಸ್ಥರ ಈ ಸಮಸ್ಯೆ ಅವರೊಬ್ಬರದೇ ಅಲ್ಲ, ದೇಶಾದ್ಯಂತ ನೂರಾರು ಸಾಮಾಜಿಕ ಕಾರ್ಯಕರ್ತರು, ಬುದ್ಧಿಜೀವಿಗಳು, ಪತ್ರಕರ್ತರು, ವಿದ್ಯಾರ್ಥಿ ಮುಖಂಡರು ವರ್ಷಗಳಿಂದ ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದಾರೆ.
ಜೈಲಿನಲ್ಲಿ 9 ವರ್ಷಗಳನ್ನು ಕಳೆದಪ್ರೊ. ಜಿ.ಎನ್. ಸಾಯಿ ಬಾಬಾ
ಪ್ರೊಫೆಸರ್ ಜಿ.ಎನ್. ಸಾಯಿ ಬಾಬಾ ಪ್ರಕರಣವು ಅದಕ್ಕೆ ಒಂದು ವಿಷಾದಕರ ಉದಾಹರಣೆ. ಮಾವೋವಾದಿಗಳೊಂದಿಗೆ ಸಹಕರಿಸಿದ ನೆಪದಲ್ಲಿ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಮಹಾರಾಷ್ಟ್ರ ಪೊಲೀಸರು ಅದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.
ತೊಂಬತ್ತು ಪ್ರತಿಶತ ದೈಹಿಕ ಅಂಗವೈಕಲ್ಯದಿಂದಾಗಿ ವೀಲ್‌ಚೇರ್‌ಗೆ ಸೀಮಿತವಾಗಿದ್ದ ವ್ಯಕ್ತಿ ಜೈಲಿನ ಗೋಡೆಗಳ ಹಿಂದೆ ಸುಮಾರು ಒಂಬತ್ತು ವರ್ಷಗಳನ್ನು ಕಳೆದರು. ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಅವರನ್ನು ನಿರಪರಾಧಿ ಎಂದು ಘೋಷಿಸಿದರೂ, ಬಿಡುಗಡೆಯಾದ ಕೆಲವು ದಿನಗಳ ನಂತರ ಅವರು ನಿಧನರಾದರು.
ಕವಿ ವರವರ ರಾವ್
ಕವಿ ವರವರ ರಾವ್ ಅವರದೂ ಇದೇ ಪರಿಸ್ಥಿತಿ. ವೃದ್ಧಾಪ್ಯದಿಂದ ಬಳಲುತ್ತಾ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಅವರು ಜೈಲಿನಲ್ಲಿ ತಮ್ಮ ಜೀವನವನ್ನು ಕಳೆದರು. ಅಂತಿಮವಾಗಿ ಜಾಮೀನು ಪಡೆದರೂ, ಮುಂಬೈ ಬಿಟ್ಟು ಹೋಗಬಾರದು ಎಂದು ನ್ಯಾಯಾಲಯವು ನಿರ್ಬಂಧಗಳನ್ನು ವಿಧಿಸಿತು.
ಉಮರ್ ಖಾಲಿದ್
ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್ ವರ್ಷಗಳ ಕಾಲ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ. ಸಿದ್ದಿಕಿ ಕಪ್ಪನ್, ಮೊಹಮ್ಮದ್ ಜುಬೈರ್ ಅವರಂತ ಹಪತ್ರಕರ್ತರು, ಇನ್ನೂ ಎಷ್ಟೋ ಮಾನವ ಹಕ್ಕುಗಳ, ಸಾಮಾಜಿಕ ಕಾರ್ಯಕರ್ತರು ಇಂದಿಗೂ ನ್ಯಾಯಾಲಯಗಳಿಗೆ ಅಲೆದಾಟ ನಡೆಸುತ್ತಿದ್ದಾರೆ.
ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಶತ್ರುವಲ್ಲ
ಭಾರತದ ಸಂವಿಧಾನದ 19(1) (ಎ) ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಪತ್ರಿಕಾ ಸ್ವಾತಂತ್ರ್ಯವೂ ಅದೇ ತತ್ವದಿಂದ ಹುಟ್ಟಿಕೊಂಡಿದೆ. ಸರ್ಕಾರ ತೆಗೆದುಕೊಳ್ಳುವ ನಿಲುವುಗಳನ್ನು ಪ್ರಶ್ನಿಸುವುದು ದೇಶದ್ರೋಹವಲ್ಲ. ನೀತಿಯನ್ನು ಟೀಕಿಸುವುದು ರಾಷ್ಟ್ರವಿರೋಧಿ ಅಲ್ಲ. ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಶತ್ರು ಅಲ್ಲವೇ ಅಲ್ಲ, ಮಾಧ್ಯಮ ಸಂಸ್ಥೆಗಳು ಆಳುವವರನ್ನು ಪ್ರಶಂಸೆ ಮಾಡಬೇಕಷ್ಟೆ, ಅಹಿತಕರ ಪ್ರಶ್ನೆಗಳನ್ನು ಕೇಳಬಾರದು ಎಂದು ನಿರೀಕ್ಷಿಸಿದರೆ ಅದು ಪ್ರಜಾಪ್ರಭುತ್ವದಂತೆ ಅನಿಸುವುದಿಲ್ಲ.
ಈ ಎಲ್ಲಾ ಬೆಳವಣಿಗೆಗಳಲ್ಲಿ ಕಂಡುಬರುವ ಮಾದರಿ ಒಂದೇ, ಮೊದಲು ಗಂಭೀರ ಆರೋಪಗಳು, ನಂತರ ಕಠಿಣ ಕಾನೂನುಗಳ ಬಳಕೆ, ನಂತರ ದೀರ್ಘಕಾಲ ಬಂಧನ. ಆದರೆ ವಿಚಾರಣೆ ಮುಗಿದಾಗ ಆರೋಪಗಳು ನಿಲ್ಲದೇಹೋಗಿರುತ್ತವೆ ಅಥವಾ ನ್ಯಾಯಾಲಯಗಳು ಕಠಿಣ ಹೇಳಿಕೆಗಳನ್ನು ಮಾಡುತ್ತವೆ. ಇದು ಪ್ರಜಾಪ್ರಭುತ್ವಕ್ಕೆ ದಕ್ಕೆ ತರುವ ಅಪಾಯಕಾರಿ ಪ್ರವೃತ್ತಿ. ಇದನ್ನು ನಿಲ್ಲಿಸಬೇಕು. ಇಂದು ಒಬ್ಬ ಪತ್ರಕರ್ತನ ಮೇಲೆ ನಡೆಯುತ್ತಿರುವ ಅನ್ಯಾಯವು, ನಾಳೆ ಸಾಮಾನ್ಯ ನಾಗರಿಕನ ಬಾಗಿಲು ತಟ್ಟುವ ಅಪಾಯವಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸುವ ಜವಾಬ್ದಾರಿ ನ್ಯಾಯಾಲಯಗಳದ್ದು ಮಾತ್ರವೇ ಅಲ್ಲ, ನಾಗರಿಕ ಸಮಾಜದ್ದೂ ಆಗಿದೆ.
ಇದನ್ನೂ ನೋಡಿ: ದೇಶದ ಆರ್ಥಿಕತೆ ಮತ್ತು ಹಣದುಬ್ಬರ: ನಿಜ ಹೇಳಿ ಮೋದಿಜೀ.. nation wants to know #JanashakthiMedia
